Blog number 1958. ಅಸ್ತಂಗತರಾದ ಖ್ಯಾತ ಸಾಹಿತಿ ಕೆ.ಟಿ.ಗಟ್ಟಿ ಬರೆದ ಕಾದಂಬರಿ ಸಿನಿಮಾ ಮಾಡಿದ ಕೋಣಂದೂರು ವೆಂಕಪ್ಪ ಗೌಡರು ... ಈ ಕಥೆಯ ನಿಜ ಕಥಾ ನಾಯಕ ನಮ್ಮ ಊರಿನ ಹಯಾತ್ ಸಾಹೇಬರು,
#ಖ್ಯಾತ_ಸಾಹಿತಿ_ಕೆಟಿ_ಗಟ್ಟಿ_ಇಹಲೋಕ_ಯಾತ್ರೆ_ಮುಗಿಸಿದ್ದಾರೆ
#ಅವರ_ಕಾರ್ಮುಗಿಲು_ಕಾದಂಬರಿ_ಸಿನಿಮಾ_ಆಗಿದೆ
#ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲುಕಿನ_ರಾಮಚಂದ್ರಪುರ_ಮಠದಲ್ಲಿ_ನಡೆದ_ಸತ್ಯಕಥೆ
#ಆ_ಕಾಲದಲ್ಲಿ_ದಾರಾವಾಹಿಯಂತೆ_ಇದು_ಪ್ರಜಾವಾಣಿಯಲ್ಲಿ_ಸುದ್ದಿಯಾಗಿತ್ತು
#ಈ_ಘಟನೆ_ಆದರಿಸಿ_ಕೆ_ಟಿ_ಗಟ್ಟಿ_ಪ್ರಜಾವಾಣಿ_ದೀಪಾವಳಿ_ವಿಶೇಷಾಂಕದ
#ಕಥಾ_ಸ್ಪದೆಗೆ_ಬರೆದ_ಕಥೆ_ಅವರಿಗೆ_ಪ್ರಥಮ_ಬಹುಮಾನ_ತಂದಿತ್ತು
#ನಮ್ಮ_ಜಿಲ್ಲೆಯ_ಖ್ಯಾತ_ಸಮಾಜವಾದಿ_ಲೇಖಕ_ಕೋಣಂದೂರು_ವೆಂಕಪ್ಪಗೌಡರು
#ಇದನ್ನು_ಸಿನೆಮಾ_ಮಾಡಿದ್ದರು
#ಅವತ್ತು_ರಾತ್ರಿ_ಕಾರ್ಮುಗಿಲು_ಕಾದಂಬರಿಯ_ನಿಜ_ಕಥಾನಾಯಕನನ್ನ_ಅವರಿಗೆ_ಬೇಟಿ_ಮಾಡಿಸಿದ್ದೆ.
ನನ್ನ ಬಾಲ್ಯದ ನೆನಪು ಬಹುಶಃ 1972-73 ನಾನು ಎರಡನೆ ತರಗತಿ ಓದುವಾಗ ಹೊಸನಗರ ತಾಲೂಕಿನ ರಾಮಚಂದ್ರಪುರ ಮಠದಲ್ಲಿ ನಡೆದ ಒಂದು ಘಟನೆ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಕಂತುಗಳಾಗಿ ಸುದ್ದಿ ಪ್ರಕಟವಾಗುತ್ತಿತ್ತು.
ಇದು ಆ ಕಾಲದ ವೈರಲ್ ಸುದ್ದಿ, ನಮ್ಮ ಹಳ್ಳಿಗೆ ನಮ್ಮ ಮನೆಗೆ ಮಾತ್ರ ಬರುತ್ತಿದ್ದ ಏಕೈಕ ಪತ್ರಿಕೆ ಪ್ರಜಾವಾಣಿ ಆದ್ದರಿಂದ ಈ ಸುದ್ದಿ ಓದಲು ಅನೇಕರು ನಮ್ಮ ಮನೆಗೆ ಬರುತ್ತಿದ್ದರು, ಓದಿ ಚರ್ಚಿಸುತ್ತಿದ್ದರು.
ಸಂಜೆ ನಂತರ ಈ ಪತ್ರಿಕೆ ನನ್ನ ತಾಯಿ ಮತ್ತು ಅವರ ಗೆಳತಿಯರ ನಡುವೆ ಚರ್ಚಾ ವೇದಿಕೆ ಆಗುತ್ತಿತ್ತು.
ಅದೇನೆಂದರೆ ಈ ಮಠದಲ್ಲಿ ಆನೆ ಕುದುರೆಗಳ ಸಾಕಲು ಇದ್ದ ಮುಸ್ಲಿಂ ಕುಟುಂಬದ ಸಾಹಸಿ ಯುವಕ ಮಠದಲ್ಲಿ ಆಶ್ರಯ ಪಡೆದಿದ್ದ ವಿಧವೆಯಾಗಿದ್ದ ಹವ್ಯಕ ತಾಯಿಯ ಮಗಳನ್ನು ಪ್ರೀತಿಸುತ್ತಾನೆ, ವಿಧವೆ ತಾಯಿಯನ್ನು ಅಲ್ಲಿ ಶೋಷಿಸುತ್ತಿದ್ದ ವಿಷವರ್ತುಲದಲ್ಲಿ ತನ್ನ ಪ್ರಾಯದ ಮಗಳು ಸಿಗಬಾರದೆಂದು ಆ ತಾಯಿ ಈ ಪ್ರೇಮಿಗಳಿಗೆ ಊರಿಂದ ಹೊರಗೆ ಹೋಗಲು ಸಹಕರಿಸುತ್ತಾಳೆ.
ಈ ಪ್ರೇಮಿಗಳು ಸಾಗರದಿಂದ ರೈಲಿನಲ್ಲಿ ಮದ್ರಾಸ್ ತಲುಪುತ್ತಾರೆ ಅಲ್ಲಿಂದ ಅವರನ್ನು ಪೋಲಿಸ್ ಸಹಾಯದಿಂದ ಹಿಡಿದು ತಂದು ಯುವಕನನ್ನು ಜೈಲಿಗೆ ಹಾಕಿ ಯುವತಿಯನ್ನು ತಾಯಿಯ ಜೊತೆ ಶೋಷಣೆಗೆ ಮಠದ ಪ್ರಭಾವಿಗಳು ಒಳಪಡಿಸುವ ಅದರಲ್ಲಿ ಯಶಸ್ವಿ ಆಗುತ್ತಾರೆ.
ಈ ವಿಷಯವನ್ನು ಆದರಿಸಿ ಕೆ.ಟಿ.ಗಟ್ಟಿ ಬರೆದ ಕಥೆ ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಪ್ರಥಮ ಬಹುಮಾನ ಪಡೆದಾಗಲೂ ಈ ಭಾಗದಲ್ಲಿ ದೊಡ್ಡ ಸುದ್ದಿ ಆಗುತ್ತದೆ.
ನಮ್ಮ ಊರಲ್ಲಿ ಅಷ್ಟೆಲ್ಲ ವಿಶೇಷ ಸುದ್ದಿ ಆಗಲು ಕಾರಣ ಈ ಕಥಾ ನಾಯಕನ ಭಗ್ನಪ್ರೇಮಿ ಕುಟುಂಬ ರಾಮಚಂದ್ರಪುರದ ಮಠದವರ ಹಿಂಸೆ ತಾಳದೆ ನಮ್ಮ ಯಡೇಹಳ್ಳಿಯಲ್ಲಿ ಬಂದು ನೆಲೆಸುತ್ತದೆ,ನನ್ನ ತಾಯಿಯ ಶಿಷ್ಯೆ ಹಾಗೂ ಗೆಳತಿ ಬೀಬಕ್ಕನ ತಂಗಿ ಪಾತೀಮಕ್ಕನ ಮದುವೆ ಆಗುತ್ತಾರೆ.
ನಂತರ ಈ ಕಥೆ ವಿಸ್ತರಿಸಿ ಕೆ.ಟಿ.ಗಟ್ಟಿ ಅವರು ಕಾರ್ಮುಗಿಲು ಕಾದಂಬರಿ ಪ್ರಕಟಿಸುತ್ತಾರೆ ಆ ಕಾದಂಬರಿಯನ್ನೇ ನನ್ನ ಆತ್ಮೀಯರಾದ ಕೋಣಂದೂರು ವೆಂಕಪ್ಪ ಗೌಡರು ತಮ್ಮ ಅಳಿಯನನ್ನ ಹೀರೋ ಮಾಡಿ ಕಾರ್ಮುಗಿಲು ಸಿನಿಮಾ ಮಾಡುತ್ತಾರೆ.
ಸಿನಿಮಾ ಶೂಟಿಂಗ್ ತೀರ್ಥಹಳ್ಳಿಯ ಮಠದಲ್ಲಿ ಕ್ಲಾಪ್ ಮಾಡಿಸಿ ಕೋಣಂದೂರು ವೆಂಕಪ್ಪ ಗೌಡರು ನನ್ನ ಅತಿಥಿ ಆಗಿ ಬಂದಾಗ ಲೇಖಕರಾಗಿ ಶಾಂತವೇರಿ ಗೋಪಾಲಗೌಡರ ಆತ್ಮ ಚರಿತ್ರೆ #ಜೀವಂತ_ಜ್ಞಾಲೆ, ಕೆಂಗಲ್ ಹನುಮಂತಯ್ಯ, ಹುಚ್ಚು ಮಾಸ್ತಿ ಗೌಡ, ದೇವರಾಜ ಅರಸು, ದೇವೇಗೌಡ, ಜೆ.ಹೆಚ್ ಪಟೇಲರ ಆತ್ಮಚರಿತ್ರೆ ಬರೆದ ಇವರಿಂದ ನನ್ನ ಗುರುಗಳಾದ #ಕಾಗೋಡು_ರೈತ_ಹೋರಾಟದ_ನೇತಾರ_ಗಣಪತಿಯಪ್ಪರ ಆತ್ಮಚರಿತ್ರೆ ಇವರಿಂದ ಬರೆಸಿದ್ದೆ.
ಅವತ್ತಿನ ಚಳಿಗಾಲದ ರಾತ್ರಿಯ ನಿಶೆಯ ಪಾರ್ಟಿ ರಂಗೇರಿದಾಗ......
ಸಿನಿಮಾದಲ್ಲಿ ಕಥಾನಾಯಕ ನಿಮ್ಮ ಅಳಿಯನಾದರೆ ಕಾರ್ಮುಗಿಲ ನಿಜ ಕಥಾನಾಯಕ ನಮ್ಮ ಊರಲ್ಲಿ ಇದ್ದಾರೆ ಅಂದಾಗ ಕೋಣಂದೂರು ವೆಂಕಪ್ಪ ಗೌಡರು ನಂಬಲಿಲ್ಲ, ಆಗ ನನ್ನ ಶಿಷ್ಯ ಮಾಫೀರನನ್ನು ಕಳಿಸಿ ನಿಜ ಕಥಾ ನಾಯಕನನ್ನ ಕೋಣಂದೂರು ವೆಂಕಪ್ಪ ಗೌಡರ ಎದುರು ಹಾಜರು ಪಡಿಸಿದೆ.
ಆವರೊಡನೆ ಅನೇಕ ಪ್ರಶ್ನೆಗಳನ್ನು ಹಾಕುತ್ತಾ ಅಂತಿಮವಾಗಿ ಕೋಣಂದೂರು ವೆಂಕಪ್ಪ ಗೌಡರು "ನಿಮ್ಮ ಊರಿನ ಹಯಾತ್ ಸಾಬ್ ಕಾರ್ಮುಗಿಲು ಕಾದಂಬರಿಯ ರಿಯಲ್ ಹೀರೋ" ಅಂದರು ಆದರೆ ಹಯಾತ್ ಸಾಹೇಬರಿಗೆ ಅವರ ಬಗ್ಗೆಯೇ ಕಥೆ - ಕಾದಂಬರಿ ಬಂದಿರುವುದು ಮತ್ತು ಸಿನಿಮಾ ಆಗುತ್ತಿರುವುದು ನಂಬಲಿಕ್ಕೆ ಸಾಧ್ಯವೇ ಆಗಲೇ ಇಲ್ಲ.
ಈಗ ಹಯಾತ್ ಸಾಹೇಬರು ಬದುಕಿಲ್ಲ, ಅವರ ಪತ್ನಿ ಪಾತೀಮಕ್ಕನಿಗೆ ಮತ್ತು ಕಿರಿಯ ಪುತ್ರ ಮುನೀರ್ ಗೆ ವಿಚಾರ ತಿಳಿಸಿದ್ದೇನೆ.
ಇವತ್ತು ನಮ್ಮ ಊರಿನಲ್ಲಿ ನೆಲೆಸಿರುವ ಕಥಾನಾಯಕನ ಕಥೆ ಕಾರ್ಮುಗಿಲು ಬರೆದ ಖ್ಯಾತ ಸಾಹಿತಿ ಕೆ.ಟಿ.ಗಟ್ಟಿ ಅಸ್ತಂಗರಾದ ಸುದ್ದಿ ಕೇಳಿ ಬೇಸರವಾಯಿತು ಅವರನ್ನು ಭೇಟಿ ಮಾಡಿ ಈ ವಿಚಾರ ಚರ್ಚಿಸುವ ನನ್ನ ಆಸೆ ಈಡೇರಲೇ ಇಲ್ಲ....
Comments
Post a Comment