Blog number 1318. ನನ್ನ ಮನಸ್ಸಲ್ಲಿ ಹೆಚ್ಚು ಕಾಡುವ ಈ ಪುಸ್ತಕ ಖ್ಯಾತ ಲೇಖಕ ಅರವಿಂದ ಚೊಕ್ಕಾಡಿ ಅವರು ಅವರ ತಂದೆಯನ್ನು ಕೇಂದ್ರವಾಗಿಸಿ ಬರೆದ "ಇಲ್ಲದ ತೀರದಲ್ಲಿ" ಸಂವೇದನೆಯ ಸಂವಾದ
#ಅರವಿಂದಚೊಕ್ಕಾಡಿಯವರಇಲ್ಲದತೀರದಲ್ಲಿಕೃತಿ
ಇವರ ಅಜ್ಜನಿಗೆ ಹುಟ್ಟಿನಿ೦ದ ಬ್ರಾಹ್ಮಣಿಕೆ ಬರುತ್ತೆ ಎಂಬ ನಂಬಿಕೆ,
ಇವರ ತಂದೆಗೆ ಕಮ೯ದಿOದ ಬರುತ್ತೆ ಎಂಬ ನಂಬಿಕೆ, ಇವರಿಗೆ ಒಳ್ಳೆಯ ಮನುಷ್ಯನಾಗಿ ಬದುಕಲು ಜಾತಿ ಆಗತ್ಯವಿಲ್ಲ ಎಂಬ ನಂಬಿಕೆ.
"ಇಲ್ಲದ ತೀರದಲ್ಲಿ"ಕೃತಿ ಕನಾ೯ಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ ಪಡೆದ ಕೃತಿ, ಇವರ ತಂದೆ ಬದುಕಿನೊಂದಿಗಿನ ಸಂವಾದ ಈ ಪುಸ್ತಕ, ಈ ಪುಸ್ತಕ ಖರೀದಿಸಲು ಆಸಕ್ತಿ ಇದೆ ಅಂದಾಗ ಅರವಿ೦ದವರು ನಾಕಾರು ಪ್ರತಿ ತಮ್ಮ ಹತ್ತಿರ ಇದೆ, ಹಣ ಪಡೆಯುವುದಿಲ್ಲ ವಿಳಾಸ ಕಳಿಸಿ ಕಳಿಸುತ್ತೇನೆ ಅಂದಿದ್ದರು.
ಪೇಸ್ ಬುಕ್ನಲ್ಲಿ ಗೆಳೆಯರಾದ ಅರವಿಂದ ಚೊಕ್ಕಾಡಿಯವರು ಸಾಹಿತಿಗಳು, ವಾಗ್ಮಿಗಳು, ತರಬೇತಿದಾರರು. ಇವರ ತಕ೯ ಬದ್ದ ಚಚೆ೯ಗಳು ನನಗಿಷ್ಟ.
ಪುಸ್ತಕ ಕಳಿಸುವಾಗ ಈ ಪುಸ್ತಕ ಓದಿ ವಿಮಷೆ೯ ಮಾಡಬೇಕಾಗಿಲ್ಲ, ಓದದೇ ಇದ್ದರೂ ನನಗೆ ಬೇಸರ ಇಲ್ಲ, ಓದಲಿಲ್ಲ ಅಂತ ನಾಚಿಕೆ ಮಾಡಿಕೊಳ್ಳಬೇಕಾಗಿಯೂ ಇಲ್ಲ ಎಂಬ ಅಥ೯ದಲ್ಲಿ ಬರೆದಿದ್ದರು.
ಇಡೀ ಪುಸ್ತಕ ಪ್ರತಿಯೊಬ್ಬನ ಜೀವನದ ಒಂದಲ್ಲ ಒಂದು ಘಟನೆಯ ತಳುಕಿದೆ ಆದರೆ ಇಡೀ ಜೀವನದ ಘಟನೆಗಳನ್ನ ತಕ೯ ಬದ್ದವಾಗಿ ಇದ್ದದ್ದು ಇದ್ದ೦ತೆ ಕಪ್ಪು ಬಿಳುಪಿನಲ್ಲಿ ಇವರ ರೀತಿ ಬರೆಯುವ ಕ್ರಮ, ದೈಯ೯ ಮತ್ತು ನೇರವ೦ತಿಕೆ ಎಲ್ಲರಲ್ಲೂ ಇರಲು ಸಾಧ್ಯವಿಲ್ಲ.
"ಅಪ್ಪ ಅಮ್ಮ ನಮಗೆ ಯಾವ ಸಂಪತ್ತನ್ನು ಮಾಡಿ ಕೊಡಬೇಕಾಗಿಲ್ಲ, ನಾವೇ ಅವರು ಮಾಡಿದ ಬಹಳ ದೊಡ್ಡ ಸಂಪತ್ತು ಅದನ್ನ ಉಳಿಸಿಕೊಳ್ಳಬೇಕು" ಎಂಬುದು ನನಗೆ ತುಂಬಾ ಹಿಡಿಸಿತು.
ಅಂತರ್ ಜಾತಿ ವಿವಾಹ, ಬಡತನ, ಅಪ್ಪ ಅಮ್ಮರ ಬಿನ್ನಾಭಿಪ್ರಾಯ, ಬ್ರಾಹ್ಮಣರು ಇವರನ್ನ ಬ್ರಾಹ್ಮಣೆತರಾಗಿ ನಡೆಸಿಕೊಂಡಿದ್ದು, ತಾಯಿ ಬೆಂಡೋಲೆಯನ್ನ ಅಡವಿರಿಸಿ ಹಣ ಸಾಲ ನೀಡುವ ಮಾವಂದಿರ ಕಠೋರತನಗಳು, ಬದುಕಿಸುವ ಶಕ್ತಿ ವೈದ್ಯರು ತಮಗೇ ಇಲ್ಲ ಎಂದು ಒಪ್ಪಿಕೊಳ್ಳುವ ಎಲ್ಲಾ ವೈಚಾರಿಕ ತಕ೯ದ ಸ್ವ೦ತ ಅನುಭವದ ಈ ಪುಸ್ತಕ ಒಂದು ಅದ್ಬುತ ಅನುಭವ ನೀಡುತ್ತದೆ.
136 ಪುಟದ ಈ ಪುಸ್ತಕ ಓದಲು ಹೆಚ್ಚು ಸಮಯ ತೆಗೆದುಕೊಂಡು ಓದಿದೆ, ಕಣ್ಣಾಲಿಗಳು ನೀರಾಗಿ.
(ಈಗ ಈ ಪುಸ್ತಕ ಪುನರ್ ಮುದ್ರಣವಾಗಿ ಓದುಗರಿಗೆ ಸಿಗುತ್ತಿದೆ,For ಇಲ್ಲದ ತೀರದಲ್ಲಿ Please Pay Rs150 to Canara bank current a/c no 1512201000539__ROOPA PRAKASHANA----IFSC--CNRB0001512---KUVEMPU NAGARA BRANCH MYSURU & inform to me with address.thanks
Or Goggle pay 93422 74331)
Comments
Post a Comment