Blog number 1302. ಶಿವಮೊಗ್ಗ ಜಿಲ್ಲೆಯ ವಿಶೇಷ ವ್ಯಕ್ತಿಗಳು ಭಾಗ-2 . ಬೆನವಳ್ಳಿ ತಂಗಚ್ಚನ್ ಅಂಡ್ರೂಸ್ ಕರದೂ೦ಗಲಾ ಪಾಸ್ ಬೈಕ್ ರೈಡಿಂಗ್.
#ಶಿವಮೊಗ್ಗ_ಜಿಲ್ಲೆಯ_ವಿಶೇಷ_ವ್ಯಕ್ತಿಗಳು_ಭಾಗ_2.
#ಬೆನವಳ್ಳಿ_ತಂಗಚ್ಚನ್_ಆಂಡ್ರೂಸ್
#ಕರದೂ೦ಗಲ_ಪಾಸ್_world_highest_motorable_road
#ಲೇಹ್_ಕರದೂಂಗಲ_ಪಾಸ್_39_ಕಿಮಿ
#ತಂಗಚ್ಚನ್_ವಾಪಾಸು_ಬರುವಾಗ_ಬೈಕ್_ಹಾಳಾಗಿ_ಇಳಿಜಾರಿನಲ್ಲಿ_ಬಂದದ್ದು_ಮರೆಯಲಾರದ_ಘಟನೆ.
ಪ್ರಪಂಚದ ಅತಿ ಎತ್ತರದ ರಸ್ತೆ ಸಂಚಾರ ಇರುವ ಕರದೂ೦ಗಲ ಪಾಸ್ ಸಮುದ್ರ ಮಟ್ಟದಿಂದ 18380 ಅಡಿ ಎತ್ತರದಲ್ಲಿದೆ ಇಲ್ಲಿಂದಲೇ ಸಿಯಾಚಿನ್ ಗ್ಲೇಸಿಯರ್ ಗೆ ಸಾಮಾನು ಸರಂಜಾಮುಗಳ ಸಾಗಾಣಿಕೆ ನಡೆಯುತ್ತದೆ.
ಇಲ್ಲಿಗೆ ಬೈಕ್ ನಲ್ಲಿ ತಲುಪುವ ಮಹತ್ವಾಕಾಂಕ್ಷೆ ಎಲ್ಲಾ ರೈಡರ್ ಗಳ ಗುರಿ ಅದರಂತೆ 2012ರಲ್ಲಿ 19 ರಾಜ್ಯವನ್ನು 47 ದಿನಗಳಲ್ಲಿ ಕ್ರಮಿಸಿದ ಶಿವಮೊಗ್ಗ ಜಿಲ್ಲೆಯ ಮೊದಲ ಬೈಕರ್ ಬೆನವಳ್ಳಿ ತ೦ಗಚ್ಚನ್ ಅಂಡ್ರೂಸ್ ಬೆಳಿಗ್ಗೆ ಲೇಹ್ ನಿಂದ 39 ಕಿ.ಮಿ. ಎತ್ತರದ ಕರದೂ೦ಲ ಪಾಸ್ ತಲುಪುತ್ತಾರೆ ಅಲ್ಲಿ೦ದ ಮದ್ಯಾಹ್ನ 3ಕ್ಕೆ ವಾಪಾಸ್ ಹೊರಟಾಗ ಅವರ ಬೈಕ್ ನ ಎಲೆಕ್ಟ್ರಿಕ್ ಸಿಸ್ಟಂ ಸುಟ್ಟು ಬೈಕ್ ಕೈ ಕೊಡುತ್ತದೆ.
ಈ ಸಂದರ್ಭದಲ್ಲಿ ತಂಗಚ್ಚನ್ ದೈರ್ಯ ಮಾಡಿ ಬೈಕ್ ನ್ನು ನ್ಯೂಟ್ರಲ್ ಮಾಡಿಕೊಂಡು ಕರದೂಂಗಲ ಪಾಸ್ ನಿಂದ ಲೇಹ್ ತನಕ ಇಳಿಜಾರಿನಲ್ಲಿ ಬೈಕ್ ನಲ್ಲಿ ಇಳಿಯುತ್ತಾರೆ ಸುಮಾರು ಐದೂವರೆ ಗಂಟೆ 39 ಕಿ.ಮಿ. ಇಳಿಜಾರು ಕ್ರಮಿಸುತ್ತಾರೆ.
ಅವರಿಗೆ ಅವರ ಈ ಬೈಕ್ ರೈಡಿಂಗ್ ನಲ್ಲಿ ಮರೆಯಲಾರದ ಘಟನೆ ಯಾವುದು ಅಂದಾಗ ಈ ವಿಚಾರ ತಿಳಿಸಿದರು.
Comments
Post a Comment