Blog number 1275. ಮಾವಿನಗುಂಡಿ ಪಾಲ್ಸ್ ಕಣ್ಣೆದುರಿಗೆ ಇದ್ದರೂ ಅದರ ಎತ್ತರದ ಅಳತೆ ಮಾಡಿಲ್ಲ, ಜಲಪಾತಗಳ ಪಟ್ಟಿಯಲ್ಲೂ ಸೇರಿಸಿಲ್ಲ!!, ಈ ಜಲಪಾತ ವೀಕ್ಷಣೆಗೆ ಸರಿಯಾದ ವೀವ್ ಪಾಯಿಂಟ್ ನಿರ್ಮಿಸಿಲ್ಲ, ಇದು ಎತ್ತರದಲ್ಲಿ ಜೋಗ್ ಫಾಲ್ಸ್ ಗಿಂತ 300 ಅಡಿಗಿಂತ ಹೆಚ್ಚು ಎತ್ತರವಿದೆ..... ಜೋಗ ಜಲಪಾದ ಅಭಿವೃದ್ದಿ ಪ್ರಾಧಿಕಾರ ರಚನೆ ಆಗಿ ಬೆಳ್ಳಿಹಬ್ಬ ಆಚರಿಸುವ ಹಾದಿಯಲ್ಲಿದೆ.
#ಮಾವಿನಗುಂಡಿ_ಜಲಪಾತದ_ಎತ್ತರ_ಈವರೆಗೆ_ಅಳತೆ_ಯಾಕೆ_ಆಗಲಿಲ್ಲ?
#ಜೋಗಜಲಪಾತಕ್ಕಿಂತ_300_ಅಡಿಗಿಂತ_ಹೆಚ್ಚು_ಎತ್ತರ_ಇರುವ_ಮಾವಿನಗುಂಡಿ_ಪಾಲ್ಸ್
#ಮಾವಿನಗುಂಡಿ_ಪಾಲ್ಸ್_ಕಣ್ಣೆದುರು_ಇದ್ದರೂ_ದೇಶದ_ಜಲಪಾತದ_ಪಟ್ಟಿಯಲ್ಲಿಲ್ಲ.
#ಜೋಗ್_ಅಭಿವೃದ್ಧಿ_ಪ್ರಾಧಿಕಾರಕ್ಕೂ_ಈ_ಬಗ್ಗೆ_ಮಾಹಿತಿ_ಇರುವುದು_ಅನುಮಾನ.
ರಾಜ್ಯದ ಸುಂದರವಾದ ಜೋಗ್ ಜಲಪಾತದ ಸೊಬಗನ್ನು ಸವಿಯಲು ಲಕ್ಷಾಂತರ ಪ್ರವಾಸಿಗಳು ಬರುತ್ತಾರೆ ಆದ್ದರಿಂದಲೇ ಜೋಗ್ ಅಭಿವೃದ್ಧಿ ಪ್ರಾಧೀಕಾರವನ್ನು ರಚಿಸಿ 20 ವಷ೯ವಾಯಿತು.
ಜೋಗ್ ಜಲಪಾತದ ಬಲಬಾಗದಲ್ಲಿ ಮಳೆಗಾಲದ ಜೂನ್ ತಿಂಗಳಿಂದ ನವೆಂಬರ್ ವರೆಗೆ ದುಮ್ಮಿಕ್ಕುವ ಜಲಪಾತದ ಬಗ್ಗೆ ಹೆಚ್ಚಿನ ಮಾಹಿತಿ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ದಾಖಲಾಗದಿರುವುದು ವಿಪರ್ಯಾಸ.
ಮಾವಿನಗುಂಡಿ ಪಾಲ್ಸ್ ಹೆಸರಿನ ಈ ಜಲಪಾತದ ಎತ್ತರ ಈವರೆಗೂ ಯಾರೂ ಅಳತೆ ಮಾಡಿರುವುದಿಲ್ಲ.
ಇತ್ತೀಚೆಗೆ ಈ ಜಲಪಾತದ ಡ್ರೋನ್ ಚಿತ್ರಕ್ಕಾಗಿ ತಮ್ಮ ಪರಿಚಿತರಿಗೆ ಸ್ಥಳಿಯ ಪ್ರವಾಸೋದ್ಯಮದ ಸಲಹೆಗಾರರಾದ ಅಶೋಕ್ ಹೆಗ್ಗಡೆ ಮಾವಿನಗುಂಡಿ ವಿನಂತಿಸಿ ತೆಗೆಸಿದ ಪೋಟೋಗಳಲ್ಲಿ ಮಾವಿನಗುಂಡಿ ಪಾಲ್ಸ್ ನ ಶೇಕಡಾ 35% ಭಾಗ ಗೋಚರವಾಗುವುದಿಲ್ಲ ಆ ಲೆಖ್ಖದಲ್ಲಿ ಮಾವಿನಗುಂಡಿ ಪಾಲ್ಸ್ ಎತ್ತರ ಜೋಗ್ ಜಲಪಾತಕ್ಕಿಂತ ಎತ್ತರವಿದೆ.
ಜೋಗ ಜಲಪಾತ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸರ್ಕಾರದ ಅಂಗಸಂಸ್ಥೆಯಾಗಿ ಮಾವಿನಗುಂಡಿ ಪಾಲ್ಸ್ ಎತ್ತರ ಈವರೆಗೆ ಅಳತೆ ಮಾಡಿಸದಿರುವುದು ಮತ್ತು ಮಾವಿನಗುಂಡಿ ಪಾಲ್ಸ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ದಾಖಲಿಸದಿರುವುದು ವಿಷಾದನೀಯ.
Comments
Post a Comment