Blog number 1278. ಆನಂದಪುರಂನ ಸಮಸ್ತ ಅಭಿವೃದ್ದಿಗಾಗಿಆಗಿನ ವಿದ್ಯಾ ಮಂತ್ರಿ ಎ.ಆರ್. ಬದರಿನಾರಾಯಣ ಅಯ್ಯಂಗಾರರ ಕನಸಿಗೆ ವೇಗ ನೀಡಿದ ಶಿಕಾರಿಪುರದ ಎಸ್.ಆರ್.ಕೃಷ್ಣಪ್ಪನವರಿಗೆ ಸಮಸ್ತ ಆನಂದಪುರಂ ನಿವಾಸಿಗಳ ಶ್ರದ್ಧಾಂಜಲಿಗಳು
#ಎಸ್_ಆರ್_ಕೃಷ್ಣಪ್ಪ_ಶಿಕಾರಿಪುರ
#ಆನಂದಪುರಂ_ಮಾದರಿ_ಊರು_ಮಾಡಲು_ಶ್ರಮಿಸಿದವರು.
#ಮಂತ್ರಿಗಳಾಗಿದ_ಎ_ಆರ್_ಬದರಿನಾರಾಯಣರ_ಅಭಿವೃದ್ಧಿ_ಕನಸಿಗೆ_ವೇಗ_ನೀಡಿದವರು.
#ಅಪ್ಪಟ_ಗಾಂಧೀವಾದಿ
#ಆ_ಕಾಲದಲ್ಲಿ_ಸೇವಾದಳದಿಂದ_ಆನಂದಪುರಂನಲ್ಲಿ_ನಡೆಯುತ್ತಿದ್ದ_ಪ್ರಬಾತ್_ಪೇರಿ.
#ಅದನ್ನ_ನೋಡಲು_ಸುತ್ತ_ಮುತ್ತಲಿನ_ಹಳ್ಳಿಯಿಂದ_ಜನ_ಬಂದು_ಸೇರುತ್ತಿದ್ದರು.
#ನನ್ನ_ಗೆಳೆಯ_ಕೃಷ್ಣಪ್ಪನ_ಮಗ_ಇಷ್ಟು_ಚೆನ್ನಾಗಿ_ನನ್ನ_ಚಿತ್ರಿಸಿದ್ದಿಯಪ್ಪ_ಎಂಬ_ಅವರ_ಮಾತು_ಮರೆಯಲಾರೆ
ನಿನ್ನೆ ರಾತ್ರಿ (3- ಮಾರ್ಚ್ -2023 ಶುಕ್ರವಾರ) ನಮ್ಮ ಆನಂದಪುರಂ ಊರನ್ನು ಮಾದರಿ ಊರಾಗಲು ಶ್ರಮಿಸಿ ಯಶಸ್ವಿ ಆಗಿದ್ದ ನಮ್ಮ ಊರಿನ ಜನರು ಪ್ರೀತಿಯಿಂದ SRK ಎಂದು ಕರೆಯುತ್ತಿದ್ದ ಶಿಕಾರಿಪುರದ ತಾಲ್ಲೂಕ್ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಆಗಿದ್ದ ಎಸ್ ಆರ್ ಕೃಷ್ಣಪ್ಪನವರು ಇಹ ಲೋಕ ತ್ಯಜಿಸಿದರು ಎಂಬ ಸುದ್ದಿ ಸಾಗರದ ಇಂದಿರಾ ಗಾಂಧಿ ಕಾಲೇಜಿನ ಉಪನ್ಯಾಸಕರು ಆಗಿರುವ SRK ಅವರ ಅಳಿಯ ಗಣಪತಿ ವಾಟ್ಸಪ್ ಸಂದೇಶ ಕಳಿಸಿದ್ದರು.
ಆನಂದಪುರಂಗೆ ಕಾಲೇಜು ತರಬೇಕು, ಸೈನ್ಸ್ ವಿಭಾಗ ಬೇಕೇ ಬೇಕು ಅದರಿಂದ ಈ ಭಾಗದ ವಿದ್ಯಾರ್ಥಿಗಳು ಡಾಕ್ಟರ್ ಇಂಜಿನಿಯರ್ ಆಗಬೇಕು, ಆನಂದಪುರಂಗೆ ಬ್ಯಾಂಕ್ ಬೇಕು, ಊರಿಗೆ ಕುಡಿಯುವ ನೀರಿನ ನಲ್ಲಿ ವ್ಯವಸ್ಥೆ ಆಗಬೇಕು ಅಂತೆಲ್ಲ ಆಗಿನ ಶಿಕ್ಷಣ ಮಂತ್ರಿಗಳಾದ ನಮ್ಮ ಊರಿನ ಎ.ಆರ್ ಬದರಿನಾರಾಯಣ ಅಯ್ಯಂಗಾರ್ ಮತ್ತು ಊರಿನ ವಿಲೇಜ್ ಪಂಚಾಯತ್ ಚೇರ್ ಮನ್ ಆಗಿದ್ದ ಅವರ ಸಹೋದರ ಎ.ಆರ್.ವೆಂಕಟಾಚಲ ಅಯ್ಯಂಗಾರ್ ರನ್ನು ಹುರಿದುಂಬಿಸುತ್ತಿದ್ದವರು ಅಯ್ಯಂಗಾರ್ ಕುಟುಂಬ ಊರಿಗಾಗಿ ಭೂಮಿ ನೀಡಿ ಕಟ್ಟಿಸಿಕೊಟ್ಟ ಪ್ರೌಡ ಶಾಲೆಗೆ ಹಾಸನ ಜಿಲ್ಲೆಯಿಂದ ವರ್ಗವಾಗಿ ಬಂದ ಶಿಕಾರಿಪುರ ಊರಿನ SR ಕೃಷ್ಣಪ್ಪನವರು.
ಇಡೀ ವಿದ್ಯಾರ್ಥಿ ವೃಂದ ಮಾತ್ರವಲ್ಲ ಇಡೀ ಊರನ್ನೇ ಶಿಸ್ತಿನಲ್ಲಿ ತಂದವರು ಅವರು, ಅವರಿಗೆ ಊರಲ್ಲಿ ಪೋಲಿಸರಿಗಿಂತ ಹೆಚ್ಚು ಹೆದರುತ್ತಿದ್ದರು, SRK ಮಾತು ಇಡೀ ಆನಂದಪುರಂಗೆ ವೇದ ವಾಕ್ಯ, ಆನಂದಪುರಂನ ಎಲ್ಲಾ ಸರ್ಕಾರಿ ನೌಕರರು ಅವರ ಆದೇಶದಂತೆ ಆನಂದಪುರಂ ಅಭಿವೃದ್ದಿಗಾಗಿ ಕೈ ಜೋಡಿಸುತ್ತಿದ್ದರೆಂದರೆ ಈ ಕಾಲದಲ್ಲಿ ನಂಬಲು ಸಾಧ್ಯವೇ ಇಲ್ಲ.
ಇವರ ಬಗ್ಗೆ ಕೆಲ ವರ್ಷದ ಹಿಂದೆ ಅಭಿನಂದನಾ ಗ್ರಂಥದ ಸಂಪಾದಕರಾಗಿದ್ದ ಇವರ ಅಳಿಯ ನನ್ನಿಂದ ಲೇಖನ ಒಂದನ್ನು ಬರೆಸಿದ್ದರು ಆ ಲೇಖನ ಓದಿದ್ದ SRK ಸ್ವತಃ ನನ್ನ ಆಫೀಸಿಗೆ ಬಂದು ನನ್ನ ತಂದೆ ಅವರ ಗೆಳೆಯರಾಗಿದ್ದ "ಕೃಷ್ಣಪ್ಪನ ಮಗ ಇಷ್ಟು ಚೆನ್ನಾಗಿ ನನ್ನ ಚಿತ್ರಿಸಿದ್ದಿಯಪ್ಪ" ಎನ್ನುವ ಮಾತು ನನ್ನ ಜೀವಮಾನ ಪೂತಿ೯ ನೆನಪಿನಲ್ಲಿಡುವಂತದ್ದು.
ಈ ಬಗ್ಗೆ ನಾನು ಬರೆದ ಬ್ಲಾಗ್ ಮತ್ತು ಅವರ ಅಭಿನಂದನಾ ಗ್ರಂಥದ ಲೇಖನದ ಪುಟಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಓದಬಹುದು
https://arunprasadhombuja.blogspot.com/2023/01/blog-number-1186-srk.html
Comments
Post a Comment