#ಮಲೆನಾಡಿನ_ಎಲೆಮರೆಯ_ಕಾಯಿಯಂತೆ_ಇರುವ_ರೈತ_ನಾಯಕ
#ಗುಳ್ಳಳ್ಳಿ_ಬಸವರಾಜ_ಗೌಡರು
#ಗೆಳೆಯ_ನಾಗೇಂದ್ರಸಾಗರ್_ಇವರ_ಮನೆಗೆ_ಆಲೆಮನೆಗೆ_ಅತಿಥಿಯಾಗಿ_ಹೋಗಿದ್ದರು
#ಅವರ_ಪೋಸ್ಟ್_ನೋಡಿ_ಗುಳ್ಳಳ್ಳಿ_ಬಸವರಾಜಗೌಡರ_ಒಡನಾಟದ_ನೆನಪಿನ_ಬರಹ.
#ನಮ್ಮ_ಊರಿನ_ರಥೋತ್ಸವದಲ್ಲಿ_ಜಾತ್ರಾ_ಸಮಿತಿ_ಇವರನ್ನು_ಗೌರವಿಸಿತ್ತು.
. ಗುಳ್ಳಳ್ಳಿ ಬಸವರಾಜ ಗೌಡ ದಂಪತಿಗಳು ಅತಿಥಿ ಸತ್ಕಾರದಲ್ಲಿ ಶ್ರೀಮಂತ ಮನಸ್ಸಿನವರು, ರೈತ ಸಂಘದ ನಿಷ್ಟಾವಂತ ಕಾರ್ಯಕರ್ತರು ಪ್ರೋ ನಂಜುಂಡಸ್ವಾಮಿ ಅವರ ಅತ್ಯಾಪ್ತರು ಎಲೆ ಮರೆಯ ಕಾಯಿಯಂತೆ ಪ್ರಚಾರದಿಂದ ದೂರವಾಗಿ ಕೆಲಸ ಮಾಡುತ್ತಾರೆ.
ಇವರ ಪತ್ನಿ ಆವಿನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು ಪುತ್ರ ಗಿರೀಶ್ ಮಾಜಿ ಶಾಸಕ ಹಾಲಪ್ಪರ ಜೊತೆಯ ನಿಷ್ಟಾವಂತರು.
ನಮ್ಮ ಊರಿನ ಶ್ರೀವರಸಿದ್ದಿ ವಿನಾಯಕ ಸ್ವಾಮಿ ರಥೋತ್ಸವದಂದು ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಹನುಮಗೌಡ ಬೆಳಕುರ್ಕಿ ಜೊತೆ ಬಂದಿದ್ದರು ಅವತ್ತು ಅನ್ನ ಸಂತರ್ಪಣೆಯಲ್ಲಿ ಭಾಗಿ ಆಗಿ ದೇವಾಲಯದಿಂದ ಗೌರವ ಸ್ಟೀಕರಿಸಿದ್ದರು ... ಎಂದು ಗೆಳೆಯ #ನಾಗೇಂದ್ರಸಾಗರ್ ಅವರು ಗುಳ್ಳಳ್ಳಿ ಬಸವರಾಜ ಗೌಡರ ಮನೆಗೆ ಆಲೆಮನೆಗೆ ಅತಿಥಿ ಆಗಿ ಹೋಗಿದ್ದ ಬಗ್ಗೆ ಬರೆದ ಪೋಸ್ಟ್ ನೋಡಿ ಪ್ರತಿಕ್ರಿಯಿಸಿದ್ದೆ.
ನನ್ನ ಎಲ್ಲಾ ಜನಪರ ಹೋರಾಟಗಳಿಗೆ ಸಾಗರ ತಾಲೂಕಿನ ರೈತ ಸಂಘ ಬೆಂಬಲಿಸುತ್ತಿತ್ತು ನಾನೂ ಮತ್ತು ನನ್ನ ಗೆಳೆಯರೂ ರೈತ ಸಂಘ ಬೆಂಬಲಿಸುತ್ತಿದ್ದೆವು ಆದ್ದರಿಂದ ರೈತ ಹೋರಾಟ ವಾರಪತ್ರಿಕೆ ಸಂಪಾದಕರಾದ ವಸಂತಕುಮಾರ್, ಸೇನಾಪತಿ ಗೌಡರು, ಗುಳ್ಳಳ್ಳಿ ಬಸವರಾಜ ಗೌಡರು ಹೆಚ್ಚು ಆತ್ಮೀಯರಾದರು.
ಗುಳ್ಳಳ್ಳಿ ಬಸವರಾಜ ಗೌಡರ ಅತಿಥಿ ಆಗಿ ಅವರ ಮನೆಯಲ್ಲಿ ಊಟ-ತಿಂಡಿ ಮತ್ತು ವಾಸ್ತವ್ಯ ಮಾಡಿದ್ದೆ ಅವರನ್ನೂ ನನ್ನ ಮನೆಗೆ ಕರೆ ತಂದು ಆತಿಥ್ಯ ನೀಡಿದ್ದೆ.
Comments
Post a Comment