Skip to main content

Blog number 1283. ಪ್ರಜಾವಾಣಿ ದಿನಪತ್ರಿಕೆಯ ಜನಪ್ರಿಯತೆ ನನ್ನ ಅನುಭವದಲ್ಲಿ

#ಜನಮನದ ಜನಪ್ರಿಯ ಕನ್ನಡ ದಿನಪತ್ರಿಕೆ ಪ್ರಜಾವಾಣಿ ಮೊದಲಿನ ಜನಪ್ರಿಯತೆ ಮತ್ತು ತನ್ನ ಪತ್ರಿಕೆಯ ಹಿಂದಿನ ಪತ್ರಿಕಾ ನೀತಿಯ ನಿಷ್ಟುರತೆ ಉಳಿಸಿಕೊಳ್ಳುವ ಕಷ್ಟ ಕಾಲದ ಕ್ಷಣಗಣನೆಯಲ್ಲಿ.

       ನಮ್ಮ ಊರಿಗೆ 1961ರಿಂದ ಬರುತ್ತಿದ್ದ ಏಕೈಕ ಪತ್ರಿಕೆ ಪ್ರಜಾವಾಣಿ ಅದರ ವಿತರಕರಾಗಿದ್ದವರು ಹುಚ್ಚಾಚಾರ್ ಎಂಬ ನಿವೃತ್ತ ಸೈನಿಕರು ಅವರು ಯುದ್ಧದಲ್ಲಿ ಭಾಗವಹಿಸಿದವರು ಒಂದು ಕಾಲು ಗುಂಡೇಟಿನಿಂದ  ಕುಂಟುತ್ತಾ ನಡೆಯುತ್ತಾ ಪತ್ರಿಕೆ ವಿತರಣೆ ಬರಿಗಾಲಿನಲ್ಲಿ ಮಾಡುತ್ತಿದ್ದರು ಅಯ್oಗಾರ್ ಬ್ರಾಹಮಣರಾದ ಅವರಿಗೆ ಸಿಟ್ಟು ಜಾಸ್ತಿ ಆನಂದಪುರಕ್ಕೆ 25 ಪತ್ರಿಕೆ ಬರುತ್ತಿತ್ತು, ನಮ್ಮ ಮನೆ ಇರುವ ಯಡೇಹಳ್ಳಿಗೆ ಆನಂದಪುರದಿಂದ ಒಂದು ಕಿ.ಮೀ. ನಡೆದು ಬರುತ್ತಿದ್ದರು ಅದು ಕೇವಲ 2 ಪತ್ರಿಕೆ ವಿತರಿಸಲು ಒಂದು ನಮ್ಮ ಮನೆಗೆ ಇನ್ನೊಂದು SRS ಎಂಬ ಅಕ್ಕಿ ಗಿರಣಿಗೆ, ನಮಗೆ ಒಂದನೆ ತರಗತಿಯಿಂದಲೇ ಬೆಳಿಗ್ಗೆ ಪ್ರಜಾವಾಣಿ ಓದುವ ಅಭ್ಯಾಸ ಮಾಡಿದ್ದರು ನಮ್ಮ ತಂದೆ, ಅದರಲ್ಲಿ ಪ್ಯಾಂಟಮ್ ಮೊದ್ದು ಮಾಣಿ ನಮಗೆ ಅಪ್ಯಾಯವಾಗಿತ್ತು.
     ಇನ್ನು  ವಾರಪತ್ರಿಕೆ ಆಗ ಪ್ರಜಾಮತ ಬರುತ್ತಿತ್ತು ಆದರೆ ಅದರಲ್ಲಿ ಗುಪ್ತ ಸಮಾಲೋಚನೆ ಅಂತ ಒಂದು ಪುಟಇದ್ದಿದ್ದರಿ೦ದ ಮಕ್ಕಳಿಗೆ ಓದಲು ಕೊಡುತ್ತಿರಲಿಲ್ಲ .
      ಪ್ರಖ್ಯಾತ ಕಾಟೂ೯ನಿಸ್ಟ ಪಂಜು ಗಂಗೂಲಿಯ ವಯವರ ಪೋಸ್ಟನಿಂದ ಇದೆಲ್ಲ ನೆನಪಾಗಿ ಬರೆದೆ, ಬಂಗಾರಪ್ಪ ಸಂಬಂದಿ ಆದರೂ ಪ್ರಜಾವಾಣಿ ಅವರನ್ನ ವೈಭವಿಕರಿಸಲಿಲ್ಲ ಇದು ಈ ಪತ್ರಿಕೆಯ ನಿಷ್ಟುರತೆಗೆ ಕನ್ನಡಿ.

  ಪ್ರಜಾವಾಣಿ ಏಜೆನ್ಸಿ ಪಡೆದರೆ ಅದೊಂದು ಲಾಭದಾಯಕ ಉದ್ದಿಮೆ ಆಗಿತ್ತು ಆಕಾಲದಲ್ಲಿ, ವರದಿಗಾರರಿಗಂತೂ ಅತ್ಯಂತ ಗೌರವದ ಹುದ್ದೆ ಆಗಿತ್ತು, ಸಮೀಪದ ರಿಪ್ಪನ್ ಪೇಟೆಯಲ್ಲಿ ಪ್ರಜಾವಾಣಿ ಪತ್ರಿಕೆಗೆ ವರದಿಗಾರರಾಗಿ ರಾಮಚಂದ್ರರಾವ್ ಇದ್ದರು ಕ್ರಿಯಾಶೀಲ ವರದಿಗಾರರಾಗಿದ್ದರಿಂದ ರಿಪ್ಪನ್ ಪೇಟೆಯ ಸುದ್ದಿ ದಿನಾ ಇರುತ್ತಿತ್ತು ರಿಪ್ಪನ್ ಪೇಟೆಯ ತಾಲ್ಲೂಕ ಕೇಂದ್ರ ಹೊಸನಗರದ ಸುದ್ದಿ ಇರುತ್ತಿರಲಿಲ್ಲ, ನಮಗೆಲ್ಲ ಆಗ ನಮ್ಮ ಊರಿನ ಸುದ್ದಿ ಬರೋದಿಲ್ಲ ಅಂತ ಬೇಸರ ಆಗುತ್ತಿತ್ತು.

   ನಮ್ಮ ಊರಿಗೆ ಕಳೆದ ವಷ೯ ವರದಿಗಾರರನ್ನ ನೇಮಿಸಿರುವುದಾಗಿ ಜಿಲ್ಲಾ ವರದಿಗಾರರಾದ ಚಂದ್ರಹಾಸರು ಹೇಳಿದರು ಆದರೂ ನಮ್ಮ ಊರ ವರದಿ ಇಲ್ಲದಿದ್ದರು ಪ್ರಜಾವಾಣಿ ಇನ್ನೂ ನಂಬರ್ ಒಂದು ಚಂದಾದಾರರ ಸಂಖ್ಯೆಯಲ್ಲಿ.

  ಬೆಂಗಳೂರಿನ MG ರಸ್ತೆಯ ಪ್ರಜಾವಾಣಿ ಕಚೇರಿ ಬೆಂಗಳೂರಿಗೆ ಹೋಗಿ ಈ ರಸ್ತೆಯಲ್ಲಿ ನಡೆದಾಡುವಾಗ ನಮಗೆಲ್ಲ ಒಂದು ಅಚ್ಚರಿಯ, ಗೌರವದ ಸ್ಥಳವಾಗಿತ್ತು. ಅಲ್ಲಿ ಪ್ರತಿ ದಿನದ ಮುಖ್ಯ ಸುದ್ದಿಯನ್ನ ದೊಡ್ಡ ಅಕ್ಷರದಲ್ಲಿ ದೊಡ್ಡ ಪುಟದಲ್ಲಿ ಅಚ್ಚಿಸಿ ಅಂಟಿಸುತ್ತಿದ್ದನ್ನ ಅಲ್ಲಿ ನಿಂತು ಓದುವುದು ನಮ್ಮoತವರಿಗೆ ಒಂದು ಸಂತೋಷದ ಹವ್ಯಾಸವಾಗಿತ್ತು .

   ರಾಜಶೇಖರರOತ ಅತ್ಯುತ್ತಮ ವರದಿಗಾರರಿದ್ದರು, ಶಿವಮೊಗ್ಗದಲ್ಲಿ ಜನಪರ ಹೋರಾಟಗಳಾದ ರೈತ ಸಂಘ, ದಲಿತ ಸಂಘಷ೯ ಸಮಿತಿಗಳು ರಾಜ್ಯಕ್ಕೆ ಕೊಡುಗೆಯಾಗಿ ಹುಟ್ಟಿ ಬಂದಾಗ ಪ್ರಜಾವಾಣಿಯೇ ಸುದ್ದಿ ಮಾಡಿದ ಮುಖವಾಣಿ ಆಗ ಬೇರೆ ಪತ್ರಿಕೆ ಇರಲಿಲ್ಲ, ಲೈಸೆನ್ಸ್ ಪಡೆದು ರೇಡಿಯೋ ತರಬೇಕಾದ ಕಾಲವದು.

  ದಲಿತ ಸಂಘಷ೯ ಸಮಿತಿಯ ಬಿ.ಕೃಷ್ಪನವರು ಪ್ರಗತಿಪರರ ಜೊತೆ ಸೇರಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿನ ಚಂದ್ರಗತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ರದ್ದು ಮಾಡಲು ನಡೆಸಿದ ಹೋರಾಟಕ್ಕೆ ಪ್ರಜಾವಾಣಿ ಪತ್ರಿಕೆ ನೀಡಿದ ಬೆಂಬಲ ಅತ್ಯಂತ ದೊಡ್ಡ ಸಹಾಯವಾಯಿತು.

  ಇವತ್ತಿನ ಸ್ಪದಾ೯ತ್ಮ ಕ ಪತ್ರಿಕ ಪ್ರಸರಣ ಕಾಲದಲ್ಲಿ ತನ್ನ ಅಸ್ತಿತ್ವಕ್ಕಾಗಿ ಪ್ರಜಾವಾಣಿ ಮುಖ ಪುಟವೂ ಜಾಹೀರಾತಾಗಿದೆ, ರಾಜಕಾರಣಿಗಳನ್ನ ಓಲೈಸುವ ವರದಿಗಳು ಬರಲಾರಂಭಿಸಿದೆ, ವರದಿಗಾರರೂ ಸಾಚಾತನ ಅಲ್ಲಲ್ಲಿ ಕಳೆದು ಕೊಂಡಿದ್ದಾರೆ, ಪತ್ರಿಕೆ ಮಾಲಿಕರು ಪತ್ರಿಕೆ ಮೇಲಿನ ಹಿಡಿತದ ಬಿಗಿ ಕಡಿಮೆ ಮಾಡಿದ್ದಾರೆ ಎನ್ನುವ ವದಂತಿ ಇದೆ ಆದರೂ ಪ್ರಜಾವಾಣಿ ಮಲೆನಾಡಿನಲ್ಲಿ ಇನ್ನು ಜನಪ್ರಿಯ ದಿನಪತ್ರಿಕೆ ಆಗಿ ಪ್ರತಿ ದಿನ ಮುಂಜಾನೆ ಚಂದಾದಾರರ ಮನೆ ಮನ ತಲುಪುತ್ತೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...