Blog number 1950. ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ರೈತ ಹೋರಾಟಗಾರ ಸಿಂದನೂರಿನ ಹನುಮನ ಗೌಡ ಬೆಳಕುರ್ಕಿ ನನ್ನ ಅತಿಥಿ.
https://youtu.be/bmrAZDQPe4I?feature=shared
#ರಾಜ್ಯ_ಕೃಷಿ_ಬೆಲೆ_ಆಯೋಗದ_ಅಧ್ಯಕ್ಷರಾಗಿದ್ದ
#ಹನುಮನ_ಗೌಡ_ಬೆಳಕುರ್ಕಿ_ಸಿಂದನೂರು_ನನ್ನ_ಅತಿಥಿ
#ರೈತ_ಸಂಘದ_ರಾಜ್ಯ_ನಾಯಕರು
#ಇಪ್ಪತ್ಮೂರು_ವರ್ಷದ_ಹಿಂದೆ_ಸಿಂದನೂರಿನ_ಇವರ_ಮನೆಯಲ್ಲಿ_ಬೇಟಿ_ಆಗಿದ್ದೆ
#ನಮ್ಮ_ಊರಿನ_ಸಮೀಪದ_ಸಾರಾ_ಸಂಸ್ಥೆಯಲ್ಲಿ_ನಡೆದ
#ಅಂತರಾಜ್ಯ_ಪರಿಸರ_ಅಧ್ಯಯನ_ಶಿಭಿರದ_ಸಮಾರೋಪಕ್ಕೆ_ಭಾಗವಹಿಸಲು_ಆಗಮಿಸಿದ್ದರು.
2021ರಲ್ಲಿ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ರೈತ ಹೋರಾಟಗಾರರಾದ ಸಿಂದನೂರಿನ #ಹನುಮನ_ಗೌಡಬೆಳಕುರ್ಕಿ ಆಗಿನ ಮುಖ್ಯಮಂತ್ರಿ ಯಡೂರಪ್ಪರಿಗೆ ಸಲ್ಲಿಸಿದ ಶಿಪಾರಸ್ಸುಗಳು ಸರ್ವಕಾಲಿಕ ಶ್ರೇಷ್ಠವರದಿ ಆಗಿದೆ.
ಇದಕ್ಕೆ ಕಾರಣ ಹನುಮನಗೌಡರು ಸ್ವತಃ ಕೃಷಿಕರು, ಬರಗಾಲದ ಉತ್ತರ ಕರ್ನಾಟಕದ ರೈತರ ಸಂಘಟನೆ ಮಾಡಿ ಪ್ರೊ.ನಂಜುಂಡ ಸ್ವಾಮಿ, ಬಾಬಾ ಗೌಡ ಪಾಟೀಲರಿಗೆ ಸರಿಸಮನಾಗಿ ಹೋರಾಟ ಮಾಡಿದವರು.
2021ರಲ್ಲಿ ಜಾರ್ಜ್ ಪರ್ನಾಂಡಿಸ್ ರ ಸಮತಾ ಪಾರ್ಟಿಯ ರಾಜ್ಯ ಪ್ರದಾನ ಕಾರ್ಯದರ್ಶಿ ಆಗಿದ್ದಾಗ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸದಲ್ಲಿ ರಾಯಚೂರು ಜಿಲ್ಲೆಯ ಸಿಂದನೂರಿನ ಇವರ ಮನೆಗೆ ರಾತ್ರಿ ತಲುಪಿ ಇವರ ಬೇಟಿ ಮಾಡಿ ಚರ್ಚಿಸಿದ್ದೆವು ಅವತ್ತು ನನ್ನ ಜೊತೆ ರೈತ ಹೋರಾಟ ಪತ್ರಿಕೆ ಸಂಪಾದಕರಾದ #ಎನ್_ಡಿ_ವಸಂತಕುಮಾರ್ ಮತ್ತು #ಮೈಸೂರಿನ_ಕರುಣಾಕರ್ ಇದ್ದರು.
ಮೊನ್ನೆ ಸೋಮವಾರ ರಾತ್ರಿ ನಮ್ಮ ಶ್ರೀವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ತಯಾರಿಯಲ್ಲಿ ಇದ್ದಾಗ ಎನ್.ಡಿ.ವಸಂತಕುಮಾರ್ ಬಂದವರು ಹನುಮನ ಗೌಡರು ಬಟ್ಟೆಮಲ್ಲಪ್ಪದ #ಸಾರಾ ಸಂಸ್ಥೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಪರಿಸರ ಸಂಬಂದಿ ಅಧ್ಯಯನ ಶಿಭಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಬರುತ್ತಿದ್ದಾರೆ ಅಂದಾಗ ತುಂಬಾ ಖುಷಿ ಆಯಿತು ಅವರ ಜೊತೆ ಪೋನಿನಲ್ಲಿ ಮಾತಾಡಿದಾಗ ಹೊನ್ನಾಳಿ ದಾಟಿದ ಸುದ್ದಿ ತಿಳಿದು ನನ್ನ ಲಾಡ್ಜ್ ಕಛೇರಿಯಲ್ಲಿ ಅವರ ಆಗಮನಕ್ಕೆ ಕಾದಿದ್ದೆವು.
ರಾತ್ರಿ ನಮ್ಮ ಅತಿಥಿ ಆಗಿ ಆತಿಥ್ಯ ಸ್ಟೀಕರಿಸಿ ನಮ್ಮ ಲಾಡ್ಜ್ ನಲ್ಲೇ ತಂಗಿದ್ದರು ಬೆಳಿಗ್ಗೆ ಸಾರ ಸಂಸ್ಥೆಗೆ ತೆರಳುವುದು ಅವರ ನಿಗದಿತವಾಗಿದ್ದ ಕಾರ್ಯಕ್ರಮ ಆಗಿತ್ತು.
ಇತ್ತೀಚಿಗೆ ಬೆನ್ನಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಆದ್ದರಿಂದ ಹನುಮನ ಗೌಡರು ಸ್ವಲ್ಪ ಆಯಾಸದಲ್ಲಿದ್ದಂತೆ ಕಂಡು ಬಂದರೂ ಅವರ ಈ ಸಂದರ್ಶನದ ವಿಡಿಯೋ ನೋಡಿ ಭ್ರಷ್ಟಾಚಾರದ ನಾಗಾಲೋಟದ ಬಗ್ಗೆ ಮಾತಾಡಿದ್ದಾರೆ.... ಡಿಜಿಟಲೈಸೇಶನ್ ಬಂದ ಮೇಲೆ ಲಂಚ ನಿಲ್ಲುತ್ತದೆ ಎಂದು ಭಾವಿಸಿದರೆ ಅದು ಕೆಲವು ಪಟ್ಟು ಹೆಚ್ಚಾಯಿತು....
ಮಂಗಳವಾರ ಕಾರ್ಯಕ್ರಮ ಮುಗಿಸಿ ನಮ್ಮ ದೇವಾಲಯ ತಲುಪುವಾಗ ರಥೋತ್ಸವ ನೆರವೇರಿ ಅನ್ನ ಸಂತರ್ಪಣೆ ಪ್ರಾರಂಭವಾಗಿತ್ತು, ವೇದಿಕೆ ಮೇಲೆ ಸಿದ್ದ ಸಮಾದಿ ಯೋಗದ #ಗಣೇಶ್_ಗುರೂಜಿ ಮತ್ತು ನಮ್ಮ ಊರಿನ ಶಾರದಾ ಸಂಗೀತ ಶಾಲೆಯ #ಶ್ರೀಮತಿ_ಗೀತಾ_ಸೋಮೇಶ್ ಅಂದಾಸುರ ಇವರು ಮತ್ತು ಇವರ ಪುತ್ರಿ ಹಾಗು ಇಬ್ಬರು ಪುತ್ರರು ಸಂಗೀತ ಕಛೇರಿ ನಡೆಸುತ್ತಿದ್ದರು ಮದ್ಯಾಹ್ನದ ದೇವಾಲಯದ ಅನ್ನ ಸಂತರ್ಪಣೆ ಜೊತೆ ಇಂಪಾದ ಸಂಗೀತ ಸಮರ್ಪಣೆ ಅವರಿಗೆ ಇಷ್ಟವಾಯಿತೆಂದರು.
ಭಕ್ತ ಜನ ಜಂಗುಳಿ ಮಧ್ಯ ಹನುಮನ ಗೌಡರನ್ನು ಅವರ ಜೊತೆ ಬಂದ ಸಾಗರದ ರೈತ ಮುಖಂಡರಾದ #ಗುಳ್ಳಳ್ಳಿ_ಬಸವರಾಜಗೌಡರು, ಜೇಡಿಸರ ರಾಜಶೇಖರ, ವಸಂತಕುಮಾರ್ ಹಿರಿಯ ಪತ್ರಕರ್ತರಾದ #ಯು_ಪಿ_ಜೋಸೆಫ್ ಇವರುಗಳನ್ನು ದೇವಾಲಯದ ಜಾತ್ರಾ ಸಮಿತಿ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಭಕ್ತರ ಜೊತೆ ಸೇರಿ ಅನ್ನಸಂತರ್ಪಣೆ ಪ್ರಸಾದ ಸ್ವೀಕರಿಸಿದ ಹನುಮನ ಗೌಡ ಬೆಳಕುರ್ಕಿ ಮತ್ತವರ ಸಂಗಡಿಗರನ್ನು ಬೀಳ್ಕೊಡಲಾಯಿತು.
ಈ ವರ್ಷದ ಜಾತ್ರೆಯಲ್ಲಿ ಆಯಾಸ - ಗಡಿಬಿಡಿ -ಅವಸರದಲ್ಲೂ ಇವರ ಆಗಮನ ಮನೋಲ್ಲಾಸಕ್ಕೆ ಕಾರಣವಾಯಿತು
Comments
Post a Comment