Blog number 1333. ನೆಂಪೆ ದೇವರಾಜರ ಬೇಟಿಯಲ್ಲಿ 2000 ಇಸವಿಯಲ್ಲಿ ನಾವೆಲ್ಲ ಸೇರಿ ಕಾಗೋಡು ಸುವರ್ಣ ಜ್ಯೋತಿ ಕಾಗೋಡಿನಿಂದ ಕಡಿದಾಳು ಮಂಜಪ್ಪರ ಸಮಾದಿವರೆಗೆ ಜಾಥಾದಲ್ಲಿ ಒಯ್ದ ನೆನಪು
#ಇಪ್ಪತೈದು_ವರ್ಷದ_ನಂತರ
#ಸಾಮಾಜಿಕ_ಜಾಲತಾಣದಲ್ಲಿ_ನಿತ್ಯ_ಸಂವಾದದಲ್ಲಿದ್ದೇವೆ.
#ನೆಂಪೆದೇವರಾಜ್_ಆದ್ಯಾಪಕ_ಪತ್ರಕರ್ತ_ಸಾಹಿತಿ_ಜನಪರಹೋರಾಟಗಾರ_ರಾಜಕಾರಣಿ_ಕೃಷಿಕ_ಹೀಗೇ_ಸಾಗುತ್ತದೆ_ಸಾಲು....
#ಕಾಗೋಡು_ಹೋರಾಟದ_ಕಾಗೋಡು_ಸುವರ್ಣ_ಜ್ಯೋತಿ_ಜಾತಕ್ಕೆ_ತಡೆಯುವ_ಪ್ರಯತ್ನ_ನಡೆದಿತ್ತು
#ರಿಸರ್ವ್_ಪೋಲಿಸ್_ವಾಹನದ_ರಕ್ಷಣೆಯಲ್ಲಿ_ಕಾಗೋಡು_ಸುವರ್ಣ_ಜ್ಯೋತಿ_ಉದ್ಫಾಟನೆ
#ಸಾಗರ_ತಾಲ್ಲೂಕಿನ_ಕಾಗೋಡಿನಿಂದ_ತೀರ್ಥಹಳ್ಳಿಯ_ಕಡಿದಾಳು_ಮಂಜಪ್ಪರ_ಸಮಾದಿವರೆಗೆ
#ಇದೆಲ್ಲ_ನೆನಪುಗಳಾಯಿತು.
1997 ರಲ್ಲಿ ನೆಂಪೆ ದೇವರಾಜ್ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ವಾಸವಾಗಿದ್ದರು ಕಾರಣ ಅವರ ಪತ್ನಿ ಸಮೀಪದ ಗರ್ತಿಕೆರೆಯ ಪ್ರೌಡ ಶಾಲೆಯಲ್ಲಿ ಉದ್ಯೋಗ ಮಾಡುತ್ತಿದ್ದರು, ನೆಂಪೆ ದೇವರಾಜ್ ರಿಪ್ಪನ್ ಪೇಟೆಯಿಂದ ನಿತ್ಯ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಪತ್ರಿಕೋದ್ಯಮ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹೋಗುತ್ತಿದ್ದರು ಆ ಸಂದರ್ಭದಲ್ಲಿ ನನ್ನ ರಾಜಕೀಯ ಹೋರಾಟಗಳ ಚರ್ಚೆ ಮಾಡುತ್ತಿದ್ದ ಕೇಂದ್ರ ರಿಪ್ಪನ್ ಪೇಟೆ ಆಗಿತ್ತು ಅಲ್ಲಿನ ಅನೇಕ ಜನಪರ ಮುಖಂಡರು ನನಗೆ ಸಲಹೆ-ಸಹಕಾರ ನೀಡುತ್ತಿದ್ದರು.
ರಿಪ್ಪನ್ ಪೇಟೆಯಲ್ಲಿ ಪತ್ರಕರ್ತ ತ. ಮ.ನರಸಿಂಹರ ಬ್ಯಾಚುಲರ್ ಹೊಂನಲ್ಲಿ ನೆಂಪೆ ದೇವರಾಜ್ ಕೆಲವು ಬಾರಿ ಸೇರಿದ್ದೆವು.
ನಂತರ ಸುಮಾರು 25 ವರ್ಷದ ನಂತರವೇ ಮೊನ್ನೆ ಈ ಮಾರ್ಗದಲ್ಲಿ ಸಂಚರಿಸುವಾಗ ನೆಂಪೆ ದೇವರಾಜ್ ಮತ್ತು ನನ್ನ ಬೇಟಿ ಆಯಿತು, ಇದಕ್ಕೂ ಮೊದಲು ಬಹುಶಃ ಹದಿನೈದು ವರ್ಷದ ಹಿಂದೆ ಕಿಮ್ಮನೆ ರತ್ನಾಕರರ ಪಾದಯಾತ್ರೆ ತೀರ್ಥಹಳ್ಳಿಯಿಂದ ಶಿವಮೊಗ್ಗದ ಜಿಲ್ಲಾಧಿಕಾರಿ ಕಛೇರಿಗೆ ತಲುಪಿದಾಗ ನಾನು ಜಿಲ್ಲಾಧಿಕಾರಿ ಕಛೇರಿಯಿಂದ ಹೊರಬಂದಾಗ ನೆಂಪೆ ಎದುರಾಗಿದ್ದರು ಬಹುಶಃ ಅವರಿಗೆ ನನ್ನ ಗುರುತು ಸಿಕ್ಕಿರಲಿಲ್ಲ.
ನೆಂಪೆ ದೇವರಾಜ್ ಜನ೯ಲಿಸಂ ಓದಿದವರು, ಜನ೯ಲಿಸಂ ಬೋದಿಸಿದವರು ಮತ್ತು ಜರ್ನಲಿಸ್ಟ್ ಆಗಿ ಕಾರ್ಯನಿರ್ವಹಿಸಿದವರು.
ಸಾಹಿತಿಗಳೂ ಹೌದು, ಕೆಲವು ಪುಸ್ತಕ ಪ್ರಕಟವಾಗಿದೆ ಅನೇಕ ಬೇರೆ ಬೇರೆ ಪುಸ್ತಕದಲ್ಲಿ ಇವರ ಲೇಖನಗಳು ಪ್ರಕಟ ಆಗಿದೆ ತೀರ್ಥಹಳ್ಳಿ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾಗಿ ತಾಲ್ಲೂಕ್ ಸಾಹಿತ್ಯ ಸಮಾವೇಶ ನಡೆಸಿದ್ದಾರೆ.
ಸ್ವತಃ ಕೃಷಿಕರು ಅಡಿಕೆ ಕೊಯ್ಲು, ಕೊಳೆ ಔಷದಿ ಸಿಂಪಡನೆ ಜೊತೆಯಲ್ಲಿ ಮುಂಗಾರ ಮೊದಲ ಮಳೆಗಳಲ್ಲಿ ಹತ್ತು ಮೀನು ಶಿಕಾರಿಯೂ ಮಾಡುತ್ತಾರೆ.
ರೈತ ಹೋರಾಟಗಾರರು, ಸಮಾಜವಾದಿ ಹೋರಾಟಗಾರರನ್ನು ಹುಡುಕಿ ಅವರ ಸಂದರ್ಶನ ಪ್ರಕಟಿಸುತ್ತಾರೆ.
ಒಮ್ಮೆ ಜಾತ್ಯಾತೀತ ಜನತಾದಳದಿಂದ ತೀರ್ಥಹಳ್ಳಿ ವಿದಾನ ಸಭಾ ಚುನಾವಣೆಗೂ ಸ್ಪರ್ದಿಸಿದ್ದರು ಅಷ್ಟೆ ಅಲ್ಲ ಜನಪರ ಹೋರಾಟಗಳು - ಜನ ಜಾಗೃತಿ ಜಾಥಾಗಳಿಗೆ ಸದಾ ಬೆಂಬಲಿಸುವ ಜನಪರ ಕಾಳಜಿ ನೆಂಪೆ ದೇವರಾಜರದ್ದು.
2000ದಲ್ಲಿ ಕಾಗೋಡು ಸತ್ಯಾಗ್ರಹದ ಸುವರ್ಣ ಮಹೋತ್ಸವದ ಅಂಗವಾಗಿ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ನೇತೃತ್ವದಲ್ಲಿ ಕಾಗೋಡಿನಲ್ಲಿ ಲೋಹಿಯಾರು ಬಾಷಣ ಮಾಡಿದ ಜಾಗದಿಂದ ಕಾಗೋಡು ಸುವರ್ಣ ಜ್ಯೋತಿಯ ಜಾಥಾ (ಕಾಗೋಡಿನಿಂದ ಕಡಿದಾಳಿನವರೆಗೆ) ಹೊರಟು ಕಾಗೋಡು ಹೋರಾಟದ ಆ ದಿನದ ಹೋರಾಟದ ಪ್ರದೇಶಗಳಾದ ಹಿರೆನೆಲ್ಲೂರು - ಕಾನಲೆ- ತಾಳಗುಪ್ಪ - ಮರ್ತೂರು - ಶಿರವಂತೆ - ಸಾಗರ - ಆನಂದಪುರಂ ತಲುಪಿ ಕಾಗೋಡು ಸುವರ್ಣ ಜ್ಯೋತಿ ಆನಂದಪುರಂ ಸಮೀಪದ ಕೆಂಜಿಗಾಪುರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇರಿಸಿದ್ದೆವು.
ಬೆಳಿಗ್ಗೆ ಮುರುಘಾ ಮಠ ಗಿಳಾಲಗುಂಡಿ, ಮಾದಾಪುರ ಮಾರ್ಗವಾಗಿ ರಿಪ್ಪನ್ ಪೇಟೆ, ಕೋಣಂದೂರು, ತೀರ್ಥಹಳ್ಳಿ ಮಾರ್ಗವಾಗಿ ಕಡಿದಾಳಿನ ಕಡಿದಾಳು ಮಂಜಪ್ಪ ಗೌಡರ ಸಮಾದಿಗೆ ತಲುಪುವಾಗ ಮಧ್ಯ ರಾತ್ರಿ ಅಲ್ಲಿ ಕಡಿದಾಳು ಶಾಮಣ್ಣ ಕ್ರಾಂತಿ ಗೀತೆಯ ಹಾಡುವ ಮೂಲಕ ಕಾಗೋಡು ಸುವರ್ಣ ಜ್ಯೋತಿ ಸ್ವಾಗತಿಸಿದ್ದರು ಈ ಐತಿಹಾಸಿಕ ಭೂಮಿ ಹೋರಾಟದ ಸುವರ್ಣ ಮಹೋತ್ಸವದ ಕಾಗೋಡಿನಿ೦ದ ಕಡಿದಾಳಿಗೆ ಹಮ್ಮಿಕೊಂಡಿದ್ದ ಕಾಗೋಡು ಸುವರ್ಣ ಜ್ಯೋತಿ ಕೋಣಂದೂರಿನಿಂದಲೇ ಸ್ವಾಗತಿಸಿ ಕಡಿದಾಳಿನ ಮಂಜಪ್ಪ ಗೌಡರ ಸಮಾದಿಗೆ ತಲುಪುವ ತನಕ ಭಾಗವಹಿಸಿ ಸಾಕ್ಷಿಗಳಾದ ಪ್ರಮುಖರಲ್ಲಿ ನೆಂಪೆ ದೇವರಾಜರು,ಆಗಿನ ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷೆ ಶ್ರೀಮತಿ ಸ್ಟರ್ಣಾ ಪ್ರಭಾಕರ್, ಕಡಿದಾಳು ಶಾಮಣ್ಣ ಮತ್ತು ಅನೇಕ ಪ್ರಗತಿ ಪರ ಮುಂದಾಳುಗಳು ಭಾಗವಹಿಸಿ ಬೆಂಬಲಿಸಿದ್ದರು ಆದರೆ ಕಾಗೋಡು ಹೋರಾಟ ಪ್ರಾರಂಭವಾದ ನೆಲದಲ್ಲಿ ಆ ಹೋರಾಟದ ರೂವಾರಿ ಗಣಪತಿಯಪ್ಪರಿಗೆ ಕಾಗೋಡು ಸುವರ್ಣ ಜ್ಯೋತಿ ಉದ್ಘಾಟನೆಗೆ ಅವಕಾಶ ನೀಡದಂತೆ ತಡೆಯುವ ವಿಫಲ ಪ್ರಯತ್ನ ನಡೆಯಿತು, ಆಗ ಪ್ರಜಾವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿದ್ದ ಈ.ಸತ್ಯನಾರಾಯಣರು
ಸಾಹಿತಿ ಕೊಣಂದೂರು ವೆಂಕಪ್ಪ ಗೌಡರ ಶಿಷ್ಯರು ಮತ್ತು ಜನಪರ ಹೋರಾಟಕ್ಕೆ ಬೆಂಬಲಿಸುವ ಸ೦ವೇದನಾಶೀಲ ಪತ್ರಕರ್ತರಾದ್ದರಿಂದ ಅವರು ಜಿಲ್ಲಾಡಾಳಿತಕ್ಕೆ ತಿಳಿಸಿ ರಿಸರ್ವ್ ಪೋಲಿಸ್ ಹಾಕಿಸಿ ರಕ್ಷಣೆ ನೀಡಿಸಿ ಈ ಜಾತಾ ಉದ್ಘಾಟನೆಗೆ ಅವಕಾಶ ಮಾಡದಿದ್ದರೆ ಜಾತಾ ಉದ್ಘಾಟನೆ ಸಾಧ್ಯವೇ ಇರಲಿಲ್ಲ, ಮರುದಿನ ಪ್ರಜಾವಾಣಿ ಮುಖಪುಟದಲ್ಲಿ ಕಲರ್ ಪ್ರಿಂಟ್ ನಲ್ಲಿ ರಾಜ್ಯದಾದ್ಯಂತ ಸುದ್ದಿ ಆಗುವಂತೆ ಮಾಡಿದ್ದರು.
ನೆಂಪೆ ದೇವರಾಜರ ಬೇಟಿಯಲ್ಲಿ ಇದನ್ನೆಲ್ಲ ನೆನಪು ಮಾಡಿಕೊಂಡೆವು.
Comments
Post a Comment