#ಪ್ರಾ೦ತ್ಯ ಹೋಟೆಲ್ ಮಾಲಿಕರ ಸಂಘ (ಸಾಗರ-ಹೊಸನಗರ-ಸೊರಬ ತಾ.) ರಾಜ್ಯಕ್ಕೇ ಮಾದರಿ#
ಇವತ್ತು ಸಾಗರ ಪ್ರಾ೦ತ್ಯ ಹೋಟೆಲ್ ಮಾಲಿಕರ ಸಂಘದ ಪದಾಧಿಕಾರಿಗಳಾದ ಸಾಗರದ ಪ್ರಖ್ಯಾತ ಲಾಡ್ಜ್ ಮಾಲಿಕರಾದ ಪ್ರಸಾದ್ ಮತ್ತು ಆನಂದಪುರದ ಗೀತಾ ಹೋಟೆಲ್ ಮಾಲಿಕರಾದ ಸುದೀ೦ದ್ರ ಶೆಣಯ್ ಬಂದಿದ್ದರು ವಾಷಿ೯ಕ ಸಮಾವೇಷಕ್ಕೆ ಆಮ೦ತ್ರಿಸಲು.
ಪ್ರಸಾದ್ ಸಾಗರದ ಒಂದು ಕಾಲದ ಸುಪ್ರಸಿದ್ದ ಶುಚಿ ರುಚಿ ಆಗಿದ್ದ ಚಾಯಾ ಹೋಟೆಲ್ ಬೀಮಣ್ಣನವರ ಮಗ ಇವರ ರಕ್ತದಲ್ಲಿ ಹೋಟೆಲ್ ಉದ್ಯಮ ಇದೆ ಇವರಿಗೆಲ್ಲ ಈ ಸಂಘದಿಂದ ಆಗಬೇಕಾದ್ದು ಇಲ್ಲ ಆದರೆ ತಮ್ಮದೆ ವೃತ್ತಿಬಾಂದವರಾದ ಸಾಗರ ಹೊಸನಗರ ಮತ್ತು ಸೊರಬ ತಾಲ್ಲೂಕಿನ ಹೋಟೆಲ್ ಮಾಲಿಕರ ಕ್ಷೇಮಾಭಿವೃದ್ಧಿಗೆ ಈ ಸಂಘಟನೆ ಅನೇಕ ವಷ೯ದಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.
ಚಿಲ್ಲರೆ ಸಮಸ್ಯೆ ತೀವ್ರ ಆಗಿದ್ದಾಗ ಸ್ಟೇಟ್ ಬ್ಯಾ೦ಕ್ ಆಪ್ ಮೈಸೂರಿನಿಂದ ಹೋಟೆಲ್ ಮಾಲೀಕರಿಗೆ ಪ್ರತಿ ತಿಂಗಳು ಚಿಲ್ಲರೆ ವಿತರಿಸುವ ಕೆಲಸ ಇವರೆಲ್ಲ ನಿವ೯ಹಿಸಿದ್ದು ಸದಾ ಸ್ಮರಣಿಯ.
ಇವತ್ತು ಕಲಬೆರಕೆ, ಕಾಮಿ೯ಕರ ಕೊರತೆ, ಪೈಪೋಟಿಗಳಿ೦ದ ದಕ್ಷಿಣ ಭಾರತೀಯ ಊಟ ಉಪಚಾರ ಮಂದಿರಗಳು ಮುಚ್ಚುತ್ತಿವೆ,ಸರಕಾರಿ ಅಧಿಕಾರಿಗಳ ಸಮನ್ವಯ ಕೊರತೆ ಕೂಡ ಸೇರಿದೆ ಇಂತಹ ಕಾಲಘಟ್ಟದಲ್ಲಿ ಸ್ವಯಂ ಉದ್ಯೋಗದ ಮತ್ತು ಅನೇಕರಿಗೆ ಉದ್ಯೋಗ ಕಲ್ಪಿಸುವ ದಕ್ಷಿಣ ಭಾರತದ ಹೋಟೆಲ್ ಉದ್ಯಮದ ಕಾಯಕಲ್ಪಕ್ಕಾಗಿ ಶ್ರಮಿಸುತ್ತಿರುವ ಸಾಗರ ಪ್ರಾ೦ತ್ಯ ಹೋಟೆಲ್ ಮಾಲಿಕರ ಶ್ರಮಕ್ಕೆ ಪ್ರೊತ್ಸಾಹಿಸಬೇಕು ಇವರ ಕೆಲಸ ಅಭಿನಂದನೀಯ.
ಇವತ್ತು ಇವರನ್ನ ಸಣ್ಣದಾಗಿ ಸಂದಶಿ೯ಸಿದ ವಿಡಿಯೋ Post ಮಾಡಿದ್ದೇನೆ ನೋಡಿ ಇವರಲ್ಲಿ ದೂರದಶಿ೯ತ್ವದ ಚಿ೦ತನೆ ಕೇಳಿ ಸಂತೋಷ ಆಯಿತು.
Comments
Post a Comment