Blog number 1295. ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಮಾಜಿ ಜಿಲ್ಲಾದ್ಯಕ್ಷ ತೀ.ನಾ.ಶ್ರೀನಿವಾಸ್ ಕಾಂಗ್ರೇಸ್ ಪಕ್ಷಕ್ಕೆ ರಾಜಿನಾಮೆ.
#ಕಾಂಗ್ರೇಸ್_ಪಕ್ಷದಲ್ಲಿ_ಸ್ಪರ್ದಿಸಲು_ಹಣ_ಕೇಳುತ್ತಾರೆ೦ಬ_ಆರೋಪ
#ದಿನೇಶ್_ಗುಂಡೂರಾವ್_ಜಿಲ್ಲಾಧ್ಯಕ್ಷ_ಸ್ಥಾನ_ಕಸಿದುಕೊಂಡ_ಬಗ್ಗೆ
#ಮದು_ಬಂಗಾರಪ್ಪಗೆ_ಮೂರು_ಹುದ್ದೆ_ಇತ್ಯಾದಿ_ಅವರ_ಆರೋಪ.
ತೀನಾ ಶ್ರೀನಿವಾಸ್ ತಂದೆ ಭಾರತೀಯ ಸೈನ್ಯದಲ್ಲಿ ಸೇವೆ ಮಾಡಿದವರು ತಾಯಿ ಸರ್ಕಾರಿ ಕನ್ನಡ ಶಾಲೆ ಶಿಕ್ಷಕಿ, ಇವರ ಹುಟ್ಟು ತೀರ್ಥಹಳ್ಳಿಯ ಛತ್ರಕೇರಿಯಲ್ಲಿ.
ನಂತರ ಶಿಕಾರಿಪುರ, ಜೋಗ ಮತ್ತು ಸಾಗರಗಳಲ್ಲಿ ಇವರ ವಿದ್ಯಾಬ್ಯಾಸ ನಡೆಯಿತು.
ಜೋಗದಲ್ಲಿ ಮತ್ತು ಸಾಗರದ ಕಾಲೇಜಿನಲ್ಲಿ ತೀ.ನಾ. ಶ್ರೀನಿವಾಸ್ ವಿದ್ಯಾರ್ಥಿ ಮುಖಂಡರು ಆಗಲೇ ಸಾಗರದ ಪೋಲಿಸ್ ಠಾಣೆಯಲ್ಲಿ ಕೃಷಿ ಕಾರ್ಮಿಕ ರಾಮನ ಲಾಕ್ ಅಪ್ ಡೆತ್ ನಿಂದ ಸಾಗರದ ವಿದ್ಯಾರ್ಥಿ ವೃಂದವನ್ನು ಹೋರಾಟಕ್ಕೆ ಇಳಿಸಿದವರು ತೀ.ನಾ ಶ್ರೀನಿವಾಸ್.
ನಂತರ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ಅವರ ಜೊತೆ ಸೇರಿ ಅವರ ದಿನಪತ್ರಿಕೆ ನ್ಯಾಯದ ತಕ್ಕಡಿ ಸಂಪಾದಕರಾಗಿ ನ್ಯಾಯದ ಪರ ಹೋರಾಟಕ್ಕೆ ಬೆಂಬಲಿಸಿ ವರದಿಗಳನ್ನು ಮಾಡಿದ್ದರಿಂದ ಜಮೀಲ್ ಎಂಬ ಪೋಲಿಸ್ ಇನ್ಸ್ಪೆಕ್ಟರ್ ರಿಂದ ದೌಜ೯ನ್ಯ ನಡೆದದ್ದು ಆಗ ರಾಜ್ಯದಲ್ಲೇ ದೊಡ್ಡ ಸುದ್ದಿ ಇದು ವಿಧಾನಸಭೆಯಲ್ಲಿ ದೊಡ್ಡ ಚರ್ಚೆ ಆಗಿತ್ತು.
ಎರೆಡು ಅವದಿ ಶಾಸಕರಾಗಿದ್ದ ಕಾಂಗ್ರೇಸ್ ನ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ ವಿರುದ್ದ ಇವರು ಪಕ್ಷೇತರರಾಗಿ ತಕ್ಕಡಿ ಗುರುತಲ್ಲಿ ಸ್ಪರ್ಧಿಸಿ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ ವಿರುದ್ದ ಕ್ಷೇತ್ರದಾದ್ಯಂತ ಇವರು ತಮ್ಮ ಆಕರ್ಷಕ ಭಾಷಣದಿಂದ ಎಲ್.ಟಿ. ಹೆಗ್ಗಡೆಯವರು ಆಡಳಿತ ವಿರೋದಿ ಅಲೆಯಲ್ಲಿ ಸೋತು ಜನತಾ ಪಕ್ಷದ ಆನಂದಪುರಂನ ಬಿ. ಧರ್ಮಪ್ಪರು ಗೆಲ್ಲುವಂತಾಗಿತ್ತು.
ನಂತರ ಸಾಗರ ಪುರಸಬೆಗೆ ನಿರಂತರವಾಗಿ ಪಕ್ಷೇತರರಾಗಿಯೆ ಗೆಲ್ಲುವವರನ್ನು ಕಾಂಗ್ರೇಸ್ ಗೆ ಸೇರಿಸಿಕೊಂಡವರು ಪುತ್ತೂರಾಯರು ಮತ್ತು ಆಹ್ಮದ್ ಆಲೀ ಖಾನ್ ಸಾಹೇಬರು ಇದರಿಂದ ಕಾಗೋಡು ತಿಮ್ಮಪ್ಪನವರು ಗೂಂಡೂರಾವ್ ಸರ್ಕಾರದಲ್ಲಿ ಮಂತ್ರಿ ಆದವರು ನಂತರ ದೀರ್ಘಾವದಿ ರಾಜಕೀಯದಿಂದ ದೂರವಿದ್ದವರು ಚುನಾವಣೆಯಲ್ಲಿ ಪುನಃ ಸ್ಪರ್ಧಿಸಿ ಗೆಲ್ಲುವ ಸಂದರ್ಭದಲ್ಲಿ ಇಡೀ ಕ್ಷೇತ್ರದಲ್ಲಿ ತೀ.ನಾ. ಶ್ರೀನಿವಾಸ್ ಅವರು ಕ್ಷೇತ್ರದಲ್ಲಿ ಮಾಡಿದ ಪರಿಣಾಮಕಾರಿ ಭಾಷಣ ಕೂಡ ಕಾರಣವಾಗಿತ್ತು.
ಅಬಕಾರಿ ಕಾರ್ಮಿಕರ ಸಂಘಟನೆಯಲ್ಲಿ ತೀ.ನಾ. ಶ್ರೀನಿವಾಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರು ಕಾಂಗ್ರೇಸ್ ಪಕ್ಷದವರೇ, ಅವತ್ತು ಅವರನ್ನು ನೋಡಲು ಹುಬ್ಬಳ್ಳಿ ಆಸ್ಪತ್ರೆಗೆ ಹೋಗಿದ್ದಾಗಲೇ ನಾವೆಲ್ಲ ಗೆಳೆಯರು ತೀ.ನಾ.ಶ್ರೀನಿವಾಸ್ ಗೆ ಕಾಂಗ್ರೇಸ್ ನಿಂದ ದೂರ ಆಗಲು ಸಕಾಲ ಅಂದಿದ್ದೆವು ಆದರೆ ಕಾಗೋಡರ ಗೆಳೆತನದಿಂದ ಅಲ್ಲೇ ಉಳಿದರು. ಅವರ ಮುಖದಲ್ಲಿರುವ ಚಾಕುವಿನ ಗಾಯ ಮಾತ್ರ ಮಾಸಿಲ್ಲ.
ಈವರೆಗೂ ಕಾಂಗ್ರೇಸ್ ಪಕ್ಷ ತೀ.ನಾ ಶ್ರೀನಿವಾಸ್ ಅವರನ್ನು ಬಳಸಿ ಬಿಸಾಡುತ್ತಲೇ ಬಂದಿದೆ ಇದಕ್ಕೆ ಕಾರಣ ಅವರಿಗೆ ಜಾತಿ ಬಲ ಇಲ್ಲದಿರುವುದು ಮತ್ತು ಭ್ರಷ್ಟಾಚಾರ ವಿರೋಧಿ ಆಗಿ ಹಣ ಸಂಪಾದನೆ ಮಾಡದೇ ಇರುವುದು ಕಾರಣ.
ಸ್ವಯಂ ಬಲದಿಂದ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದರು ಅದನ್ನು ಸಹಿಸದ ಕಾಂಗ್ರೇಸ್ ನಾಯಕರೆಲ್ಲ ಸೇರಿ ಆಗಿನ ಕೆ.ಪಿ. ಸಿ.ಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ಪತ್ರ ಬರೆದು ತೀ.ನಾ. ಶ್ರೀನಿವಾಸ್ ಶಿವಮೊಗ್ಗ ಕೇಂದ್ರದವರಲ್ಲ, ಸಾಗರ ತಾಲ್ಲೂಕು ಕೇಂದ್ರದಿಂದ ಬಂದು ಕಾಂಗ್ರೇಸ್ ಪಕ್ಷ ಸಂಘಟನೆ ಮಾಡುವುದು ಸಾಧ್ಯವಿಲ್ಲ, ಅಷ್ಟೇ ಅಲ್ಲ ನಿಮ್ಮಪ್ಪ ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದಾಗ ಸಾಗರದಲ್ಲಿ ರಾಜ್ಯದಲ್ಲೇ ಮೊದಲ ಕಪ್ಪು ಬಾವುಟ ಅವರ ಮುಖಕ್ಕೆ ಹಿಡಿದು ಜೈಲಿಗೆ ಹೋದವರು ಅಂತೆಲ್ಲ ದೂರಿ ಜಿಲ್ಲಾ ಕಾಂಗ್ರೇಸ್ ಸ್ಥಾನದಿಂದ ಕೆಳಗೆ ಇಳಿಸಿದರು.
ಇವರು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದಾಗ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಆಡಳಿತವಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, ಆಗ ಶಿವಮೊಗ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಭಾಗವಹಿಸುವ ಸರ್ಕಾರಿ ಕಾಯ೯ಕ್ರಮದಲ್ಲಿ ಅಧಿಕಾರಿಗಳು ಆಹ್ವಾನಿಸಿದರೂ ಪಕ್ಷದ ಜಿಲ್ಲಾದ್ಯಕ್ಷ ತಿ.ನಾ. ಶ್ರೀನಿವಾಸ್ ಯಾವುದೇ ಕಾರಣದಿಂದಲೂ ಆ ವೇದಿಕೆಯಲ್ಲಿ ಮಾತ್ರ ಅಸೀನರಾಗದೆ ಒಳ್ಳೆಯ ಪರಂಪರೆ ಬೆಳೆಸಿದ್ದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದಾಗ ಜಿಲ್ಲೆಯಲ್ಲಿ ಬಿಜೆಪಿ ವಿರುದ್ದ ಯಡೂರಪ್ಪರ ವಿರುದ್ದ ತೀ.ನಾ. ಶ್ರೀನಿವಾಸ್ ಮಾಡುತ್ತಿದ್ದ ಕಟು ವಿರೋದಗಳು ಬಿಜೆಪಿ ಸರ್ಕಾರದಿಂದ, ಯಡೂರಪ್ಪರಿಂದ ಲಾಭ ಮಾಡಿಕೊಳ್ಳುತ್ತಿದ್ದ ಕಾಂಗ್ರೇಸ್ ಪಕ್ಷದವರಿಗೆ ಮಾತ್ರ ಆಗಿ ಬರಲಿಲ್ಲ.
ಹಾಗಂತ ಕಾಂಗ್ರೇಸ್ ಪಕ್ಷದಲ್ಲಿ ಇವತ್ತಿನವರಗೂ ನಿಷ್ಟಾವಂತ ಕಾರ್ಯಕರ್ತರಿಗೆ ಯಾವುದೇ ಗೌರವ ಸ್ಥಾನಮಾನ ಮರಿಚಿಕೆಯೇ ಆಗಿದೆ.
ಅದೇ ಬಿಜೆಪಿಯಲ್ಲಿ ಯಡಿಯೂರಪ್ಪನವರು ಅವರ ಪಕ್ಷದ ನಿಷ್ಟಾವಂತರಿಗೆ ಹೆಚ್ಚು ಸ್ಥಾನ ಮಾನ ಕೊಡಿಸಿದ್ದಾರೆ, ಇದು ಕಾಂಗ್ರೇಸ್ ನಲ್ಲಿ ಯಾವತ್ತೂ ಕಾರ್ಯರೂಪಕ್ಕೆ ಬರಲಾರದ್ದು.
ಶಿವಮೊಗ್ಗ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾಗಿರುವ ಮೇಘರಾಜ್ ಕೂಡ ಸಾಗರದವರು, ಶಿವಮೊಗ್ಗ ಕೇಂದ್ರದಲ್ಲಿರದ ಬಿಜೆಪಿ ಜಿಲ್ಲಾಧ್ಯಕ್ಷರು ಅವರ ಪಕ್ಷ ಯಶಸ್ವಿಯಾಗಿ ಸಂಘಟಿಸುತ್ತಾರೆಂದರೆ ಇದು ಕಾಂಗ್ರೇಸ್ ಪಕ್ಷಕ್ಕೆ ಏಕೆ ಸಾಧ್ಯವಿಲ್ಲ ಅಂತ ಕಾಂಗ್ರೇಸ್ ಪಕ್ಷದ ತಾಲ್ಲೂಕ್ ಕೇಂದ್ರದ ಕಾಯ೯ಕರ್ತರು ತಮ್ಮ ನಾಯಕರಿಗೆ ಪ್ರಶ್ನಿಸಬೇಕು.
ಅಹ೯ತೆಯ ಅನರ್ಹತೆ ಎಂಬುದು ಕಾಂಗ್ರೇಸ್ ನಲ್ಲಿ ಇದ್ದು ಬಂದವರಿಗೆ ಅರಿವಾಗಿರುವುದೇ ಆಗಿದೆ, ಕಾಂಗ್ರೇಸ್ ಅಧಿಕಾರದಲ್ಲಿದ್ದಾಗ ಅವರ ಪಕ್ಷದವರನ್ನೇ ತೇಜೋವದೆ ಮಾಡುವುದು, ಸುಳ್ಳು ಕೇಸ್ ಹಾಕಿಸುವುದು, ಜೈಲಿಗೆ ಕಳಿಸುವುದು, ಪರಸ್ಪರ ಕಾಲೆಳೆದುಕೊಂಡು ಅಧಿಕಾರ ಕಳೆದುಕೊಂಡರೂ ಬುದ್ದಿ ಬರಲಿಲ್ಲ.
ಕಾರ್ಯಕರ್ತರ ಪ್ರಯತ್ನದಿಂದ ಕಾಂಗ್ರೇಸ್ ಪಕ್ಷಕ್ಕೆ ಗೆಲ್ಲುವ ಸಂದರ್ಭ ಇರುವಾಗ ಬೇರೆ ಪಕ್ಷದಿಂದ ಬಂದವರಿಗೆ ಪಕ್ಷವನ್ನು ದಾರೆ ಎರೆಯುವುದು ಅವರು ಅವರ ಸಂಗಾತಿಗಳನ್ನು ಆಯಾ ಕಟ್ಟಿನಲ್ಲಿ ಸ್ಥಾಪನೆ ಮಾಡುವುದು ನಂತರ ಪಕ್ಷ ತೊರೆದು ಹೋಗುವುದು, ಅನಾಥವಾದ ಪಕ್ಷ ಪುನಃ ಸಂಘಟನೆ ಆಗಿ ಅಧಿಕಾರಕ್ಕೆ ಬರುತ್ತದೆ.ಅಂದಾಗ ಪಕ್ಷ ಬಿಟ್ಟು ಓಡಿ ಹೋದವ ವಾಪಾಸು ಬರುವುದು, ಅವರಿಗೆ ಕೆಂಪು ಹಾಸಿನ ಸ್ವಾಗತ ನೀಡುವುದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷ ಚೇತರಿಸಿಕೊಳ್ಳದೇ ಇರಲು ಕಾರಣವಾಗಿರುವುದು, ಜಿಲ್ಲೆಯ ಎಲ್ಲಾ ನಿಷ್ಟಾವಂತ ಕಾರ್ಯಕರ್ತರಿಗೆ ಗೊತ್ತೇ ಇರುವ ವಿಚಾರವಾಗಿದೆ. ಇದರಿಂದಲೇ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಕಾಂಗ್ರೇಸ್ ಪಕ್ಷಕ್ಕಿಂತ ಸದೃಡವಾಗಿದೆ ಜಿಲ್ಲೆಯಲ್ಲಿ.
ಶಿವಮೊಗ್ಗ ಜಿಲ್ಲೆಯ ಬಗರ್ ಹುಕುಂ ರೈತರ, ಅರಣ್ಯ ಒತ್ತುವರಿ ರೈತರ ಸಂಘಟನೆಯನ್ನು ಮಾಡಿ ಹೋರಾಟ ಮಾಡುತ್ತಿರುವ ಶ್ರೀನಿವಾಸರ ಕ್ರಿಯಾಶೀಲತೆ ಯಾರೂ ಪ್ರಶ್ನಿಸಲಾರದು.
ತೀ.ನಾ. ಶ್ರೀನಿವಾಸ್ ಅಂತಹ ನಿಷ್ಟಾವಂತ ಕಾಂಗ್ರೇಸ್ ಮುಖಂಡರನ್ನು ಕಾಂಗ್ರೇಸ್ ಪಕ್ಷ ಉಳಿಸಿಕೊಳ್ಳದೇ ಇರುವುದು ಮುಂದಿನ ದಿನಗಳಲ್ಲಿ ಅದರ ಪರಿಣಾಮ ಬೀರಬಹುದು.
ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಮತ್ತು ಜೆಡಿಎಸ್ ಪಕ್ಷಕ್ಕೆ ಇರುವ ಹಿಡಿತ ಕಾಂಗ್ರೇಸ್ ಪಕ್ಷಕ್ಕೆ ಇಲ್ಲ, ಈಗ ತಮ್ಮ ಮಾತಿನಿಂದ ಜನರನ್ನು ಆಕರ್ಷಿಸುವ ಮಾತುಗಾರ ತೀ.ನಾ. ಶ್ರೀನಿವಾಸ್ ಕಾಂಗ್ರೇಸ್ ನ ವಿರುದ್ದ ಜನಾಭಿಪ್ರಾಯ ರೂಪಿಸಿದರೆ ಅದರ ಪರಿಣಾಮ ಕಾ೦ಗ್ರೇಸ್ ಅನುಭವಿಸಬೇಕಾದ ಅಪಾಯವೂ ಇದೆ.
Comments
Post a Comment