Blog number 1324. ಭಾರತದಾದ್ಯಂತ 22- ಮಾರ್ಚ್ -2020 ರಂದು ಕರೋನಾ ಎಂಬ ಮಹಾಮಾರಿ ನಿವಾರಣೆಗೆ ಜೀವದ ಹಂಗು ತೊರೆದು ಶ್ರಮಿಸುವ ಆರೋಗ್ಯ ಕಾರ್ಯಕರ್ತರಿಗೆ ದೇಶದ ಪ್ರಜೆಗಳು ನೈತಿಕ ಬೆಂಬಲ ಘೋಷಿಸಿದ ಚಪ್ಪಾಳೆ - ಶಂಖ ದ್ವನಿ - ಗಂಟೆ - ಜಾಗಂಟೆ - ದೀಪ.
#ನಮ್ಮ ದೇಶದಲ್ಲಿ ಪ್ರದಾನಿಗಳು ಈ ಕರೆ ನೀಡುವ ಮೊದಲೇ ವಿಶ್ವದಾದ್ಯಂತ ಮುಂದುವರಿದ ದೇಶಗಳಲ್ಲಿ ಕೊರಾನಾ ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ ಬೆಂಬಲಿಸಲು ಜನ ತಮ್ಮ ಮನೆಯ ಹೊರ ಬಂದು ಚಪ್ಪಾಳೆ ಮೂಲಕ ಬೆಂಬಲಿಸಿದ್ದಾರೆ.
ಯಾವುದೇ ದೇಶದ ಜನಪ್ರತಿನಿಧಿಗಳು ಮತ್ತು ಪ್ರಜಿ ಗಳು ಇಂತಹ ಗಂಡಾಂತರ ಪರಿಸ್ಥಿತಿಯಲ್ಲಿ ಆಂತರಿಕವಾದ ಚುನಾವಣೆ - ಪಕ್ಷ-ದಮ೯ ಆಚರಣೆಗಳನ್ನು ಬದಿಗಿಟ್ಟು ಒಂದಾಗಿ ಪರಿಸ್ಥಿತಿ ಎದುರಿಸುವ ಅನಿವಾರ್ಯತೆ ಅರಿತುಕೊಳ್ಳಬೇಕು.
ಈ ಮೂಲಕ ಪ್ರಜೆಗಳ ನೈತಿಕ ಬೆಂಬಲಗಳು ಸಾಂಕ್ರಾಮಿಕ ರೋಗ ಎದುರಿಸಲು ಬಹು ಮುಖ್ಯ.
ಇವತ್ತು ಪ್ರದಾನಿ ಮೋದಿ ಕರೆಯನ್ನ ದೇಶದಾದ್ಯOತ ಜನತೆ ಬೆಂಬಲಿಸಿದ್ದಾರೆ, ಕನಾ೯ಟಕದಲ್ಲಿ ಕಾ೦ಗ್ರೇಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, JDS ಪಕ್ಷದ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರು ಸ್ವಾಗತಿಸಿದ್ದರು.
ಶಿವಮೊಗ್ಗ ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಮಂತ್ರಿ ಕಾಗೋಡು ತಿಮ್ಮಪ್ಪನವರು ಕೂಡ ಸಂಜೆ ಸಾಗರದ ಅವರ ನಿವಾಸದ ಹೊರಬಂದು ಚಪ್ಪಾಳೆ ತಟ್ಟಿ ಇಡೀ ದೇಶ ಕರೋನ ಮಾರಕ ವೈರಸ್ ವಿರುದ್ದ ನಡೆಸಿರುವ ಸ್ವಯ೦ ಕಪ್ಯೂ೯ ವನ್ನ ಬೆಂಬಲಿಸಿದ್ದಾರೆ.
ಇಲ್ಲಿ ಪಕ್ಷ ಸಿದ್ದಾOತಗಳನ್ನ ಚಚೆ೯ ಮಾಡುವುದನ್ನ ಬಿಟ್ಟು ಮಾರಕ ವೈರಸ್ ನಿಂದ ಮುಕ್ತರಾಗಲು ಎಲ್ಲರೂ ಮುಂದಾಗಬೇಕು ಈಗಾಗಲೆ ವಿಶ್ವದ ಮುಂದುವರಿದ ಶ್ರೀಮಂತ ದೇಶಗಳು ಇಂತಹ ಜಾಗ್ರತೆ ವಹಿಸದೆ ಪರಿಸ್ಥಿತಿ ಕೈ ಮೀರಿ ಹತಾಶರಾಗಿರುವ ಪರಿಸ್ಥಿತಿ ಕಣ್ಣ ಎದುರಿದೆ.
ನಮ್ಮ ನಡೆ ನುಡಿ ನಮ್ಮ ಪರಿಸರದಲ್ಲಿ ಸ್ಪೂತಿ೯ ಪ್ರೋತ್ಸಾಹ ಉ೦ಟು ಮಾಡುವಂತೆ ವಯೋವೃದ್ದರಾದ ಕಾಗೋಡರ ಚಪ್ಪಾಳೆ ಅಭಿನಂದಿಸುತ್ತೇನೆ.
ಕೇವಲ ಮೋದಿ ವಿರೋದಿಸಲಿಕ್ಕಾಗಿ ನಕಾರಾತ್ಮಕವಾಗಿ (ಕೊರೋನೊ ವೈರಸ್ ಬೆಂಬಲಿಸುವಂತ) ಹೇಳಿಕೆ ನೀಡುವುದನ್ನ ವಿರೋದಿಸುತ್ತೇನೆ.
Comments
Post a Comment