( ಕೆ.ಅರುಣ್ ಪ್ರಸಾದ್ ಇವರಿಂದ ಲೋಕಸಭಾ ಚುನಾವಣಾ ಅಂಕಣ)
ಭಾಗ 1.
ಶಿವಮೊಗ್ಗ ಲೋಕಸಭಾ ಚುನಾವಣೆ ಬಿಜೆಪಿ ಪಕ್ಷದ ಚುನಾವಣಾ ತಯಾರಿ.
ನಿನ್ನೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿ೯ ಸಂಸದ ರಾಘವೇಂದ್ರ ಅಜಿ೯ಸಲ್ಲಿಸಿದ್ದಾರೆ, ಕಾಲಕ್ಕೆ ತಕ್ಕ೦ತೆ ಬಾರೀ ಜನಸ್ತೋಮ ಸೇರಿಸಿದ್ದರು ಆದರೆ ಅವರ ತಂದೆ, ಎಸ್.ಎಂ.ಕೃಷ್ಣ ಮತ್ತು ಶ್ರೀನಿವಾಸರು ಬರಬೇಕಾಗಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಹಾರಲಿಲ್ಲ, ರಾಘವೇಂದ್ರರ ಅಜಿ೯ ಪಾರಂ ದೇವರ ಪೀಠದಿಂದ ಕೆಳಕ್ಕೆ ಉರುಳಿತು ಎಂಬ ವಿಚಾರ ವಿರೋದಿ ಪಾಳ್ಯವಾದ ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷದಲ್ಲಿ ಹೆಚ್ಚು ಸುದ್ದಿ ಮಾಡಿತು.
ಈ ಬಗ್ಗೆ ಪೇಟೆ ಪ್ರದೇಶಕ್ಕಿಂತ ಹಳ್ಳಿಗಳಲ್ಲಿ ಹೆಚ್ಚು ಚಚೆ೯ ಆಗಿದೆ.
ಶಿವಮೊಗ್ಗ ಲೋಕ ಸಭಾ ಕ್ಷೇತ್ರದಲ್ಲಿ 1700 ಪೋಲಿOಗ್ ಸ್ಟೇಷ್ ನ್ಗಳಿರಬೇಕು (ಪ್ರತಿ ಚುನಾವಣೆಯಲ್ಲಿ ಇದು ಬದಲಾಗುತ್ತದೆ) ಬಿಜೆಪಿಯವರ ಸ೦ಘಟನೆ ಹೇಗಿದೆ ಅಂದರೆ ಪ್ರತಿ ಬೂತಿನಿಂದ ಕನಿಷ್ಟ 15 ಜನ ಎರೆಡು ವಾಹನದಲ್ಲಿ ಅಜಿ೯ ಸಲ್ಲಿಸುವ ದಿನ ಕಡ್ಡಾಯ ಬರಲೇ ಬೇಕು, ಜೊತೆಯಲ್ಲಿ ಘಟಕಗಳ ಪದಾಧಿಕಾರಿಗಳು ಇದಕ್ಕಾಗಿ ಪ್ರತಿ ಬೂತ್ ಗೆ ರೂ 5000 ನೀಡಲಾಗಿದೆ (ಗುಟ್ಟಾಗಿ ) ಸ್ಥಳಿಯ ಶಾಸಕರು ಸ್ವಪಕ್ಷದವರು ಇದ್ದರೆ ಅವರ ಉಪಸ್ಥಿತಿಯಲ್ಲೇ ಅಥವ ಆ ಕ್ಷೇತ್ರದಲ್ಲಿ ಶಾಸಕರು ಇಲ್ಲದಿದ್ದರೆ ಪಕ್ಷ ಜವಾಬ್ದಾರಿ ನೀಡಿದ ಪದಾಧಿಕಾರಿ ಈ ಜವಾಬ್ದಾರಿ ವಹಿಸಬೇಕು.
ಇದರಿಂದ ಪ್ರತಿ ಬೂತ್ ಮಟ್ಟದಲ್ಲಿ ಅಭ್ಯಥಿ೯ ಸ್ಪದೆ೯ ಪ್ರಚಾರ ಅವತ್ತಿಂದಲೇ ಪ್ರಾರಂಭವಾಗುತ್ತದೆ.
ಇದು ಬಿಜೆಪಿ ಪಕ್ಷದ ಸಂಘಟನೆ ಮತ್ತು ಚುನಾವಣಾ ಚಾಣಕ್ಯ ನೀತಿ ಆದರೆ ಕಾಂಗ್ರೇಸ್ ಮತ್ತು ಜೆಡಿಎಸ್ ಈ ರೀತಿ ಪಕ್ಷ ಸಂಘಟನೆ ಬೂತ್ ಮಟ್ಟದಲ್ಲಿ ಮಾಡಿರುವ ಬಗ್ಗೆ ಅನುಮಾನವಿದೆ.
ಚುನಾವಣಾ ಗೆಲುವು ಸೋಲಿನಲ್ಲಿ ಅನೇಕ ವಿಚಾರಗಳು ಇರಬಹುದಾದರೂ ಪಕ್ಷ ಸಂಘಟನೆ ಮುಖ್ಯ.
ಒಂದು ಗಾದೆ ಇದೆ ಮಳೆ ಬಂದಾಗ ನೀರು ಸಂಗ್ರಹಿಸಲು ಪಾತ್ರೆ ಸಂಗ್ರಹಿಸಬೇಕು ಅಂದರೆ ಮತ ನೀಡಲು ಮತದಾರನ ಒಲವು ಇದ್ದಾಗ ಅದನ್ನ ಕ್ರೂಡಿಕರಿಸಲು ಸ೦ಘಟನೆ ಅತಿ ಮುಖ್ಯ ಆದರೆ ಇದು ಕಾಂಗ್ರೇಸ್ ಮತ್ತು ಜೆಡಿಎಸ್ ನಲ್ಲಿ ಎಷ್ಟರ ಮಟ್ಟಿಗೆ ಇದೆ ಅನ್ನುವುದು ನೋಡಬೇಕು.
Comments
Post a Comment