Blog number 1308. ಪಿಳ್ಳೆ ಯಾನೆ ಮಂಜಪ್ಪ ನನ್ನ ಜಿಲ್ಲಾ ಪಂಚಾಯತ್ ಸದಸ್ಯಾವದಿಯಲ್ಲಿ ಕಡಿದಾಳು ಶಾಮಣ್ಣರಿಂದ ಪ್ರೇರಿತನಾಗಿ ನಿರ್ಮಿಸಿದ ಶೌಚಾಲಯದ ಮೊದಲ ಪಲಾನುಭವಿ
#ಒಂದು_ಕಾಲದ_ಭೂಮಾಲಿಕರಾದ_ಬಸವನಕೊಪ್ಪದ_ಚನ್ನವೀರಪ್ಪಗೌಡರ_ಶಿಷ್ಯ
#ಕಡಿದಾಳು_ಶಾಮಣ್ಣರ_ಪ್ರೇರಣೆಯ_ಶೌಚಾಲಯದ_ಮೊದಲ_ಪಲಾನುಭವಿ.
ಪಿಳ್ಳೆ ಅಂದರೆ ಮಾತ್ರ ಜನ ಗುರುತಿಸುವ ಆಚಾಪುರದದ ಮಂಜಪ್ಪ ಕಾಡಿನ ಎಲ್ಲಾ ಮಾಹಿತಿ ಇರುವ ನಮ್ಮ ಹಳ್ಳಿ ವಿಜ್ಞಾನಿ, ಒಂದು ಕಾಲದಲ್ಲಿ ಅಂದರೆ 1970 ರ ದಶಕದಲ್ಲಿ ನಮ್ಮ ಭಾಗದ ಪ್ರಸಿದ್ಧ ಭೂಮಾಲಿಕರಾಗಿದ್ದ ಅನ್ನದಾನಿ ಬಸವನಕೊಪ್ಪದ ಚನ್ನವೀರಪ್ಪ ಗೌಡರ ಪಟ್ಟದ ಶಿಷ್ಯ ಆಗಿದ್ದಾತ.
ಅವರ ಕೊಟ್ಟಿಗೆಯಲ್ಲಿನ ನೂರಾರು ದನ, ಎಮ್ಮೆಗಳು ಕಾಯುವ ಗೋಪಾಲ ವೃತ್ತಿ ಪಿಳ್ಳೆಯದು.
ಕಾಡಿನ ನ್ಯಾಯ ಮತ್ತು ಪರಿಸರ ವಿಜ್ಞಾನ ರಕ್ತಗತವಾಗಿ ಸಂಪೂಣ೯ವಾಗಿ ಪಿಳ್ಳೆಗೆ ಬಾಲ್ಯದಲ್ಲೇ ಕರತಲಾಮಲಕ ಆಗಿದೆ, ಗಿಡಗಂಟಿ ಯಿಂದ ದೊಡ್ಡ ಅರಣ್ಯದ ಮರ ಮಟ್ಟುಗಳ ಅಪಾರ ಜ್ಞಾನ ಪಿಳ್ಳೆಗೆ ಇದೆ ಆದರೆ ಅದು ಅವರಿಗೆ ವಿಶೇಷ ಅನ್ನಿಸಿಲ್ಲ.
ಮೊನ್ನೆ ಪಿಳ್ಳೆ ಸಿಕ್ಕಿದಾಗ ವಯಸ್ಸು ಎಷ್ಟಾಯಿತೆಂದರೆ 50 ಅಂದರು, ದೊಡ್ಡ ಮಗಳು ಮದುವೆ ಆಗಿದೆ, ಮಗ ಬಸ್ ಡ್ರೈವರ್ ಆಗಿದ್ದಾನೆ, ಸಣ್ಣ ಮಗಳು ನಸ್೯ ಆಗಿದ್ದ ಬಗ್ಗೆ ತಿಳಿಸಿದರು ಆದರೆ ನನಗಿ೦ತ ಪಿಳ್ಳೆ ದೊಡ್ಡವರು ಈಗ ನನಗೇ 56 ವರ್ಷ.
1995 ರಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗ ಕಡಿದಾಳು ಶಾಮಣ್ಣರಿಂದ ನಮ್ಮ ಊರಿನ ಕನ್ನಡ ಸಂಘದ ಆವರಣದಲ್ಲಿ ನಾ.ಡಿಸೋಜ ಬಯಲು ರಂಗಮಂದಿರ ಉದ್ಘಾಟನೆ ಮಾಡಿಸಿದ್ದೆ ಆ ದಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುವ ಮೊದಲು ಕಡಿದಾಳು ಶಾಮಣ್ಣ ಮತ್ತು ನಾ.ಡಿಸೋಜ ದಂಪತಿಗಳು ನನ್ನ ಮನೆಗೆ ಬಂದಿದ್ದರು ಆಗ ಕಡಿದಾಳು ಶಾಮಣ್ಣ ಹಳ್ಳಿಗಳಲ್ಲಿ ಶೌಚಾಲಯದ ಅನಿವಾರ್ಯತೆ ಬಗ್ಗೆ ಮತ್ತು ಇದರಲ್ಲಿ ಅವರ ಪ್ರಯೋಗ ಅದಕ್ಕಾಗಿ ಅವರು ಒಂದು ಘೋಷಣೆ ಕೂಡ ಪ್ರಚಾರ ಮಾಡಿದ್ದು ಚಹಾ ಕುಡಿಯುತ್ತಾ ರಸವತ್ತಾಗಿ ಹೇಳುತ್ತಿದ್ದನ್ನು ನಾನು ಮತ್ತು ನಾ.ಡಿಸೋಜರು ಆಸಕ್ತಿಯಿಂದ ಕೇಳಿದ್ದೆವು.
ಇಲ್ಲಿ ಕ್ಲಿಕ್ ಮಾಡಿ ನಾ.ಡಿಸೋಜ ಬಯಲು ರಂಗಮಂದಿರದ ಲೇಖನ ಓದಬಹುದು https://arunprasadhombuja.blogspot.com/search?q=%E0.
ಕಡಿದಾಳು ಶಾಮಣ್ಣರ ಈ ಹಳ್ಳಿಗಳಲ್ಲಿ ಶೌಚಾಲಯ
ನಿಮಿ೯ಸುವ ವಿಚಾರದಿಂದ ಪ್ರೇರೇಪಿತನಾಗಿ ಅವರ ಘೋಷಣೆ "ಮೊದಲು ಶೌಚಾಲಯ ಅಮೇಲೆ ದೇವಾಲಯ" ದಂತೆ ನಮ್ಮ ಆನಂದಪುರಂ ಹೋಬಳಿಯ ಆಚಾಪುರದ ಪಿಳ್ಳೆಯ ಕಾಲೋನಿಯಲ್ಲಿ ಶೌಚಾಲಯ
ನಿರ್ಮಾಣ ಮಾಡಿಸಿದೆ ಆಗ ಈಗಿನಂತ ಶೌಚಾಲಯ ನಿರ್ಮಾಣಕ್ಕೆ 1995 ರಲ್ಲಿ ಯಾವುದೇ ಯೋಜನೆ ಇರಲಿಲ್ಲ ಮತ್ತು ಅನುದಾನ ಇರಲಿಲ್ಲ.
ನಾನು ಶೇಕಡಾ 18 ರ ನಿಧಿ ಮತ್ತು ಬೇರೆ ಯಾವುದೊ ಅನುದಾನದ ಸಹಾಯದಿಂದ ಪಿಳ್ಳೆ ಕಾಲೋನಿಯಲ್ಲಿ ಎಲ್ಲಾ ಮನೆಗೆ ಶೌಚಾಲಯ ನಿಮಿ೯ಸಿ ಕೊಟ್ಟರು ಯಾರೂ ಶೌಚಾಲಯ ಬಳಸಲಿಲ್ಲ!!? ... ಕಾರಣ ಕೇಳಿದರೆ ಎಲ್ಲರೂ ನಿರುತ್ತರ ....ಆದರೆ ಆಗ ಪಿಳ್ಳೆ ಹೇಳಿದ್ದು "ಶೌಚಾಲಯದ ಒಳಗೆ ಹೋದರೆ ವಿಸಜ೯ನೆ ಬರುವದಿಲ್ಲ" ಎಂಬ ಉತ್ತರ ಅನೇಕ ಚಚೆ೯ಗೆ ಕಾರಣ ಆಗಿತ್ತು.
Comments
Post a Comment