#ನಿನ್ನೆ_ಭಾರತ್_ಹುಣ್ಣಿಮೆ
#ಸವದತ್ತಿ_ಎಲ್ಲಮ್ಮ_ದೇವಾಲಯದಲ್ಲಿ
#ಭಕ್ತರಿಗೆ_ಗಿಣ್ಣ_ಉಣಬಡಿಸುತ್ತಾರೆ
#ನಿನ್ನೆ_ರಾತ್ರಿ_ಹೊಟ್ಟೆ_ತುಂಬಾ_ಗಿಣ್ಣ_ತಿಂದೆ.
#ಗಿಣ್ಣ_ಕನ್ನಡದಲ್ಲಿ
#ಜನ್ನುಪಾಲು_ತೆಲುಗಿನಲ್ಲಿ
#ಕಾವಾ೯_ಮರಾಠಿ_ಮತ್ತು_ಹಿಂದಿಯಲ್ಲಿ
#ಕೌವ್_ಕೊಲಸ್ಟ್ರಮ್_ಇಂಗ್ಲೀಷನಲ್ಲಿ.
#ಗಿಣ್ಣದಲ್ಲಿ_ಏನೇನೆಲ್ಲ_ಇದೆ.
#ಆತ್ಮಹತ್ಯೆಯೆ೦ಬ_ಹತಾಷೆ_ಮನಸ್ಸಿಂದ_ದೂರ_ಮಾಡುವ_ಶಕ್ತಿ_ಗಿಣ್ಣಕ್ಕಿದೆ.
#ಆಯುರ್ವೇದದಲ್ಲಿ_ಪೀಯುಷ್_ಅಂದರೆ_ಅಮೃತ_ಎಂಬ_ಹೆಸರು_ಗಿಣ್ಣಕ್ಕೆ
https://youtu.be/vTQE5XjtY2Y?feature=shared
ಸಾಗರದ #ಜೈಹಿಂದ್_ಬೇಕರಿಯಿಂದ ಕಾಮದೇನು ಗಿಣ್ಣದ ಪುಡಿ ನಾಲ್ಕು ಪ್ಯಾಕೆಟ್ ತರಿಸಿದ್ದೆ, 100 ಗ್ರಾಮ್ ನ ಒಂದು ಪ್ಯಾಕೆಟ್ ಗೆ ರೂ 75.
ಅರ್ದ ಲೀಟರ್ ಗಟ್ಟಿ ಹಸಿ ಹಾಲಿಗೆ ಒಂದು ಪ್ಯಾಕೆಟ್ ಕಾಮದೇನು ಗಿಣ್ಣದ ಪುಡಿ ಹಾಗೂ 150 ಗ್ರಾಂ ಬೆಲ್ಲ ಅಥವ ಸಕ್ಕರೆ ಮತ್ತು ಏಲಕ್ಕಿ ಪುಡಿ ಮಿಶ್ರಮಾಡಿ (ಗಂಟಾಗದಂತೆ) ಅದನ್ನ ಇಡ್ಲಿ ಪಾತ್ರೆ ಅಥವ ಕುಕರ್ ನಲ್ಲಿ 10 ರಿಂದ 15 ನಿಮಿಷ ಬೇಯಿಸಿ ತಣ್ಣಗಾದ ನಂತರ ಸೇವಿಸಬಹುದು ಇನ್ನೂ ಹೆಚ್ಚಿನ ಸ್ವಾದಕ್ಕೆ 30 ನಿಮಿಷ ಪ್ರಿಜ್ ನಲ್ಲಿಟ್ಟು ತಿನ್ನಬಹುದು.
ನಿನ್ನೆ ಬಾರತ್ ಹುಣ್ಣಿಮೆ ಈ ದಿನ ಪ್ರತಿ ವರ್ಷ ಪ್ರಖ್ಯಾತವಾದ ಸವದತ್ತಿಯ ಎಲ್ಲಮ್ಮ ದೇವಿಯ ದೇವಾಲಯದಲ್ಲಿ ಭಕ್ತರಿಗೆ ಗಿಣ್ಣ ಸಂತರ್ಪಣೆ ನಡೆಯುತ್ತದೆ ಆದ್ದರಿಂದ ನಿನ್ನೆ ಗಿಣ್ಣ ತಿನ್ನಲೇ ಬೇಕೆಂಬ ಆಸೆ ಈಡೇರಿಸಲು ಮಗ ಒಂದು ಲೀಟರ್ ಹಾಲಿಂದ ಗಿಣ್ಣ ತಯಾರಿಸಿದ್ದ ಇದು ಐದಾರು ಜನ ತಿನ್ನ ಬಹುದು ಆದರೆ ನಾವಿಬ್ಬರೇ ಖಾಲಿ ಮಾಡಿದೆವು.
ಈ ರೀತಿ ಬಾರತ್ ಹುಣ್ಣಿಮೆ ರಸವತ್ತಾಗಿ ಆಚರಿಸಿ ಗಿಣ್ಣದ ಸಮಾರಾಧನೆ ನಡೆಸಿದೆ, ಗಿಣ್ಣದ ಬಗ್ಗೆ ಇರುವ ಮಾಹಿತಿಗಳು ಇಲ್ಲಿವೆ....
ಭಾರತೀಯ ಆಯುರ್ವೇದದಲ್ಲಿ ಇದಕ್ಕೆ ಅಮೃತ ಎಂಬ ಸಂಸ್ಕೃತದ #ಪೀಯೂಷ್ ಎಂಬ ಹೆಸರಿದೆ.
ಭಾರತೀಯರಲ್ಲಿ ಮೇಲ್ವರ್ಗದ ಕೆಲ ಜಾತಿಗಳು ಎಮ್ಮೆ ಮತ್ತು ದನದ ಗಿಣ್ಣದ ಹಾಲು ಬಳಕೆ ನಿಷೇದವಿದೆ, ಹನ್ನೊಂದು ದಿನದ ತನಕ ಆಮೆ (ಸೂತಕ ) ಎಂದು ಗಿಣ್ಣದ ಹಾಲು ಕರುಗಳಿಗೆ ಬಿಡುವ ಸಂಪ್ರದಾಯವಿದೆ, ಈ 11 ದಿನದ ಹಾಲು ಹುಟ್ಟಿದ ಕರುಗಳಿಗೆ ತುಂಬಾ ಆರೋಗ್ಯ ವೃದ್ಧಿ ನೀಡುವ ಹಾಲು ಎಂಬುದು ಒಂದು ಕಾರಣ ಇರಬಹುದು.
ವೀರಶೈವ ಲಿಂಗಾಯಿತರಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ ಅದಕ್ಕೆ ಗಾದೆಯೂ ಇದೆ ಗಿಣ್ಣ ಮಾಡಿದರೆ ಶತ್ರು ಕೂಡ ಮಿತ್ರನಾಗಿ ಬರುತ್ತಾನೆ ಎಂಬ ಅರ್ಥವಿದೆ.
ಗಿಣ್ಣದ ಹಾಲನ್ನು ಯಾವ ಕಾರಣಕ್ಕೂ ಹಸಿಯಾಗಿ ಸೇವಿಸಬಾರದೆಂಬ ನಿಯಮಕ್ಕೆ ವೈಜ್ಞಾನಿಕ ಕಾರಣವೂ ಇದೆ, ಗಿಣ್ಣವನ್ನು ಸೇವಿಸಿದರೆ ಮನಸ್ಸಿನಲ್ಲಿನ ಆತ್ಮಹತ್ಯೆಯಂತ ಹತಾಶ ಭಾವನೆ ಮಾಯವಾಗುತ್ತೆ ಎಂಬ ನಂಬಿಕೆಯೂ ಇದೆ.
ಹೆಚ್ಚು ಗಿಣ್ಣ ಸೇವಿಸಿದರೆ ನಂಜಾಗುತ್ತದೆ ಅದಕ್ಕೆ ಕಹಿ ಜೀರಿಗೆ ಕಷಾಯ, ಕೊಡಸಿನ ಬೇರನ್ನು ಲಿಂಬೆ ರಸದಲಿ ತೇದಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕೆಂಬ ಪರಿಹಾರವೂ ಚಾಲ್ತಿಯಲ್ಲಿದೆ.
ಹೈಪ್ರೋಟೀನ್, ರೋಗ ನಿರೋದಕ ಶಕ್ತಿ, ನರ ದೌರ್ಬಲ್ಯ ಸರಿಪಡಿಸುವ, ಎಳೆಯ ಮಕ್ಕಳು ಮತ್ತು ವೃದ್ಧಪ್ಯಾದಲ್ಲಿ ದೇಹಕ್ಕೆ ಬೇಕಾದ ಶಕ್ತಿ ವೃದ್ದಿಸುವ ಗಿಣ್ಣು ಸೇವನೆ ಒಳ್ಳೆಯದೆಂಬ ಸಂಶೋದನೆ ಆಗಿದೆ.
Comments
Post a Comment