Blog number 1300. ಜನಪರ ಹೋರಾಟಗಾರ ತೀನಾ. ಶ್ರೀನಿವಾಸ್ ಭಾಗ -2 . ನರಗುಂದ ರೈತರ ಮೇಲಿನ ಗೋಲಿಬಾರ್ ವಿರೋಧಿಸಿ ಸಾಗರದಲ್ಲಿ ಗುಂಡೂರಾವ್ ಗೆ ವೇದಿಕೆ ಮೇಲೆ ದಿಕ್ಕಾರ ಕೂಗಿ ಪ್ರತಿಭಟಿಸಿ ಜೈಲಿಗೆ ಹೋದ ಘಟನೆ
#ಜನಪರ_ಹೋರಾಟಗಾರ_ತೀನಾ_ಶ್ರೀನಿವಾಸ್_ಭಾಗ_2.
#ಜೈಲಿಗೆ_ಹಾಕಿದ್ದು_ಬೇಜಾರಾಗಿಲ್ಲ_ಮುಖ್ಯಮ೦ತ್ರಿಗೆ_ದಿಕ್ಕಾರ_ಹೇಳಿದ್ದು_ಸಮಾದಾನ
#ಇದು_ಹೋರಾಟಗಾರ_ತೀನಾ_ಶ್ರೀನಿವಾಸ್
#ನರಗುಂದದ_ಪ್ರತಿಭಟನಾ_ನಿರತ_ರೈತರ_ಮೇಲೆ_ಗೋಲಿಬಾರ್_ಮಾಡಿದ್ದ_ಅವತ್ತಿನ_ಗುಂಡೂರಾವ್_ಸರ್ಕಾರ
#ಆ_ಸರ್ಕಾರದಲ್ಲಿ_ಕಾಗೋಡು_ಖರ್ಗೆ_ದರಂಸಿಂಗ್_ಪ್ರಬಾವಿ_ತ್ರಿವಳಿ_ಸಚಿವರು
#ರೈತ_ನಾಯಕರಾದ_ರುದ್ರಪ್ಪ_ಸುಂದರೇಶ್_ನಂಜುಂಡಸ್ವಾಮಿ_ಕರೆಯೇ_ಪ್ರೇರಣೆ
#ಸಾಗರದ_ತಹಸೀಲ್ದಾರ್_ಕಛೇರಿ_ಲೋಕಾರ್ಪಣೆಗೆ_ಮುಖ್ಯಮಂತ್ರಿ_ಗುಂಡೂರಾವ್
#ವೇದಿಕೆಯಲ್ಲಿಯೇ_ದಿಕ್ಕಾರದ_ಬಿಸಿ_ತೋರಿಸಿದ_ವಿದ್ಯಾರ್ಥಿ_ಮುಖಂಡರು
#ಮುಖ_ಭಂಗದಿಂದ_ಕಾಗೋಡು_ಬೆಂಕಿ
#ನರಗುಂದ_ರೈತರ_ಬಲಿ_ಪಡೆದ_ಗೋಲಿಬಾರ್_ಗುಂಡೂರಾವ್_ಸರ್ಕಾರ_ಪತನ.
ಗುಂಡೂರಾವ್ ಮುಖ್ಯಮಂತ್ರಿ ಆದಾಗ ಅವರನ್ನು ವಿರೋದಿಸುತ್ತಿದ್ದ S ಬಂಗಾರಪ್ಪರನ್ನು ಹಳಿಯಲು ಸಾಗರದಲ್ಲಿ ಕಾಂಗ್ರೇಸ್ ನಿಂದ ಎಲ್.ಟಿ ತಿಮ್ಮಪ್ಪ ಹೆಗ್ಗಡೆಯವರಿಂದ ಸೋತಿದ್ದ ಜನತಾ ಪಕ್ಷದ ಮಾಜಿ ಶಾಸಕ ರಾದ ಕಾಗೋಡು ತಿಮ್ಮಪ್ಪನವರನ್ನು ಸಾಗರದ ಆಹಮದ್ ಆಲೀಖಾನ್ ಸಾಹೇಬರು ಅವರ ಮಿತ್ರ ಮಡಿಕೆರೆಯ ಎಪ್.ಎಂ.ಖಾನ್ (ಸಂಜಯ್ ಗಾಂದಿ ರೈಟ್ ಹ್ಯಾಂಡ್) ರಿಂದ ಕಾಂಗ್ರೇಸ್ ಗೆ ಸೇರಿಸಿದ್ದರು, ನಂತರದಲ್ಲಿ ಕಾಗೋಡರನ್ನು MLC ಮಾಡಿ ಲೋಕೋಪಯೋಗಿ ಮಂತ್ರಿ ಮಾಡಿದರು ಗುಂಡೂರಾವ್ .
1980ರ ಜುಲೈ 21 ರಂದು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮಲಪ್ರಭಾ ನದಿಯ ಬೆಟರ್ ಮೆಂಟ್ ಲೇವಿ ಹೆಚ್ಚಳ ವಿರೋದಿಸಿ ರೈತರು ಪ್ರತಿಭಟನಾ ನಿರತರಾಗಿದ್ದನ್ನು ಸಹಿಸದ ಆಗಿನ ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದ ಕಾಂಗ್ರೇಸ್ ಸರ್ಕಾರ ಗೋಲಿಬಾರ್ ಮಾಡಿ ಇಬ್ಬರು ರೈತರ ಸಾವಿಗೆ ಕಾರಣವಾಗಿತ್ತು.
ಇದನ್ನು ಕರ್ನಾಟಕ ರಾಜ್ಯ ರೈತ ಸಂಘದ ನಾಯಕರುಗಳಾದ ರುದ್ರಪ್ಪ, ಸುಂದರೇಶ್ ಮತ್ತು ನಂಜುಂಡ ಸ್ವಾಮಿ ವಿರೋದಿಸಿ ಗೋಲಿಬಾರ್ ಸರ್ಕಾರದ ವಿರುದ್ದ ಪ್ರತಿಭಟಿಸಲು ಕರೆ ನೀಡಿದ್ದರು.
ಇದರಿಂದ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ಮುಖಂಡರಾಗಿದ್ದ ತೀ ನಾ. ಶ್ರೀನಿವಾಸ್ ಪ್ರೇರೇಪಿತರಾಗಿ ಗುಂಡೂರಾವ್ ಸಾಗರದ ತಹಸೀಲ್ದಾರ ಕಛೇರಿ ಉದ್ಘಾಟನೆಗೆ ಅವರ ಸಂಪುಟದ ಪ್ರಭಾವಿ ಸಚಿವ ಕಾಗೋಡು ತಿಮ್ಮಪ್ಪರ ಆಹ್ವಾನದ ಮೇಲೆ ಬಂದಾಗ ವೇದಿಕೆ ಏರಿ #ನರಗುಂದ_ರೈತರ_ಮೇಲೆ_ಗೋಲಿಬಾರ್_ಮಾಡಿದ_ಭ್ರಷ್ಟ_ಸರ್ಕಾರಕ್ಕೆ_ದಿಕ್ಕಾರ ಎಂದಿದ್ದು ಸ್ವತಃ ಮುಖ್ಯಮಂತ್ರಿ ಗುಂಡೂರಾವ್ ಗೆ ಕಸಿವಿಸಿ, ಕಾಗೋಡರಿಗೆ ತಮ್ಮ ಊರಲ್ಲಿ ಮುಖ್ಯಮಂತ್ರಿಗೆ ಅವಮಾನ ಅನ್ನಿಸಿದ್ದು ಸಹಜ.
ಈಗಲೂ ಇಂತಹ ಪ್ರತಿಭಟನೆ ಮಾಡಲು ಹೆದರುವ ಕಾಲ ಇನ್ನು ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದಾಗ ಆ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಲು ಎಂಟು ಎದೆ ಬೇಕು.
ಈ ಸುದ್ದಿ ರೇಡಿಯೋದಲ್ಲಿ ವಾರ್ತೆಯಾಗಿ,PTI - ಹಿಂದೂ-ರಾಜ್ಯದ ಎಲ್ಲಾ ದಿನಪತ್ರಿಕೆಯ ಮುಖಪುಟದ ಸುದ್ದಿ ಆಯಿತು ಆಗ ದಿನಪತ್ರಿಕೆಗಳು ಈಗಿನಂತೆ ಜಿಲ್ಲಾ ಪತ್ರಿಕೆಗಳಾಗಿಲ್ಲವಾದ್ದರಿಂದ ಈ ಸುದ್ದಿ ರಾಜ್ಯದಾದ್ಯಂತ ಸೆನ್ಸೇಷನಲ್ ಸುದ್ದಿ ಆಗಿ ಮುಂದಿನ ದಿನಗಳಲ್ಲಿ ಗುಂಡೂರಾವ್ ಸರ್ಕಾರದ ವಿರುದ್ದ ದೊಡ್ಡ ಚಳವಳಿ ಪ್ರತಿಭಟನೆಗೆ ಕಾರಣವಾಗಿ ಸರ್ಕಾರದ ಪತನಕ್ಕೆ ಕಾರಣವಾಯಿತು.
TNS ಸಂಪರ್ಕ 94487 74670
Comments
Post a Comment