Blog number 1317. ಭಾರತದಲ್ಲಿ ಮೊದಲ ಬಾರಿಗೆ ಪ್ರದಾನ ಮಂತ್ರಿ ಲಾಕ್ ಡೌನ್ ಘೋಷಿಸಿ ಇದೇ 24- ಮಾರ್ಚ್ -2023ಕ್ಕೆ ಮೂರು ವರ್ಷಗಳಾಯಿತು ಅವತ್ತಿನ ದಿನಗಳ ಕಷ್ಟ-ನಷ್ಟ - ದುಖಃ ಗಳ ನೆನಪು
#ಒಂದೂವರೆ_ಸಾವಿರ_ಕೀಲೋ_ಮೀಟರ್_ಟಾಪ೯ಲ್
#ಮುಚ್ಚಿದ_ಲಾರಿಯಲ್ಲಿ_ಕಳೆದ_ವರ್ಷ_ಕೊರೋನೊ
#ಬೀತಿಯಿಂದ_ಕಷ್ಟಪಟ್ಟು_ಊರು_ಸೇರಿದವರ_ನಿಜಕಥೆ
ಇವರೆಲ್ಲ ನಮ್ಮ ಲಾಡ್ಜ್ ಕಟ್ಟಡದಲ್ಲಿ ಗ್ರಾನೈಟ್ ಕೆಲಸ ಮಾಡಲು ಬಂದವರು, ಈ ಕೆಲಸದ ಗುತ್ತಿಗೆ ಹಿಡಿದ ಮೊಹರ್ ಸಿಂಗ್ ಮಾರ್ಚ್ ನಲ್ಲಿ ಲಾಕ್ ಡೌನ್ ಆದಾಗ ಭಯ ಪಟ್ಟಾಗ ನಾನು ದೈಯ೯ ಹೇಳಿದ್ದೆ, ಹುಷಾರಾಗಿರಿ ಆರೋಗ್ಯ ಕಾಪಾಡಿಕೊಳ್ಳಿ ಅಂತ.
ಆದರೆ ಇವರ ಊರುಗಳಿಂದ ಹೇಗಾದರೂ ಮಾಡಿ ಊರು ತಲುಪಿ ಅಂತ ರೋದಿಸುತ್ತಿದ್ದ ಕುಟುಂಬದವರ ಒತ್ತಾಯದಿಂದ ಕೆಲವರು ಲಾರಿಗಳಲ್ಲಿ ಹೋಗಿ ಅರ್ಧ ದಾರಿಯಲ್ಲಿ ಸಿಕ್ಕು ಬಿದ್ದು ಕೊರಾ೦ಟೈಯಿನ್ ಆಗಿದ್ದ ಉದಾಹರಣೆ ಇತ್ತು.
ಕಳೆದ ವರ್ಷ ಏಪ್ರಿಲ್ 6ಕ್ಕೆ ಮೊಹಾರ್ ಸಿಂಗ್ ತನ್ನ ಕೆಲಸದ ಲೆಖ್ಖ ಮಾಡಿಸಿ ಬಾಕಿ 20 ಸಾವಿರ ಅವತ್ತೇ ಬೇಕು ಅಂತ ಅವಸರಿಸಿದ ಯಾಕೆಂದು ಕೇಳಿದಾಗ ಕೆಲಸದ ಹುಡುಗರು ಇವತ್ತು ಊರಿಗೆ ಹೋಗುತ್ತಾರೆಂದು ಗುಟ್ಟಾಗಿ ಹೇಳಿದ! ಅರೆ ಈಗ ರೈಲಿಲ್ಲ ಬಸ್ಸು ಇಲ್ಲ ಹೇಗೆ ಸಾಧ್ಯ? ಅಂದೆ ಅದಕ್ಕೆ ತಮ್ಮ ಊರಿನ ಲಾರಿ ಒಂದು ಶಿವಮೊಗ್ಗದಿಂದ ರಾತ್ರಿ ಹೊರಡುತ್ತೆ ತಲಾ ನಾಲ್ಕು ಸಾವಿರದಂತೆ ಪಾವತಿ ಮಾಡಿದ ಸುಮಾರು 80 ಜನ ಹೋಗುತ್ತಾರೆ ಅಂದ, ನಾನು ಹಣ ನೀಡಿ "ನೀನು ಮಾತ್ರ ಹೋಗಬೇಡ " ಅಂದೆ ಇಲ್ಲ ತಾನು ಹೋಗುವುದಿಲ್ಲ ಉಳಿದ ಕೆಲಸ ಮುಗಿಸಿಯೇ ಹೋಗುತ್ತೇನೆ ಅಂದಿದ್ದ.
ನಂತರ 15 ದಿನ ಮೊಹರ್ ಸಿಂಗ್ ಬರಲೂ ಇಲ್ಲ, ಪೋನಿಗೂ ಸಿಗಲಿಲ್ಲ ನಂತರ ಒ0ದು ದಿನ ಮೊಹರ್ ಸಿಂಗ್ ಪೋನ್ ಮಾಡಿದಾಗ ಯಾಕೆ ಕೆಲಸಕ್ಕೆ ಬಂದಿಲ್ಲ ಅಂದಾಗ ಸಿಂಗ್ ಹೇಳಿದ್ದು ತಾವೆಲ್ಲರೂ 80 ಜನ ಲಾರಿಯಲ್ಲಿ ಊರು ಮುಟ್ಟಿದ್ದೇವೆ ಅಂದಾಗಲೇ ಗೊತ್ತಾಯಿತು ಗ್ರಾನೈಟ್ ಗುತ್ತಿಗೆದಾರನೂ ಕೆಲಸಗಾರರ ಜೊತೆ ಲಾರಿಯಲ್ಲಿ ಊರಿಗೆ ತಲುಪಿದ್ದು.
ಈಗೆಲ್ಲ ಬಂದಿದ್ದಾರೆ ಕೆಲಸ ಪ್ರಾರಂಬಿಸಿದ್ದಾರೆ ಪುನಃ ಎರಡನೇ ಕೊವಿಡ್ ಅಲೆ ಪ್ರಾರಂಭ ಆಗಿದೆ ಆದರೆ ಅವತ್ತಿನ ಭಯ ಆತಂಕ ಇಲ್ಲ.
Comments
Post a Comment