#ನಮ್ಮ_ಪ್ರೀತಿಯ_ಆಹ್ಮದ್_ಆಲೀ_ಖಾನ್_ಸಾಹೇಬರ_ಎರಡನೆ_ಪುಣ್ಯ_ತಿಥಿ
#ಸಜ್ಜನ_ಸಂಪನ್ನ_ವ್ಯಕ್ತಿತ್ವದವರು.
#ಪಠಾಣರಾದ_ಆಹ್ಮದ್_ಆಲೀ_ಖಾನ್_ಸಾಹೇಬರ_92_ವರ್ಷಗಳ_ಸಂತೃಪ್ತ_ಜೀವನ.
#ಖಾನ್_ಸಾಹೇಬರು_1930ರಲ್ಲಿ_ಹೊನ್ನಾಳಿಯಲ್ಲಿ_ಜನಿಸಿದ್ದರು.
27 ಫೆಬ್ರವರಿ 2022ರ ಬೆಳಗಿನ ಜಾವ ಖಾನ್ ಸಾಹೇಬರು 92 ವರ್ಷಗಳ ಗೌರವಯುತ ಸಾರ್ಥಕ ಜೀವನ ನಡೆಸಿ ಇಹ ಲೋಕ ತ್ಯಜಿಸಿದರು ಇವತ್ತು ಅವರ ಎರಡನೆ ಪುಣ್ಯ ತಿಥಿ,
ಸಾಗರದ ಆಹಮದ್ ಆಲೀ ಖಾನ್ ಸಾಹೇಬರ ಜೀವನದ ಬಗ್ಗೆ ಬರೆದರೆ ಒಂದು ಸ್ವಾರಸ್ಯಕರವಾದ ಗ್ರ೦ಥವೇ ಆದೀತು, 1978-79ರಲ್ಲಿ ಸಾಗರದ ನಿಮ೯ಲ ಹೈಸ್ಕೂಲ್ ಎದರು ಜನತಾ ಪಕ್ಷದ ಸಾಗರದ ಮಾಜಿ ಶಾಸಕರಾದ ಕಾಗೋಡು ತಿಮ್ಮಪ್ಪ ಜನತಾ ಪಕ್ಷ ತೊರೆದು ಕಾ೦ಗ್ರೇಸ್ ಸೇರುವ ಸಭೆ ಇದೆ ಅಂತ ಸಾವ೯ಜನಿಕ ಪ್ರಕಟನೆ ಕೇಳಿ ಮುನ್ಸಿಪಲ್ ಹೈಸ್ಕೂಲ್ ನ 8ನೇ ತರಗತಿಗೆ ಚಕ್ಕರ್ ಹೊಡೆದು ಈ ಸಭೆ ನೋಡಲು ಹೋಗಿದ್ದೆ.
ಅಲ್ಲಿ ಕಾಗೋಡು ತಿಮ್ಮಪ್ಪನವರು ಜನತಾ ಪಕ್ಷದವರು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ... ಅಂತ ಭಾಷಣ ಮಾಡಿದ್ದು ಮತ್ತು ಖಾನ್ ಸಾಹೇಬರು ಅವರನ್ನ ಕಾಂಗ್ರೇಸ್ ಗೆ ಸೇರಿಸಿಕೊಂಡ ಕ್ಷಣ ಜನರ ಚಪ್ಪಾಳೆ,ಅಭೂತ ಪೂವ೯ ಬೆಂಬಲದ ಕ್ಷಣ.... ಅವತ್ತು 15 ವಷ೯ ಪ್ರಾಯದ ನನ್ನ ಮೆದುಳಲ್ಲಿ ಅಚ್ಚು ಆಗಿರುವ ನೆನಪು ಈಗ 60 ರ ಹತ್ತಿರದ ವಯಸ್ಸಲ್ಲೂ ಹಾಗೆ ಅಳಿಯದೇ ಉಳಿದಿದೆ.
ಆಗ ದೇಶದ ಪ್ರದಾನಿ ಇಂದಿರಾ ಗಾಂಧಿ ನನ್ನ ಮೂರನೆ ಪುತ್ರ ಎನ್ನುತ್ತಿದ್ದ ಮಡಿಕೆರೆಯ ಎಪ್.ಎಂ.ಖಾನ್ ಮತ್ತು ಸಾಗರದ ಆಹಮದಾಲಿ ಖಾನ್ ಖಾಸಾ ಖಾಸಾ, ಗುಂಡುರಾವ್ ರನ್ನ ಮುಖ್ಯಮಂತ್ರಿ ಮಾಡಿದ್ದರಿಂದ ಸೊರಬದ ಬಂಗಾರಪ್ಪ ದೂರ ಆಗಿದ್ದರು,ಆಗ ಸಾಗರದ ಶಾಸಕರು ಕಾ೦ಗ್ರೇಸ್ ನ ಎಲ್.ಟಿ. ತಿಮ್ಮಪ್ಪ ಹೆಗ್ಗಡೆ ಚುನಾವಣೆಯಲ್ಲಿ ಜನತಾ ಪಕ್ಷದ ಕಾಗೋಡು ತಿಮ್ಮಪ್ಪರನ್ನ ಸೋಲಿಸಿದ್ದರು.
ಆದರೂ ಬಂಗಾರಪ್ಪರನ್ನ ಕೌ೦ಟರ್ ಮಾಡಲೆಂದೇ ಕಾಗೋಡರನ್ನ ಕಾಂಗ್ರೆಸ್ ಗೆ ಸೇರಿಸಿ, ವಿಧಾನ ಪರಿಷತ್ ಸದಸ್ಯರನ್ನ ಮಾಡಿ PWD ಮಂತ್ರಿ ಮಾಡುವ ಮೂಲಕ ರಾಜಕಾರಣದ ಗಾಡ್ ಪಾದರ್ ಈ ಆಹಮದ್ ಆಲೀ ಖಾನ್ ಸಾಹೇಬರು ಮತ್ತು ಅವತ್ತಿನ ಸಭೆಯ ಉದ್ದೇಶ ಮತ್ತು ಅದರ ರೂವಾರಿ ಖಾನ್ ಸಾಹೇಬರು.
ಇದರಿಂದ ಕಾಗೋಡರ ರಾಜಕೀಯ ಜೀವನ, ಶಾಂತವೇರಿ ಗೋಪಾಲ ಗೌಡರ ಸಮಾಜ ವಾದದ ಮೂಸೆಯಿಂದ ಬಂದ ಕಾಗೋಡು ಬಂಗಾರಪ್ಪ ಬದ್ದ ಶತ್ರುಗಳಾಗಿದ್ದು ಇತಿಹಾಸ.
Comments
Post a Comment