Skip to main content

Blog number 1330. ಪ್ರದಾನಿ ಇಂದಿರಾ ಗಾಂಧಿ ಹಂತಕರ ಪೋಟೋ ಅಮೃತಸರದ ಸ್ವರ್ಣ ಮಂದಿರ ಸಂಕೀರ್ಣದ ಸೆಂಟ್ರಲ್ ಸಿಖ್ ಮ್ಯೂಸಿಯಂನಲ್ಲಿ ಹುತಾತ್ಮರ ಪಟ್ಟದಲ್ಲಿ ರಾರಾಜಿಸುತ್ತಿದೆ.

#ಪ್ರಧಾನಿ_ಇಂದಿರಾಗಾಂಧಿ_ಹಂತಕರು_ಹುತಾತ್ಮರೆ?

#ಅಮೃತಸರದ_ಗೋಲ್ಡನ್_ಟೆಂಪಲ್_ಸೆಂಟ್ರಲ್_ಸಿಖ್_ಮ್ಯೂಸಿಯಂನಲ್ಲಿ

#ಇಂದಿರಾ_ಹಂತಕರ_ಪೋಟೋಗಳನ್ನು_ಸಿಖ್_ದಮ೯ದ_ಹುತಾತ್ಮರ_ಸಾಲಿನಲ್ಲಿದೆ.

#ಸತ್ವಂತ್_ಸಿಂಗ್_ಮತ್ತು_ಬಿಯಾಂತ್_ಸಿ೦ಗ್_ಪೋಟೋ.

#ಇವರಿಬ್ಬರ_ಪೋಟೋ_ವಿಚಾರಿಸಿದ್ದಕ್ಕೆ_ಶಸ್ತ್ರದಾರಿ_ಕಟ್ಟರ್_ಸಿಖ್_ಯೋದ_ದಿಟ್ಟಿಸಿದ_ಪರಿ

#ಪ್ರಜಾಪ್ರಭುತ್ವ_ದೇಶದ_ಪ್ರದಾನಿ_ಹಂತಕರಿಗೆ_ಈ_ರೀತಿ_ಸಾವ೯ಜನಿಕವಾಗಿ_ಗೌರವಿಸಬಹುದಾ?

#ಆನಂದಪುರಂನಲ್ಲಿ_ಇಂದಿರಾ_ಸಂತಾಪ_ಸಭೆ_ಮೌನಮೆರವಣಿಗೆ_ನೇತೃತ್ವ_ನನ್ನದಾಗಿತ್ತು_ಆಗ_ನನ್ನ_ವಯಸ್ಸು_19.

   1980 ರಲ್ಲಿ ಪುನಃ ಕಾಂಗ್ರೇಸ್ ಅಧಿಕಾರಕ್ಕೆ ಬಂದು ಇಂದಿರಾ ಗಾಂಧಿ ಪ್ರದಾನಿ ಆದಾಗ ಪ೦ಜಾಬ್ ಪ್ರತ್ಯೇಕ ಚಳವಳಿಯ ಖಾಲಿಸ್ತಾನ್ ಹೋರಾಟದಲ್ಲಿ ಬಾಂಬ್ ದಾಳಿ, ವಿಮಾನ ಅಪಹರಣದಂತ ಪ್ರಕ್ಷುಬ್ದತೆ ಇತ್ತು ಇದರ ಅಂತ್ಯ ಕಾಣಿಸಲು ಮತ್ತು ಅಖಂಡ ಭಾರತದ ಹಿತ ಕಾಪಾಡಲು  ಇಂದಿರಾ ಗಾಂಧಿ 1984ರ ಜೂನ್ ನಲ್ಲಿ ಆಪರೇಷನ್ ಬ್ಲೂಸ್ಟಾರ್ ಹೆಸರಲ್ಲಿ ಅಮೃತ್ ಸರದ ಸ್ವರ್ಣ ಮಂದಿರವನ್ನು ಭಯೋತ್ಪಾದಕರಿಂದ ತೆರವು ಮಾಡಿಸಲು ಮಾಡಿದ ಸೈನ್ಯದ ಕಾರ್ಯಾಚಾರಣೆಯಿಂದ ಖಾಲಿಸ್ತಾನ್ ಸರ್ವೋಚ್ಚ ನಾಯಕ ಬಿಂಡ್ರನ್ ವಾಲೆ ಮತ್ತು ಅವರ ಅನುಯಾಯಿಗಳ ಹತ್ಯೆಯ ಸೇಡಿಗಾಗಿ ಕೇವಲ ನಾಲ್ಕು ತಿಂಗಳಲ್ಲಿ ಅಂದರೆ 1984ರ ಅಕ್ಟೋಬರ್ 31 ರಂದು ಇಂದಿರಾ ಅಂಗರಕ್ಷಕರಾದ ಸತ್ವ೦ತ್ ಸಿಂಗ್ ಮತ್ತು ಬಿಯಾಂತ್ ಪ್ರದಾನಿ ಇಂದಿರಾರನ್ನು ಮೆಷಿನ್ ಗನ್ನಿನಿಂದ ಹತ್ಯೆ ಮಾಡುತ್ತಾರೆ.
    ಈ ಘಟನೆಯಿಂದ ಸಾವಿರಾರು ಸಿಖ್ ಸಮುದಾಯದ ನರಮೇದವೇ ನಡೆಯಿತು, ಇಡೀ ದೇಶದಲ್ಲಿ ಇಂದಿರಾ ಹತ್ಯೆಯಿಂದ ತಲ್ಲಣಿಸಿತ್ತು.
   ನಾನು ಮತ್ತು ಗೆಳೆಯರು ಯಡೇಹಳ್ಳಿ ಸರ್ಕಲ್ ನಿಂದ ಆನಂದಪುರಂ ಪ೦ಚಾಯಿತಿ ಕಚೇರಿ ತನಕ ಮೌನ ಮೆರವಣಿಗೆ ಮಾಡಿ ಅಲ್ಲಿ ಇಂದಿರಾ ಗಾಂಧಿ ಅವರಿಗೆ ಸಂತಾಪ ಸೂಚಿಸುವ ಸಭೆ ನಡೆಸಿದ್ದೆವು ಅಲ್ಲಿ ನಾನು ಭಾಷಣ ಕೂಡ ಮಾಡಿದ್ದೆ ಆಗ ನನಗೆ 19 ವರ್ಷ.
  ಆ ದಿನ ಆನಂದಪುರಂನ ಹೋಟೆಲ್ ಮಾಲಿಕರೋರ್ವರು ಇಂದಿರಾ ಹತ್ಯೆ ಬೆಂಬಲಿಸಿ ಸಾರ್ವಜನಿಕವಾಗಿ ಹಾಲು ಕುಡಿದದ್ದು ಆನಂದಪುರಂನಲ್ಲಿ ಬಿಗು ವಾತಾವರಣಕ್ಕೂ ಕಾರಣ ಆಗಿತ್ತು.
  ಈಗ ಪುನಃ ಖಾಲಿಸ್ತಾನ ಚಳವಳಿ ಮುನ್ನಲೆಗೆ ಬರುತ್ತಿದೆ, ಬಿಂಡ್ರನ್ ವಾಲೆ 02 ಅಮೃತ್ ಪಾಲ್ ಸಿಂಗ್ ಸಂದು ಕಾರಣದಿಂದ,ಈ ಸಂದರ್ಭದಲ್ಲಿ ನನ್ನ ಅಮೃತ್ ಸರ ಬೇಟಿಯ ನೆನಪುಗಳು ಇಲ್ಲಿದೆ...

  ಅಮೃತ್ ಸರದ ಸ್ವರ್ಣ ಮಂದಿರಕ್ಕೆ ಹೋದಾಗ ಅದರ ಪಕ್ಕದಲ್ಲೇ ಇರುವ ಸೆಂಟ್ರಲ್ ಸಿಖ್ ಮ್ಯೂಸಿಯಂ ನೋಡದೆ ಬಂದರೆ ಸಿಖ್ ಧರ್ಮಿಯರ ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಿಲ್ಲ.
  2008ರಲ್ಲಿ ಸ್ವರ್ಣ ಮಂದಿರಕ್ಕೆ ಹೋದಾಗ ನಾನು ಅಲ್ಲಿ ಪ್ರತಿದಿನ ಸೇವೆಗೆ ಬರುವ ಸ್ವಯಂ ಸೇವಕರ ಬಗ್ಗೆ ತುಂಬಾ ಕುತೂಹಲ ಇತ್ತು ಅವರಿಗೆ ಕೆಲಸ ಹಂಚುವ ಸಿಖ್ ಧರ್ಮದ ಗುರುಗಳ ಕಾರ್ಯ ನಿರ್ವಹಿಸುವ ರೀತಿ ತಿಳಿದುಕೊಂಡೆ.    
    ಬೆಳಿಗ್ಗೆ ಬೆಳಿಗ್ಗೆ ಅನೇಕ ವರ್ಷದ ಕಾಯುವಿಕೆಯಿಂದ ಸೇವೆ ಮಾಡುವ ಅವಕಾಶದ ಪತ್ರ ಪಡೆದು ಬರುವವರು, ಅವತ್ತೇ ಸೇವೆ ಸಲ್ಲಿಸಲು ಅವಕಾಶಕ್ಕೆ ಕಾಯುವವರು ಸರದಿ ಸಾಲಿನಲ್ಲಿ ನಿಂತು ಅಲ್ಲಿನ ಪ್ರಮುಖರು ಹಂಚಿದ ಕೆಲಸ ಭಕ್ತಿ ಪೂರ್ವಕವಾಗಿ ನಿರ್ವಹಿಸುತ್ತಾರೆ.
   ಇದರಲ್ಲಿ ಸಾಮಾನ್ಯ ಸಿಖ್ ರಿಂದ ಐಎಎಸ್, ಐಪಿಎಸ್, ಅತ್ಯಂತ ಶ್ರೀಮಂತ, ಮಂತ್ರಿಗಳೂ ಇರುತ್ತಾರೆ ಅವತ್ತು ಅಲ್ಲಿ ಸಾರ್ವಜನಿಕರ ಪಾದರಕ್ಷೆ ಇಡುವಲ್ಲಿ ಭಕ್ತರ ಪಾದರಕ್ಷೆ ಪಡೆದು ಟೋಕನ್ ನೀಡಿ ಆ ಪಾದರಕ್ಷೆಯ ದೂಳು ಒರೆಸಿ ಇಡುವ ಕೆಲಸ ಸಿಕ್ಕಿದರೆ ಅದು ಜೀವನದ ಪರಮೋಚ್ಚ ಪುಣ್ಯ ಪಡೆಯುವ ಕೆಲಸ ಎಂಬ ನಂಬಿಕೆ ಸಿಖ್ ರದ್ದು.
  ಅಲ್ಲಿನ ಲಂಗರ್ (ಊಟದ ಮನೆ) ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಪ್ರತಿನಿತ್ಯ ಕನಿಷ್ಟ ಒ0ದೂವರೆ ಲಕ್ಷ ಜನ ಶುಚಿ-ರುಚಿಯ,ಜಾತ್ಯಾತೀತ, ಮನುಷ್ಯರೆಲ್ಲ ಒಂದೇ ಅನ್ನುವ ಸಾರ್ವಜನಿಕ ಅನ್ನಸಂತರ್ಪಣೆ ನಿರಂತರವಾಗಿ ನಡೆಯುತ್ತಲೇ ಇದೆ.
   ಬಂಗಾರದ ತಗಡು ಹೊದಿಸಿರುವ ಸ್ವರ್ಣ ಮಂದಿರ, ಅಲ್ಲಿ ಪ್ರತಿ ನಿತ್ಯ ಪಠಿಸುವ ಸಿಖ್ ಧರ್ಮಗ್ರಂಥ ಗ್ರಂಥ್ ಸಾಹೀಬ್ .
  ನಂತರ ಬೃಹತ್ ಸೆಂಟ್ರಲ್ ಸಿಖ್ ಮ್ಯೂಸಿಯಂ ನೋಡುತ್ತಾ ಹೋದಾಗಲೆ ಗೊತ್ತಾಗುತ್ತದೆ ಸಿಖ್ ದರ್ಮಿಯರ ಸಾದನೆ - ಹೋರಾಟ - ಆಧ್ಯಾತ್ಮ - ಸಮಾನತೆಗಳು ಮತ್ತು ಇತಿಹಾಸ.
  ಆ ಬೃಹತ್ ಕಟ್ಟಡ ಸಂಕೀರ್ಣದಲ್ಲಿ ಹುತಾತ್ಮಾರ ಪಟ್ಟ ಪಡೆದ ಸಾವಿರಾರು ಸಿಖ್ ದರ್ಮಿಯ ಹುತಾತ್ಮರ ಪೋಟೋಗಳು ವ್ಯವಸ್ಥಿತವಾಗಿ ಜೋಡಿಸಿದ್ದಾರೆ.
  ಕಟ್ಟರ್ ಸಿಖ್ ದಮ೯ದ ಅನುಯಾಯಿ ಶಸ್ತ್ರದಾರಿಗಳು ಈ ಎಲ್ಲಾ ಕೋಣೆಗಳ ಕಾವಲು ಕಾಯುತ್ತಾರೆ, ಅಂತವರಲ್ಲಿ ಒಬ್ಬರನ್ನು ನಾನು ಕೇಳಿದೆ "ಪಾಜಿ ಇದರ್ ಸತ್ವಂತ್ ಸಿಂಗ್ ಔರ್ ಬಿಯಾಂತ್ ಸಿಂಗ್ ತಸ್ವೀರ್ ಹೈ ಕ್ಯಾ" ಅಂದೆ... ಒಂದು ಕ್ಷಣ ಅವರು ತಮ್ಮ ಬಿಗುಮುಖದಲ್ಲಿ ನನ್ನನ್ನೇ ದಿಟ್ಟಿಸಿದರು... ಅವರ ಧಾರ್ಮಿಕ ವೇಷ ಭೂಷಣ, ಶಸ್ತ್ರಾಸ್ತ್ರಗಳ ದರಿಸಿದ ನೀಳ ಗಡ್ಡ, ಬಣ್ಣದ ಪೇಟಾ, ಕೈಯಿಯ ಬಳೆ, ಸೊಂಟದ ಕೃಪಾಣಗಳ ಜೊತೆ ಅವರ ತೀಕ್ಷ್ಣ ಕಣ್ಣುಗಳ ನೋಟ ನನ್ನ ಒಂದು ಕ್ಷಣ ನನಗೆ ಭಯ ಉಂಟು ಮಾಡಿದ್ದು ಸುಳ್ಳಲ್ಲ... ಪ್ರದಾನಿ ಇಂದಿರಾ ಹತ್ಯೆ ಇವರಿಗೆ ಈ ಸಿಟ್ಟು ತರಿಸಿರಬಹುದು ಅನ್ನಿಸಿತು .... ನಂತರ ಆತ ನನ್ನ ಊರು ಮನೆ ಮತ್ತು ನನ್ನ ಉದ್ದೇಶ ತಿಳಿದ ನಂತರ ಕೈಸನ್ನೆ ಮಾಡಿ ಹಿಂಬಾಲಿಸಲು ಸೂಚಿಸಿದ... ಯಾಕೆ? ಏನು? ಅಂತ ಕೇಳಲು ಭಯ...ಹಿಂಬಾಲಿಸಿದೆ, ಒಂದೆರೆಡು ಕೋಣೆ ನಂತರದ ಮೂಲೆಯ ಗೋಡೆ ಮೇಲಿನ ಚಿತ್ರದ ಕಡೆ ಕೈ ಬೆರಳು ತೋರಿಸಿದಾಗ ಕಂಡಿದ್ದೆ ನಮ್ಮ ದೇಶದ ಜನಪ್ರಿಯ ಪ್ರದಾನಿ ಇಂದಿರಾ ಗಾಂಧಿ ಹತ್ಯೆ ಮಾಡಿದ ಅವರ ಅಂಗ ರಕ್ಷಕರಾದ ಸತ್ವಂತ್ ಸಿಂಗ್ ಮತ್ತು  ಬಿಯಾಂತ್ ಸಿಂಗ್ ಪೋಟೋಗಳು ಅದು ಹುತಾತ್ಮ ಪಟ್ಟ ಪಡೆದವರೆಂಬ ಗೌರವದ ಜೊತೆ.
   ಪ್ರಜಾಪ್ರಭುತ್ವ ದೇಶದಲ್ಲಿ ಆ ದೇಶದ ಪ್ರದಾನಿ ಹತ್ಯೆ ಮಾಡಿದವರನ್ನು ಈ ರೀತಿ ಸಾರ್ವಜನಿಕವಾಗಿ ಗೌರವಿಸುವುದು ದೇಶದ್ರೋಹವಾ? ಗೊತ್ತಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...