Blog number 1310. ಸಾಗರ ಪೋಲಿಸ್ ಠಾಣೆಯ ಮೊದಲ ಲಾಕ್ ಅಪ್ ಡೆತ್ ಪುರಪ್ಪೆಮನೆ ರಾಮನ ಕೊಲೆ, ಗುಂಡೂರಾವ್ ಸರ್ಕಾರದ ಸಚಿವ ಬಂಗಾರಪ್ಪ ಬೇಟಿ, ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪ ಅನ್ಯಾಯದ ವಿರುದ್ದ ಹಾಕಿದ ಆ ಘೋಷಣೆ, ಮುಂದೆ .....
https://youtu.be/WCphpbXEcmQ
#ಜನಪರ_ಹೋರಾಟಗಾರ_ತೀನಾ_ಶ್ರೀನಿವಾಸ್_ಭಾಗ_3
#ಸಾಗರದ_ಮೊದಲ_ಲಾಕ್_ಅಪ್_ಡೆತ್
#ಪುರಪ್ಪೆಮನೆ_ರಾಮ_ಶವ_ಸಾಗರ_ಠಾಣೆಯಲ್ಲಿ
#ಗುಂಡೂರಾವ್_ಸರ್ಕಾರದಲ್ಲಿ_ಮಂತ್ರಿ_ಆಗಿದ್ದ_ಬಂಗಾರಷ್ಟನವರು_ಸಾಗರದ_ಆಸ್ಟತ್ರೆಗೆ
#ಕಾಗೋಡು_ಹೋರಾಟದ_ರೂವಾರಿ_ಗಣಪತಿಯಪ್ಪರ_ದಿಕ್ಕಾರದ_ಘೋಷಣೆ
#ಗರಡಿ_ಗೋಪಾಲ_ಸಹೋದರರ_ಆಕ್ರೋಶ
#ಸಾಗರ_ಪಟ್ಟಣದಲ್ಲಿ_ಪೋಲಿಸರಿಂದ_ಲಾಠಿ_ಚಾಜ್೯_ಅಶ್ರುವಾಯು
#ವಿದ್ಯಾರ್ಥಿಗಳ_ಮೇಲೂ_ಲಾಠಿ_ಪ್ರಹಾರ
#ಮರುದಿನ_ಎಲ್_ಬಿ_ಕಾಲೇಜು_ವಿದ್ಯಾರ್ಥಿಗಳಿಂದ_ಬೃಹತ್_ಪ್ರತಿಭಟನೆ_ಸಾಗರ_ಪೇಟೆ_ಪ್ರಕ್ಷುಬ್ಧ.
#ತೀನಾ_ಶ್ರೀನಿವಾಸರ_ನೇತೃತ್ವದಲ್ಲಿ.
1978-79 ಇರಬೇಕು ಆನಂದಪುರಂನಿಂದ ಪ್ರತಿನಿತ್ಯ ಸಾಗರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ನಾವು , ನಾನು 8ನೇ ತರಗತಿ ಇಂಗ್ಲೀಷ್ ಮೀಡಿಯಂ ಮುನ್ಸಿಪಲ್ ಹೈಸ್ಕೂಲ್ ಗೆ ಸೇರಿದ್ದೆ.
ರೈಲಿಳಿದು ಪೋಲಿಸ್ ಸ್ಟೇಷನ್ ಸರ್ಕಲ್ ಗೆ ಬರುವಾಗ ಗೊತ್ತಾಯಿತು ಪುರಪ್ಪೆಮನೆಯ ರಾಮ ಎಂಬುವ ಬಡ ಕೃಷಿ ಕಾರ್ಮಿಕನನ್ನು ಕಳ್ಳತನದ ಆರೋಪದಲ್ಲಿ ಸಾಗರ ಪೋಲಿಸ್ ಠಾಣೆಗೆ ತಂದು ಏರೋಪ್ಲೇನ್ ಶಿಕ್ಷೆ ನೀಡಲಾಯಿತಂತೆ ಆಗ ಪೋಲಿಸರ ವಿಪರೀತ ಬಾಯಿ ಬಿಡಿಸುವ ಶಿಕ್ಷೆಯಿಂದ ಪುರಪ್ಪೆಮನೆ ರಾಮನ ಜೀವ ಹೋಯಿತು... ಏರೋಪ್ಲೇನ್ ಏರಿಸಲು ಹಿಂದಿನ ರಾತ್ರಿ ಬಸ್ ಸ್ಟ್ಯಾಂಡ್ ಅಂಬಿಕಾ ಹೋಟೆಲ್ ಬಾವಿ ಹಗ್ಗ ಒಯ್ದಿದ್ದರು... ಇದು ಲಾಕ್ ಅಪ್ ಡೆತ್ ... ರಾಮನ ಶವ ಸಾಗರದ ಆಸ್ಪತ್ರೆಯ ಶವಾಗಾರದಲ್ಲಿದೆ... ಸಾಗರ ಆಸ್ಪತ್ರೆ ಎದರು ಸಾವಿರಾರು ಜನ ಸೇರಿದ್ದಾರೆ.... ಎಂಬ ಸುದ್ದಿಗಳು ನನಗೂ ಮತ್ತು ಆಗ ಸಾಗರದ ಎಲ್. ಬಿ .ಕಾಲೇಜಿನ ನಮ್ಮ ಊರಿನ ವಿದ್ದಾರ್ಥಿ ನನ್ನ ಜಿಗಣಿ ದೋಸ್ತ್ ಪುಪ್ಪಾ ಆಲಿಯಾಸ್ ಸಿಲ್ವೆಸ್ಟರ್ ಡಿಕಾಸ್ಟಾಗೆ ಶಾಲೆಗೆ ಚಕ್ಕರ್ ಹೊಡೆದು ಸಾಗರದ ಆಸ್ಪತ್ರೆ ಕಡೆಗೆ ನಮ್ಮ ನಡಿಗೆ ಅ೦ತಾಯಿತು.
ಸಾಗರದ ಆಸ್ಸತ್ರೆ ಆವರಣದಲ್ಲಿ ನಿಂತಿದ್ದ ಪೋಲಿಸ್ ಜೀಪ್... ಅಲ್ಲಿ ಆಗಲೇ ಸಾವಿರಾರು ಸಾಗರದ ಜನ ಪೋಲಿಸರು ರಾಮನ ಕೊಂದ ಆಕ್ರೋಶದಲ್ಲಿ ಅಲ್ಲಿ ಸೇರಿದ್ದರು.
ಕೆಲವೇ ಕ್ಷಣದಲ್ಲಿ ಬಂಗಾರಪ್ಪನವರು ಆಗಮಿಸಲಿದ್ದಾರೆ ಅನ್ನುವಾಗಲೇ ಕೃಷಿ ಮ೦ತ್ರಿ ಬಂಗಾರಪ್ಪರ ಆಗಮನ ಆಯಿತು, ಬಂದವರು ಶವಾಗಾರಕ್ಕೆ ಹೋಗಿ ಲಾಕ್ ಅಪ್ ಡೆತ್ ಆಗಿದ್ದ ಪುರಪ್ಪೆ ಮನೆ ರಾಮನ ಶವ ವೀಕ್ಷಿಸಿ ಬಂದರು, ನೆರೆದ ಜನ ಬಂಗಾರಪ್ಪರ ಮಾತಿಗೆ ಕಾಯುತ್ತಿದ್ದರು.
ಬಂಗಾರಪ್ಪನವರು ನೆರೆದ ಜನಸ್ತೋಮಕ್ಕೆ " ನಾನು ಈಗಲೇ ಚೀಪ್ ಮಿನಿಸ್ಟರ್ ಗುಂಡೂರಾವ್ ಗೆ ಲೈಟನಿಂಗ್ ಕಾಲ್ ಮಾಡಿ ಇಲ್ಲಿನ ಪ್ರಸ್ತುತ ವಿಚಾರ ತಿಳಿಸುತ್ತೇನೆ, ತಪ್ಪಿತಸ್ಥ ಪೋಲಿಸರಿಗೆ ಖಂಡಿತಾ ಶಿಕ್ಷೆ ಕೊಡಿಸುತ್ತೇನೆ, ನಿರಪರಾದಿ ಬಡ ಕೃಷಿ ಕಾರ್ಮಿಕ ಪುರಪ್ಪೆಮನೆ ರಾಮನ ಲಾಕ್ ಅಪ್ ಡೆತ್ ವಿರೋದಿಸುತ್ತೇನೆ" ಅಂತ ಜನರಿಗೆ ಕೈ ಮುಗಿದು, ಟಾಟಾ ಮಾಡಿ ಅವರ ಕಾರು ಹತ್ತುವಾಗ, ಬಿಳಿ ಜುಬ್ಬಾ, ಕಚ್ಚೆ ಪಂಜೆ, ಬಿಳಿ ಗಾಂದಿ ಟೋಪಿ ಮತ್ತು ಕಾಕಿ ಬಗಲು ಚೀಲ ಹಾಕಿಕೊಂಡ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪ ಘೋಷಣೆ ಕೂಗಿದರು "ಬ೦ಗಾರಪ್ಪನವರಿಗೆ " ಅಂದಾಗ ನೆರೆದ ಜನಸ್ತೋಮ ಜೈ ಅಂದಿತು, "ಬಡ ರೈತ ರಾಮನ ಕೊಂದ ಪೋಲಿಸರಿಗೆ " ಅಂದಾಗ ಜನ ಸ್ತೋಮ ದಿಕ್ಕಾರ ಅಂದಿತು.
ಬಂಗಾರಪ್ಪರ ಕಾರು ಆಸ್ಪತ್ರೆ ಗೇಟು ದಾಟಿದ ಮರುಕ್ಷಣದಲ್ಲೇ ಗೇಟುಗಳನ್ನು ಸಾಗರದ ಶ್ರೀನಗರದ ಗರಡಿಮನೆ ಪೈಲ್ವಾನ್ ಗೋಪಾಲರ ಸಹೋದರರು ಬಂದ್ ಮಾಡಿದರು ಇದರಿಂದ ಬಂಗಾರಪ್ಪರ ಕಾರಿನ ಹಿಂದೆ ಹೊರಟಿದ್ದ ಪೋಲಿಸ್ ಜೀಪ್ ಆಕ್ರೋಷಭರಿತ ಜನರ ನಡುವೆ ಸಿಕ್ಕಿಬಿತ್ತು, ಪೋಲಿಸ್ ಜೀಪ್ ಹುಡಿಯಾಯಿತು, ಪೋಲಿಸರು ಓಡಿ ತಪ್ಪಿಸಿಕೊ೦ಡರು ಈ ರೀತಿ ಜನ ತಿರುಗಿ ಬೀಳುತ್ತಾರೆಂಬ ಮುಂಜಾಗ್ರತೆ ಆಗಿ ಠಾಣೆ ಎದುರು ನಿಂತಿದ್ದ ರಿಸರ್ವ್ ಪೋಲಿಸ್ ವ್ಯಾನ್ ಬಂದು ಸಿಕ್ಕಿದವರಿಗೆಲ್ಲ ಲಾಠಿ ಬೀಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವಾಗ ನಾನು ಮತ್ತು ನನ್ನ ಮಿತ್ರ ನರ್ಸ್ ಒಬ್ಬರು ಬಾಗಿಲು ಭದ್ರಪಡಿಸುತ್ತಿದ್ದ ಆಸ್ಸತ್ರೆ ವಾರ್ಡ್ನಲ್ಲಿ ಒಳ ಸೇರಿದ್ದರಿಂದ ಪೋಲಿಸರ ಲಾಠಿಯಿಂದ ತಪ್ಪಿಸಿಕೊಂಡೆವು.
ಇಡೀ ಸಾಗರ ಪೇಟೆ ವರ್ತಕರು ಭಯದಿಂದ ಸ್ವಯಂ ಅಂಗಡಿ ಮುಕ್ಕಟ್ಟು ಬಾಗಿಲು ಹಾಕಿದ್ದರಿಂದ ಸಾಗರ ಪೇಟೆ ನೀರವವಾಯಿತು, ಶಾಲಾ ಕಾಲೇಜುಗಳು ರಜಾ ಘೋಷಿಸಲಾಯಿತು, ರಸ್ತೆಯಲ್ಲಿ ಮನೆಗೆ ಸಾಗುವ ಮತ್ತು ರೈಲು ನಿಲ್ದಾಣ, ಬಸ್ ನಿಲ್ದಾಣಕ್ಕೆ ಸಾಗುತ್ತಿದ್ದ ವಿದ್ಯಾರ್ಥಿ ವೃಂದಕ್ಕೂ ಪೋಲಿಸರು ಲಾಠಿ ಪ್ರಹಾರ ಮಾಡಿದರು.
ಮರು ದಿನ ವಿದ್ಯಾರ್ಥಿ ಮುಖಂಡ ತೀನಾ ಶ್ರೀನಿವಾಸ್ ನೇತೃತ್ವದಲ್ಲಿ ಇಡೀ ಎಲ್.ಬಿ. ಕಾಲೇಜಿನ ವಿದ್ಯಾರ್ಥಿ ವೃಂದ ಸಾಗರದ ಪೋಲಿಸ್ ಠಾಣೆಗೆ ಮೆರವಣಿಗೆಯಲ್ಲಿ ಬಂದು ಮುತ್ತಿಗೆ ಹಾಕಿತು ಅವತ್ತಿನ ಘಟನೆಯಲ್ಲೂ ನಾನು ಮತ್ತು ಗೆಳೆಯ ಸಾಕ್ಷಿ ಆದೆವು ಮತ್ತೆ ವಿದ್ಯಾರ್ಥಿ ವೃಂದದ ಮೇಲೆ ಪೋಲಿಸರು ಲಾಠಿ ಅಶ್ರುವಾಯು ಪ್ರಯೋಗ ಮಾಡಿ ವಿಜೃಂಬಿಸಿದರು ಇಡೀ ಸಾಗರ ಪೇಟಿ ಎರಡನೆ ದಿನವೂ ಅಘೋಷಿತ ಬಂದ್ ಆಯಿತು.
ಈ ಬಗ್ಗೆ ಅವತ್ತಿನ ಜನಪರ ಹೋರಾಟದ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಮುಖಂಡರಾಗಿದ್ದ ತೀ.ನಾ. ಶ್ರೀನಿವಾಸ್ ಈಗ ಕಾಂಗ್ರೇಸ್ ಪಕ್ಷಕ್ಕೆ (ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರೂ ಆಗಿದ್ದವರು) ರಾಜಿನಾಮೆ ನೀಡಿ ಸುದ್ಧಿ ಆಗಿರುವ ಸಂದರ್ಭದಲ್ಲಿ ಅವರ ಅವತ್ತಿನ ನೆನಪಿನ ವಿಡಿಯೋ ಸಂದರ್ಶನ ಇಲ್ಲಿದೆ.
Comments
Post a Comment