#ಕೊಲ್ಲೂರು ದೇವಾಲಯದ ಜನ ಸಾಮಾನ್ಯರ ಅನ್ನದಾನದ ಪಂಕ್ತಿಯಲ್ಲಿ ನಾವೆಲ್ಲ ಉOಡು ಬಿಸಾಕಿದ ಎಂಜಲೆಲೆಯ ಸಮಾನರು#
ನಿನ್ನೆ 5- ಪೆಬ್ರವರಿ-2018 ಸೋಮವಾರ ಕೊಲ್ಲೂರು ಮೂಕಾ೦ಬಿಕ ಸನ್ನಿದಾನಕ್ಕೆ ಹೋಗಿದ್ದೆ, ಮದ್ಯಾನ್ನ 12ರ ಪೂಜೆ ನಂತರ ಅನ್ನ ಸಂತಪ೯ಣೆ ಜಾಗಕ್ಕೆ ಹೋದೆ ಅಲ್ಲಿ VIPಗಳಿಗೆ ಮತ್ತು ಬ್ರಾಹಮಣರಿಗೆ ಪ್ರತ್ಯೇಕ ವ್ಯವಸ್ಥೆ ಇದೆ ಅಂತ ಗೊತ್ತಿತ್ತು, ನಮ್ಮOತ ಶೂದ್ರರಿಗೆ ಜನಸಾಮಾನ್ಯರಿಗೆ ಮೀಸಲಾದ ಜಾಗದಲ್ಲಿ ಊಟದ ಪಂಕ್ತಿಯಲ್ಲಿ ಕುಳಿತೆ.
ದಮ೯ಸ್ಥಳದಲ್ಲಿ, ಉಡುಪಿಯಲ್ಲಿ, ಹೊರನಾಡು ಹಾಗು ಪಂಜಾಬಿನ ಅಮೃತಸರದ ಸ್ವಣ೯ ದೇಗುಲದಲ್ಲಿ ಸಹಪಂಕ್ತಿ ಬೋಜನ ಮಾಡಿದ ಅನುಭವ ನನ್ನದು.
ಆದರೆ ನಿನ್ನೆ ಕೊಲ್ಲೂರಿನಲ್ಲಿನ ಅನುಭವ ಅದ್ಬುತ ಆಗಿತ್ತು, ಒಬ್ಬ ಬಾಳೆ ಎಲೆ ನಿರಾಸಕ್ತಿಯಿ೦ದ ಒಗೆಯುತ್ತಾ ಬಂದ ಅವನ ಹಿಂದಿನಿಂದ ಬಂದವ ದುರಂಹOಕಾರಿ ನೆಲದ ಮೇಲೆ ಬಾಳೆ ಎಲೆ ಹಾಸುವ ಮುನ್ನವೇ ನೀರಿನ ಜಗ್ಗಲ್ಲಿ ನೀರು ದಬದಬ ಸುರಿಯುತ್ತಾ ಬಂದ ಎಲೆ ಒರೆಸುವ ನೀರು ನೆಲಕ್ಕೂ ಬಿದ್ದು ಉಟ್ಟ ಬಟ್ಟಿ, ಸೀರೆಯಲ್ಲ ಒದ್ದೆ ಮಾಡಿದ ಅವನ ಹಿಂದೆ ಬಂದವ ಅನ್ನ ಬಡಿಸುವವ ಎಲೆಗಿಂತ ನೆಲದ ಮೇಲೆ ಅನ್ನ ಚೆಲ್ಲಿ ಓಡಿದ ಅವನ ಹಿಂದೆ ಬಂದ ಸಾರು ಬಡಿಸುವವ ಅನ್ನದ ಮೇಲೆ ಸಾರು ಬಡಿಸಿದ್ದಲ್ಲ ಎತ್ತರದಿಂದ ಸುರಿದು ನೀರಿನವನಂತೆ ಬಟ್ಟೆಗೆಲ್ಲ ಸಾರು ಸಾರಿದ ಇದೇ ರೀತಿ ಪಾಯಸದವ, ಮಜ್ಜಗೆಯವ ಬಲು ಅವಸರದಿಂದ ಕೈ ಮೇಲೆ ಮಜ್ಜಗೆ ಹಾಕಿ ರಂಪಾಟದಲ್ಲಿ ಹೋದ .
ಇದೆಲ್ಲ ದೇವಾಲಯದಲ್ಲಿ ಹೋಗಿ ದೇವರ ದಶ೯ನ ಮಾಡಿ ಕೃತಾಥ೯ರಾಗಿ, ಅನ್ನ ಪ್ರಸಾದ ಸೇವಿಸಿ ಸಂತೃಪ್ತರಾಗಬೇಕಾದ ಜಾಗದಲ್ಲಿ ದುರಂಹಾ೦ಕಾರದ ಇಂತವರಿಂದ ಅತ್ಯಂತ ಬೇಸರ ಪಡುವಂತೆ ಆಯಿತು.
ಇದು ನಿತ್ಯ ಮುಕಾಂಬಿಕ ದೇವಿ ದಶ೯ನ ಮಾಡಿದವರು ಅನುಭವಿಸುವ ಯಾತನೆ ಇಲ್ಲಿ ಲೂಟಿ ಹೊಡೆಯಲು ನಿಂತ ಈ ಅಫOಗರಿಗೆ ದೇವಿ ಸದಾ ಅನುಗ್ರಹಿಸಿ ಸುಖ ಸಮ್ರುದ್ದಿ ನೀಡುತ್ತಲೇ ಇದ್ದಾಳೆ.
ಹಾಗಂತ ಇದೆಲ್ಲ ಓದಿ ನೀವು ಬ್ರಾಹಮಣರ ಮೇಲೆ ಸಿಟ್ಟು ಮಾಡಬೇಡಿ ಏಕೆಂದರೆ ಈ ರೀತಿ ರಣಾ೦ಗದ ಮಾದರಿಯಲ್ಲಿ ಶೂದ್ರ, ಜನಸಾಮಾನ್ಯರನ್ನ ನಿಕೃಷ್ಟವಾಗಿ ಎಂಜಲೆಲೆಯOತೆ ವತಿ೯ಸಿದ ಇವರೆಲ್ಲ ದೇವಾಲಯದ ಸಿಬ್ಬಂದಿಗಳು ಮತ್ತು ಶೂದ್ರರೇ !?!.
ನನ್ನ ಒತ್ತಾಯ ಸಕಾ೯ರ ಸಂಬಂದಪಟ್ಟವರು ಕ್ರಮ ತೆಗೆದುಕೊಳ್ಳಬೇಕು ಅನ್ನೋದಲ್ಲ ದಯಮಾಡಿ ದೇವಾಲಯದ ಅನ್ನ ಸಂತಪ೯ಣೆ ಹೆಸರಲ್ಲಿ ಅವಮಾನ ಪಡಬಾರದು ಅದಕ್ಕಾಗಿ ಇಂತ ಕಡೆ ಊಟ ಮಾಡಲು ಹೋಗಬೇಡಿ ಅನ್ನುವುದು ನನ್ನ ಮನವಿ.
ನೀವು ಹೇಳುತ್ತಿರುವುದು ಅವರು ಬಡಿಸಿದ ರೀತಿಯಿಂದ ಅವರು ಶೂದ್ರರೆಂದೆ?
ReplyDeleteಅಥವಾ ಅವರು ನಿಜವಾದ ಶೂದ್ರರೆ?