Blog number 1351. ಪ್ರತಿ ಚುನಾವಣೆ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ - ಪಸಲು ರಕ್ಷಣೆಗಾಗಿ ಪಡೆದ ಲೈಸೆನ್ಸ್ ರಿವಾಲ್ವಾರ್ / ಬಂದೂಕು ಪೋಲಿಸ್ ಠಾಣೆಯಲ್ಲಿ ತಂದಿಡುವ ಅವೈಜ್ಞಾನಿಕ ಓಬಿರಾಯನ ಕಾಲದ ಪದ್ದತಿ ಬದಲಿಸಬಾರದೇಕೆ ?
#ಆತ್ಮರಕ್ಷಣೆ_ಪಸಲುರಕ್ಷಣೆ_ರಿವಾಲ್ವಾರ್_ಬಂದೂಕುಗಳು_ಪೋಲಿಸ್_ಠಾಣೆಯಲ್ಲಿ_ಸರೆಂಡರ್_ಮಾಡಬೇಕು.
#ಚುನಾವಣೆ_ಬಂದಾಗ_ದರೋಡೆಕೊರರು_ಪಸಲು_ತಿನ್ನುವ_ಪ್ರಾಣಿಗಳು_ಸುಮ್ಮನಿರುತ್ತದ?
#ಈ_ಅನಾಗರೀಕ_ಅವೈಜ್ಞಾನಿಕ_ಪದ್ಧತಿ_ರಾಜ್ಯದಲ್ಲಿ_ಈ_ಚುನಾವಣೆಯಲ್ಲಿಯೂ_ಜಾರಿ_ಇದೆ
#ಕೇರಳಾ_ರಾಜ್ಯದ_ಉಚ್ಚ_ನ್ಯಾಯಾಲಯ_ಈ_ಪದ್ದತಿಗೆ_ತಡೆ_ಆಜ್ಞೆ_ನೀಡಿದೆ.
#ಕರ್ನಾಟಕ_ರಾಜ್ಯದಲ್ಲಿ_ಯಾರೋಬ್ಬರೂ_ಈ_ಬಗ್ಗೆ_ಉಚ್ಚ_ನ್ಯಾಯಾಲಯದಲ್ಲಿ_ಈ_ಪದ್ದತಿ_ರದ್ದತಿಗೆ_ರಿಟ್_ಹಾಕಿಲ್ಲ.
ಆತ್ಮ ರಕ್ಷಣೆ ಮತ್ತು ಪಸಲು ರಕ್ಷಣೆಗಾಗಿ ರಿವಾಲ್ವಾರ್ ಅಥವ ಬಂದೂಕು ಲೈಸೆನ್ಸ್ ಪಡೆದವರಿಗೆ ಪ್ರತಿ ಚುನಾವಣೆಯ ಸಂದರ್ಭದಲ್ಲಿ ತಮ್ಮ ತಮ್ಮ ರಿವಾಲ್ವಾರ್ / ಬಂದೂಕುಗಳನ್ನು ಅವರ ವ್ಯಾಪ್ತಿಯ ಪೋಲಿಸ್ ಠಾಣೆಗೆ ತಂದು ಸರೆಂಡರ್ ಮಾಡಬೇಕೆಂಬ ಜ್ಞಾಪನಾ ಪತ್ರ ಪೋಲಿಸರು ನೀಡುತ್ತಾರೆ.
ಅದರಂತೆ ಆ ವ್ಯಾಪ್ತಿಯ ಜನರು ಪೋಲಿಸರ ಆದೇಶ ಪಾಲಿಸುತ್ತಾರೆ ಆದರೆ ಈ ಪದ್ಧತಿ ಸರಿಯಾ? ದರೋಡೆಕೋರರು - ಕಳ್ಳರು ತಮ್ಮ ವೃತ್ತಿಯನ್ನು ಚುನಾವಣೆಯಲ್ಲಿ ಬಿಡುತ್ತಾರಾ? ಚುನಾವಣಾ ಸಂದರ್ಭದಲ್ಲಿ ಬಂದೂಕು ಪೋಲಿಸ್ ಠಾಣೆಯಲ್ಲಿ ಡಿಪೋಸಿಟ್ ಮಾಡಿರುತ್ತಾರೆಂಬ ಮಾಹಿತಿ ಅವರಿಗೆ ಹೆಚ್ಚಿನ ದೈರ್ಯ ನೀಡದೇ ಇರುತ್ತದಾ?.
ಈ ಅವೈಜ್ಞಾನಿಕ ಪದ್ದತಿಯನ್ನು ಕೇರಳ ರಾಜ್ಯದ ಉಚ್ಚ ನ್ಯಾಯಾಲಯದ ಆದೇಶದಲ್ಲಿ ತಡೆ ಹಿಡಿದಿರುವುದರಿಂದ ಅಲ್ಲಿ ಈ ಪದ್ಧತಿ ಜಾರಿ ಇಲ್ಲ ಆದರೆ ಪಕ್ಕದ ನಮ್ಮ ಕರ್ನಾಟಕ ರಾಜ್ಯದಲ್ಲಿ ಜಾರಿ ಇದೆ.
ನಮ್ಮ ಜಿಲ್ಲೆಯವರೆ ಆದ ಕರ್ನಾಟಕ ರಾಜ್ಯದ ಗೃಹ ಮಂತ್ರಿ #ಆರಗ_ಜ್ಞಾನೇಂದ್ರರಿಗೆ ಮನವಿ ಮಾಡಿದ್ದೆ ಆದರೆ ಈ ಬಗ್ಗೆ ಅವರು ಪೋಲಿಸ್ ಇಲಾಖೆಯಲ್ಲಿ ಯಾವುದೇ ಇಂತಹ ಆಚರಣೆಗೆ ಮಾರ್ಪಾಡು ಈವರೆಗೆ ಮಾಡಿಲ್ಲ.
ಹಾಗಂತ ನಮ್ಮ ರಾಜ್ಯದ ಯಾರೊಬ್ಬರೂ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಇದಕ್ಕೆ ಈ ವರೆಗೆ ತಡೆ ಆಜ್ಞೆ ತಂದೂ ಇಲ್ಲ ಆದರೆ ಪಕ್ಕದ ಕೇರಳದಲ್ಲಿನ ಉಚ್ಚ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಿ ತಡೆ ಆಜ್ಞೆ ತಂದ ಮಾಹಿತಿ ಇವತ್ತು ಪುತ್ತೂರಿನ ಖ್ಯಾತ ಛಾಯಾಚಿತ್ರ ಗ್ರಾಹಕ #ಕಿರಣಮನ್ನಾಜೆ ತಮ್ಮ ಪೇಸ್ ಬುಕ್ ನಲ್ಲಿ ಈ ಅವೈಜ್ಞಾನಿಕ ಓಬಿರಾಯನ ಕಾಲದ ಪದ್ದತಿ ಬಗ್ಗೆ ಪೋಸ್ಟ್ ಲ್ಲಿ ಬರೆದಾಗ ಕೇರಳದ #ಪ್ರದೀಪರಾವ್ ಎನಾ೯ಕುಲಂ ಉಚ್ಚ ನ್ಯಾಯಾಲಯದಲ್ಲಿ ಕಾಸರಗೋಡು ಜಿಲ್ಲಾಧಿಕಾರಿಯನ್ನು ಎದರು ಪಾರ್ಟಿ ಮಾಡಿ ಸಲ್ಲಿಸಿದ ರಿಟ್ ನಲ್ಲಿ ಚುನಾವಣೆ ಸಂದರ್ಭದಲ್ಲಿ ಬಂದೂಕು ಸರೆಂಡರ್ ಮಾಡಲು ನೀಡುವ ನೋಟೀಸ್ ಗೆ ತಡೆ ಆಜ್ಞೆ ತಂದಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ ಸದರಿ ಅದೇಶ ಓದಬಹುದು.
https://www.newindianexpress.com/states/kerala/2021/feb/21/hc-cops-cant-direct-people-to-surrender-licensed-arms-2266809.html
https://indiankanoon.org/doc/127267817/
ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಘೋಷಣೆ ಆಗಿದೆ ಇಲ್ಲಿಯೂ ಈಗ ಬಂದೂಕು ಸರೆಂಡರ್ ಮಾಡಲು ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯಲ್ಲಿ ಪೋಲಿಸರ ಮುಖಾಂತರ ಆದೇಶ ಜಾರಿ ಮಾಡುತ್ತಾರೆ.
ರಾಜ್ಯದ ಜನಪರ ವಕೀಲರುಗಳು ಇದನ್ನು ಜನರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಿ ಕೇರಳ ರಾಜ್ಯದ ಉಚ್ಚ ನ್ಯಾಯಾಲಯದ ಆದೇಶ ಹಾಜರು ಪಡಿಸಿ ನಮ್ಮ ರಾಜ್ಯದಲ್ಲಿ ಈ ಬಾರಿಯಿಂದ ಈ ಅವೈಜ್ಞಾನಿಕ ಪದ್ಧತಿ ಮುಂದುವರಿಸದಂತೆ ಮನವಿ ನೀಡಬಾರದೇಕೆ?
ಅಥವ ಪ್ರತ್ಯೇಕ ರಿಟ್ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿ ತಕ್ಷಣ ತಡೆ ಆಜ್ಞೆ ತರಲಿ ಅಂತ ವಿನಂತಿಸುತ್ತೇನೆ.
Comments
Post a Comment