#ಪ್ರತಿ_ವರ್ಷ_ರಥಸಪ್ತಮಿಯಂದು_ಆನಂದಪುರಂನ_ರಂಗನಾಥ_ಸ್ವಾಮಿಯ_ರಥೋತ್ಸವ
#ಟಿಪ್ಪು_ಸುಲ್ತಾನರು_ಸಂದರ್ಶಿಸಿದ್ದ_ನಮ್ಮ_ಊರಿನ_ರಂಗನಾಥ_ಸ್ವಾಮಿ_ದೇವಾಸ್ಥಾನ
#ಮುಳುಗಿದ_ದ್ವಾರಕಾ_ಸಂಶೋಧಿಸಿದ_S_R_ರಾವ್_ರಂಗನಾಥ_ಸ್ವಾಮಿಯ_ಹರಕೆಯ_ಕೂಸು
#ಕೋದಂಡರಾಮ_ರಂಗನಾಥನಾದ_ಇತಿಹಾಸ
#ಆನಂದಪುರಂ_ಬದರಿನಾರಾಯಣಯ್ಯಂಗಾರ್_ಮನೆ_ದೇವರು
#ರಂಗನಾಥ_ಸ್ವಾಮಿ_ದೇವಾಲಯದ_ಶಿಲಾಶಾಸನದಲ್ಲಿ
#ಈ_ಊರು_ಕೋಯಿಪುರ_ದೇವರ_ಹೆಸರು_ತಿರುವೆಂಗಲನಾಥ
ನಿನ್ನೆ 16 ಫೆಬ್ರುವರಿ 2024 ಶುಕ್ರವಾರ ರಥ ಸಪ್ತಮಿ ಆದ್ದರಿಂದ ನಮ್ಮ ಊರಿನ ಇತಿಹಾಸ ಪ್ರಸಿದ್ಧ ಶ್ರೀರಂಗನಾಥ ಸ್ವಾಮಿ ರಥೋತ್ಸವ ಭಕ್ತಿ ಪೂರ್ವಕವಾಗಿ ಅದ್ದೂರಿಯಾಗಿ ನೆರವೇರಿತು, ಹಿಂದಿನ ಅರ್ಚಕರಾಗಿದ್ದ ಆಳ್ವಾರರ ಪುತ್ರಿ ನನ್ನ ಕ್ಲಾಸ್ ಟೀಚರ್ ಜಯಂತಿ ಟೀಚರ್ ಮತ್ತು ಅವರ ಸಹೋದರಿಯರು ಬೆಂಗಳೂರಿಂದ ಬಂದಿದ್ದವರು ನನ್ನ ಕಛೇರಿಗೆ ಭೇಟಿ ನೀಡಿದ್ದರು.
. ಈ ದೇವಾಲಯದ ಈ ಧ್ವಜಸ್ಥಂಬದ ಕೆಳಗೆ ಸುಮಾರು 517 ವರ್ಷಗಳ ಹಿಂದಿನ ಶಿಲಾಶಾಸನ ಒಂದು ಇತ್ತು ದೇವಾಲಯದ ಕಾಲಕಾಲದ ಅಭಿವೃದ್ಧಿಯಲ್ಲಿ ಇದನ್ನು ದ್ವಜಸ್ಥಂಭದಿಂದ ಹೊರ ತೆಗೆದು ಮೂಲೆಯಲ್ಲಿ ಇರಿಸಲಾಗಿದೆ.
ಇದರಲ್ಲಿ ಈ ರೀತಿ ಉಲ್ಲೇಖವಿದೆ....
" ಬೆಯಕೊಪ್ಪ ಕಲ್ಲಪ್ಪ ನಾಯಕನ ಪುತ್ರ ಚಿಕ್ಕಣ್ಣ ನಾಯಕ ತನ್ನ ಮನೆ ವರ ದೇವರಾದ ಸ್ವಸ್ತಿಶ್ರೀ ಜಯಂತಿಪುರ ವರದಿಶ್ವರ ಶ್ರೀ ಮಹಾಲಕ್ಷ್ಮಿ - ಕುಚಕುಂಕುಮ ಲೋಲಾ .. ಕೋಯಿಪುರದ ತಿರುವೆಂಗಲನಾಥನ ಹರಿವಾಣ ನೈವೇದ್ಯಕ್ಕೆ ತಮ್ಮ ನಾಯಕ ತನಕೆ ಸಲ್ಲುವ ತಮ್ಮ ಹೊಸಗುಂದ ಸೀಮೆಯೊಳಗಿನ ಕೋಟಿ ಶೆಟ್ಟಿ ಕೊಪ್ಪ ..... ನೋಗೂಟಪುರವನ್ನು.. ಕಾಲ ಕಾಲಮ್ ಪ್ರತಿ ಸ್ವಾಮಿಯ ಅಂಗ - ರಂಗ-ಬೋಗಾಂಗ ನೈವೇಧ್ಯಕ್ಕೆ ಸಲಿಸಿ ಸ್ವಾಮಿಯ .... ವನು ಕೊಂಡು ಕೃತಾರ್ಥರ ಆಹುದೆಂದು ಬಿಟ್ಟ ಪುರ"
ಈ ದೇವಾಲಯದ ಹರಿವಾಣ ನೈವೇದ್ಯಕ್ಕೆ ಉಂಬಳಿ ನೀಡಿದ ಕೋಟಿ ಶೆಟ್ಟಿ ಕೊಪ್ಪ ಮತ್ತು ನೊಗಟಾಪುರ ಯಾವುದೆಂದು ಸಂಶೋದನೆ ಆಗಬೇಕು.
ಈ ದೇವಾಲಯದ ಪ್ರದೇಶದ ಹೆಸರು ಶಿಲಾಶಾಸನದಲ್ಲಿ ಉಲ್ಲೇಖ ಆಗಿರುವುದು ಕೋಯಿಪುರ ಮತ್ತು ದೇವರ ಹೆಸರು ತಿರುವೆಂಗಲನಾಥ.
ಗೆಜೆಟಿಯರ್ ನಲ್ಲಿ ಈ ದೇವಾಲಯದ ಮೂಲ ಹೆಸರು ಕೋದಂಡರಾಮ ದೇವಾಲಯ, ಈ ದೇವಾಲಯದ ಮೂಲ ವಿಗ್ರಹ ಕೋದಂಡರಾಮ, ಈ ಕೋದಂಡರಾಮ ರಂಗನಾಥನಾಗಿ ಪುನರ್ ನಾಮಕರಣ ಮಾಡಿದ ಐತಿಹಾಸಿಕ ಘಟನೆ ಒಂದು ದಾಖಲಾಗಿದೆ.
ಈ ಸಂದರ್ಭಕೂಡ ಕುತೂಹಲಕಾರಿ ಆಗಿದೆ, ಅದು ಆನಂದಪುರಂನ ಕೋಟೆಯನ್ನು ಬ್ರಿಟಿಷರ ತುಕುಡಿ ಒಂದು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿ ಜನರಲ್ ಮ್ಯಾಥ್ಯೂ ಎಂಬ ಬ್ರಿಟಿಷ್ ಸೈನ್ಯಾಧಿಕಾರಿ ಆನಂದಪುರಂ ಕೋಟೆಯಲ್ಲಿ ದೊಡ್ಡ ಹತ್ಯಾಕಾಂಡವನ್ನು ನಡೆಸುತ್ತಾನೆ, ಆಗ ಸುಮಾರು 400 ಹೆಚ್ಚು ಮಹಿಳೆಯರು ಕೋಟೆಯ ಕಂದಕಕ್ಕೆ ಹಾರಿ ಪ್ರಾಣ ತ್ಯಾಗ ಮಾಡಿದ್ದ ವಿಚಾರ ಬ್ರಿಟಿಷ್ ಜರ್ನಲನಲ್ಲಿ ದಾಖಲಾಗಿದೆ.
. ಈ ವಿಷಯ ತಿಳಿದ ಟಿಪ್ಪು ಸುಲ್ತಾನ್ ಮೈಸೂರಿನ ಶ್ರೀರಂಗಪಟ್ಟಣದಿಂದ ತನ್ನ ಸೈನ್ಯದ ತುಕುಡಿಗಳನ್ನು ಕಳಿಸಿ ಜನರಲ್ ಮ್ಯಾಥ್ಯೂ ಮತ್ತು ಅವನ ಸಂಗಡಿಗರನ್ನು ಬಂಧಿಸಿ ಶ್ರೀರಂಗಪಟ್ಟಣದ ಕೋಟೆಯಲ್ಲಿ ಕಾಲ ಪಾನಿ ಶಿಕ್ಷೆ ನೀಡಿದ ದಾಖಲೆಗಳಿದೆ.
ಇಲ್ಲಿ ಕ್ಲಿಕ್ ಮಾಡಿ
https://arunprasadhombuja.blogspot.com/2021/06/36-v.html
ಈ ಘಟನೆಯ ನಂತರದ ಸಂದರ್ಭದಲ್ಲಿಯೇ ಟಿಪ್ಪು ಸುಲ್ತಾನರು ಬಿದನೂರು ನಗರದ ಕೋಟೆಗೆ ಸಾಗುವ ಮಾರ್ಗದಲ್ಲಿ ಆನಂದಪುರಂ ತಲುಪಿ ಆನಂದಪುರಂ ಕೋಟೆಗೆ ಸಾಗುವ ಮಾರ್ಗದಲ್ಲಿ ಸಾಗುವಾಗ ಆನಂದಪುರಂನ ಮುಸ್ಲಿಂ ಸಮುದಾಯದವರು ಆನಂದಪುರಂ ಮಸೀದಿಯ ಎದುರು ಟಿಪ್ಪು ಸುಲ್ತಾನರನ್ನು ಸ್ವಾಗತಿಸುತ್ತಾರೆ, ಆಗ ಟಿಪ್ಪು ಸುಲ್ತಾನರು ಮಸೀದಿಯ ಒಳ ಹೋಗಿ ಪ್ರಾರ್ಥನೆ ಮಾಡಿ ಹೊರ ಬಂದಾಗ, ಆನಂದಪುರಂನ ರಂಗನಾಥ ಸ್ವಾಮಿಯ ದೇವಾಲಯದ ಅರ್ಚಕರು ಮತ್ತು ಅಗ್ರಹಾರದ ಪುರಪ್ರಮುಖರು ಫಲ ಪುಷ್ಪಗಳ ಹರಿವಾಣದೊಂದಿಗೆ ನಿಂತಿರುತ್ತಾರೆ,ಆಗ ಟಿಪ್ಪು ಸುಲ್ತಾನ್ ಅವರನ್ನು ವಿಚಾರಿಸುತ್ತಾರೆ ಆಗ ಇವರೆಲ್ಲರೂ ಟಿಪ್ಪು ಸುಲ್ತಾನರು ನಮ್ಮ ದೇವಾಲಯಕ್ಕೆ ಭೇಟಿ ಕೊಡಬೇಕೆಂದು ವಿನಂತಿಸುತ್ತಾರೆ.
ನಿಮ್ಮ ದೇವಾಲಯ ಯಾವುದು ಎಂದು ಟಿಪ್ಪು ಸುಲ್ತಾನರು ಕೇಳುತ್ತಾರೆ, ಆಗ ಪುರೋಹಿತ ವರ್ಗದವರು #ಶ್ರೀರಂಗನಾಥ ಎನ್ನುತ್ತಾರೆ ಟಿಪ್ಪು ಸುಲ್ತಾನರು ಶ್ರೀರಂಗಪಟ್ಟಣದ ರಂಗನಾಥ ದೇವರ ಭಕ್ತರೂ ಆಗಿರುವುದರಿಂದ ಅವರು ಆನಂದಪುರಂನ ರಂಗನಾಥ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ದೇವಾಲಯಕ್ಕೆ ಮತ್ತು ಅರ್ಚಕ ವೃಂದಕ್ಕೆ ಬೆಳ್ಳಿ ಬಂಗಾರದ ದಾನ ನೀಡುತ್ತಾರೆ.
ಟಿಪ್ಪು ಸುಲ್ತಾನರು ಬರುವ ಆ ಹಿಂದಿನ ದಿನ ನಡೆಯುವ ಒಂದು ಘಟನೆ ಇತಿಹಾಸದಲ್ಲಿ ದಾಖಲಾಗಿದೆ ಅದು ಆನಂದಪುರಂನ ಕೋದಂಡರಾಮ ದೇವಾಲಯದ ಅರ್ಚಕರು ಮತ್ತು ಅಗ್ರಹಾರದ ಬ್ರಾಹ್ಮಣ ಸಮುದಾಯದವರು ಆತಂಕದಿಂದ ಒಂದು ಸಭೆ ಸೇರುತ್ತಾರೆ "ನಾಳೆ ಟಿಪ್ಪು ಸುಲ್ತಾನ್ ಆನಂದಪುರಂಗೆ ಬಂದಾಗ ಅವರ ಸೈನಿಕರು ನಮ್ಮ ದೇವಾಲಯ ಮತ್ತು ನಮ್ಮ ಅಗ್ರಹಾರ ಲೂಟಿ ಮಾಡಿದರೆ?" ... ಎಂಬ ಭಯ ವ್ಯಕ್ತಪಡಿಸುತ್ತಾರೆ ನಂತರ ಅದಕ್ಕೆ ಅವರೊಂದು ಉಪಾಯವನ್ನು ಕೂಡ ಕಂಡು ಕೊಳ್ಳುತ್ತಾರೆ.
ಅದೇನೆಂದರೆ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಯ ಭಕ್ತನಾದ ಟಿಪ್ಪು ಸುಲ್ತಾನ್ ಯಾವ ಕಾರಣಕ್ಕೂ ರಂಗನಾಥ ದೇವರನ್ನ ಮತ್ತು ಆ ದೇವರ ಆರಾಧಕರನ್ನು ತೊಂದರೆ ಕೊಡುವುದಿಲ್ಲ ರಕ್ಷಣೆ ಮಾಡುತ್ತಾನೆ ಎಂಬ ಗಾಳಿ ಸುದ್ದಿಗಳಿರುವುದರಿಂದ ಅವರೆಲ್ಲರೂ ಸೇರಿ ಮರುದಿನ ಬರುವ ಗಂಡಾಂತರಕ್ಕೆ ಪರಿಹಾರ ಮಾಡುವ ಉದ್ದೇಶದಿಂದ ಆ ರಾತ್ರಿ ಕೋದಂಡರಾಮನಿಗೆ ಕ್ಷಮೆ ಯಾಚಿಸಿ,ಪ್ರಾಯಶ್ಚಿತ ಮಾಡಿ #ರಂಗನಾಥ ಎಂದು ನಾಮಕರಣ ಮಾಡುತ್ತಾರೆ ಇದು ಒಂದು ಇತಿಹಾಸಕ್ಕೆ ಸಂಬಂಧಪಟ್ಟ ಐತಿಹಾಸಿಕ ಘಟನೆ.
ಇಲ್ಲಿ ಕ್ಲಿಕ್ ಮಾಡಿ
https://arunprasadhombuja.blogspot.com/2022/01/69-515.html
ಇನ್ನೊಂದು ಘಟನೆ ಈ ದೇವಾಲಯದ ಸಮೀಪದಲ್ಲಿ ವಾಸವಿದ್ದ ಮನೆಯಲ್ಲಿ ಜನಿಸಿದ ಮಗುವೊಂದಕ್ಕೆ ಪೋಷಕರು ಹರಕೆಯಂತೆ ರಂಗನಾಥ ಎಂದು ನಾಮಕರಣ ಮಾಡುತ್ತಾರೆ, ಅದಕ್ಕೂ ಒಂದು ಕಾರಣವಾದ ಘಟನೆ ಇದೆ.
. ಆ ಮಗು ಬೆಳೆದು ದೊಡ್ಡದಾಗಿ ಭಾರತದ ಪುರಾತತ್ವ ಇಲಾಖೆಯ ದೊಡ್ಡ ಸ್ಥಾನ ಅಲಂಕರಿಸಿ ಮಹಾಭಾರತದ ಶ್ರೀ ಕೃಷ್ಣ ಪರಮಾತ್ಮನ ಮುಳುಗಿ ಹೋದ ದ್ವಾರಕಾ ನಗರ ಸಂಶೋದಿಸಿ ವಿಶ್ವ ವಿಖ್ಯಾತರಾಗುತ್ತಾರೆ, ಅವರ ಆ ಸಂಶೋಧನೆ ಮಹಾಭಾರತ ಒಂದು ಕಾಲ್ಪನಿಕ ಕಥೆಯಲ್ಲ ಅದು ಸತ್ಯ ಘಟನೆ ಎನ್ನುವುದನ್ನು ಸಾಬೀತು ಮಾಡುತ್ತದೆ.
ಇಲ್ಲಿ ಕ್ಲಿಕ್ ಮಾಡಿ
https://arunprasadhombuja.blogspot.com/search?q=%E0%B2%B0%E0%B2%82%E0%B2%97%E0%B2%A8%E0%B2%BE%E0%B2%A5
ಇಂತಹ ಐತಿಹಾಸಿಕ ಘಟನೆಗಳುಳ್ಳ ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರಿಂದ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಎಂದು ಇದೆ, ಆ ಸಮಿತಿ ಮುಂದಿನ ದಿನದಲ್ಲಿ ಆ ಅಮೂಲ್ಯ ಶಿಲಾಶಾಸನ ಸಂರಕ್ಷಣೆ ಮಾಡಿ ಅದರಲ್ಲಿ ನಮೂದಾಗಿರುವ ಹಳೆಗನ್ನಡದ ಲಿಪಿಗಳನ್ನು ಈಗಿನ ಕನ್ನಡದಲ್ಲಿ ಬರೆದು ಅಳವಡಿಸಿದರೆ ದೇವಾಲಯದ ಪ್ರಾಚೀನತೆ ಮತ್ತು ಇತಿಹಾಸ ಇಂದಿನ ಭಕ್ತ ವೃಂದದವರಿಗೆ ಹಾಗೂ ಇತಿಹಾಸಕ್ತರಿಗೆ ತಿಳಿಯುತ್ತದೆ.
ಅದರಲ್ಲಿ ಟಿಪ್ಪು ಸುಲ್ತಾನರು ಆನಂದಪುರಂಗೆ ಬೇಟಿ ನೀಡುವ ಸಂದರ್ಭದಲ್ಲಿ ಕೋದಂಡರಾಮ ದೇವರನ್ನು ರಂಗನಾಥ ಎಂದು ಮರು ನಾಮಕರಣ ಮಾಡಿದ ಇತಿಹಾಸ ಕೂಡ ನಮೂದಿಸಬೇಕು ಜೊತೆಗೆ ಮುಳುಗಿದ್ದ ದ್ವಾರಕಾ ನಗರ ಸಂಶೋಧಿಸಿದ ಎಸ್ ಆರ್ ರಾವ್ ಈ ದೇವರ ಹರಕೆಯ ಪುತ್ರ ಈ ಊರಲ್ಲೇ ಜನಿಸಿದವರು ಎಂಬುದನ್ನು ನಮೂದಿಸಬೇಕು.
ಎಸ್ ಆರ್ ರಾವ್ ಅವರ ಪಟ ಆನಂದಪುರಂ ರಂಗನಾಥ ದೇವಾಲಯದಲ್ಲಿ, ಸ್ಥಳಿಯ ಶಾಲಾ-ಕಾಲೇಜುಗಳಲ್ಲಿ, ಗ್ರಾಮ ಪಂಚಾಯಿತಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವ ಅಭಿಯಾನವು ಆಗಬೇಕು.
Comments
Post a Comment