Blog number 1342. ರಾಮಚಂದ್ರಪುರ ಮಠದ ಕೇಸಿನಲ್ಲಿ ಸರ್ಕಾರದ ಪರ ಸಾಕ್ಷಿ ಆಗಿದ್ದ ಅಭಿರಾಮ ಹೆಗ್ಗಡೆ ಅಂಗಾಂಗ ವೈಫಲ್ಯದಿಂದ 31ನೇ ವಯಸ್ಸಿನಲ್ಲಿ ಸಾಗರದ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
#ನಾಲ್ಕು_ವರ್ಷದ_ಹಿಂದೆ_ನಾಡಿನ_ಎಲ್ಲಾ_ಮಾಧ್ಯಮಗಳಲ್ಲಿ_ಸುದ್ದಿ_ಆಗಿದ್ದ_ಅಭಿರಾಮಹೆಗ್ಗಡೆ
#ಬಾಗಿಲ_ಕೀ_ರಂದ್ರದಲ್ಲಿ_ನೋಡಿದ_ರಾಸಲೀಲೆಯ_ಪ್ರತ್ಯಕ್ಷದರ್ಶಿ
#ಈ_ಸ್ಟಾರ್_ವಿಟ್ನೆಸ್_ಮೇಲೆ_5_ಕೋಟೆ_ಮಾನನಷ್ಟ_ದಾವೆ
#ನಿನ್ನೆ_ಸಾಗರದ_ಆಸ್ಪತ್ರೆಯಲ್ಲಿ_ದೇಹಾಂತ್ಯ?
#ಸ್ವಾಮಿಗಳ_ಅತ್ಯಾಚಾರ_ಕೇಸಿನಲ್ಲಿ_ಪ್ರೈಮ್_ವಿಟ್ನೆಸ್
#ಕೇವಲ_31ವರ್ಷದಲ್ಲಿ_ಇಹಲೋಕ_ತ್ಯಜಿಸಿದ_ಸುದ್ದಿ
ಅಭಿರಾಮ ಹೆಗ್ಗಡೆ ಸಾಗರ ತಾಲ್ಲೂಕಿನ ಗಡಿ ಕಾನಲೆ ಸೈದೂ ರಿನಿಂದ 5-6 ಕಿಮಿ ದೂರದ ಸಿದ್ದಾಪುರ ಪೇಟೆಗೆ ಸಮೀಪದ ಅಕ್ಕುಂಜಿ ಹತ್ತಿರದ ಅಣಜಿಬೈಲು ಹಳ್ಳಿಯವರು.
ಇವರಿಗೆ ಬಾಲ್ಯದಲ್ಲಿ ಯಾವುದೋ ಅನಾರೋಗ್ಯ ಇದರಿಂದ ಅಸಾಧ್ಯ ಹಸಿವು ಇದಕ್ಕೆ ಯಾವುದೋ ಬೂತದ ಕಾಟವೆನ್ನುವ ಭಾವನೆ ಕುಟುಂಬದಲ್ಲಿತ್ತು ಆಗ ಇವರ ಅಜ್ಜ ಸೊರಬ ತಾಲ್ಲೂಕಿನ ಮಳಲಗದ್ದೆಯ ಟಿ.ಜಿ.ರಾಯರು ಮೊಮ್ಮಗ ಅಭಿರಾಮನನ್ನು ರಾಮಚಂದ್ರಪುರ ಮಠಕ್ಕೆ ಸೇರಿಸುತ್ತಾರೆ ಅಲ್ಲಿ ಅಭಿರಾಮ ಆಶ್ಚರ್ಯ ರೀತಿಯಲ್ಲಿ ಗುಣಮುಖರಾಗುತ್ತಾರೆ ಮತ್ತು ಸ್ವಾಮೀಜಿಗಳ ಆಪ್ತ ಸಿಬ್ಬಂದಿಯಲ್ಲಿ ಒಬ್ಬರಾಗಿ ದೇಶದಾದ್ಯಂತ ಪ್ರವಾಸ ಮಾಡುತ್ತಾರೆ.
ಹಳೆಯ ಸ್ವಾಮಿಗಳ ಕಾಲದಲ್ಲಿ ಟಿ.ಜಿ.ರಾಯರು ಸರ್ವಾಧಿಕಾರಿ ಹುದ್ದೆ ನಿರ್ವಹಿಸಿದ್ದರು ಈಗಲೂ ಅವರಿಗೆ ಮಠದ ಆಡಳಿತ ಮಂಡಳಿಯಲ್ಲಿ ಗೌರವದ ಸ್ಥಾನವಿದೆ.
ಅಭಿರಾಮ ಅತ್ಯಂತ ಬುದ್ಧಿವಂತ ಮತ್ತು ತಾಳ್ಮೆ ಕಳೆದುಕೊಳ್ಳುವ ಸಿಟ್ಟು ಇದ್ದ ಯುವಕ ಇವರ ಗುಣ ಸ್ಟಭಾವ ಅರಿಯಬೇಕಾದರೆ ಇವರ ಪೇಸ್ ಬುಕ್ ಪೇಜ್ ಗಳನ್ನು ಪೂರ್ತಿ ನೋಡಿದರೆ ಅರಿವಾದೀತು ಇವರು ಮಧ್ಯಪಾನ ದೂಮಪಾನದ ಬಗ್ಗೆ ಹೆಚ್ಚು - ಹೆಚ್ಚು ಸದಾಭಿಪ್ರಾಯ ಬರುವಂತ ಅವುಗಳ ಸ್ವತಃ ಬಳಸುತ್ತಿದ್ದ ಅವರದೇ ಪೋಟೋಗಳು ಪೋಸ್ಟ್ ಮಾಡಿದ್ದಾರೆ.
ನಂತರ ಇವರು ಇವರಿಗೆ ಆಶ್ರಯ ನೀಡಿದ ಸ್ಟಾಮಿಗಳ ಮೇಲೆ ತಿರುಗಿ ಬಿದ್ದು ಸರ್ಕಾರದ ಪರ ಸಾಕ್ಷಿ ಆದರು, ಆ ಕೇಸ್ ನ್ಯಾಯಾಲಯದಲ್ಲಿ ಮುಕ್ತಾಯವಾಗಿ ಈಗ ಎದರು ಪಾರ್ಟಿಗಳು ಸಲ್ಲಿಸಿದ ಮೇಲ್ಮನವಿ ವಿಚಾರಣೆ ಹಂತದಲ್ಲಿದೆ.
ಈ ಸಂದರ್ಭದಲ್ಲಿ ಟೀವಿ - ಪತ್ರಿಕೆಗಳು ಅಭಿರಾಮರ ಸಂದರ್ಶನಗಳು ಕಂತು ಕಂತುಗಳಾಗಿ ಪ್ರಕಟಿಸಲು ಪ್ರಾರಂಬಿಸಿದರು, ಈ ಮೂಲಕ ಅಭಿರಾಮ ಸ್ಟಾರ್ ವಿಟ್ನೆಸ್ ಆಗಿ ಪ್ರಸಿದ್ದರಾದರು ಇದರಿಂದ ಮಠ ಇವರ ಯಾವುದೇ ಸಂದರ್ಶನ ಬಹಿರಂಗ ಹೇಳಿಕೆ ಪತ್ರಿಕೆ ಅಥವ ಟೀವಿಯಲ್ಲಿ ಪ್ರಕಟಿಸದಂತೆ ನ್ಯಾಯಾಲಯದ ತಡೆ ಆಜ್ಞೆ ತಂದಿತು ಮತ್ತು 5 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿತು.
ನಂತರ ಇವರು ಮಠದ ಜೊತೆ ರಾಜಿ ಆದರು, ಈ ಬಗ್ಗೆ ಇವರು ಬರೆದು ಕೊಂಡ ಪೋಸ್ಟ್ ನಲ್ಲಿ ಇವರ ಮತ್ತು ಇವರ ಆರೋಗ್ಯ ಸಮಸ್ಯೆ ಮತ್ತು ಇವರ ತಾತನ ಅಭಿಲಾಷೆಯ೦ತೆ ನ್ಯಾಯಾಲಯದಲ್ಲಿ ವಿಷಾದ ವ್ಯಕ್ತಪಡಿಸಿದ್ದಾಗಿ,ಈ ಬಗ್ಗೆ ಮುಂದುವರಿಯುವುದಿಲ್ಲ ಎಂದು ಹೇಳಿಕೆ ದಾಖಲಿಸಿ ಅದಕ್ಕೆ ಸರಿಯಾಗಿ ಸಂಭಾವನೆ ಪಡೆದಿರುವುದಾಗಿ!? ಹೇಳಿದ್ದಾರೆ.
ವಿಚಿತ್ರವಾದ ಗುಪ್ತ ಸಂಕೇತದ ಇವರ ಪೋಸ್ಟ್ ಗಳು ಏನಂತ ಅರ್ಥವಾಗುವುದಿಲ್ಲ, ಒಂದು ಪೆನ್ ಡ್ರೈವ್ ಪೋಟೋ ಪೋಸ್ಟ್ ಮಾಡಿ ಬಂಗಾರದ ಅದಿರು ತೆಗೆಯುತ್ತದೆ ಅಂತ ಬರೆದಿದ್ದರು.
ನಿನ್ನೆ ಸಾಗರದ ಆಸ್ಪತ್ರೆಯಲ್ಲಿ ದೇಹದ ಅಂಗಾಂಗ ವಿಫಲತೆಯಿಂದ ಇಹಲೋಕ ತ್ಯಜಿಸಿದ್ದಾರೆ.
ಇವರಿಗೆ ಸದ್ಗತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.
Comments
Post a Comment