Blog number 1328. ಕೋಳಿ ಅಂಕ ಎಂಬ ಜನಪದ ಕ್ರೀಡೆಗೆ ನಿಷೇದ... ಕುದುರೆ ರೇಸ್ / ಕ್ಯಾಸಿನೋಗೆ ಕೆ೦ಪು ಹಾಸಿನ ಸ್ಟಾಗತ -
#ಕೋಳಿ ಅಂಕಕ್ಕೆ ಜೈಲು? ಕುದುರೇ ರೇಸ್, ಕ್ಯಾಸಿನೋಗಳಿಗೆ ಕೆಂಪು ಕಾಪೆ೯ಟ್ ಸ್ವಾಗತ !
ಶಿವಮೊಗ್ಗ ಜಿಲ್ಲೆಯ ಹೊಸನಗರದ ಮಾಜಿ ಶಾಸಕರಾದ ಸ್ವಾಮಿರಾವ್ ವಿಶಿಷ್ಟ ರಾಜಕಾರಣಿ, ಈಗಲೂ ಕೃಷಿಯಿಂದ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ ಇವರ ಬಗ್ಗೆ ಇವರ ಸಮಕಾಲಿನ ಗೆಳೆಯರಾದ ಸಾಹಿತಿ ಕೋಣಂದೂರು ವೆಂಕಪ್ಪ ಗೌಡರು, ಮಾಜಿ ಶಾಸಕರಾದ ಪಟಮಕ್ಕಿ ರತ್ನಾಕರ್ ಒಂದು ಪುಸ್ತಕ ತರುವ ಪ್ರಯತ್ನದಲ್ಲಿದ್ದವರಿಗೆ ನಾನು ಶಿವಮೊಗ್ಗದ ಶೃ೦ಗೇಶರ ಜನ ಹೋರಾಟ ಪತ್ರಿಕೆಯಲ್ಲಿ ಅಂಕಣದಲ್ಲಿ ಬರೆದಿದ್ದ ಸ್ವಾಮಿರಾವ್ ಬಗ್ಗೆಯ ಲೇಖನ ಸದರಿ ಪುಸ್ತಕಕ್ಕೆ ಬೇಕು ಎಂದು ಕೇಳಿದರು.
ಕಾರಣವೇನೆಂದರೆ ಆಗ ಶಾಸಕರಾಗಿದ್ದ ಸ್ವಾಮಿ ರಾವ್ರರವರು ಅವರ ವಿಧಾನಸಭಾ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಮೂಲದವರಾದ ಪೂಜಾರರು, ಮೊಗವೀರರು, ಬಂಟರು, ದೇವಾಡಿಗರು ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರೆಲ್ಲರೂ ಕೋಳಿ ಅಂಕದ ಅಭಿಮಾನಿಗಳು, ಸುಗ್ಗಿ ಕಾಲದಲ್ಲಿ, ಹುಣ್ಣಿಮೆಗಳಲ್ಲಿ ಸುತ್ತಮುತ್ತಲಿನವರೆಲ್ಲ ಸೇರಿ ಈ ಕ್ರೀಡೆ ನಡೆಸುತ್ತಾರೆ, ಅಲ್ಲಿ ಮದ್ಯ, ಬೀಡಿ, ಸಿಗರೇಟು, ಚಹಾ, ನೀರು ದೊಸೆ ಕೋಳಿಪಲ್ಲೆ ಮಾರಾಟದ ಅಂಗಡಿ ಹೋಟೆಲ್ಗಳು ತಾತ್ಕಾಲಿಕವಾಗಿ ಬರುತ್ತದೆ.
ಅಂಕದ ಕೋಳಿ ಸಾಕಿದ ಸ್ಟಾರ್ ಆಟಗಾರರು ತಮ್ಮ ಕೋಳಿಗಳ ಜೊತೆ ಬಗಲಿಗಳೆoಬ ಸಹಾಯಕರ ಜೊತೆ ಬರುವ ಗತ್ತು ನೋಡಬೇಕು, ಇದನ್ನ ನೋಡಲು ಬರುವ ಅಭಿಮಾನಿಗಳು, ಗೆಲ್ಲುವ ಕೋಳಿಗಳ ಮೇಲೆ ಬೆಟ್ಟಿOಗ್ ಕಟ್ಟುವವರು, ಅಂಕದ ಕೋಳಿ ಕಾಲಿಗೆ ಕತ್ತಿ ಕಟ್ಟುವ ಎಕ್ಸ್ ಪಟ್೯ಗಳು, ಕೋಳಿ ಕಾಳಗದಲ್ಲಿ ಗಾಯಗೊಂಡ ಕೋಳಿಗಳಿಗೆ ಇಲಾಜು ಮಾಡುವ, ಗಾಯ ದೊಡ್ಡದಾದರೆ ಹೊಲಿಗೆ ಹಾಕುವ ಕೋಳಿ ಅಂಕದ ನಾಟಿ ಡಾಕ್ಟರ್ ಗಳು ಹೀಗೆ ತರಹಾವಾರಿ ಜನಗಳ ಒಂದು ಜನಪದ ಸಮ್ಮೇಳನದಂತೆ, ಕೆರೆ ಅಥವ ಹೊಳೆದಂಡೆಯಲ್ಲಿ ಹುಣ್ಣಿಮೆ ಚಂದ್ರ ಪ್ರಕಾಶಿಸಲು ಪ್ರಾರಂಬವಾದಾಗ ಶುರುವಾಗುವ ಅಂಕದ ಕೋಳಿ ಪಡೆ ಮದ್ಯರಾತ್ರಿ ತನಕ ನಿರಾತಂಕವಾಗಿ ನಡೆಯುತ್ತದೆ, ಆಟ ರೋಚಕವಾದಾಗ ಹಿಡಿಯೋ ಐತಾ... ಹೀಗೆ ಕೂಗುಗಳು ಮಾದ೯ನಿಸುತ್ತದೆ.
ಸ್ವಾತಂತ್ರ ಪೂವ೯ದಲ್ಲಿ ಇಂತಹ ಕೋಳಿ ಪಡೆಯಲ್ಲಿ ಜಿದ್ದಾಜಿದ್ದಿನಿಂದ ಕೊಲೆಗಳಾಗಿದ್ದರಿಂದಲೋ ಅಥವ ಬೇರೆ ಇನ್ನು ಯಾವ ಕಾರಣವೊ ಬ್ರಿಟಿಷರು ಈ ಕೋಳಿ ಪಂದ್ಯ ನಡೆಸುವಂತಿಲ್ಲ ಎಂಬ ಕಾನೂನು ಜಾರಿ ಮಾಡಿರಬೇಕು.
ಇದೇ ಈಗಲೂ ಮುಂದುವರಿದಿದೆ, ಯಾವ ದಿನ ಯಾವ ಬಣ್ಣದ ಕೋಳಿ ಗೆಲ್ಲುತ್ತದೆ ಎಂದು ತಿಳಿಯಲು ಕೋಳಿ ಪಂಚಾ೦ಗ ಕೂಡ ಕರಾವಳಿಗಳಲ್ಲಿ ಅಂಗಡಿಗಳಲ್ಲಿ ಸಿಗುತ್ತದೆ! (ಕುದುರೇ ರೇಸ್ ಪಂಚಾಂಗದ೦ತೆ) ಈಗೆಲ್ಲ ಇಂತಹ ಪಡೆ ಕೋಳಿ ಸಾಕುವ ಖಾಸಾಗಿ ಕೋಳಿ ಪಾರಂಗಳಿದೆ, ಮುಂಬೈಯಿಂದ ಬಂದು ಇದರಲ್ಲಿ ಭಾಗವಹಿಸುವ ಶ್ರೀಮಂತ ಜುಗಾರಿ ಪ್ರಿಯ ಪಂಟರುಗಳಿದ್ದಾರೆ.
ಆದರೆ ಮಲೆನಾಡಿನಲ್ಲಿ ಕರಾವಳಿಯಿಂದ ವಲಸೆ ಬಂದು ನೆಲೆಸಿರುವ ಕೃಷಿ ಕಾಮಿ೯ಕರು ತಮ್ಮ ಬಿಡುವಿನ ಸಮಯದ ಮನರOಜನೆಗಾಗಿ ಇದರಲ್ಲಿ ಭಾಗವಹಿಸುತ್ತಾರೆ, ಇದನ್ನ ಸಹಿಸದ ಹೊಸನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಬಾರೀ ಡೌಜ೯ನ್ಯ ನಡೆಸುತ್ತಾರೆ, ಪಡೆ ಕೋಳಿ ಸಾಕಿದವರನ್ನು ಸತಾಯಿಸುತ್ತಾರೆ, ಶಾಸಕರಾದ ಸ್ವಾಮಿರಾಯರಿಗೆ ಕರಾವಳಿ ಜನರ ಸಖ್ಯ ಜಾಸ್ತಿ ಅವರಿಗೂ ಶಾಸಕ ಸ್ವಾಮಿ ರಾಯರ ಮೇಲೆ ಪ್ರೀತಿ ಹಾಗಾಗಿ ಅನೇಕ ಬಾರಿ ಪೋಲಿಸ್ ಅಧಿಕಾರಿಗೆ ಬರೀ ಕೋಳಿ ಪಡೆ ಹಿಂದೆ ಕಾನೂನು ಮಾಡಬೇಡಿ ಬೇರೆ ನಿಮ್ಮ ಕೆಲಸ ನೋಡಿಕೊಳ್ಳಿ ಎಂದರು ದುರಂಹOಕಾರದ ಅಧಿಕಾರಿ ತನ್ನ ವತ೯ನೆ ಮುಂದುವರಿಸುತ್ತಾರೆ.
ಇದಕ್ಕೆ ಒಂದು ಅಂತ್ಯ ಕಾಣಿಸಲು ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಶಿಷ್ಯ ಸ್ವಾಮಿ ರಾಯರು ಹೊಸ ನಗರ ಪೋಲಿಸ್ ಠಾಣೆ ಎದುರು ಕೋಳಿ ಪಡೆ ನಡೆಸಲು ತೀಮಾ೯ನಿಸಿ ಬಿಡುತ್ತಾರೆ, ದಿನಾಂಕ ನಿಗದಿ ಮಾಡಿ ಕರಪತ್ರ ಹಂಚಿಬಿಡುತ್ತಾರೆ ಅವತ್ತು ತಾಲ್ಲೂಕಿನ ಮೂಲೆ ಮೂಲೆಯಿಂದ ಸಾವಿರಾರು ಜನ ಪೋಲಿಸರ ವಿರುದ್ಧ ನಡೆದ ಈ ವಿಚಿತ್ರ ಪ್ರತಿಭಟನೆಗೆ ಭಾಗವಹಿಸುತ್ತಾರೆ.
ಸ್ವಾಮಿ ರಾಯರು ತಮ್ಮ ಕಚ್ಚೆ ಪ೦ಚೆ ಎತ್ತಿಕಟ್ಟಿ ಪಡೆ ಕೋಳಿ ಹಿಡಿದು ಪೋಲಿಸ್ ಠಾಣೆ ಎದರು ಕೋಳಿ ಪಡೆ ನಡೆಸಿ ತಮ್ಮ ಪ್ರತಿಭಟನೆ ದಾಖಲಿಸುತ್ತಾರೆ.
ನಂತರ ಜಿಲ್ಲಾ ರಕ್ಷಣಾಧಿಕಾರಿಗಳು ಮಧ್ಯಸ್ಥಿಕೆ ಮಾಡಿ ಕರಾವಳಿ ಕೃಷಿ ಕಾಮಿ೯ಕರ ಕೋಳಿ ಪಡೆಗೆ ತೊಂದರೆ ನೀಡುವ ಅಧಿಕಾರಿಗೆ ಬುದ್ದಿ ಹೇಳುತ್ತಾರೆ.
ಇಡಿ ದೇಶದಲ್ಲಿ ಕ್ಯಾಸಿನೊಗಳು, ಕುದುರೇ ರೇಸ್ಗಳು, ಕ್ಲಬ್ ಗಳು ನಿರಾತಂಕವಾಗಿ ಕಾನುನು ಬದ್ದಗೊಳಿಸಿರುವ ನಮ್ಮ ಸಕಾ೯ರಗಳು ಜನಸಾಮಾನ್ಯರ ದೇಶಿ ಕ್ರೀಡೆಗಳಿಗೆ ಬ್ರಿಟಿಶರ ಕಾನೂನಿನ ನಿಬ೯೦ದ ಮು೦ದುವರಿಸಿರುವುದು ಹಾಸ್ಯಾಸ್ಪದವಲ್ಲವೆ?
ಈ ಘಟನೆ ಬಗ್ಗೆ ಬರೆದ ಲೇಖನ ಸ್ವಾಮಿ ರಾಯರ ಮೇಲೆ ತಂದಿರುವ "ಸ್ವ ಧ್ವನಿ" ಎಂಬ ಸ್ಮರಣ ಸಂಚಿಕೆಯಲ್ಲಿ ಪುಟ ಸಂಖ್ಯೆ 154ರಲ್ಲಿ ಪ್ರಕಟಿಸಿದ್ದಾರೆ.
Comments
Post a Comment