Blog number 1952. ನನ್ನ ರಾಜಕಾರಣದ ನಿವೃತ್ತಿಗೆ ಒಂದು ದಶಕ, 2014 ಲೋಕ ಸಭಾ ಚುನಾವಣೆಯ ಪ್ರಚಾರ ಸಭೆಗಳು ರಾಜಕಾರಣದ ಕೊನೆಯ ದಿನಗಳ ನೆನಪು.
#ಪುಲ್ವಾಮ_ಭಾರತೀಯ_ಸೈನಿಕರ_ಹತ್ಯಾಕಾಂಡಕ್ಕೆ_ಐದು_ವರ್ಷ
#ಭಯೋತ್ಪಾದನೆ_ನಿಗ್ರಹ_ಅಷ್ಟು_ಸುಲಭವಲ್ಲ_ವಿಶ್ವದ_ಹಿರಿಯಣ್ಣ_ಅಮೇರೀಕಾವೇ_ಬಸವಳಿದಿದೆ.
#ಅಯನೂರು_ಮಂಜುನಾಥರು_2014ರ_ಲೋಕಸಭಾ_ಚುನಾವಣೆಯಲ್ಲಿ_ಜಿಲ್ಲಾ_ಭಾಜಪ_ಅಧ್ಯಕ್ಷರು
#ಅವರ_ಮಾತುಗಳು_ಪರಿಣಾಮಕಾರಿಯಾಗಿ_ಮತಗಳಾಗಿ_ಪರಿವರ್ತನೆ_ಆಯಿತು
#ಈ_ಚುನಾವಣೆಯೇ_ನನ್ನ_ರಾಜಕೀಯ_ಜೀವನದ_ಕೊನೆ
#ರಾಜಕೀಯದಿಂದ_ನಿವೃತ್ತಿ_ಫೋಷಿಸಿಕೊಂಡು_10_ವರ್ಷ_ಆಯಿತು.
ಇವತ್ತಿಗೆ ಸರಿಯಾಗಿ 5 ವರ್ಷದ ಹಿಂದೆ ಪುಲ್ವಾಮ ಸೈನಿಕರ ಹತ್ಯಾಕಂಡ ನಡೆಯಿತು,ಇಲ್ಲಿ ಈಗ ಈ ವಿಚಾರ ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಾಚಟ ಸರಿ ಅಲ್ಲ, ಸೈನ್ಯದ ವಿಚಾರವನ್ನ ಚುನಾವಣ ಅಸ್ತ್ರವಾಗಿ ಬಳಸುವುದೂ ಕೂಡ ಸರಿಯಲ್ಲ, ಇದನ್ನೆಲ್ಲ ಎದುರಿಸಲು ನೈತಿಕ ಬೆಂಬಲ ಬೇಕಾಗಿದೆ, ಭಕ್ತರು V/S ಗುಲಾಮರು ಎನ್ನುತ್ತಾ ಪರಸ್ಪರ ನಿಂದನೆಯ ಸೋಷಿಯಲ್ ಮೀಡಿಯಾದ ವಚು೯ಯಲ್ ವಾರ್ ನ ಪೌರುಷಕ್ಕೆ ಯಾವುದೇ ಬೆಲೆ ಇಲ್ಲ.
ಇದನ್ನ ಇಲ್ಲಿ ಉಲ್ಲೇಖಿಸಲು ಕಾರಣ ಇದೆ, 2013 ರ ವಿದಾನಸಭಾ ಚುನಾವಣೆಯಲ್ಲಿ ನಾನು ಸಾಗರ ತಾಲ್ಲೂಕಿನ JDS ಪಾಟಿ೯ ಅಧ್ಯಕ್ಷ ನಮ್ಮ ಅಭ್ಯಥಿ೯ 2 ಬಾರಿ ಬಿಜೆಪಿ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ಆ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ನ ಕಾಗೋಡು ವಿಜಯಿ ಆದರು, ಬಿಜೆಪಿ ಅಭ್ಯರ್ಥಿ ಶ್ರೀಮತಿ ಶರಾವತಿ ಸಿ.ರಾವ್ ಐದು ಸಾವಿರ ಮತ ಪಡೆದರು, ನಮ್ಮ ಅಭ್ಯರ್ಥಿ ಗೋಪಾಲ ಕೃಷ್ಣ ಬೇಳೂರು 23 ಸಾವಿರ ಮತ ಪಡೆದರು.
ನಂತರ 2014 ರಲ್ಲಿ ಬಂದ ಲೋಕಸಭಾ ಚುನಾವಣೆಗೆ ನನ್ನನ್ನು ಸೇರಿಸಿ ಎಲ್ಲರನ್ನೂ ಬೇಳೂರು ಗೋಪಾಲಕೃಷ್ಣ ಬಿಜೆಪಿಯ ಯಡೂರಪ್ಪರ ಪರ ಚುನಾವಣೆಗಾಗಿ ಬಿಜೆಪಿಗೆ ಸೇರಿಸಿದರು (ಅದು ನನ್ನ ರಾಜಕಾರಣದ ನಿವೃತ್ತಿ ಕೂಡ).
ಆಗ ಸಾಗರ ತಾಲ್ಲೂಕಿನ ಮತ್ತು ಹೊಸ ನಗರ ತಾಲ್ಲೂಕಿನ ಪ್ರಚಾರ ಸಭೆಯಲ್ಲಿ ಆಗಿನ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದ ಮಾಜಿ ಸಂಸದ ಅಯನೂರು ಮಂಜುನಾಥ್ ರು ಮಾಡುತ್ತಿದ್ದ ಬಾಷಣ ನೆರೆದಿದ್ದವರನ್ನ ರೋಮಾಂಚನ ಮಾಡುತ್ತಿತ್ತು, UPA ಸಕಾ೯ರದ ಅವಧಿಯಲ್ಲಿ ಪಾಕಿಸ್ತಾನ ಗಡಿ ರೇಖೆ ಎಷ್ಟು ಸಾರಿ ಉಲ್ಲಂಘನೆ ಮಾಡಿದೆ, ನಮ್ಮ ದೇಶದ ಸೈನಿಕರ ಕತ್ತು ಕೊಯ್ದ ಘಟನೆ ವಿವರಿಸುವಾಗ ಸಭೆ ನಿಶ್ಯಬ್ದವಾಗಿ ಆಲಿಸುತ್ತಿತ್ತು, ಅಯನೂರು ಮಂಜುನಾಥರ ಅವತ್ತಿನ ಮಾತುಗಳು ಯಡೂರಪ್ಪರಿಗೆ ಮತಗಳಾಗಿ ಪರಿವತ೯ನೆ ಆಗಿದ್ದು ಇತಿಹಾಸ ಅವರು ಪ್ರಖರ ವಾಗ್ಮಿ,
UPA ಸಕಾ೯ರ ಹೋಗಿ BJP ಸಕಾ೯ರ ಬಂದು ಎರೆಡು ಅವಧಿ ಮುಗಿಯುತ್ತಿದೆ ಆದರೆ ಭಯೋತ್ಪಾದಕರು ಯಾವುದೇ ಸಕಾ೯ರ ಬಂದರೂ ನಿಯಂತ್ರಿಸಲು ಅಸಾಧ್ಯ ಎಂಬುದು ಸಾಭೀತಾಗಿದೆ.
ಹಾಗಾಗಿ ನಾವು ಇವುಗಳ ಪರಿಹಾರದ ಬಗ್ಗೆ ಬೇರೆ ದೃಷ್ಠಿಕೋನದಿಂದ ನೋಡ ಬೇಕು, ವೀರಾವೇಶದ ಬಾಷಣಗಳು ವ್ಯಥ೯ ಎಂದು ನನ್ನ ಸ್ವಂತ ಅನುಭವ.
ಅವತ್ತಿನ 2014ರ ಲೋಕಸಭಾ ಚುನಾವಣೆಯಲ್ಲಿ ಸಾಗರ ಮತ್ತು ಹೊಸನಗರ ತಾಲ್ಲೂಕಿನ ಬಿಜೆಪಿ ಚುನಾವಣಾ ಪ್ರಚಾರ ಸಭೆಗಳಲ್ಲಿ ನಾನು, ಗೋಪಾಲಕೃಷ್ಣ ಬೇಳೂರು, ಬಿ.ಆರ್.ಜಯ೦ತ್, ಈಶ್ವರಪ್ಪ ಮತ್ತು ಆಯನೂರು ಮಂಜುನಾಥ ಜೊತೆ ಭಾಗಿಯಾಗಿದ್ದ ಚಿತ್ರಗಳು ಅವತ್ತಿನ ದಿನಮಾನ ನೆನಪಿಸುತ್ತದೆ.
ಅವತ್ತು "ಅಬ್ ಕಾ ಬಾದ್ ಮೋದಿ ಸರ್ಕಾರ್ " ಘೋಷಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ ಪುನಃ ಬಿಜೆಪಿಗೆ ಸೇರಿ ಸ್ಪರ್ದಿಸಿದ ಯಡೂರಪ್ಪರ ಗೆಲ್ಲಿಸಲು ಪಣ ತೊಟ್ಟ ಅಯನೂರು ಮಂಜುನಾಥ್, ಬೇಳೂರು ಗೋಪಾಲಕೃಷ್ಣ, ಬಿ.ಆರ್. ಜಯಂತ್ ಈಗ ಬಿಜೆಪಿ ತೊರೆದು ಕಾಂಗ್ರೇಸಿನಲ್ಲಿದ್ದಾರೆ.
Comments
Post a Comment