Blog number 1286. ಶರಾವತಿ ಕಣಿವೆಯಲ್ಲಿ ಎಬಿ ಸೈಟಿಂದ ಗೇರುಸೊಪ್ಪೆವರೆಗೆ ಮಳೆಗಾಲದಲ್ಲಿ ಗೋಚರಿಸುವ ಜಲಪಾತಗಳ ಸಮೀಕ್ಷೆಯನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈಮುರುಗನ್ ಪ್ರವಾಸೋದ್ಯಮ ಸಲಹೆಗಾರರಾದ ಅಶೋಕ್ ಹೆಗ್ಗಡೆ ಮಾವಿನಗುಂಡಿ ಮತ್ತಿತರರ ವಿನಂತಿ ಮೇರೆಗೆ 2021ರಲ್ಲಿ ಮಾಡಿದ್ದರು.
#ಮಾವಿನಗುಂಡಿ_ಅಶೋಕ್_ಹೆಗ್ಗಡೆ_ಮತ್ತು_ಇತರ_ಪ್ರವಾಸೋದ್ಯಮದ_ಸಲಹೆಗಾರರು_ಸೇರಿ
#ಜೋಗ್_ಜಲಪಾತದ_ಶರಾವತಿ_ಕಣಿವೆಯಲ್ಲಿ
#ಎ_ಬಿ_ಸೈಟಿನಿಂದ_ಗೇರುಸೊಪ್ಪೆ_ತನಕ_ಇರುವ_ಜಲಪಾತ_2021ರ_ಮಳೆಗಾಲದ_ನಂತರ_ವೀಕ್ಷಣೆ_ಮಾಡಿದ್ದರು.
#ಎ_ಬಿ_ಸೈಟ್_ಮತ್ತು_ಮಾವಿನಗುಂಡಿ_ಮಧ್ಯ_ಮಳೆಗಾಲದಲ್ಲಿ_ಗೋಚರಿಸುವ_ಬಾರೀ_ಎತ್ತರದ_ಎರೆಡು_ರಮಣೀಯ_ಜಲಪಾತವಿದೆ
#ಎಬಿ_ಸೈಟ್_ಮತ್ತು_ಗೇರುಸೊಪ್ಪೆ_ಮಧ್ಯ_ಕನಿಷ್ಟ_ಆರು_ಜಲಪಾತ
#ಎಬಿ_ಸೈಟ್_ಹಿಂಬಾಗದಲ್ಲಿ_ಹಂಜಕ್ಕಿ_ಪಾಲ್ಸ್_ಇದೆ
#ಇ೦ಜಿನಿಯರ್_ಶಾಣೇಗೌಡರು_ಕ್ಯಾಮೆರಾದಲ್ಲಿ_ಸೆರೆ ಹಿಡಿದ_ತೀರಾ_ವಿಪರೀತ_ಮಳೆಯಲ್ಲಿ_ಗೋಚರವಾಗುವ_ಜಲಪಾತ_ಕೂಡ_ಇದೆ.
ಜೋಗ್ ಪಾಲ್ಸ್ - ಮಾವಿನಗುಂಡಿಯಿಂದ ಗೇರುಸೊಪ್ಪೆ ತನಕ ಪ್ರಯಾಣಿಸುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಸೇತುವೆ ಮತ್ತು ಸಣ್ಣ ಮೋರಿಯಲ್ಲಿ ಹರಿಯುವ ನೀರುಗಳು ಶರಾವತಿ ಕಣಿವೆಯಲ್ಲಿ ಜಲಪಾತವಾಗಿ ನದಿಗೆ ಸೇರುತ್ತದೆ.
ಹೀಗಾಗಿ ಮಾವಿನಗುಂಡಿಯಿಂದ ಗೇರುಸೊಪ್ಪೆ ತನಕ ಮಳೆಗಾಲದಲ್ಲಿ ಕಂಡುಬರುವ ಜಲಪಾತಗಳನ್ನು ವೀಕ್ಷಿಸಿ ದಾಖಲಿಸಲು ಪ್ರವಾಸೋದ್ಯಮದ ಸಲಹೆಗಾರರಾದ ಮಾವಿನಗುಂಡಿ ಅಶೋಕ್ ಹೆಗ್ಗಡೆ ಮತ್ತು ಕೆಲವರು 2021 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಮುಲ್ಲೈ ಮುಗಿಲನ್ ಅವರನ್ನು ವಿನಂತಿಸಿದ್ದರು.
ಅವರ ವಿನಂತಿಗೆ 2021ರ ಮಳೆಗಾಲದ ಕೊನೆಯ ದಿನಗಳಲ್ಲಿ ಒಂದು ದಿನ ಜೋಗ್ ಜಲಪಾತದ ಎಬಿ ಸೈಟಿನಿಂದ ಗೇರುಸೊಪ್ಪ ಆಣೆಕಟ್ಟಿನವರೆಗೆ ಮೋಟಾರು ಬೋಟಿನಲ್ಲಿ ಶರಾವತಿ ಕಣಿವೆಯ ಜಲಪಾತಗಳ ವೀಕ್ಷಣೆ ಮತ್ತು ದಾಖಲು ಮಾಡುವ ಕೆಲಸ ನಡೆದಿತ್ತು.
ಜಿಲ್ಲಾಧಿಕಾರಿಗಳ ಜೊತೆ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಅಶೋಕ್ ಹೆಗಡೆ ಮಾವಿನಗುಂಡಿಯವರು ಹೇಳುವಂತೆ ಮಾವಿನಗುಂಡಿ ಜಲಪಾತದಿಂದ ಎಬಿ ಸೈಟ್ ವರೆಗೆ ಇನ್ನೆರೆಡು ಬಾರೀ ಎತ್ತರದ ರಮಣೀಯ ಜಲಪಾತ ಇದೆಯಂತೆ.
ಇವುಗಳ ಮಧ್ಯದಲ್ಲಿ ಬಾರಿ ಮಳೆ ಆದಾಗ ಮಾತ್ರ ಗೋಚರಿಸುವ ಜಲಪಾತ ಒಂದಿದ್ದು ಅದನ್ನು ಜೋಗ್ ಪಾಲ್ಸ್ ನ ವಿದ್ಯುತ್ ಉತ್ಪಾದನಾ ಕೇಂದ್ರದ ಇಂಜಿನಿಯರ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಎಬಿ ಸೈಟಿನಿಂದ ಗೇರುಸೊಪ್ಪೆ ತನಕ ಆರು ಜಲಪಾತಗಳು ಶರಾವತಿ ನದಿ ಕಣಿವೆಯಲ್ಲಿ ಮೋಟಾರು ಬೋಟಿನಲ್ಲಿ ಸಾಗುವಾಗ ಗುರುತಿಸಿದ್ದಾರೆ.
Comments
Post a Comment