https://youtu.be/UTPK8j25nYQ?feature=shared
#ನನ್ನ_ಪ್ರೀತಿಯ_ರಾಟ್_ವೀಲರ್_ಶಂಭೂರಾಮನ_ರಸ_ಕಬ್ಬಿನ_ಕೋಲಿನ_ರಸದೌತಣ.
#ಮಲೆನಾಡಿನ_ಹಳ್ಳಿಗಳಲ್ಲಿ_ಈಗ_ಕಬ್ಬಿನ_ಅಲೇಮನೆ_ಸೀಸನ್.
#ಇವತ್ತು_ಬೆಳಗಿನ_ವಾಕಿಂಗ್_ನಂತರ_ನಾನೂ_ಶಂಭೂರಾಮು_ಕಬ್ಬು_ತಿಂದದ್ದು
#ಸಂಪ್ರದಾಯಿಕ_ಆಲೇಮನೆ_ಜೋನಿಬೆಲ್ಲ_ಕಬ್ಬಿನಹಾಲು_ರಸಕಬ್ಬು
#ಈಗ_ಅಪರೂಪದಲ್ಲಿ_ಅಪರೂಪ
#ಆಲೇ_ಮನೆ_ಜೋನಿ_ಬೆಲ್ಲ_ಕೇಜಿಗೆ_ನೂರು_ದಾಟಿದೆ
#ಸಕ್ಕರೆ_ಬೆಲೆ_ಕೇಜಿಗೆ_ನಲವತ್ತು
#ಆದ್ದರಿಂದ_ಸಕ್ಕರೆ_ಕರಗಿಸಿ_ಬೆಲ್ಲ_ರೂಪಾಂತರ_ಮಾಡಿ_ಲಾಭ_ಮಾಡುವ_ಉದ್ಯಮವೂ_ಶುರುವಾಗಿದೆ.
ಹಳ್ಳಿಗಳಲ್ಲಿ ಆದುನೀಕರಣದ ವೇಗದಲ್ಲಿ ಅನೇಕ ಸಂಪ್ರದಾಯಿಕ ಜೀವನ ಶೈಲಿ ಬದಲಾಗಿದೆ ಸ್ವಾವಲಂಬಿ ಬದುಕಿನ ಭಾಗವಾಗಿದ್ದ ಆಹಾರ ಉತ್ಪಾದನೆ ಬೃಹತ್ ಗಾತ್ರದ ಉದ್ಯಮವಾಗಿ ಯಂತ್ರಗಳ ಮೇಲೆ ಅವಲಂಬಿಸಿದ್ದರಿಂದ ಹಳ್ಳಿಗಳ ಮನೆ ಮನೆಯ ಹೈನುಗಾರಿಕೆ - ಕೋಳಿ ಸಾಕಾಣಿಕೆ - ಬಾವಿ ನೀರು - ಹಿತ್ತಲ ಕೈ ತೋಟಗಳು ಇಲ್ಲವಾಗಿದೆ.
ಇದೇ ರೀತಿ ನಮಗೆಲ್ಲ ಬಾಲ್ಯದಲ್ಲಿ ವಿಶೇಷವಾದ ಹಬ್ಬದ ಸಂಭ್ರಮ ಉಂಟು ಮಾಡುತ್ತಿದ್ದ ಕಬ್ಬಿನ ಹಾಲು- ಮಣ್ಣಿನ ಕೊಡದಲ್ಲಿ ತು೦ಬಿ ತರುತ್ತಿದ್ದ ಬೆಲ್ಲ - ಅದನ್ನ ತಯಾರಿಸಲು ಬೆಳೆಯುತ್ತಿದ್ದ ದೇಸಿ ತಳಿಯ ತರಹವಾರೆ ಕಬ್ಬು, ಈ ಕಬ್ಬು ಅರೆಯಲು ಆಲೆ ಕಣ ಅದನ್ನು ತಿರುಗಿಸಲು ಕರಾವಳಿಯ ತೀರದಿಂದ ಪ್ರತಿ ವರ್ಷ ಘಟ್ಟ ಹತ್ತಿ ಬರುತ್ತಿದ್ದ ಅಲೇ ಕೋಣಗಳು,ಸುಗ್ಗಿ ಕಾಲದ ಆಯಾಸದ ನಂತರದಲ್ಲಿ ಅಲೇ ಮನೆ ಗ್ರಾಮೀಣ ಜನರಿಗೆ ಒಂದು ರೀತಿಯ ರಿಲ್ಯಾಕ್ಸಿಂಗ್ ಮೂಡ್ ತರುವ ಹಬ್ಬವಾಗಿರುತ್ತಿತ್ತು.
ಅಲೆಮನೆ ಬೆಲ್ಲ ತಯಾರಾಗುವಾಗ ಕೊಪ್ಪರಿಗೆಯಲ್ಲಿ ಕುದಿಯುವ ಕಬ್ಬಿನ ಹಾಲಿನ ಮೇಲೆ ಉಕ್ಕರಿಸಿ ಬರುವ ಜೊಂಡು (ಕಾಕಂಬಿ) ಶೇಖರಿಸಿ ತಯಾರಿಸುತ್ತಿದ್ದ ಶುದ್ಧವಾದ ಮಧ್ಯ ಒಂದು ರೀತಿ ಭಾರತೀಯ ಸ್ಕಾಚ್ ಶ್ರಮಜೀವಿಗಳಿಗೆ ವಿಶೇಷ ಸಂಭ್ರಮಾಚರಣೆಗೆ ಪುಟಗೊಳಿಸುತ್ತಿತ್ತು.
ಆಲೆಮನೆ ಜೋನಿ ಬೆಲ್ಲ ಕೆಜಿಗೆ ನೂರು ದಾಟಿದೆ ಆದ್ದರಿಂದ ಕಡಿಮೆ ಬೆಲೆಯ ವಾಯಿದೆ ಮೀರಿದ ಸಕ್ಕರೆ ಬೆಲೆ ಇಪ್ಪತ್ತು ರೂಪಾಯಿಗೆ ಸಿಗುವುದು ತಂದು ಅದನ್ನು ಬೆಲ್ಲಕ್ಕೆ ರೂಪಾಂತರ ಮಾಡಿ ನಾಲ್ಕು ಪಟ್ಟು ಲಾಭ ಮಾಡಿಕೊಳ್ಳುವ ಒಂದು ರೀತಿಯ ಬೆಲ್ಲದ ಮಾಪಿಯಾ ಕೂಡ ನಮ್ಮ ಜಿಲ್ಲೆಯಲ್ಲಿದೆ.
Comments
Post a Comment