Skip to main content

Blog number 1662.ಮಾವಿನಗುಂಡಿ ಜಂಕ್ಷನ್ ದಿನದ 24 ಗಂಟೆ ಎಚ್ಚರವಾಗಿರುವ ಏಕೈಕ ಪಶ್ಚಿಮ ಘಟ್ಟದ ಊರು ಜೋಗ ಜಲಪಾತದ ಅಂಚಿನಲ್ಲಿದೆ.

ಕಳೆದ ವರ್ಷ ಬರೆದ ಈ ಪೋಸ್ಟ್ ವಿಶೇಷ ಗೊತ್ತಾ ?...
ನಾನು ಬರೆದ ಲೇಖನ ಓದಿದವರಿಗೆ ಇಷ್ಟ ಆಗುವುದು ಆಗದಿರುವುದು ಸಹಜ ಆದರೆ ಈ ಲೇಖನ ಬರೆದ ನನಗೇ ಇದು ಇಷ್ಟ ಆದ್ದರಿಂದ ಇನ್ನೊಮ್ಮೆ 

#ಮಾವಿನಗುಂಡಿ_ಎಂಬ_ಮಾಯಾ_ಜಗತ್ತು

#ಶಿವಮೊಗ್ಗ_ಜಿಲ್ಲೆಯ_ಅಂಚು_ಉತ್ತರಕನ್ನಡ_ಜಿಲ್ಲೆ

#ಇದು_ಪಶ್ಚಿಮಘಟ್ಟದ_ಉತ್ತರ_ದಕ್ಷಿಣ_ಪೂರ್ವ_ಪಶ್ಚಿಮ_ಸಂಪರ್ಕಿಸುವ_ಹೆಬ್ಬಾಗಿಲು

#ಮಹಿಳಾ_ಸತ್ಯಾಗ್ರಹಿಗಳ_ಊರು

#ಮಳೆಗಾಲದ_ಮಾವಿನಗುಂಡಿ_ಪಾಲ್ಸ್

#ಜೋಗಜಲಪಾತದಿಂದ_ಕೇವಲ_ಮೂರು_ಕಿಮಿ

#ಅನಾನಸ್_ಹಣ್ಣಿನ_ಮೌಲ್ಯವರ್ಧನೆ_ಮೊದಲು_ಮಾಡಿದ_ಐನಕೈ_ಅಶೋಕಹೆಗಡೆ_ಊರು

#ದಿನದ_ಇಪ್ಪತ್ನಾಲ್ಕು_ಗಂಟೆಯೂ_ಎಚ್ಚರವಾಗಿರುವ_ಪುಟ್ಟ_ಊರು.
   ಮಾವಿನಗುಂಡಿ ಅನ್ನುವ ಊರೇ ಒಂದು ವಿಸ್ಮಯ ಅಲ್ಲಿ ಮೂರು ರಸ್ತೆ ಸೇರುತ್ತದೆ, ಪಶ್ಚಿಮ ಘಟ್ಟದ ಮಧ್ಯದ ಈ ಪುಟ್ಟ ಊರಿ೦ದ ಜೋಗ ಜಲಪಾತ 3 ಕಿ.ಮಿ ಮಾತ್ರ.
  ಈ ಊರಿನ ಹೆಸರಿನದ್ದೇ 292 ಮೀಟರ್ ಎತ್ತರದ ಜಲಪಾತ ಮಳೆಗಾಲದ ಜೂನ್ ನಿಂದ ನವೆಂಬರ್ ತನಕ ವೀಕ್ಷಿಸಬಹುದು.
  ಈ ಊರಿಗೆ ಕೇರಳ - ಗೋವಾ ಮತ್ತು ಕರಾವಳಿಯ ಸಂಪರ್ಕದ ಹೊನ್ನಾವರ - ಬೆಂಗಳೂರು ಘಾಟಿ ರಸ್ತೆಗೆ ನೂರಾರು ವರ್ಷದ ಇತಿಹಾಸ ಇದೆ ಕಾಳು ಮೆಣಸಿನ ರಾಣಿ ಚೆನ್ನಬೈರಾದೇವಿ ಆಳಿದ ಗೇರುಸೊಪ್ಪೆಗೆ ಸಿರ್ಸಿ - ಸಿದ್ಧಾಪುರ - ಸಾಗರಗಳಿಂದ ಇದೇ ಮಾರ್ಗದಲ್ಲಿ ಸಾಗಬೇಕಾಗಿತ್ತು.
  ಇಲ್ಲಿಂದ ಸಿದ್ದಾಪುರ - ಸಿರ್ಸಿ - ಹುಬ್ಬಳ್ಳಿಗೂ ಒಂದು ರಸ್ತೆ ಇದೆ.
   ಅರಬ್ಬೀ ಸಮುದ್ರದಿಂದ ಶರಾವತಿ ನದಿಯಲ್ಲಿ ಇಲ್ಲಿಯವರೆಗೆ ನದಿ ಮಾರ್ಗವೂ ಒಂದು ಕಾಲದಲ್ಲಿ ಬಳಕೆಯಲ್ಲಿತ್ತು ಈಗ ಮಧ್ಯದಲ್ಲಿ ಗೇರುಸೊಪ್ಪೆಯಲ್ಲಿ ಆಣೆಕಟ್ಟು ನಿರ್ಮಾಣವಾಗಿದೆ.
   ಬ್ರಿಟಿಷರ ಕಾಲದಲ್ಲಿ ಇದು ಬಾಂಬೆ ಪ್ರಾವಿನ್ಸಿಸ್ ಗೆ ಸೇರಿದ ಅಂಚಿನ ಊರು ಇದು, ಪಕ್ಕದ ಜೋಗದಿಂದ ಮೈಸೂರು ರಾಜ್ಯಕ್ಕೆ ಸೇರಿತ್ತು.
   ಬ್ರಿಟಿಷರ ಆಡಳಿತದಲ್ಲಿ ದೊಡ್ಡ ಮಟ್ಟದಲ್ಲಿ ಕರನಿರಾಕರಣಾ ಚಳವಳಿಯಲ್ಲಿ ಈ ಭಾಗದ ಜನರು ಭಾಗವಹಿಸಿದ್ದರು ಈ ರೀತಿ ಕರನಿರಾಕರಣೆ ಚಳವಳಿಯಲ್ಲಿ ಭಾಗವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಚರ-ಸ್ಥಿರ ವಸ್ತು ಆಸ್ತಿಗಳನ್ನು ಬ್ರಿಟೀಷರು ವಶಪಡಿಸಿಕೊಂಡು ಹರಾಜು ಹಾಕುತ್ತಿದ್ದರು ಇದನ್ನು ವಿರೋದಿಸಿದ ಮಹಿಳೆಯರು ಹರಾಜು ಹಿಡಿದವರ ಮನೆ ಎದರು ಆ ಎಲ್ಲಾ ವಸ್ತು ವಾಪಾಸು ಮಾಡುವ ತನಕ ಸತ್ಯಾಗ್ರಹ ಮಾಡುತ್ತಿದ್ದರು.
   ಈ ದೀರ ಮಹಿಳಾ ಸತ್ಯಾಗ್ರಹಿಗಳಲ್ಲಿ ಪ್ರಮುಖರು ತ್ಯಾಗಲಿ ಭುವನೇಶ್ವರಮ್ಮ, ಕಲ್ಲಾಳ ಲಕ್ಷ್ಮಮ್ಮ, ದೊಡ್ಮನೆ ಮಹಾದೇವಮ್ಮ, ಕುಳೀಬೀಡು ಗಣಪಮ್ಮ, ಹಣಜಿಬೈಲು ದುಗ್ಗಮ್ಮ, ಕುಳೀಬೀಡು ಭಾಗಿರಥಮ್ಮ, ಕಲ್ಲಾಳ ಕಾವೇರಮ್ಮ, ಹೊಸಕೊಪ್ಪ ಸೀತಮ್ಮ, ಗುಂಜಗೋಡು ಮಹಾದೇವಮ್ಮ, ಹೆಗ್ಗಾರ ದೇವಮ್ಮ ಮತ್ತಿತರರು 1932ರಲ್ಲಿ ನಿರಂತರ ಸತ್ಯಾಗ್ರಹ ನಡೆಸಿದ್ದ ಮಹಾನ್ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕವನ್ನು ಇಲ್ಲಿ ನಿರ್ಮಿಸಿದ್ದಾರೆ ಈ ಸ್ಮಾರಕದ ಹೆಸರು #ಮಾವಿನಗುಂಡಿ_ಮಹಿಳಾ_ಸತ್ಯಾಗ್ರಹ_ಸ್ಮಾರಕ.
   ಮಾವಿನಗುಂಡಿ ಊರಿನಲ್ಲಿ ಅರಣ್ಯ ಇಲಾಖೆಯ ತಪಾಸಣ ಗೇಟ್ ಒಂದಿದೆ ಇದರ ಎದರು ಅಶೋಕ ಹೆಗ್ಗಡೆ ಎಂಬ ನನ್ನ ಸನ್ಮಿತ್ರರ ಜಮೀನು ತೋಟವಿದೆ, ಅಶೋಕ ಹೆಗ್ಗಡೆ ತಂದೆ ಅನಾನಸ್ ಹಣ್ಣನ್ನು ಮೌಲ್ಯವರ್ಧನೆ ಮಾಡಿದ ಮೊದಲ ವ್ಯಕ್ತಿ, ಅವರ ಪ್ರೇರಣೆಯಿಂದ ತಮ್ಮ ಕುಟುಂಬದ ಹೆಸರಾದ #ಐನಾಕೈ ಬ್ರಾಂಡ್ ನಲ್ಲಿ ಅನಾನಸ್ ಹಣ್ಣಿನ ಸಿರಪ್ - ಜ್ಯೂಸ್ - ಜಾಮ್ ತಯಾರಿಸಿ ಮಾರುಕಟ್ಟೆಗೆ ತಲುಪಿಸಿದವರು ಅಶೋಕ್ ಹೆಗ್ಗಡೆ ಇವರು ವಿದ್ಯಾವಂತರು ಇವರ ಇಂಗ್ಲೀಷ್ ಭಾಷಾ ಪ್ರಾವಿಣ್ಯ ಕೂಡ.
  ಇವರ ಪುತ್ರ  ಕೆನಡಾದ ಸಿಟಿಜನ್ ಗಳಾಗಿದ್ದಾರೆ, ಮಗಳು ಸಾಗರದ ಕಾನಲೆಯ ಸೊಸೆ.
   ಜೋಗಜಲಪಾತದ ಸೆರಗಿನಲ್ಲಿರುವ ಅಶೋಕ್ ಹೆಗಡೆ ಜೋಗ್ ನ ಸಂಪೂರ್ಣ ಮಾಹಿತಿಯ ಖಜಾನೆ ಆದ್ದರಿಂದ ಈಗಲೂ ಇವರನ್ನು ಎಲ್ಲರೂ ಸಂಪರ್ಕಿಸುತ್ತಾರೆ.
     ಇವರ ಸ್ವಂತ ಜಮೀನಿನಲ್ಲಿ ಐನಕೈ ಔಟ್ ಲೆಟ್ ಕೂಡ ತೆರೆದಿದ್ದರು ಇದನ್ನು ಹೊರತು ಪಡಿಸಿ 1980ರ ತನಕ ಇಲ್ಲಿ ಬೇರೆ ರೀತಿಯ ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ಇರಲಿಲ್ಲ.
   ಹೊಸತನ್ನ ಬೆಂಬಲಿಸುವ, ಸ್ವಯಂ ಉದ್ಯೋಗಕ್ಕೆ ಸಹಕರಿಸುವ ಅಶೋಕ್ ಹೆಗ್ಗಡೆ ಮಾವಿನಗುಂಡಿಯ ಮುಖ್ಯ ರಸ್ತೆಯಲ್ಲಿ ಹೋಟೆಲ್ ಅಂಗಡಿ ತೆರೆಯಲು ಜಾಗ ನೀಡಿದರು ಆಗ ಅಲ್ಲಿ ಹೋಟೆಲ್ ಅಂಗಡಿ ತೆರೆದವರು ಈ ಊರನ್ನು ಇವತ್ತಿನ ಅತ್ಯಂತ ಚಟುವಟಿಕೆಯ ಕೇಂದ್ರವಾಗಿಸಿದರು.
   ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಇಲ್ಲಿ ವಾಹನ ನಿಲ್ಲಿಸಿ ಇಲ್ಲಿನ ವೃತ್ತದಲ್ಲಿನ ಅಬ್ಬಿ ನೀರಿನ ಕೊಳವೆಯಲ್ಲಿ ವರ್ಷ ಪೂರ್ತಿ ಹರಿಯುತ್ತಿದ್ದ ನೈಸರ್ಗಿಕ ನೀರು ಕುಡಿದು ಅಥವ ಲಾರಿ ಚಾಲಕರು ತಮ್ಮ ಬಟ್ಟೆ ತೊಳೆದು ಸ್ನಾನ ಮಾಡಿ ಹೋಗುವ ಕೇಂದ್ರವಾಗಿತ್ತು, ಈ ಅಭ್ಭಿ ನೀರಿನ ಕೊಳಾಯಿಗೂ ಒಂದು ಕಥೆ ಇದೆ ...ಬ್ರಿಟೀಶ್ ಅಧಿಕಾರಿಯ ಪತ್ನಿ ಇಲ್ಲಿ ನಿರಂತರವಾಗಿ ರಸ್ತೆ ಮೇಲೆ ಹರಿದು ಹೋಗುತ್ತಿದ್ದ ಅಬ್ಬಿ ನೀರಿಗೆ ಕೊಳವೆಗಳ ಅಳವಡಿಸಿ ಸಾರ್ವಜನಿಕರು ಬಳಸುವಂತೆ ಮಾಡಿದ್ದರಂತೆ.
   ಈಗ ಮಾವಿನಗುಂಡಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕೊಡಕಣಿ ಗ್ರಾಮ ಪಂಚಾಯತ್ ಈ ನೀರನ್ನು ಊರಿನ ಕುಡಿಯುವ ನೀರಿಗಾಗಿ ಬಳಸುತ್ತಿದೆ ಆದ್ದರಿಂದ ಮಾವಿನಗುಂಡಿಯ ಲ್ಯಾಂಡ್ ಮಾರ್ಕ್ ಆಗಿದ್ದ ಅಬ್ಬಿ ನೀರಿನ ಕೊಳಾಯಿ ಇಲ್ಲಿಲ್ಲ.
  ಹೊನ್ನಾವರದ ಶರಾವತಿ ನದಿಯ ಬೃಹತ್ ಸೇತುವೆ ಶಿಥಿಲವಾಗಿ ವಾಹನ ಸಂಚಾರ ಸ್ಥಗಿತವಾದಾಗ ಈ ಮಾವಿನಗುಂಡಿ ಮಾರ್ಗ ಬದಲಿ ಮಾರ್ಗವಾಗಿ ಹೆಚ್ಚು ಬಳಕೆಯಾಗಲು ಪ್ರಾರಂಭವಾಗಿ ಈ ಮಾರ್ಗ ಪ್ರಸಿದ್ದಿ ಪಡೆದಿದ್ದೂ ಕೂಡ ಮಾವಿನಗುಂಡಿ ಜಂಕ್ಷನ್ ಪ್ರಸಿದ್ಧಿಗೆ ಕಾರಣವಾಯಿತು. 
ಈಗ ಮಾವಿನಗುಂಡಿ ಜಂಕ್ಷನ್ ಅತ್ಯಂತ ಚಟುವಟಿಕೆಯ ಕೇಂದ್ರವಾಗಿದೆ ಇಲ್ಲಿನ ಬಹುತೇಕ ಮನೆಯವರ ಆದಾಯ ವ್ಯಾಪಾರ ಆಗಿದೆ, ದಿನದ 24 ಗಂಟೆ ಈ ಊರು ಎಚ್ಚರವಾಗಿರುತ್ತದೆ.
   ಮಾವಿನಗುಂಡಿಗೆ ಸಂಪರ್ಕಿಸುವ ಮೂರು ರಸ್ತೆಯಲ್ಲಿ ರಾತ್ರಿಯಿಡಿ ಸಂಚರಿಸುವ ವಾಹನಗಳು ಇಲ್ಲಿ ನಿಲ್ಲುತ್ತದೆ ಅವರ ಹಸಿವು ತಣಿಸುವ ಊಟ-ಉಪಹಾರ ಮತ್ತು ಅವರ ತಲುಬುಗಳಾದ ದೂಮಪಾನ - ತಂಬಾಕುಗಳ ಮಾರಾಟ ಇಲ್ಲಿದೆ ಈ ಮಾರ್ಗದ ಮೂಲಕ ಸಂಚರಿಸುವ ವಾಹನಗಳನ್ನು ಕೇಂದ್ರವಾಗಿರಿಸಿ ರಾತ್ರಿ ಪೂರ ವಿದ್ಯುತ್ ದೀಪದಲ್ಲಿ ಜಗಮಗಿಸುತ್ತದೆ ಆದರೆ ಪ್ರಯಾಣಿಕರು ಸುರಿಸುವ ತ್ಯಾಜ್ಯ ಮತ್ತು ಎಲ್ಲೆಂದರಲ್ಲಿ ಮಾಡುವ ಮೂತ್ರಗಳಿಂದ ಊರು ಕುಲಷಿತವೂ ಆಗುತ್ತಿದೆ.
  ಮೊನ್ನೆ ಸಂಜೆ ಮಾವಿನಗುಂಡಿಗೆ ಹಿರಿಯ ಗೆಳೆಯರಾದ ಅನೇಕ ರೀತಿಯ ಆಹಾರ ಉದ್ಯಮದಲ್ಲಿ ಸಲಹೆ ನೀಡುವ ಅಶೋಕ್ ಹೆಗ್ಗಡೆ ಅವರನ್ನು ಬೇಟಿ ಮಾಡಲು ಹೋಗಿದ್ದೆ ಅವರನ್ನ ಮಾವಿನಗುಂಡಿ ಪೇಟೆಯಲ್ಲಿ ಬೇಟಿ ಮಾಡಿ ಪಕ್ಕದಲ್ಲೇ ಇದ್ದ ಹೋಟೆಲ್ ನಲ್ಲಿ ಕಾಫಿ ಕುಡಿದು ಅವರ ಮನೆಗೆ ಹೋಗಿ ಅಲ್ಲಿ ಅನಾನಸ್ ಜ್ಯೂಸ್ ಕುಡಿದು ದಂಪತಿಗಳ ಜೊತೆ ಸೆಲ್ಪಿ ತೆಗೆದುಕೊಳ್ಳುವಾಗ ಅವರ ಪತ್ನಿ ಹೇಳಿದರು ಅವರು ಶಿವಮೊಗ್ಗ ಮಾರ್ಗದಲ್ಲಿ ಪ್ರಯಾಣಿಸುವಾಗೆಲ್ಲಾ ನನ್ನ #ಮಲ್ಲಿಕಾ_ವೆಜ್ ರೆಸ್ಟೋರೆಂಟ್ ನಲ್ಲಿ ಕಾಫಿ ಬ್ರೇಕ್ ಅಂದರು ಮುಂದಿನ ಸಾರಿ ಬಂದಾಗ ನನ್ನ ಲಾಡ್ಜ್ ಆಫೀಸಿಗೆ ಬರಲೇ ಬೇಕೆಂದು ಒತ್ತಾಯಿಸಿ ವಾಪಾಸು ಬಂದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...