Blog number 1973. ನನ್ನ ತಂದೆಯ ಗೆಳೆಯರಾದ ಯೋಮಕೇಶಪ್ಪ ಗೌಡರಿಗೆ ನಾನು ಒತ್ತಾಯದಿಂದ ನೀಡಿದ ಹೆಲ್ಮೆಟ್ ರಸ್ತೆ ದಾಟುವ ಕಾಡುಹಂದಿಗಳ ಗೊಲ್ಲೆಯಿಂದ ಅವರ ಜೀವ ಉಳಿಸಿತ್ತು, ಹೆಲ್ಮೆಟ್ ನಿರ್ಲಕ್ಷಿಸುವ ಇಂದಿನ ಯುವಕರು
#ಇತ್ತೀಚಿಗೆ_ಮೋಟಾರ್_ಬೈಕ್_ಅಪಘಾತವಾದರೆ_ಸವಾರರು_ಬದುಕುಳಿಯುವುದಿಲ್ಲ
#ಮಿತಿ_ಮೀರಿದ_ವೇಗವಾಗಿ_ಚಲಿಸುವ_ಬೈಕ್_ಅದಕ್ಕೆ_ತಕ್ಕನಾದ
#ನೂತನ_ತಂತ್ರಜ್ಞಾನದ_ಹೆದ್ದಾರಿಗಳು_ಮತ್ತು_ಹೆಲ್ಮೆಟ್_ಧರಿಸದ_ಆದುನಿಕ_ಸವಾರರು.
#ಇವತ್ತಿನ_ಯುವ_ಜನಾಂಗ_ಹೆಲ್ಮೆಟ್_ದ್ವೇಷಿಗಳು_ಯಾಕೆ?
#ಲಕ್ಷಾಂತರ_ರೂಪಾಯಿ_ಬೈಕ್_ಖರೀದಿಸುವವರಿಗೆ_ಹೆಲ್ಮೆಟ್_ಖರೀದಿಸಲಾಗದ_ಬಡತನ
#ಹೆಲ್ಮೆಟ್_ಧರಿಸಿದೆ_ಜೀವ_ಕಳೆದು_ಕೊಳ್ಳುವ_ದುರಂತ
#ನನ್ನ_ಹೆಲ್ಮೆಟ್_ಅಭಿಯಾನ_ಯಶಸ್ಸು_ಸಾಧಿಸಲೇ_ಇಲ್ಲ
#ಹೆಲ್ಮೆಟ್_ಕಡ್ಡಾಯ_ಕಾನೂನು_1976ರಲ್ಲಿ_ಗುಂಡೂರಾವ್_ಸರ್ಕಾರ_ಮಾಡಿತ್ತು
#ಹೆಲ್ಮೆಟ್_ಯೋಮಕೇಶಪ್ಪಗೌಡರ_ಜೀವ_ಉಳಿಸಿತ್ತು
#ಕೊನೆ_ಗಳಿಗೆಯಲ್ಲಿ_ಅವರಿಗೆ_ಹೆಲ್ಮೆಟ್_ನೀಡುವ_ಪ್ರೇರಣೆಗೆ_ಕಾರಣ_ಗೊತ್ತಿಲ್ಲ
ಇವತ್ತು ಬೆಳಿಗ್ಗೆ ಬಂದ ಸುದ್ದಿ ನಿನ್ನೆ ಸಂಜೆ ಶಿಕಾರಿಪುರದ ಕಪ್ಪನಳ್ಳಿಯ ಹೋರಿ ಓಡಿಸುವ ಸ್ಪರ್ದೆ ನೋಡಿ ನಮ್ಮ ಊರಿಗೆ ವಾಪಾಸಾಗುತ್ತಿದ್ದ ಇಬ್ಬರ ಯುವಕರು ಅಪಘಾತವಾಗಿ ಒಬ್ಬರು ಮೃತರಾಗಿದ್ದಾರೆ ಅವರು ನಮ್ಮ ಆನಂದಪುರಂನ ರಾಜ್ಯ ಪ್ರಶಸ್ತಿ ವಿಜೇತ ದಿವಂಗತ ಲಿಂಗಪ್ಪ ಜೋಗಿ ಅಳಿಯ.
ಇತ್ತೀಚಿಗೆ ಮೋಟಾರ್ ಬೈಕ್ ಅಪಘಾತವಾದರೆ ಸವಾರರು ಬದುಕುಳಿಯುವುದಿಲ್ಲ ಕಾರಣ ಮಿತಿ ಮೀರಿದ ವೇಗವಾಗಿ ಚಲಿಸುವ ಬೈಕ್ ಗಳು ಅದಕ್ಕೆ ತಕ್ಕನಾದ ನೂತನ ತಂತ್ರಜ್ಞಾನದ ಹೆದ್ದಾರಿಗಳು ಮತ್ತು ಹೆಲ್ಮೆಟ್ ಧರಿಸದ ಆದುನಿಕ ಸವಾರರು.
ಈ ಕಾರಣದಿಂದಲೇ ನಾನು ಹೆಲ್ಮೆಟ್ ಖರೀದಿಸಿ ಕೆಲವರಿಗೆ ಹಂಚಿದೆ ಆದರೆ ಅವರಲ್ಲಿ ಅನೇಕರು ಹೆಲ್ಮೆಟ್ ದರಿಸುವುದಿಲ್ಲ ಅವರು ಹೇಳುವುದು ನಾವೆಲ್ಲ ದೂರ ಪ್ರಯಾಣ ಮಾಡುವುದಿಲ್ಲ ಆದ್ದರಿಂದ ಹೆಲ್ಮೆಟ್ ಬೇಕಾಗಿಲ್ಲ.
ನಮ್ಮ ಊರಿನ ಶ್ಯಾಮಿಯಾನ ಉದ್ಯಮಿ ಮಾಪೀರ್, ರಿಪ್ಪನ್ ಪೇಟೆ ಪತ್ರಕರ್ತ ತ.ಮ.ನರಸಿಂಹ ನಾನು ನೀಡಿದ ಹೆಲ್ಮೆಟ್ ಧರಿಸುವುದಿಲ್ಲ, ನವಟೂರಿನ ಕಾರ್ಪೆಂಟರ್ ಮಂಜುನಾಥ ಆಚಾರ್ ತಪ್ಪದೆ ಧರಿಸುತ್ತಾರೆ.
ಇತ್ತೀಚಿಗೆ ಗೆಳೆಯ ಕಾರ್ಗಲ್ ಹೋಟೆಲ್ ಉದ್ಯಮಿ ಅಣ್ಣಪ್ಪರ ಏಕೈಕ ಪುತ್ರ ಪತ್ನಿ ಮನೆಯಿಂದ ಬೈಕ್ ಲ್ಲಿ ಬರುವಾಗ ಹೆಲ್ಮೆಟ್ ಧರಿಸಿದ್ದವರು ಮಾರ್ಗ ಮಧ್ಯೆ ದೇವರ ಗುಡಿಗೆ ಹೋಗಿ ಕೈ ಮುಗಿದು ಹೊರಟವರು ಹೆಲ್ಮೆಟ್ ಧರಿಸದೆ ಬೈಕ್ ಹ್ಯಾಂಡಲಿಗೆ ತಗಲು ಹಾಕಿದ್ದರು ಆ ಕ್ಷಣದಲ್ಲೇ ಅಪಘಾತವಾಗಿ ಮೃತರಾದ ಸುದ್ದಿ ಅಘಾತಕರ.
ಲಕ್ಷಾಂತರ ರೂಪಾಯಿಯ ಬೈಕ್ ಖರೀದಿಸುವ ಯುವ ಜನತೆ ಹೆಲ್ಮೆಟ್ ಕಡ್ಡಾಯ ಧರಿಸಬೇಕೆಂಬ ಕಾನೂನು ಇದ್ದರು ಹೆಲ್ಮೆಟ್ ಧರಿಸುವುದಿಲ್ಲ ಕಾರಣ ಕೇಳಿದರೆ ಇತ್ತೀಚಿಗೆ ಒಬ್ಬ ಯುವಕ ಹೇಳಿದ್ದು ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆ... ನಗಬೇಕೋ ಅಳಬೇಕೋ ನೀವೇ ಹೇಳಿ.
1976 ನಾನು ಆರನೆ ತರಗತಿ ವಿದ್ಯಾರ್ಥಿ ಆಗ ನನ್ನ ತಂದೆಯ ಗೆಳೆಯರಾದ #ಯೋಮಕೇಶಪ್ಪ ಗೌಡರು ಆಗಾಗ್ಗೆ ತಮ್ಮ ಹಿರೇಹಾರಕದ ಮನೆಯಿಂದ ತಮ್ಮ ರಾಜದೂತ್ ಬೈಕ್ ನಲ್ಲಿ ಬಂದು ನಮ್ಮ ಮನೆಯಲ್ಲಿ ಬೈಕ್ ಇಟ್ಟು ಸಾಗರ ಅಥವ ಶಿವಮೊಗ್ಗಕ್ಕೆ ಹೋಗಿ ಅವರ ಕೆಲಸ ಮುಗಿಸಿ ಬಂದವರು ಆ ರಾತ್ರಿ ತಂಗಲು ನಮ್ಮ ಊರಿನ ಸಮೀಪದ ಬಸವನಕೊಪ್ಪದ ಅವರ ಮಾವ ಚೆನ್ನವೀರಪ್ಪ ಗೌಡರ ಮನೆಗೆ (ನಿಜಲಿಂಗಪ್ಪ ಗೌಡರ ತಂದೆ) ಹೋಗುತ್ತಿದ್ದರು.
1975-76 ರಿಂದಲೆ ಸರ್ಕಾರ ಹೆಲ್ಮೆಟ್ ಕಡ್ಡಾಯ ಮಾಡಿದ್ದರಿಂದ ಅವರು ಅರಿಶಿಣ ಬಣದ ಇಂಡಸ್ಟ್ರೀಯಲ್ ಸೇಫ್ಟಿ ಹೆಲ್ಮೆಟ್ ಖರೀದಿಸಿ ಧರಿಸುತ್ತಿದ್ದರು ಆದರೆ ಅವರ ಮಾವನ ಮನೆಗೆ ಹೋಗುವಾಗ (ನಮ್ಮ ಮನೆಯಿಂದ 2 ಕಿ.ಮಿ) ಹೆಲ್ಮೆಟ್ ಧರಿಸದೆ ನಮ್ಮ ಮನೆಯಲ್ಲೇ ಇಟ್ಟು ಹೋಗುವುದು ಅವರ ಅಭ್ಯಾಸ.
ಅವತ್ತು ಸಂಜೆ ಶಿವಮೊಗ್ಗದಿಂದ ಬಂದವರು ನನ್ನ ತಂದೆ ಹತ್ತಿರ ಸ್ವಲ್ಪ ಹೊತ್ತು ಮಾತಾಡಿ ಬಸವನಕೊಪ್ಪದ ಅವರ ಮಾವನ ಮನೆಗೆ ಹೊರಟು ಅವರ ರಾಜದೂತ್ ಬೈಕ್ ಸ್ಟಾರ್ಟ್ ಮಾಡಲು ಬೈಕ್ ಕಿಕ್ಕರ್ ತುಳಿಯುವಾಗ ನನಗೆ ಅವರಿಗೆ ಹೆಲ್ಮೆಟ್ ಕೊಡಲೇ ಬೇಕು... ಅವರು ಹೆಲ್ಮೆಟ್ ಧರಿಸಿಯೇ ಬೈಕ್ ಚಲಾಯಿಸಲಿ...ಅನ್ನಿಸಿ ನಮ್ಮ ಮನೆಯಲ್ಲಿಟ್ಟಿದ್ದ ಹೆಲ್ಮೆಟ್ ತೆಗೆದುಕೊಂಡು ಓಡಿ ಹೋಗಿ ಅವರಿಗೆ ನೀಡಿದೆ.
ಅವರು ... " ಇಲ್ಲೇ ಬಸವನ ಕೊಪ್ಪಕ್ಕೆ ಹೋಗಿ ಬರೋಕೆ ಹೆಲ್ಮೆಟ್ ಯಾಕೆ... ಹುಡುಗ ತಂದು ಕೊಟ್ಟಿದ್ದು ನಿರಾಕರಿಸ ಬಾರದು ಇರಲಿ" ಅಂತ ಹೆಲ್ಮೆಟ್ ಆರೆ ಮನಸ್ಸಿನಿಂದಲೇ ಧರಿಸಿ ಬೈಕ್ ಚಾಲು ಮಾಡಿ ಹೋದರು.
ಅವರು ಹೋಗಿ ಕೆಲ ಕ್ಷಣದಲ್ಲೇ ಕಾಡು ಹಂದಿಗಳ ಗೊಲ್ಲೆ ರಸ್ತೆ ದಾಟಲು ಹೋಗುತ್ತಿದ್ದವು ವೇಗವಾಗಿ ಓಡುತ್ತಾ ಯೋಮಕೇಶಪ್ಪ ಗೌಡರ ಬೈಕ್ ಗೆ ನುಗ್ಗಿ ಅಪಘಾತವಾಗಿ ಗೌಡರು ಬದುಕಿದ್ದೇ ಹೆಚ್ಚು... ಅವರು ಧರಿಸಿದ್ದ ಹೆಲ್ಮೆಟ್ ಎರಡು ಸೀಳಾಗಿತ್ತು... ಅವತ್ತು ಹೆಲ್ಮೆಟ್ ಇಲ್ಲದಿದ್ದರೆ ಗೌಡರು ತಲೆಗೆ ನೇರವಾಗಿ ಪೆಟ್ಟಾಗಿ ಬದುಕುಳಿಯುತ್ತಿದ್ಧಿರಲಿಲ್ಲ,ನಾನು ಅವರಿಗೆ ಕೊನೆಗಳಿಗೆಯಲ್ಲಿ ಹೆಲ್ಮೆಟ್ ಕೊಡಬೇಕೆಂದು ಅನ್ನಿಸಿದ್ಧಕ್ಕೆ ಉತ್ತರ ಸಿಕ್ಕಿಲ್ಲ.
"ಕೃಷ್ಣಣ್ಣ ನಿನ್ನ ಮಗ ಹೆಲ್ಮೆಟ್ ಕೊಡದಿದ್ದರೆ ನಾನು ಬದುಕುತ್ತಿರಲಿಲ್ಲ" ಅಂತ ಯೋಮಕೇಶಪ್ಪ ಗೌಡರು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ನಮ್ಮ ತಂದೆಯ ಕ್ಲೀನಿಕ್ ನಲ್ಲಿ ಹೇಳುತ್ತಿದ್ದ ಮಾತು ನನ್ನ ಮನದಾಳದಲ್ಲಿ ಹಾಗೇ ಉಳಿದಿದೆ.
ಕಾನೂನಿನ ಕಡ್ಡಾಯಕ್ಕಾಗಿ ಅಲ್ಲ ನಮ್ಮ ಜೀವ ರಕ್ಷಣೆಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಬೈಕ್ ಸವಾರರ ಜೀವ ರಕ್ಷಣೆಗಾಗಿಯೇ 47 ವರ್ಷದ ಹಿಂದೆಯೇ ಹೆಲ್ಮೆಟ್ ಕಡ್ಡಾಯ ಕಾನೂನು ಜಾರಿ ಆಗಿದೆ ಆದರೆ ಹೆಲ್ಮೆಟ್ ಧರಿಸಲು ನಿರ್ಲಕ್ಷ್ಯ ವಹಿಸುವವರೇ ಈಗಲೂ ಜಾಸ್ತಿ.
ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವವರಿಗೆ ಅವರವರ ಮನೆಯಲ್ಲಿಯೇ ಅವಕಾಶ ನೀಡಬಾರದು, ಈ ಮೂಲಕ ನಿಮ್ಮ ಕುಟುಂಬದ ಸದಸ್ಯರ ಜೀವ ರಕ್ಷಣೆ ಮಾಡಿ ಎಂದು ವಿನಂತಿಸುತ್ತೇನೆ.
Comments
Post a Comment