Blog number 1341. ದೇಶದ ಅತ್ಯಂತ ಹಿರಿಯ ಸಕ್ರಿಯ ಪತ್ರಕರ್ತ 98ನೇ ಹುಟ್ಟುಹಬ್ಬ ಆಚರಿಸಿಕೊಂಡ ಕಾಮ್ರೇಡ್ ಲಿಂಗಪ್ಪ ಇಹಲೋಕ ತ್ಯಜಿಸಿದ್ದಾರೆ.
ಶಿವಮೊಗ್ಗದ ಕಾಮ್ರೇಡ್ ಲಿಂಗಪ್ಪನವರಿಗೆ 98ನೇ ವರ್ಷ ಪೂರೈಸಿದ ಸಮಯದಲ್ಲಿ ಸನ್ಮಾನ ಸ್ವೀಕರಿಸಿದ್ದ ಕ್ರಾಂತಿ ಭಗತ್ ಪತ್ರಿಕೆ ಸಂಪಾದಕರು ನಿನ್ನೆ (24- ಮಾರ್ಚ್ -2023) ರಂದು ಇಹಲೋಕ ತ್ಯಜಿಸಿದ್ದಾರೆ, ಸದಾ ಕೆಂಪು ಬಣ್ಣದ ಉಡುಗೆ ತೊಡುಗೆ ಎಲ್ಲದೂ ಕೆಂಪು ದೇಶದ ಅತ್ಯಂತ ಹಿರಿಯ ಸಕ್ರಿಯ ಪತ್ರಕರ್ತರು ಇವರು
#ಇದೇ_ತಿಂಗಳ_31ಕ್ಕೆ_ಸನ್ಮಾನವಿದೆ
#ಅವರಿಗೆ_98ರ_ಪ್ರಾಯ.
#ಶಿವಮೊಗ್ಗದ_ಕ್ರಾಂತಿ_ಭಗತ್_ಪತ್ರಿಕೆ_ಸಂಪಾದಕರು.
#ಸದಾ_ಸೂಟು_ಬೂಟು_ಹ್ಯಾಟು_ಎಲ್ಲದೂ_ಕೆಂಪು.
#ಒಂಟಿ_ದ್ವನಿಯ_ಏಕ_ವ್ಯಕ್ತಿ_ಹೋರಾಟ_ಇವರದ್ದು
#ಜೊತೆಗೆ_ಜಾಗಟೆ_ಶಂಖ
ನಾನು 1995ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಜಿಲ್ಲಾ ಪಂಚಾಯತ್ ಸಭೆಗಳು ಶಿವಮೊಗ್ಗದ ಡಿಸಿಸಿ ಸಭಾಂಗಣದಲ್ಲಿ ನಡೆಯುತ್ತಿತ್ತು ಅಲ್ಲಿ ಪತ್ರಕರ್ತರ ಗ್ಯಾಲರಿಯಲ್ಲಿ ಕೆಂಪು ಟೋಪಿ, ಕೆಂಪು ಕೋಟು, ಕೆಂಪು ಟೈ, ಕೆಂಪು ಪ್ಯಾಂಟು, ಕೆಂಪು ಬೆಲ್ಟ್ ಮತ್ತು ಕೆಂಪು ಸಾಕ್ಸ್ ಬೂಟು ಮಾತ್ರ ಕಪ್ಪು ಧರಿಸಿದ್ದ ಕಾಮ್ರೆಡ್ ಲಿಂಗಪ್ಪ ಹೊಳೆಯುತ್ತಿದ್ದರು.
ಇವರನ್ನ 1985ರಿಂದ ಶಿವಮೊಗ್ಗದ ನೆಹರೂ ರಸ್ತೆಯ ಎರಡನೆ ಕ್ರಾಸಿನ ಸಮಾಜವಾದಿ ಪಿ.ಪುಟ್ಟಯ್ಯನವರ ಪ್ರಕೃತಿ ಮುದ್ರಣಾಲಯದಲ್ಲಿ ನೋಡುತ್ತಿದ್ದ ಪರಿಚಯ ನನ್ನದು ಇವರ #ಕ್ರಾಂತಿ_ಭಗತ್ ಪತ್ರಿಕೆ ಅಲ್ಲೇ ಮುದ್ರಣ ಆಗುತ್ತಿತ್ತು.
ಆ ಸಂದರ್ಭದಲ್ಲಿ ಸೊರಬದ ರಾಮಚಂದ್ರರ ಸಂಪಾದಕತ್ವದ #ಒಂಟಿ_ಧ್ವನಿ ಕೂಡ ಪ್ರಕೃತಿ ಮುದ್ರಣಾಲಯದಲ್ಲಿ ಮುದ್ರಣ ಆಗುತ್ತಿತ್ತು ಬಹಶಃ ಪುಟ್ಟಯ್ಯನವರು ಉಚಿತವಾಗಿ ಮುದ್ರಿಸಿ ಕೊಡುತ್ತಿದ್ದರು.
ಕಾಮ್ರೇಡ್ ಲಿಂಗಪ್ಪನವರು ಮತ್ತು A. V. ಶ್ರೀನಿವಾಸರು ಪುಟ್ಟಯ್ಯರ ಹತ್ತಿರ ತೆಗಿ... ತೆಗಿ... ಹತ್ತು ರೂಪಾಯಿ ಅಂತ ಅನ್ನುವುದು ಪುಟ್ಟಯ್ಯನವರು ತಮಾಷೆಯಾಗಿ ನಿಮ್ಮ ಹೆಸರಿನ ಲೆಖ್ಖದ ಪುಸ್ತಕ ನಿಮ್ಮ ಲೆಕ್ಕ ಬರೆದೂ ಬರೆದೂ ತುಂಬಿ ಹೋಯಿತು ಅನ್ನುತ್ತಾ ಹಣ ಕೊಡುವುದು ಅಲ್ಲಿ ಕುಳಿತಿರುತ್ತಿದ್ದ ಗೆಳೆಯರ ಹಾಸ್ಯದ ನಗು ನೋಡುತ್ತಿದ್ದೆ.
ಒಮ್ಮೆ ಜಿಲ್ಲಾ ಪಂಚಾಯತ್ ಹೊರಗೆ ಯಾವುದೋ ಹೋರಾಟದ ಜನ ಕಾಯುತ್ತಿದ್ದರೂ ಅಧಿಕಾರಿಗಳು ಗಮನಿಸುತ್ತಿಲ್ಲ ಅಂತ ಕಾಮ್ರೇಡ್ ಲಿಂಗಪ್ಪನವರು ಜಿಲ್ಲಾ ಪಂಚಾಯತ್ ಸಭೆ ಒಳಗೇ ಜಾಗಂಟೆ ಬಾರಿಸುತ್ತಾ ಶಂಖ ಉದುವ ಮೂಲಕ ಗಮನ ಸೆಳೆದಾಗ ನಾವೆಲ್ಲ ಅಧಿಕಾರಿಗಳನ್ನು ಮನವಿ ಸ್ವೀಕರಿಸಲು ಒತ್ತಾಯಿಸಿ ಕಳಿಸಿದ ನೆನಪು.
ಇವರದ್ದೇ ಕೆಂಪು ಬಣ್ಣದ ಮೋಪೆಡ್ ಇವರ 95ನೇ ವರ್ಷದ ಪ್ರಾಯದಲ್ಲೂ ಓಡಿಸುತ್ತಿದ್ದರು ಈಗ ಸಾಧ್ಯವಾಗುತ್ತಿಲ್ಲ ಇವರಿಗೆ 98 ನೇ ವರ್ಷ ಪೂರೈಸಿದ ಕಾರಣ ಇಟ್ಟುಕೊಂಡು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದಿಂದ ದಿನಾಂಕ 31- ಡಿಸೆಂಬರ್ -2022ರ ಶನಿವಾರ ಬೆಳಿಗ್ಗೆ 11.45ಕ್ಕೆ ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯ ಹೋಟೆಲ್ ಮಥುರಾ ಪ್ಯಾರಾಡೈಸ್ ಲಾಡ್ಜ್ ನ ಮೂರನೆ ಮಹಡಿಯಲ್ಲಿ ಸನ್ಮಾನ ಕಾರ್ಯಕ್ರಮ ಕಲ್ಲೂರು ಮೇಘರಾಜ್ ಹಮ್ಮಿಕೊಂಡಿದ್ದಾರೆ.
ತುಮಕೂರಿನ ಗ್ರಾಮಾಂತರದ ಹುಟ್ಟೂರಿನಿಂದ ಬಾಲ್ಯದಲ್ಲೇ ಮುಂಬೈಗೆ ಹೋಗಿ ಅಲ್ಲಿ ಟ್ಟೆಲರಿಂಗ್ ಕಲಿಯುತ್ತಾ ಕಾರ್ಮಿಕ ಸಂಘಟನೆಗಳಲ್ಲಿ ತೊಡಗುತ್ತಾರೆ ಅಲ್ಲಿ ಕಮ್ಯೂನಿಸ್ಟ್ ಪಕ್ಷದ ತತ್ವ ಸಿದ್ಧಾಂತ ಅಳವಡಿಸಿಕೊಂಡವರು ತಮ್ಮ 98ನೇ ವಯಸ್ಸಿನವರೆಗೂ ಮುಂದುವರಿಸಿದ್ದಾರೆ.
ಮುಂಬೈನಿಂದ ಶಿವಮೊಗ್ಗಕ್ಕೆ ಬಂದು ಮಲ್ಲಿಕಾರ್ಜುನ ಟಾಕೀಸ್ ಎದುರು ತಮ್ಮ ಟೈಲರಿಂಗ್ ವೃತ್ತಿ ಜೊತೆಗೆ ಪತ್ರಿಕೆ ಮತ್ತು ಕಾರ್ಮಿಕ ಹೋರಾಟ ಮಾಡುತ್ತಾ, ಕೃಷಿಯೂ ಮಾಡುತ್ತಾ ಸಮಾಜವಾದಿ ಶಾಂತವೇರಿ ಗೋಪಾಲಗೌಡ, ಬಂಗಾರಪ್ಪ, ಜೆ.ಹೆಚ್.ಪಟೇಲರು, ಕೊಣಂದೂರು ಲಿಂಗಪ್ಪ, ಕಾಗೋಡು ತಿಮ್ಮಪ್ಪರಿಂದ ಹಿಡಿದು ಈಗಿನ ಯಡೂರಪ್ಪರ ತನಕ ಎಲ್ಲಾ ಜಿಲ್ಲೆಯ ರಾಜಕಾರಣಿಗಳ ಒಡನಾಟ ಹೊಂದಿದ್ದಾರೆ.
ಸದಾ ತಮಾಷೆ ಆಗಿ ಮಾತಾಡುತ್ತಾ ಒಬ್ಬ೦ಟಿಯಾಗಿ ವಿಬಿನ್ನವಾದ ಇವರ ಹೋರಾಟಗಳು ವಿಚಿತ್ರ ಅನ್ನಿಸಿದರು ಇವರ ವಿಚಾರಗಳು ಸ್ಪಷ್ಟವಾಗಿದ್ದು ಯಾರ ಗಮನ ಸೆಳೆಯ ಬೇಕೋ ಅವರ ಗಮನ ಸೆಳೆದು ಸಂತ್ರಸ್ಥರಿಗೆ ನ್ಯಾಯ ಕೊಡಿಸುವುದರಲ್ಲಿ ಸಪಲರಾಗಿರುತ್ತಾರೆ.
ಶಿವಮೊಗ್ಗ ಜಿಲ್ಲಾ ಪಂಚಾಯತ್ CEO ಐಎಎಸ್ ಶಶಿಕಾಂತ್ ಸೆಂಥಿಲ್ ರಾಜಿನಾಮೆ ಸ್ವೀಕರಿಸಬಾರದೆಂಬ ಇವರು ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಮೆಟ್ಟಿಲ ಮೇಲೆ ಒಬ್ಬಂಟಿ ಹೋರಟದ ಚಿತ್ರ ಪತ್ರಕರ್ತ D. P. ಸತೀಶ್ ರ ಟ್ವಿಟರ್ ನಲ್ಲಿ ಹಾಕಿದ್ದು ವೈರಲ್ ಆಗಿತ್ತು ಅಂದರೆ ಕಾಮ್ರೇಡ್ ಲಿಂಗಪ್ಪ ಎಂತವರೆಂದು ಅರ್ಥವಾದೀತು.
: ACTIVIST OF EVER RED COSTUME MAN CROSSED 98 YEARS COMRADE LINGAPPA TYPICAL JOURNALIST ಈ ಸಂದರ್ಭದಲ್ಲಿ ಕಾಮ್ರೇಡ್ ಲಿಂಗಪ್ಪನವರು ಶತಾಯುಷಿಗಳಾಗಲಿ, ಆರೋಗ್ಯವಂತರಾಗಿರಲಿ ಮತ್ತು ಅವರ ಸನ್ಮಾನ ಕಾರ್ಯಕ್ರಮ ಅವರಿಗೆ ಹೆಚ್ಚಿನ ಹುಮ್ಮಸ್ಸು ನೀಡಲಿ ಎಂದು ಹಾರೈಸಿದ್ದೆ ನಿನ್ನೆ ರಾತ್ರಿ ಅವರು ಇಹಲೋಕ ತ್ಯಜಿಸಿದ ಸುದ್ದಿ ಬಂದಿದೆ ಅವರ ಆತ್ಮಕ್ಕೆ ಸದ್ಗತಿಗೆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.
ದೇಶದ ಅತ್ಯಂತ ಹಿರಿಯ ಸಕ್ರಿಯ ಪತ್ರಕರ್ತರು ಇವರು.
- Get link
- X
- Other Apps
- Get link
- X
- Other Apps
Comments
Post a Comment