Skip to main content

Blog number 1297. ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗದ ಅರಸಾಳು ರೈಲು ನಿಲ್ದಾಣವನ್ನು ಮಾಲ್ಗುಡಿ ಅರಸಾಳು ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ ಇಲ್ಲಿ ಮಾಲ್ಗುಡಿ ಡೇಸ್ ಮ್ಯೂಸಿಯಂ ಕೂಡ ಇದೆ, ರೈಲ್ವೆ ಇಲಾಖೆ ಪ್ರಸಿದ್ಧ ಸಾಹಿತಿ ಆರ್ .ಕೆ . ನಾರಾಯಣರ ಪ್ರಸಿದ್ಧ ಕೃತಿ ಮಾಲ್ಗುಡಿ ಡೇಸ್ ಇಲ್ಲಿ ಶಂಕರ್ ನಾಗ್ ದೂರದರ್ಶನಕ್ಕಾಗಿ ಚಿತ್ರಿಕರಣ ಮಾಡಿದ ಸವಿ ನೆನಪಿಗಾಗಿ ಇದನ್ನು ನಿರ್ಮಿಸಿದೆ.

  ಅರಸಾಳು ರೈಲು ನಿಲ್ದಾಣ ಇನ್ನು ಮುಂದೆ ಮಾಲ್ಗುಡಿ ರೈಲು ನಿಲ್ದಾಣ 
 ಅರಸಾಳು ಎಂಬ ಸಣ್ಣ ಹಳ್ಳಿ ಶಿವಮೊಗ್ಗ ಹೊಸನಗರ ಮಧ್ಯದ ದಟ್ಟ ಅರಣ್ಯದಲ್ಲಿದೆ, ಸ್ವಾತಂತ್ರ ಪೂವ೯ದಲ್ಲಿ ಜೋಗ ಜಲಪಾತ ಸಂಪಕಿ೯ಸಲು ರೈಲು ಮಾಗ೯ ನಿಮಾ೯ಣ ಪ್ರಾರಂಭವಾದಾಗ ಅರಸಾಳು ರೈಲು ನಿಲ್ದಾಣದ ಪ್ರಸ್ತಾಪ ಇರಲಿಲ್ಲ.
   ಮೂಡುಕೊಪ್ಪ (ನಂತರ ರಿಪ್ಪನ್ ಪೇಟೆ ಎ೦ಬ ಹೆಸರಾಯಿತು) ರೈಲು ನಿಲ್ದಾಣ ಪ್ರಸ್ತಾವನೆಯಲ್ಲಿ ಸೇರಿತ್ತು, ಅಲ್ಲಿಂದ ಆನಂದಪುರಂ, ಸಾಗರ, ತಾಳಗುಪ್ಪ ರೈಲು ಮಾಗ೯ದ ಯೋಜನೆ ಅದು ಆಗಿತ್ತು.
  ರೈಲು ಮಾರ್ಗದ ಸರ್ವೆ ಪರಿಶೀಲನೆಗೆ ಬ್ರಿಟಿಷ್ ಅಧಿಕಾರಿಗಳು ಇಲ್ಲಿಗೆ ಬಂದಾಗ ಈ ಭಾಗದ ಪ್ರಮುಖರೆಲ್ಲ  ಸೇರಿ ಅವರನ್ನು ಸನ್ಮಾನಿಸಿ ಅವರಿಗೆ ಸುಮಾರು 50 ವಷ೯ದ ಹಿಂದೆ ವೈಸ್ ರಾಯ್ ಆಗಿದ್ದ ಲಾರ್ಡ್ ರಿಪ್ಪನ್ (ಅಧಿಕಾರಾವಧಿ1880-1884)
 ಈ ಊರಿನಲ್ಲಿ ಶಿಕಾರಿಗಾಗಿ ತಂಗಿದ್ದ ಸವಿ ನೆನಪಿಗಾಗಿ ಲಾಡ್೯ ರಿಪ್ಪನ್ ರ ಹೆಸರನ್ನ ಚಿರಸ್ಥಾಯಿಗೊಳಿಸಲು ತಮ್ಮ ಮೂಡುಕೊಪ್ಪ ಎಂಬ ಹಳ್ಳಿಗೆ ರಿಪ್ಪನ್ ಪೇಟೆ ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದಾಗ ರೈಲ್ವೆ ಕಾಮಗಾರಿ ಉಸ್ತವಾರಿಯ  ಬ್ರಿಟೀಷ್ಅಧಿಕಾರಿಗಳು ಸಂಪ್ರೀತರಾಗುತ್ತಾರೆ ಈ ರೀತಿ ಅಧಿಕಾರಿಗಳನ್ನು ಒಲೈಸಿ ಊರ ಪ್ರಮುಖರು ಒಂದು ಮನವಿ ನೀಡುತ್ತಾರೆ ಅದೇನೆಂದರೆ ತಮ್ಮ ಊರಿಗೆ ಯಾವುದೇ ಕಾರಣಕ್ಕೂ ರೈಲು ಮಾಗ೯ ಹಾಕಬಾರದಾಗಿ ಮನವಿ ಮಾಡುತ್ತಾರೆ.
    ಅದಕ್ಕೆ ಸಕಾರಣವಾಗಿ ರೈಲು ಮಾಗ೯ದಿಂದ ರೈಲು ನಿಲ್ದಾಣ ರಿಪ್ಪನ್ ಪೇಟೆಯಲ್ಲಿ ಆದರೆ ರೈಲಿನಲ್ಲಿ
 ಬರುವ ಪ್ರಯಾಣಿಕರಿಂದ ಪ್ಲೇಗ್‌ ರೋಗ ಬಂದು ಹರಡುವುದರಿಂದ ಸಾವು ನೋವು ಊರಲ್ಲಿ
 ಉಂಟಾಗುತ್ತೆ ಎ೦ದು ವಿನಂತಿಸುತ್ತಾರೆ.
 ಈ ರೀತಿ ಮೂಡ ನಂಬಿಕೆ ಬ್ರಿಟೀಷ್ ಅಧಿಕಾರಿಗಳಿಗೆ
 ಇರದಿದ್ದರು ಈ ಊರಿನ ಜನರು ಲಾರ್ಡ್ ರಿಪ್ಪನ್ ಹೆಸರು ಅವರ ಊರಿಗೆ ಇಟ್ಟಿದ್ದರಿಂದ ಈ ಜನರ 
ಪ್ರೀತಿಗಾಗಿ ರಿಪ್ಪನ್ ಪೇಟೆ ರೈಲು ಮಾರ್ಗ ನಿಲ್ದಾಣ ರದ್ದು ಮಾಡುತ್ತಾರೆ.
  ರೈಲು ಮಾಗ೯ ಅರಸಾಳಿನಿಂದಲೇ ಕೆಂಚನಾಲಮಾಗ೯ವಾಗಿ ಆನಂದಪುರಂಗೆ ಸಂಪಕಿ೯ಸುವ ಬದಲಿ ಮಾಗ೯ ನಿಮಿ೯ಸುತ್ತಾರೆ ಹಾಗಾಗಿ ಅರಸಾಳು ರೈಲು ನಿಲ್ದಾಣ ಮಾಡುತ್ತಾರೆ.
  ಅರಸಾಳು ಈಗಲೂ ಮೀಸಲು ಅರಣ್ಯದ ಮದ್ಯ ಇದೆ, 1970ರ ದಶಕದಲ್ಲಿ ಖೆಡ್ಡಮಾಡಿ ಪುಂಡು ಆನೆ ಹಿಡಿದಿದ್ದರು, ಬ್ರಿಟಿಷರು ನಿಮಿ೯ಸಿರುವು ಬೃಹತ್ ಸಾಗುವಾನಿ ಪ್ಲಾಂಟೇಶನ್ ಇದೆ, ಅರಣ್ಯ ಅಧಿಕಾರಿಗಳ ಬಿಡದಿ, ಕಚೇರಿಗಳಿದೆ, ಚಚ್೯ ಇದೆ. ಈಗ ಅರಸಾಳು ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ ಮತ್ತು ಈ ಮಾಗ೯ದ ಪ್ರಮುಖ ಊರಾಗಿದೆ.
  ಈ ಊರನ್ನ ಕನ್ನಡದ ಖ್ಯಾತ ನಟ, ನಿದೇ೯ಶಕ ಶಂಕರ್ ನಾಗ್ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಕನ್ನಡಿಗ R.K.ನಾರಾಯಣ್ ರ ಮಾಲ್ಗುಡಿ ಡೇಸ್ ಎಂಬ ಕಥೆಯನ್ನ ದೂರದಶ೯ನಕ್ಕೆ ದಾರಾವಾಹಿ ಮಾಡಿದಾಗ ಅರಸಾಳು ರೈಲು ನಿಲ್ದಾಣ ಚಿತ್ರಿಕರಣಕ್ಕೆ ಬಳಸಿಕೊಂಡಿದ್ದರು.
 ಕನ್ನಡದ ನಟ ಸಾವ೯ ಬೌಮ ಡಾ.ರಾಜ್ ಕುಮಾರರ ಅಕಸ್ಮಿಕ ಸಿನಿಮಾ ಕೂಡ ಇಲ್ಲಿ ಚಿತ್ರಿಕರಣ ಮಾಡಿದ್ದರು.
  ನಂತರ ಮೀಟರ್ ಗೇಜ್ ರದ್ದು ಮಾಡುವ ಪೂವ೯ದಲ್ಲಿ ಅರಸಾಳು ರೈಲು ನಿಲ್ದಾಣವನ್ನ ರದ್ದು ಮಾಡಿದ್ದರು, ಬ್ರಾಡ್ ಗೇಜ್ ಪರಿವತ೯ನೆಗೆ ರೈಲ್ವೇ ಇಲಾಖೆ ಈ ಮಾಗ೯ ನಷ್ಟ ಅಂತ ರೈಲು ಮಾಗ೯ವನ್ನ ರದ್ದು ಮಾಡಿತ್ತು, ನಂತರ ಜನರ ಹೋರಾಟ ಒತ್ತಾಯಗಳಿಗೂ ರೈಲ್ವೇ ಇಲಾಖೆ ಮಣಿಯಲಿಲ್ಲ ಆಗ ಮುಖ್ಯಮಂತ್ರಿಗಳಾಗಿದ್ದ ನಮ್ಮ ಜಿಲ್ಲೆಯವರೆ ಆದ ಯಡೂರಪ್ಪ ಕೆ-ರೈಡ್ ಯೋಜನೆಯಲ್ಲಿ ರಾಜ್ಯ ಸಕಾ೯ರದ ಸಹಭಾಗಿತ್ವದಲ್ಲಿ  ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಮಾಗ೯ ನಿಮಿ೯ಸಲು ಕಾರಣಕತ೯ರಾದರು.
 ಈಗ ಅವರ ಮಗ ರಾಘವೇಂದ್ರ ಸಂಸದರಾಗಿ ಎಲ್ಲಾ ರೈಲು ನಿಲ್ದಾಣಗಳ ಮೇಲ್ದಜೆ೯ಗೇರಿಸುತ್ತಿದ್ದು ಅರಸಾಳು ರೈಲು ನಿಲ್ದಾಣ ಕೂಡ ನವೀಕರಣಗೊಳಿಸಿ ಮಾಲ್ಗುಡಿ ಡೇಸ್ ಸ್ಮರಣಾಥ೯ ಅರಸಾಳು ನಿಲ್ದಾಣ "ಮಾಲ್ಗುಡಿ ಅರಸಾಳು" ಎ೦ದು ಪುನರ್ ನಾಮಕರಣ ಮಾಡಿದ್ದಾರೆ.
  ಇಲ್ಲಿ ಮಾಲ್ಗುಡಿ ಧಾರಾವಾಹಿಯ ಆರ್.ಕೆ.ನಾರಾಯಣರ ಕಥೆಯ ಪಾತ್ರಗಳು ಶಂಕರ್ ನಾಗ್ ಅವರ ದಾರಾವಾಹಿಯ ಸ್ಮರಣೆಗಾಗಿ ಮ್ಯೂಜಿಯಂ ಕೂಡ ನಿರ್ಮಿಸಿದ್ದಾರೆ ಇದನ್ನು ನೋಡಲು ದೂರ ದೂರದಿಂದ ಪ್ರವಾಸಿಗಳು ಬರುತ್ತಾರೆ.
   ಆದರೆ ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲುಗಳು ನಿಲ್ಲುವುದಿಲ್ಲ ಎಂಬುದು ವಿಷಾದನೀಯ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...