Blog number 1292. ಮಲೆನಾಡಿನ ಒಂಟಿ ಮನೆಗಳು ಕಳ್ಳರಿಗೆ ಸುಲಭದ ತುತ್ತಾಗುತ್ತಿದೆ ಇದನ್ನು ತಡೆಯಲು ಪೋಲಿಸ್ ಇಲಾಖೆಯ ಸಹಭಾಗಿತ್ವದಲ್ಲಿ ಕೆಲವೊಂದು ಸುದಾರಣೆ ಗೃಹ ಸಚಿವರಾದ ಆರಗ ಜ್ಞಾನೇಂದ್ರರು ಅವರ ಅಧಿಕಾರ ಅವದಿಯಲ್ಲಿ ಮಾಡಲು ಸಾಧ್ಯವಿದೆ ಅದಕ್ಕಾಗಿ ಅವರಿಗೆ ಇನ್ನೊಮ್ಮೆ ಮನವಿ.
#ಮಲೆನಾಡಿನ_ಒಂಟಿ_ಮನೆಗಳಿಗೆ_ಸ್ವಯಂ_ರಕ್ಷಣೆಗೆ_ಪೋಲಿಸ್_ಇಲಾಖೆ_ಸಹಭಾಗಿತ್ವ_ಬೇಕಾಗಿದೆ.
#ಇಲಾಖೆಗೆ_ಯಾವುದೇ_ಆರ್ಥಿಕ_ಹೊರೆ_ಆಗದಂತೆ_ಸುಲಭವಾಗಿ_ಮಾಡಬಹುದು.
#ಇದರಿಂದ_ಅಪರಾದ_ಪತ್ತೆ_ಹಚ್ಚಲು_ಸುಲಭ
#ನಿಮ್ಮ_ಅಧಿಕಾರ_ಅವಧಿಯಲ್ಲೇ_ಜಾರಿ_ಆಗಲಿ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಸದಸ್ಯರಾದ ಆರಗ ಜ್ಞಾನೇಂದ್ರರು ಗೃಹ ಮಂತ್ರಿಗಳಾದಾಗ ಹೆಚ್ಚು ಸಂತೋಷ ಪಟ್ಟವನು ನಾನು.
1995-2000 ಇಸವಿಯಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆರಗ ಜ್ಞಾನೆಂದ್ರ ಶಾಸಕರಾಗಿ ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ಒಂದಾಗಿ ಚರ್ಚಿಸುತ್ತಿದ್ದೆವು ಆಗ ಕಾಂಗ್ರೇಸ್ ಪಕ್ಷದ ಸಕಾ೯ರವಿತ್ತು.
ನಾನು ನನ್ನ ನ್ಯಾಯಪರ ಹೋರಾಟದಿಂದ ಮಂತ್ರಿ ಮಹೋದಯರ ಸಂಸದರ ಕಣ್ಣಿನಲ್ಲಿ ವಿಲನ್ ಆಗಿದ್ದೆ ಆದರೆ ಕಾಂಗ್ರೇಸ್ ಪಕ್ಷದ ಜಿಲ್ಲಾದ್ಯಕ್ಷ ಇಸ್ಮಾಯಿಲ್ ಖಾನ್ ಆದಿಯಾಗಿ ಇಡೀ ಕಾಂಗ್ರೇಸ್ ಪಕ್ಷ ನನ್ನ ಬೆಂಬಲಿಸಿತ್ತು.
ಆದರೆ ಅಧಿಕಾರ ಇದ್ದವರ ಮಜಿ೯ ನನ್ನ ಮೇಲೆ 22 ಪೋಲಿಸ್ ಕೇಸ್, ತಹಸೀಲ್ದಾರ್ ಕೋರ್ಟ್ ನಲ್ಲಿ ಅನೇಕ 107 ಕೇಸ್ ಗಳು, ಪದೇ ಪದೇ ಬಂದಿಸಿ ಜೈಲಿಗೆ ಹಾಕುವುದು ಅಷ್ಟೇ ಅಲ್ಲ Rowdy ಲಿಸ್ಟ್ ನಲ್ಲೂ ಸೇರಿಸಿದ್ದರು.
ಆಗೆಲ್ಲ ಜಿಲ್ಲಾ ಪಂಚಾಯತ್ ಒಳಗೆ ಬೆಂಬಲಿಸುತ್ತಿದ್ದವರು ಮತ್ತು ನನ್ನ ಹೋರಾಟಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿ ಸಹಾಯ ಮಾಡಿದವರು ಆರಗ ಜ್ಞಾನೆಂದ್ರ ಅವರು ಶಾಸಕರಾಗುವ ಮೊದಲು ಜಿಲ್ಲಾ ಪರಿಷತ್ ಸದಸ್ಯರಾಗಿದ್ದ ಅನುಭವ ಹೊಂದಿದವರು.
ಆಗ ಈಶ್ವರಪ್ಪ, ಅಪ್ಪಾಜಿ ಗೌಡರು, ಅಯನೂರು ಮಂಜುನಾಥರು ಶಾಸಕರಾಗಿದ್ದರು ಅವರುಗಳು ವಿಷಯ ಆದಾರಿತವಾಗಿ ಬೆಂಬಲಿಸುತ್ತಿದ್ದರು.
ಮೊದಲ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಾತ್ರ ಜೆ.ಹೆಚ್.ಪಟೇಲರು, ಯಡಿಯೂರಪ್ಪ ಭಾಗವಹಿಸಿದ್ದರು.
ಆರಗ ಜ್ಞಾನೇಂದ್ರರು ಗೃಹ ಮಂತ್ರಿಗಳಾಗಿದ್ದರಿಂದ ಅವರ ಜೊತೆಯ ಸಲಿಗೆಯಿಂದ ರಾಜ್ಯದಲ್ಲಿ ಯಾವುದೇ ಕ್ರಿಮಿನಲ್ ಚಟುವಟಿಕೆ ಇಲ್ಲದ ಸಾವಿರಾರು ಜನ ಅದರಲ್ಲೂ ರಾಜಕೀಯ ದುರುದ್ದೇಶದಿಂದ Rowdy ಪಟ್ಟಿಯಲ್ಲಿರುವವರನ್ನು ಪರಿಷ್ಕರಣೆ ಮಾಡಲು ವಿನಂತಿಸಿದ್ದೆ.
ಕಾರಣ ಕಳೆದ 20 ವಷ೯ದಿಂದ ಹಿಂದಿನ ಯಾವ ಸರ್ಕಾರಗಳು ಈ ಪಟ್ಟಿ ಪರಿಷ್ಕರಣೆ ಮಾಡಿರಲಿಲ್ಲ ಆದ್ದರಿಂದ ಈ ಬಗ್ಗೆ ಆರಗ ಜ್ಞಾನೇಂದ್ರ ಕ್ರಮ ತೆಗೆದುಕೊಳ್ಳುವ ಭರವಸೆಯೇನು ನನಗಿರಲಲ್ಲ ಆದರೆ ಆಶ್ಚಯ೯ ಆಗಿದ್ದು ಶಿವಮೊಗ್ಗ ಜಿಲ್ಲೆಯಲ್ಲೇ 1700 ಜನರನ್ನು ಈ ಪಟ್ಟಿಯಿಂದ ಬಿಡುಗಡೆ ಮಾಡಿಸಿದ್ದು ಅದು ಅವರು ಗೃಹ ಖಾತೆ ಪಡೆದು ಆರು ತಿಂಗಳಲ್ಲಿ !! ಇಡೀ ರಾಜ್ಯದಲ್ಲಿ ಇದನ್ನು ಜಾರಿ ತಂದಿದ್ದಾರೆ ಆದ್ದರಿಂದ ಅವರಿಗೆ ಅಭಿನಂದನೆ ಹೇಳಲೇ ಬೇಕು ಮತ್ತು ರಾಜಕೀಯ ದ್ವೇಷದಿಂದ ತಮ್ಮ ವಿರೋದಿಗಳಿಗೆ ಮಟ್ಟ ಹಾಕಲು ಈ ಹಿಂದೆ ಪೋಲಿಸ್ ಇಲಾಖೆ ಬಳಸಿಕೊಂಡು ಸುಳ್ಳು ಕೇಸು ಹಾಕುವ ಘಟನೆಗಳಿಗೆ ಆರಗ ಜ್ಞಾನೇಂದ್ರ ತಡೆ ಹಾಕಿದ್ದಾರೆ.
ಇದರ ಜೊತೆ ಮಲೆನಾಡಿನ ಒಂಟಿ ಮನೆಗಳು ಸುಲಭವಾಗಿ ದರೋಡೆ ಕೊಲೆ ಮಾಡುವವರಿಗೆ ಟಾರ್ಗೆಟ್ ಆಗುತ್ತಿರುವುದರಿಂದ ಪೋಲಿಸ್ ಇಲಾಖೆ ಸಹಭಾಗಿತ್ವದಲ್ಲಿ ಸುರಕ್ಷೆ ಒದಗಿಸುವ ಬಗ್ಗೆ ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿದ್ದು ಗೊತ್ತಾಗಲಿಲ್ಲ.
ಅವರ ಅಧಿಕಾರ ಅವದಿಯಲ್ಲಿ ಈ ಬಗ್ಗೆ ಅವರು ಸೂಕ್ತವಾದ ಕಾನುನು ಕ್ರಮ ಕೈಗೊಂಡು ಮಲೆನಾಡಿನ ಒಂಟಿ ಮನೆಗಳಲ್ಲಿ ವಾಸಿಸುವರ ರಕ್ಷಿಸಲು ಮತ್ತೊಮ್ಮೆ ವಿನಂತಿಸುತ್ತೇನೆ.
ಈ ಹಿಂದಿನ ಮನವಿಯ ಈ ಅಂಶಗಳು ಅವರ ಗಮನಕ್ಕಾಗಿ.
ಮಾನ್ಯ ಗೃಹ ಮಂತ್ರಿಗಳಾದ ಶ್ರೀ ಆರಗ ಜ್ಞಾನೇಂದ್ರ ಅವರಿಗೆ.
ಮಾನ್ಯರೆ,
ವಿಷಯ: ಮಲೆನಾಡಿನ ಒ೦ಟಿ ಮನೆಗಳ ಸುರಕ್ಷತೆಗಾಗಿ.
ಮಲೆನಾಡಿನ ಒಂಟಿ ಮನೆಗಳು ಕಳ್ಳಕಾಕರಿಗೆ ಸುಲಭ ಗುರಿಗಳಾಗಿ ಅನೇಕ ದರೋಡೆ ಕೊಲೆಗಳು ಆಗುತ್ತಿರುವುದು ನಿಮ್ಮ ಗಮನದಲ್ಲಿದೆ.
ಹಳ್ಳಿಗಳ ಒಂಟಿ ಮನೆಗಳಲ್ಲಿ ವಯಸ್ಸಾದ ತಂದೆ ತಾಯಿಗಳು ವಾಸ ಮಾಡುತ್ತಿದ್ದಾರೆ ಅವರ ಮಕ್ಕಳು ಉದ್ಯೋಗಕ್ಕಾಗಿ ಪಟ್ಟಣ ಸೇರುತ್ತಿರುವುದು ಒಂದು ಕಾರಣ.
ಗ್ರಾಮೀಣ ಪ್ರದೇಶದಲ್ಲಿ ಅವಿಭಕ್ತ ಕುಟುಂಬಗಳು ಈಗಿಲ್ಲ ಮತ್ತು ನಾಯಿಗಳೂ ಸಾಕುವುದಿಲ್ಲ ಈ ಎಲ್ಲಾ ಕಾರಣದಿಂದ ಮಲೆನಾಡಿನ ಒಂಟಿ ಮನೆಗಳಲ್ಲಿ ಸುರಕ್ಷಿತವಾಗಿ ಜೀವನ ಮಾಡುವುದು ಕಷ್ಟವಾಗಿದೆ.
ಸರ್ಕಾರಕ್ಕೆ ಆರ್ಥಿಕ ಹೊರೆ ಇಲ್ಲದ ಈ ಕೆಳಕಂಡ ಅಂಶಗಳನ್ನು ತಾವು ಪರಿಶೀಲಿಸಿ ಜಾರಿ ತಂದರೆ ಮಲೆನಾಡಿನ ವಾಸಿಗಳಿಗೆ ದೊಡ್ಡ ಉಪಕಾರವಾಗಲಿದೆ.
1. ಮಲೆನಾಡಿನ ಒಂಟಿ ಮನೆಗಳಿಗೆ ಕಡ್ಡಾಯ ಸಿಸಿ ಕ್ಯಾಮೆರಾ ಅಳವಡಿಸುವ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯತ್ ಸಹಯೋಗದಿಂದ ಪೋಲಿಸ್ ಇಲಾಖೆ ಜನ ಜಾಗೃತಿ ಮಾಡಿ ಸಿಸಿ ಕ್ಯಾಮೆರಾ ಆಯಾ ಮನೆಯವರು ಅವರ ಸ್ವಂತ ಹಣದಿಂದ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಮಾಡುವುದು.
2. ಹಳ್ಳಿಗಳ ಪ್ರಮುಖ ಜಂಕ್ಷನ್ ಗಳಲ್ಲಿ ಸ್ಥಳಿಯ ದಾನಿಗಳ ಗ್ರಾಮ ಪಂಚಾಯತ್ ಗಳ ಮತ್ತು ಸ್ಥಳಿಯ ಸಂಘ ಸಂಸ್ಥೆಗಳಿಂದ ಸಿಸಿ ಕ್ಯಾಮೆರಾ ಅಳವಡಿಸಲು ಪೋಲಿಸ್ ಇಲಾಖೆ ಪ್ರೇರೇಪಿಸಬೇಕು (ಸಾಗರದಲ್ಲಿ ಎ.ಎಸ್.ಪಿ ಆಗಿದ್ದ ನಿಶಾ ಜೇಮ್ಸ್ ಇದನ್ನ ಯಶಸ್ವಿಗೊಳಿಸಿದ್ದರು)
3. ಶಾಸಕರು ಮತ್ತು ಸಂಸದರ ನಿಧಿಯಲ್ಲಿ ಹೈ ಮಾಸ್ಕ್ ದೀಪ ಅಳವಡಿಸುತ್ತಾರೆ ಅದೇ ಕಂಬಕ್ಕೆ 360° ಸಿಸಿ ಕ್ಯಾಮೆರಾ ಅಳವಡಿಕೆಯ ಅನಿವಾರ್ಯತೆ ಅವರುಗಳಿಗೆ ಗೃಹ ಇಲಾಖೆಯಿಂದ ಮನವರಿಕೆ ಮಾಡಿ ಅದರ ಅಳವಡಿಕೆ ವೆಚ್ಚ ಅವರಿಂದಲೇ ಹೈ ಮಾಸ್ಕ್ ದೀಪದ ಜೊತೆ ಸೇರಿಸುವಂತೆ ಮಾಡಬೇಕು.
4. ಒಂಟಿ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಒಳ್ಳೆಯ ತಳಿಯ ನಾಯಿಗಳನ್ನು ಸಾಕಲು ಪೋಲಿಸ್ ಇಲಾಖಾ ಅಧಿಕಾರಿಗಳು ಜನಸ್ಪಂದನಾ ಸಭೆಗಳ ಮೂಲಕ ಪ್ರೇರೇಪಿಸಬೇಕು.
5. ಮಲೆನಾಡಿನಲ್ಲಿ ವಯಸ್ಸಾದ ತಂದೆ ತಾಯಿಗಳನ್ನು ಬಿಟ್ಟು ಪಟ್ಟಣಗಳಲ್ಲಿ ಉದ್ಯೋಗ ಮಾಡುವ ಮಕ್ಕಳಿಗೆ ಪೋಲಿಸ್ ಇಲಾಖೆ ಸಿಸಿ ಕ್ಯಾಮೆರಾ ಅಳವಡಿಸಿ ಅವರ ಸೆಲ್ ಫೋನ್ ಗಳಲ್ಲಿ ಮಾನಿಟರಿಂಗ್ ಮಾಡುವ ಬಗ್ಗೆ ಏನಾದರೂ ಅಪಾಯವಾದರೆ ತಕ್ಷಣ ಯಾರನ್ನ ಸಂಪರ್ಕಿಸಬೇಕೆಂಬ ಮಾಹಿತಿ ಸಾಮಾಜಿಕ ಜಾಲ ತಾಣದ ಮೂಲಕ ಪೋಲಿಸ್ ಪ್ರಕಟನೆಗಳು ನಿರಂತರವಾಗಿ ನೀಡುತ್ತಿರಲಿ.
6. ಮಲೆನಾಡಿನ ಹಳ್ಳಿಗಳಲ್ಲಿ ಆಸಕ್ತ ಯುವ ಜನಾಂಗದವರಿಗೆ ತರಬೇತಿ ನೀಡಿ ಗ್ರಾಮ ರಕ್ಷಕ ಪಡೆ ರಚಿಸಿ ಸ್ಥಳಿಯ ಪೋಲಿಸರಿಗೆ ಸಹಕರಿಸಲು, ಗುಪ್ತ ಮಾಹಿತಿ ಹಂಚಿಕೊಳ್ಳುವ ಮೂಲಕ ಅನೇಕ ಅನುಕೂಲ ಪೋಲಿಸ್ ಇಲಾಖೆ ಪಡೆಯಬಹುದು ಸಾಂಗ್ಲಿಯಾನ ಸಾಗರ ತಾಲ್ಲೂಕಿನಲ್ಲಿ ಅವರ ಅವದಿಯಲ್ಲಿ ಇದನ್ನು ಮಾಡಿದ್ದರು.
7. ಪೋಲಿಸ್ ಇಲಾಖೆ ಬಂದೂಕು ತರಬೇತಿ ನೀಡಿ ಒಂಟಿ ಮನೆಗಳಿಗೆ ಸುಲಭವಾಗಿ ಗನ್ ಹೊಂದಲು ಗನ್ ಲೈಸೆನ್ಸ್ ಕೊಡಿಸಬೇಕು.
8. ಚುನಾವಣೆಗಳಲ್ಲಿ ಬಂದೂಕು ಪೋಲಿಸ್ ಇಲಾಖೆಗೆ ಸರೆಂಡರ್ ಮಾಡುವ ಅವೈಜ್ಞಾನಿಕ ಆದೇಶ ಹಿಂಪಡೆಯಬೇಕು.
ಇದಕ್ಕೆಲ್ಲ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲವಾದ್ದರಿಂದ ಜಿಲ್ಲೆಯವರೇ ಆದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ಅವರು ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ.
ಇತಿ ವಿಶ್ವಾಸಗಳೊಂದಿಗೆ.
ಕೆ.ಅರುಣ್ ಪ್ರಸಾದ್
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ
Comments
Post a Comment