Blog number 1303. ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿ ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪರು ಕಂಡ ಕನಸು ಸಾಗರದ ಸಾಗರ್ ಹೋಟೆಲ್ ಸರ್ಕಲ್ ನಲ್ಲಿ ಸಾಗರದ ಪ್ರಥಮ ಶಾಸಕ, ಐತಿಹಾಸಿಕ ಕಾಗೋಡು ಭೂ ಹೋರಾಟದ ನೇತಾರ ಶಾಂತವೇರಿ ಗೋಪಾಲಗೌಡರ ಕಂಚಿನ ಪ್ರತಿಮೆ ನಿರ್ಮಿಸುವುದು, ಈ ಬಗ್ಗೆ ಭರವಸೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಶಾಸಕ ಹರತಾಳು ಹಾಲಪ್ಪ ಹಾಗೂ ಈ ಬಗ್ಗೆ ಪ್ರಸ್ತಾವನೆ ಮಾಡಿದ ಪಿ. ಪುಟ್ಟಯ್ಯನವರಿಗೆ ಅಭಿನಂದನೆಗಳು
#ಸಾಗರದಲ್ಲಿ_ಶನಿವಾರ_ನಡೆದ_ಜನ್ಮಶತಮಾನೋತ್ಸವದಲ್ಲಿ
#ಹಿರಿಯ_ಸಮಾಜವಾದಿ_ಪ್ರಕೃತಿಮುದ್ರಣ_ಪುಟ್ಟಯ್ಯ_ಶಾಂತವೇರಿ_ಗೋಪಾಲಗೌಡರ_ಪ್ರತಿಮೆ_ಸ್ಥಾಪಿಸಲು_ಪ್ರಸ್ತಾವಿಸಿದರು.
#ಈ_ಪ್ರತಿಮೆ_ಆಗಿನ_ಸಮಾಜವಾದಿಗಳ_ಸಾಗರ್_ಹೋಟೆಲ್_ಸರ್ಕಲನಲ್ಲಿ_ಸ್ಥಾಪಿಸಲು.
#ಇದಕ್ಕಾಗಿ_ಪ್ರಥಮ_ದೇಣಿಗೆ_ಒಂದು_ಸಾವಿರ_ರೂಪಾಯಿ_ಜಯಂತರಿಗೆ_ನೀಡಿದ್ದಾರೆ
#ಗೃಹ_ಸಚಿವ_ಆರಗಜ್ಞಾನೇಂದ್ರ_ಸ್ಥಳಿಯ_ಶಾಸಕ_ಹರತಾಳು_ಹಾಲಪ್ಪರೊಡನೆ_ನೆರವೇರಿಸುವ_ಅಶ್ವಾಸನೆ .
ಶಾಂತವೇರಿ ಗೋಪಾಲಗೌಡರು ತೀರ್ಥಹಳ್ಳಿ ತಾಲ್ಲೂಕಿನ ಆರಗದ ಸಮೀಪದವರು ಇವರ ಬಾಲ್ಯ ಮತ್ತು ರಾಜಕಾರಣಕ್ಕೆ ಇದೇ ಊರಿನ ಸಮೀಪದ ಆರಗ ಜ್ಞಾನೇಂದ್ರರ ಬಾಲ್ಯ ಮತ್ತು ರಾಜಕಾರಣಕ್ಕೆ ಸಾಮ್ಯತೆ ಇದೆ.
ಶಾಂತವೇರಿ ಗೋಪಾಲಗೌಡರೂ ಕಾಂಗ್ರೇಸ್ ವಿರುದ್ಧದ ಸಮಾಜವಾದಿ ಪಕ್ಷ, ಬಾಲ್ಯದಲ್ಲಿ ವಿದ್ಯಾಬ್ಯಾಸ ಬಡತನದಿಂದ ಬಿಟ್ಟವರು ನಂತರ ಅವರ ಜೀವನ ಪ್ರವೇಶ ಮಾಡಿದ ಮಹಾನುಭವರ ಪ್ರೋತ್ಸಾಹದಿಂದ ವಿದ್ಯಾಬ್ಯಾಸ ಮುಂದುವರಿಸಿ ರಾಜಕಾರಣಕ್ಕೆ ಬಂದವರು.
ಇದೇ ರೀತಿ ಆರಗ ಜ್ಞಾನೇಂದ್ರರ ಬಾಲ್ಯ - ವಿದ್ಯಾಬ್ಯಾಸ ರಾಜಕಾರಣ ಮತ್ತು ಇವರದ್ದೂ ಕಾಂಗ್ರೇಸ್ ವಿರುದ್ಧದ ಬಿಜಿಪಿ ಪಕ್ಷ ಆದರೆ ಕಾಲ ಮಾತ್ರ ವ್ಯತ್ಯಾಸ.
ಶನಿವಾರ 11 - ಮಾರ್ಚ್ -2023ರಂದು ಸಾಗರದಲ್ಲಿ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮ ರೈತ ಸಂಘದ ಎನ್.ಡಿ.ವಸಂತ ಕುಮಾರ್ ಮತ್ತು ಕುಗ್ವೆ ಶಿವಾನಂದ್ ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಆರಗ ಜ್ಞಾನೇಂದ್ರ, ಕಾಗೋಡು ತಿಮ್ಮಪ್ಪ, ಸ್ಥಳಿಯ ಶಾಸಕ ಹರತಾಳು ಹಾಲಪ್ಪ ಮತ್ತು ಅನೇಕ ಶಾಂತವೇರಿ ಗೋಪಾಲಗೌಡರ ಅನುಯಾಯಿಗಳನ್ನು ಪಕ್ಷಾತೀತವಾಗಿ ಆಹ್ವಾನಿಸಿದ್ದರು.
ಇದು ಸಾಗರದಲ್ಲಿ ನಡೆದದ್ದು ಚಾರಿತ್ರಿಕವಾಗಿ ಅತ್ಯಂತ ಒಳ್ಳೆಯ ಕಾರ್ಯಕ್ರಮ ಕಾರಣ ಉಳುವವನೇ ಹೊಲದೊಡೆಯ ಎಂಬ ಘೋಷಣೆಯೊಂದಿಗೆ ಕಾಗೋಡಿನಲ್ಲಿ ಪ್ರಾರಂಬಿಸಿದ ಚಳವಳಿಯ ರೂವಾರಿ ಹೆಚ್.ಗಣಪತಿಯಪ್ಪರ ಕಾಗೋಡು ಭೂ ಹೋರಾಟಕ್ಕೆ ಸಮಾಜವಾದದ ಚೌಕಟ್ಟಿನಲ್ಲಿ ಹೋರಾಟವನ್ನು ರಾಷ್ಟ್ರ ಮಟ್ಟಕ್ಕೆ ಒಯ್ದವರು ಶಾಂತವೇರಿ ಗೋಪಾಲಗೌಡರು ಅವರು ಕಾಗೋಡು ಹೋರಾಟದ ನೇತಾರರು.
ರಾಮಮನೋಹರ ಲೋಹಿಯಾ ಈ ಚಳವಳಿಯಲ್ಲಿ ಭಾಗವಹಿಸಿ ಸಾಗರ ರೈಲು ನಿಲ್ದಾಣದಲ್ಲಿ ಬಂದನಕ್ಕೆ ಒಳಗಾದದ್ದು ಇದರಿಂದಲೇ ಕಾಗೋಡು ಹೋರಾಟ ತಾತ್ವಿಕ ಸುಖಾಂತ್ಯ ಕಾಣುತ್ತದೆ.
ಜಯಪ್ರಕಾಶ್ ನಾರಾಯಣ್ ದಂಪತಿಗಳು, ಜಾರ್ಜ್ ಪನಾ೯೦ಡೀಸ್, ಖಾದ್ರಿ ಶಾಮಣ್ಣ, ಜೆ.ಹೆಚ್.ಪಟೇಲ್ ಇನ್ನೂ ಅಸಂಖ್ಯಾತ ನಾಯಕರುಗಳು ಈ ಹೋರಾಟ ಬೆಂಬಲಿಸಿ ಸಾಗರಕ್ಕೆ ಬಂದಿದ್ದು ಇತಿಹಾಸ.
ಈ ಸಂದರ್ಭದಲ್ಲಿಯೇ 1952 ರಲ್ಲಿ ಸ್ವಾತಂತ್ರ್ಯ ನಂತರದ ಮೊದಲ ವಿಧಾನಸಭಾ ಚುನಾವಣೆಯಲ್ಲಿ (ಸಾಗರ - ಹೊಸನಗರ- ತೀರ್ಥಹಳ್ಳಿ ಸೇರಿ ಒಂದು ಕ್ಷೇತ್ರ) ಸಮಾಜವಾದಿ ಪಕ್ಷದಿಂದ ಶಾಂತವೇರಿ ಗೋಪಾಲಗೌಡರು ಕಾಂಗ್ರೇಸ್ ಪಕ್ಷದ
ಆನಂದಪುರ೦ನ ಎ.ಆರ್. ಬದರಿನಾರಾಯಣ ಆಯ್ಯ೦ಗಾರರನ್ನು ಸೋಲಿಸಿ ಶಾಸಕರಾದವರು ಆದ ಕಾರಣ ಸಾಗರ ಶಾಂತವೇರಿ ಗೋಪಾಲಗೌಡರ ಕರ್ಮಭೂಮಿ ಆಗಿರುವುದರಿಂದ ಈ ನೆಲದಲ್ಲಿ ಅವರ ಸ್ಮರಣೆಗೆ ವಿಶೇಷ ಅರ್ಥವಿದೆ.
ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ನನಸಾಗದ ಕನಸುಗಳಲ್ಲಿ ಸಾಗರ - ಹೊಸನಗರದಲ್ಲಿ ಶಾಂತವೇರಿ ಗೋಪಾಲಗೌಡರ ಕಂಚಿನ ಪ್ರತಿಮೆ ಸ್ಥಾಪಿಸುವ ಮಹಾದಾಸೆ 70 ವಷ೯ದಿಂದ ಈಡೇರಿಲ್ಲ.
ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಹೋರಾಟದಲ್ಲಿ ಅದರ ಪ್ರಭಾವಳಿಯಲ್ಲಿ ಶಾಸಕರು, ಮಂತ್ರಿಗಳು ಮುಖ್ಯಮಂತ್ರಿಗಳು ಆದವರು ನಮ್ಮ ಜಿಲ್ಲೆಯ ಕಾಗೋಡು ತಿಮ್ಮಪ್ಪ, ಜೆ.ಹೆಚ್.ಪಟೇಲ್, ಬಂಗಾರಪ್ಪ ಇವರೆಲ್ಲ ಯಾಕೋ ಮನಸ್ಸು ಮಾಡಲೇ ಇಲ್ಲ.
ಸಾಗರದ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವದ ಅತಿಥಿಗಳಾಗಿದ್ದ ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯನವರು ಸಭೆಗೆ ಹೋಗುವ ಮೊದಲು ಪೋನ್ ಮಾಡಿದ್ದರು ಅವರಿಗೆ ನಾನು ಈ ಸಭೆಯಲ್ಲಿ ಶಾಂತವೇರಿ ಗೋಪಾಲಗೌಡರ ಪ್ರತಿಮೆ ಸ್ಥಾಪನೆಯ ಪ್ರಸ್ಥಾಪನೆ ಮಾಡಲು ವಿನಂತಿಸಿದ್ದೆ ಅದಕ್ಕೆ ಪುಟ್ಟಯ್ಯನವರು ಅದನ್ನೆಲ್ಲ ನಿರೀಕ್ಷಿಸಲು ಸಾಧ್ಯವಾ? ಎಂಬ ಅನುಮಾನ ವ್ಯಕ್ತಪಡಿಸಿದರು, ಏನಾದರಾಗಲಿ ಪ್ರಸ್ತಾವನೆ ಆಗಲಿ ಅಂದಿದ್ದೆ.
ಸಂಜೆ ಪುಟ್ಟಯ್ಯನವರು ಹೇಳಿದ್ದು ಅವರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರರ ಪಕ್ಕದಲ್ಲೇ ಸಂಘಟಕರು ಆಸನ ವ್ಯವಸ್ಥೆ ಮಾಡಿದ್ದರಿಂದ ಸಚಿವರಿಗೇ ತಮ್ಮ ಪ್ರಸ್ತಾವನೆ ಹೇಳಿದಾಗ ಆರಗ ಜ್ಞಾನೇಂದ್ರ ಸಹಮತ ಸೂಚಿಸಿ ಸ್ಥಳಿಯ ಶಾಸಕರ ಜೊತೆ ಚರ್ಚಿಸಿ ಕಾರ್ಯರೂಪಕ್ಕೆ ತರುವ ಭರವಸೆ ನೀಡಿದರಂತೆ ಇದರಿಂದ ಪ್ರೇರೇಪಿತರಾದ ಪುಟ್ಟಯ್ಯನವರು ಸಾಗರ ತಾಲ್ಲೂಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಮತ್ತು ಶಾಂತವೇರಿ ಗೋಪಾಲಗೌಡರ ಕಿರಿಯ ಒಡನಾಡಿ ಬಿ.ಆರ್.ಜಯ೦ತ್ ಹಸ್ತ ತಮ್ಮ ಪ್ರಥಮ ದೇಣಿಗೆ ಆಗಿ ಒಂದು ಸಾವಿರ ನೀಡಿದಾಗ, ಪ್ರತಿಮೆಯ ನಿರ್ಮಾಣದ ಭರವಸೆಯನ್ನು ಆರಗ ಜ್ಞಾನೇಂದ್ರರು ತಮ್ಮ ಸಭಾ ಬಾಷಣದಲ್ಲಿ ಘೋಷಣೆ ಮಾಡಲು ಪುಟ್ಟಯ್ಯರ ವಿನಂತಿಗೆ ಒಪ್ಪಿದ್ದರಂತೆ ಆದರೆ ಅವರು ತಮ್ಮ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪ ಮಾಡಲು ಮರೆತು ಭಾಷಣ ಮುಗಿಸಿ ಪುಟ್ಟಯ್ಯರ ಪಕ್ಕದಲ್ಲಿ ಅಸೀನರಾದಾಗ ಪುಟ್ಟಯ್ಯನವರು ಇದನ್ನು ಜ್ಞಾಪಿಸಿದಾಗ ಪುನಃ ವೇದಿಕೆಗೆ ಹೋಗಿ ಮೈಕ್ ನಲ್ಲಿ ಗೃಹ ಮಂತ್ರಿ ಜ್ಞಾನೇಂದ್ರರು ಘೋಷಣೆ ಮಾಡಿದ್ದಾರೆ "ನಾನು ಮತ್ತು ಸ್ಥಳಿಯ ಶಾಸಕರಾದ ಹರತಾಳು ಹಾಲಪ್ಪನವರು ಸೇರಿ ಸಾಗರದಲ್ಲಿ ಶಾ೦ತವೇರಿ ಗೋಪಾಲಗೌಡರ ಕಂಚಿನ ಪ್ರತಿಮೆ ಸಾಗರದ ಸಾಗರ್ ಹೋಟೆಲ್ ಸರ್ಕಲ್ ನಲ್ಲಿ ನಿರ್ಮಿಸುತ್ತೇವೆ" ಅಂತ.
ಸಾಗರದ ಪ್ರಥಮ ಶಾಸಕ, ಕಾಗೋಡು ಭೂ ಹೋರಾಟದ ಚಳವಳಿಯ ನೇತಾರ, ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಪ್ರತಿಮೆಯ ಸ್ಥಾಪಿಸುವ ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪರ ಕನಸು ನನಸು ಮಾಡುವ ಭರವಸೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಶಾಸಕ ಹರತಾಳು ಹಾಲಪ್ಪನವರನ್ನು ಮತ್ತು ಈ ಪ್ರಸ್ತಾವನೆ ಮಾಡಿದ ಹಿರಿಯ ಸಮಾಜವಾದಿ ಪಿ.ಪುಟ್ಟಯ್ಯನವರನ್ನು ಸಾಗರ ತಾಲೂಕಿನ ಸಮಸ್ತ ಜನರ ಪರವಾಗಿ ಅಭಿನಂದಿಸುತ್ತೇನೆ.
ಸಾಗರದಲ್ಲಿ ನಡೆದ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವದಲ್ಲಿ ಘೋಷಣೆ ಆಗಿರುವ ಭರವಸೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ.
ಶಾಂತವೇರಿ ಗೋಪಾಲಗೌಡರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಳೆದ ವಷ೯ ಬರೆದ ನನ್ನ ಬ್ಲಾಗ್ ಲಿಂಕ್ ಕ್ಲಿಕ್ ಮಾಡಿ.
https://arunprasadhombuja.blogspot.com/2022/03/14.html?m=1
Comments
Post a Comment