https://youtu.be/E-92Ji5oxeM?feature=shared
#ಇವತ್ತು_ಶ್ರೀವರಸಿದ್ದಿ_ವಿನಾಯಕ_ಸ್ವಾಮಿ_ದೇವಾಲಯ_ಯಡೇಹಳ್ಳಿ_ಆನಂದಪುರಂನಲ್ಲಿ_ರಂಗೋಲಿ_ಸ್ಪರ್ಧೆ
#ನಾಳೆ_ಬೆಳಿಗ್ಗೆ_ಪುರದ_ದೇವರ_ರಥಾರೋಹಣಕ್ಕೆ_ರಂಗೋಲಿಯಿಂದ_ರಥ_ಬೀದಿ_ಆಲಂಕಾರ
#ರಂಗೋಲಿಗೆ_ಇರುವ_ದೈವ_ಶಕ್ತಿ
#ಆನಂದಪುರಂಗೆ_ಇರುವ_ರಂಗೋಲಿ_ಹಿನ್ನೆಲೆ
#ಆನಂದಪುರಂನಲ್ಲಿರುವ_ಚಂಪಕ_ಸರಸ್ಸು_ರಂಗೋಲಿ_ಪ್ರವೀಣೆ_ಚಂಪಕ_ಸ್ಮಾರಕ
#ನಾಳೆ_ದಿನಾಂಕ_13_ಪೆಬ್ರುವರಿ_2024_ಮಂಗಳವಾರ_ರಥೋತ್ಸವ
ಶ್ರೀವರಸಿದ್ದಿ ವಿನಾಯಕ ದೇವಸ್ಥಾನದ ರಥ ಬೀದಿಯಲ್ಲಿ ಆಕರ್ಷಕ ರಂಗೋಲಿ ಬಿಡಿಸಿದ್ದಾರೆ ನೋಡ ಬನ್ನಿ.
ರಂಗೋಲಿಯು ಶಿಲ್ಪ ಕಲೆಗೂ ಆದಾರವಾಗಿತ್ತೆ೦ದು ತಿಳಿದು ಬಂದಿದೆ, ದೇವಾಲಯಗಳಲ್ಲಿ ದಾಮಿ೯ಕ ವಿಧಿ ವಿಧಾನಗಳಲ್ಲಿ ರಂಗೋಲಿ ಬಿಡಿಸುತ್ತಾರೆ.ಇದರಲ್ಲಿ ನಾನಾ ರೀತಿಯ ಕೋನಗಳು, ಆಕೃತಿಗಳು, ಆಯತಗಳು, ಮಂಡಲಗಳು ಇದೆ.
ಸಮೂಹ ಚುಕ್ಕಿಗಳನ್ನ ಹಾಕಿ ಅದಕ್ಕೆ ರೇಖೆಗಳನ್ನ ಕೂಡಿಸಿ ಪ್ರಮಾಣಬದ್ಧವಾದ ರಂಗೋಲಿ ಹಾಕಿದರೆ ಮಾತ್ರ ರಂಗೋಲಿ ಸುಂದರವಾಗುತ್ತದೆ.
ರಂಗೋಲಿಯಲ್ಲಿ ಆಧಿಕೃತ ಅಳತೆಗಳಿದೆ, ಈ ಕಲೆಯ ಪ್ರಾಚೀನತೆ ನಿಖರವಾಗಿ ತಿಳಿದಿಲ್ಲ, ವಿನ್ಯಾಸಗಳಂತೂ ಲೆಖ್ಖಕ್ಕೆ ಸಿಗುವುದಿಲ್ಲ.
ರಂಗೋಲಿಯು ದೇವರನ್ನ ಒಲಿಸಿಕೊಳ್ಳುವ ಒಂದು ಆರಾದನಾ ಸಂಪ್ರದಾಯವೂ ಆಗಿದೆ, ಬಣ್ಣ ಬಣ್ಣದ ಹಿಟ್ಟುಗಳಿ೦ದ, ಕಲ್ಲಿನ ಪುಡಿಗಳಿಂದ ರಂಗೋಲಿಯನ್ನ ರಂಗು ರOಗಾಗಿಸುವ ಕಲೆ ಹೆಣ್ಣು ಮಕ್ಕಳು ಕಲಿತಿದ್ದಾರೆ, ಇದಕ್ಕೆ ಗೋದಿ, ಜವೆಗೋದಿ, ಅಕ್ಕಿ ಹಿಟ್ಟು, ಕುಂಕುಮ, ಅರಿಶಿಣ ಪುಡಿ, ಶಿಲಾ ಚುಣಾ೯ ಮತ್ತು ನವರತ್ನಪುಡಿಯನ್ನ ತುಂಬಿಸುವುದು ಒಂದು ಕಲೆ.
ಹೋಮ ಹವನದಲ್ಲಿ, ಮದುವೆಯ ಹಸೆಮಣೆಯಲ್ಲಿ, ದೇವರ ಮಂಟಪಗಳಲ್ಲಿ ಪುರೋಹಿತರು ರಂಗೋಲಿ ಬಿಡಿಸುತ್ತಾರೆ, ತಾಂತ್ರಿಕ ಪೂಜೆಯಲ್ಲಿ ಮಂಡಲಗಳನ್ನು ರಂಗೋಲಿಯಲ್ಲೇ ಬಿಡಿಸಲೇ ಬೇಕು. ಎಲ್ಲರೂ ರಂಗೋಲಿಯಲ್ಲಿ ಪರಿಣಿತರಾಗಲು ಸಾಧ್ಯವಿಲ್ಲ. ರಂಗೋಲಿ ಬಿಡಿಸುವುದರಲ್ಲಿ ತಾಳ್ಮೆ ಇರಬೇಕು, ದೂರಾಲೋಚನೆ ಇರಬೇಕು, ಕಲ್ಪನೆ ಇರಬೇಕು, ಚುರುಕುತನ ಇರಬೇಕು ಹಾಗಿದ್ದರೆ ಮಾತ್ರ ಜನಾಕಷ೯ಕ ರಂಗೋಲಿ ರಚಿಸಲು ಸಾಧ್ಯ.
ಹುಟ್ಟಿನಿಂದಲೇ ಈ ಚಾಕಚಕ್ಯತೆಯನ್ನ ಕೆಲವರು ತನ್ನ ಹಿಂದಿನ ಜನ್ಮದ ಫಲವಾಗಿ ಪಡೆದಿರುತ್ತಾರೆ.
ನಿದಿ೯ಷ್ಟವಾದ ಆಳತೆಯ ಸ್ಪಷ್ಟವಾದ ಗೆರೆಗಳು ಹೊಂದಿರುವ ರಂಗೋಲಿಗೆ ಸೂಕ್ತ ಬಣ್ಣ ತುಂಬುವುದು ಕಲಾಕಾರಿಕೆ, ತಂತ್ರ ವಿದ್ಯೆಯಲ್ಲಿ ಇಂತಹ ರಂಗೋಲಿಗಳು ಸಾಧಕರ ಮನೋಸ್ಥಿಮಿತ ಉ೦ಟು ಮಾಡುತ್ತದೆ, ಅವರನ್ನ ಸಮಾದಿ ಸ್ಥಿತಿಗೂ ಒಯ್ಯುತ್ತದೆ, ತಂತ್ರ ವಿದ್ಯೆಯಿಂದ ಸಾದನೆ ಮಾಡಬೇಕಾದರೆ ಮಂಡಲಗಳು, ರಂಗೋಲಿಗಳು ಬಹುಮುಖ್ಯ.
ಸುOದರವಾದ ಸಮಯೋಚಿತವಾದ ರಂಗೋಲಿಯಿಂದ ದೇವರು ಒಲಿಯಲೇ ಬೇಕು ಹಾಗಾಗಿ ರಂಗೋಲಿ ಎಂದರೆ ಅದು ಸಣ್ಣ ಚಿತ್ರವಲ್ಲ, ಎಂತಹದೊ ಒಂದು ರೇಖೆಯಲ್ಲ, ಯಾವುದೋ ಒಂದು ಪುಡಿಯಲ್ಲ ಇದಕ್ಕೆ ಪ್ರಾಚಿನತೆ ಸ್ಪಶ೯ವಿದೆ, ದೈವ ಶಕ್ತಿಯ ಬಲವಿದೆ, ತಂತ್ರ ವಿದ್ಯೆಯ ಒಲವಿದೆ, ಸಂಸ್ಕೃತಿಯ ಹಿನ್ನೆಲೆಯಿದೆ, ದಾಮಿ೯ಕ ಭಾವನೆಯ ಸೆಳಕಿದೆ, ಸೌ೦ದಯ೯ದ ತಳುಕಿದೆ ಎಂಬ ನಂಬಿಕೆ ಇದೆ.
ದೇವಾಲಯದಲ್ಲಿ ಪ್ರತಿ ವಷ೯ ರಥೋತ್ಸವದ ಹಿಂದಿನ ದಿನ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸುತ್ತಾರೆ ಅನೇಕ ಮಹಿಳೆಯರು ಭಾಗವಹಿಸುತ್ತಾರೆ.
Comments
Post a Comment