Blog number 1301.192A ಕಾಯ್ದೆಯಿಂದ ಮಲೆನಾಡು ವ್ಯಾಪ್ತಿ ಕೈಬಿಡಲು ಶಾಸಕ ಹರತಾಳು ಹಾಲಪ್ಪ ವಿಧಾನಸಭೆಯಲ್ಲಿ ಮಾಡಿದ ಪ್ರಸ್ತಾವನೆ
#ಹರತಾಳುಹಾಲಪ್ಪರ ಈ ಕೆಲಸ ಸಣ್ಣದಲ್ಲ! ಯಾರೂ ಏನೇ ಟೇಕೆ ಟಿಪ್ಪಣಿ ಮಾಡಲಿ ಇಡೀ ರಾಜ್ಯದ ಗ್ರಾಮೀಣ ಪ್ರದೇಶದ ರೈತರ ಪರವಾಗಿ ಈ ಇಬ್ಬರು ಶಾಸಕರನ್ನ ಅಭಿನಂದಸಲೇ ಬೇಕು ಸಾಗರದ ಮೊದಲ ಶಾಸಕರಾದ ಶಾಂತವೇರಿ ಗೋಪಾಲಗೌಡರು ಹೇಳಿದಂತೆ ಶಾಸಕರು ಶಾಸನ ಮಾಡುವಂತಾಗ ಬೇಕು ಅಂದದ್ದು ಇವರು ಸಾಬೀತು ಮಾಡಿದ್ದಾರೆ. #
*192ಎ ಕಾಯ್ದೆಯ ವ್ಯಾಪ್ತಿಯಿಂದ ಮಲೆನಾಡು ಪ್ರದೇಶ ಕೈಬಿಡುವಂತೆ ಹರತಾಳು ಹಾಲಪ್ಪ ಆಗ್ರಹ:-*
ರಾಜ್ಯದಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ 192ಎ ಕಾಯ್ದೆಯ ವ್ಯಾಪ್ತಿಯಿಂದ *ಮಲೆನಾಡು ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶವನ್ನು ಹೊರಗಿಡುವಂತೆ ಸಾಗರ-ಹೊಸನಗರ ಶಾಸಕ ಹರತಾಳು ಹಾಲಪ್ಪ* ವಿಧಾನ ಸಭೆಯಲ್ಲಿಂದು ಆಗ್ರಹಿಸಿದ್ದಾರೆ.
ನಿಯಮ 69ರಡಿ ಈ ವಿಷಯ ಪ್ರಸ್ತಾಪಿಸಿದ ಹಾಲಪ್ಪ, *ಭೂ ಕಬಳಿಕೆ ನಿಷೇಧ ಕಾನೂನು ಅಡಿಯಲ್ಲಿ ಪಟ್ಟಣ, ನಗರದ ಸುತ್ತಮುತ್ತ ಪ್ರದೇಶ, ಗ್ರಾಮೀಣ ಪ್ರದೇಶವನ್ನು ಒಳಪಡಿಸಿರುವುದರಿಂದ ಮಲೆನಾಡು ರೈತರು ವಿಶೇಷವಾಗಿ ಗ್ರಾಮೀಣ ಪ್ರದೇಶದ ನೂರಾರು ರೈತರು ಬೆಂಗಳೂರಿನಲ್ಲಿರುವ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.* ಅರಣ್ಯ ಇಲಾಖೆಯವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ದಿನ ಕಳೆದಂತೆ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದರು.
*ಮಲೆನಾಡು ಪ್ರದೇಶವಾದ ಬಾರಂಗಿ ಸೇರಿದಂತೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರ ಮೇಲೆ 192ಎ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ. ಒಂದು ವಿದ್ಯುತ್ ಕಂಬವನ್ನು ಹಾಕುವುದು ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಲೆನಾಡು ಪ್ರದೇಶವನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟು 30 ರಿಂದ 40 ವರ್ಷಗಳ ಕಾಲ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಜೀವನ ನಡೆಸಲು ಅವಕಾಶ ನೀಡಬೇಕೆಂದು ಹೇಳಿದರು.*
ಇದಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಲೆನಾಡು ಪ್ರದೇಶದಲ್ಲಿ ಬಗರ್ ಹಕ್ಕುಂ ಸಾಗುವಳಿದಾರರು ಅನೇಕ ವರ್ಷಗಳಿಂದ ಒಂದೆಡೆ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಈ ಕಾಯ್ದೆಯ ನೆಪದಲ್ಲಿ ಅರಣ್ಯ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಈ ಕಾನೂನಿನ ವ್ಯಾಪ್ತಿಯಿಂದ ಮಲೆನಾಡು ಮತ್ತು ಗ್ರಾಮೀಣ ಪ್ರದೇಶದ ಜನರನ್ನು ಹೊರಗಿಡಬೇಕೆಂದು ಹೇಳಿದರು.
ಇದಕ್ಕೆ ಉತ್ತರಿಸಿದ *ಕಂದಾಯ ಸಚಿವ ಆರ್. ಅಶೋಕ್ ಮಲೆನಾಡು ಪ್ರದೇಶದಲ್ಲಿ 12 ರಿಂದ 15 ವರ್ಷಗಳ ಕಾಲ ವಾಸಮಾಡಿಕೊಂಡು ಬಂದಿರುವ ರೈತರ ಜಮೀನುಗಳನ್ನು ಸಕ್ರಮಗೊಳಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗುವುದು. ಅವಕಾಶ ಸಿಕ್ಕರೆ ಈ ಕಾಯ್ದೆಯಿಂದ ಗ್ರಾಮೀಣ ಪ್ರದೇಶವನ್ನು ಹೊರಗಿಡುವ ಕುರಿತು ತಿದ್ದುಪಡಿ ವಿದೇಯಕವನ್ನು ಈ ಅಧಿವೇಶನದಲ್ಲಿಯೇ ಮಂಡಿಸಲಾಗುವುದು ಎಂದು ತಿಳಿಸಿದರು.*
Comments
Post a Comment