#_ ಪೋಲಿಸ್ ಠಾಣೆ ಎದುರು
ಕೋಳಿ ಪಡೆ ಆಡಿಸಿ ತಮ್ಮ
ಪ್ರತಿಭಟನೆಯನ್ನ ವ್ಯಕ್ತಪಡಿಸಿದ್ದ
ಶಾಸಕ ಸ್ವಾಮಿ ರಾವ್ ವಿಭಿನ್ನ
ಮಲೆನಾಡ ಮಣ್ಣಿನ ನಿಜ
ರಾಜಕಾರಣಿ.#
ಹುಟ್ಟಿದ ಊರು ಬಿಡದ, ಕೃಷಿಯಿ೦ದಲೇ ಜೀವನ ಮಾಡುವ, ಇಳಿ ವಯಸ್ಸಲ್ಲಿಯೂ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯಕರವಾಗಿರುವ ಇಬ್ಬರು ಮಾಜಿ ಶಾಸಕರು ಜಿಲ್ಲೆಯಲ್ಲಿ ಇದ್ದಾರೆ.
ಒಬ್ಬರು ಹೊಸ ನಗರದ ಮಾಜಿ ಶಾಸಕರಾದ ಸೋನಲೆ ಎಂಬ ಗ್ರಾಮದ ವಾಸಿ ಸ್ವಾಮಿ ರಾವ್ರು ಇನ್ನೊಬ್ಬರು ಸಾಗರದ ಮಾಜಿ ಶಾಸಕರಾದ ಲಿಂಗದಳ್ಳಿ ವಾಸಿ ಎಲ್.ಟಿ. ತಿಮ್ಮಪ್ಪ ಹೆಗ್ಗಡೆಯವರು, ಬಾಕಿ ಎಲ್ಲರೂ ಬೆಂಗಳೂರೆಂಬ ಮಾಯಾ ನಗರಿಯ ಖಾಯಂ ವಾಸಿಗಳು, ಚುನಾವಣೆ ಬಂದಾಗ ಕ್ಷೇತ್ರಕ್ಕೆ ಬರುತ್ತಾರೆ, ಗೆದ್ದ ಮೇಲು ಮತದಾರನಿಗೆ ಮುಖ ತೋರಿಸಿ ಚಲಾವಣೆಯಲ್ಲಿರಲು ತಿಂಗಳಿಗೂಮ್ಮೆ ಕ್ಷೇತ್ರಕ್ಕೆ ಅತಿಥಿ ಆಗಿ ಬರುತ್ತಾರೆ.
ಸ್ವಾಮಿ ರಾವ್ ನಿಜವಾದ ಮಣ್ಣಿನ ಮಗ, ಅವರೊಮ್ಮೆ ಹೊಸನಗರ ಸಬ್ ಇನ್ಸ್ಪೆಕ್ಟರ್ ಒಬ್ಬರು ಕರಾವಳಿಯಿ೦ದ ವಲಸೆ ಬಂದವರ ಕೋಳಿ ಪಡೆ ಆಡುವವರನ್ನ ವಿಪರೀತ ಹಿಂಸೆ ಮಾಡಲು ಪ್ರಾರಂಬಿಸಿದಾಗ, ಅವರಿಗೆ ಬುದ್ಧಿ ಹೇಳಿ ಇದು ಹುಣ್ಣಿಮೆ ದಿನ ಅವರು ಬಿಡುವು ನಲ್ಲಿ ನಡೆಸೋ ಮನರಂಜನೆ ತೊಂದರೆ ಕೊಡಬೇಡಿ ಅಂದರೂ ಆ ಅಧಿಕಾರಿ ಓಸಿ, ಇಸ್ಪೀಟು, ಜುಗಾರಿಯರನ್ನ ಹಿಡಿಯದೆ ಕೋಳಿ ಪಡೆಯ ದ.ಕ.ಜಿಲ್ಲೆಯ ವಲಸಿಗ ಕೂಲಿ ಕಾಮಿ೯ಕರನ್ನ ಹಿಂಸಿಸುವುದು ನಿಲ್ಲಸಲಿಲ್ಲ ಆಗ ಶಾಸಕರಾದ ಸ್ವಾಮಿ ರಾವ್ ಹೊಸನಗರ ಠಾಣೆ ಎದುರು ಕೋಳಿ ಪಡೆ ನಡೆಸುತ್ತೇನೆ ತಾಕತ್ತಿದ್ದರೆ ನಿಲ್ಲಿಸಿ ಅಂತ ಜನರನ್ನ ಸೇರಿಸಿ ಸ್ವತಃ ಪಡೆ ಕೋಳಿ ಹಿಡಿದು ಕೋಳಿ ಪಡೆ ನಡೆಸಿದ್ದರು, ಈ ರೀತಿ ಜನ ಸಾಮಾನ್ಯರ ಅತಿ ಸಣ್ಣ ವಿಚಾರಕ್ಕೂ ಮಿಡಿಯುವ ಮನಸ್ಸಿನ ಸ್ವಾಮಿ ರಾವ್ರರ ಬಗ್ಗೆ ಸಾಹಿತಿ ಕೊಣ0ದೂರು ವೆಂಕಪ್ಪ ಗೌಡರು ಪುಸ್ತಕ ಬರೆಯುವುದಾಗಿ ಹೇಳಿದ್ದರು ನಾನು ಈ ಘಟನೆಯ ಲೇಖನ ಕಳಿಸಿದ್ದೆ, ನಂತರ ತೀಥ೯ಳ್ಳಿಯ ಮಾಜಿ ಶಾಸಕರಾದ ಪಟ ಮಕ್ಕಿ ರತ್ನಾಕರ್ ಈ ಬಗ್ಗೆ ಚಚಿ೯ಸಿದರು ಆದರೆ ವಿಧಿ ಈ ಇಬ್ಬರೂ ನಮ್ಮನ್ನ ಅಗಲಿದರಿಂದ ಈ ಪುಸ್ತಕ ವಿಳಂಭವಾಯಿತು.
ನಾನು ಇವರ ಬಗ್ಗೆ ಬರೆದ ಲೇಖನ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಪುಸ್ತಕ ಬಿಡುಗಡೆಯ ಆಮಂತ್ರಣ ಪತ್ರಿಕೆ ನೋಡಿ ಸಂತೋಷ ಆಯಿತು.
Comments
Post a Comment