Skip to main content

Blog number 1074. ಹಸ್ತ ಸಾಮೂದ್ರಿಕ ಜ್ಯೋತಿಷ್ಯ ಸತ್ಯವೋ ಸುಳ್ಳೋ ಗೊತ್ತಿಲ್ಲ ಆದರೆ ಹಸ್ತದ ಬೆರಳಚ್ಚು ಮಾತ್ರ ಒಬ್ಬರಂತೆ ಇನ್ನೊಬ್ಬರದ್ದಿರುವುದಿಲ್ಲ ಎಂಬ ವೈಜ್ಞಾನಿಕ ಸಬೂತು ಆದಾರ ಕಾರ್ಡಿಗೆ, ಆಸ್ತಿ ನೊಂದಾವಣೆಗೆ ಬೆರಳಚ್ಚು ಬೇಕೇ ಬೇಕು, ನನ್ನ ಹಸ್ತ ಸಾಮೂದ್ರಿಕ ಹೇಳಿದ ಗೂರಪ್ಪಣ್ಣ .

#ಕೈ_ಬೆರಳ_ರೇಖೆ_ವಿಶೇಷ

#ಆದಾರ್_ಕಾರ್ಡಿಗೂ_ಆಸ್ತಿ_ನೊಂದಾವಣಿಗೂ_ಹೆಬ್ಬೆರಳಚ್ಚು_ಬೇಕು

#ಕ್ರಿಸ್ತ_ಪೂರ್ವದಿಂದ_ಇರುವ_ಹಸ್ತ_ಸಾಮೂದ್ರಿಕ_ಜೋತಿಷ್ಯ

#ನಿನ್ನ_ಆಯಸ್ಸು_95_60ನೇ_ವಯಸ್ಸಿಗೆ_ನಿದಿ_ಸಿಗುತ್ತೆ

#ಮನಸ್ಸ೦ತೋಷದ_ನುಡಿಗಳು

#ನನ್ನ_ಹಸ್ತ_ನೋಡಿ_ಜೋತಿಷ್ಯ_ಹೇಳಿದ_ಗೂರಪ್ಪಣ್ಣ

  ಹಸ್ತ ಸಾಮೂದ್ರಿಕ ಪಾಮ್ ಹಿಸ್ಟರಿಗೆ ಕ್ರಿಸ್ತ ಪೂವ೯ ಗ್ರೀಕ್ ಚರಿತ್ರೆಯಲ್ಲೂ ಉಲ್ಲೇಖವಿದೆ ಭಾರತೀಯರಲ್ಲಿ ಹಸ್ತ ಸಾಮೂದ್ರಿಕ ಜ್ಯೋತಿಷ್ಯ ನಂಬುವ ದೊಡ್ಡ ವರ್ಗವಿದೆ ಅದರಂತೆ ಹಸ್ತ ಸಾಮೂದ್ರಿಕ ಶಾಸ್ತ್ರ ವಂಶ ಪಾರಂಪರ್ಯವಾಗಿ ಹೇಳುತ್ತಾ ಬಂದಿರುವ ಜನರೇ ಇದ್ದಾರೆ.
  ಹಸ್ತ ಸಾಮೂದ್ರಿಕ ಸುಳ್ಳು ಅ೦ತನೂ ಹೇಳುತ್ತಾರೆ ಆದರೆ ಒಬ್ಬನ ಬೆರಳಚ್ಚಿನಂತೆ ಇನ್ನೊಬ್ಬನದ್ದು ಇರಲು ಸಾಧ್ಯವೇ ಇಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಆದ್ದರಿಂದ ಆಸ್ತಿ ನೊಂದಾವಣೆಯಲ್ಲಿ, ಆದಾರ ಕಾರ್ಡ್ ನಲ್ಲಿ ಬೆರಳಚ್ಚು ಬೇಕೇ ಬೇಕು.
  ಆದ್ದರಿಂದ ಹಸ್ತ ಸಾಮೂದ್ರಿಕ ಶಾಸ್ತ್ರ ಸುಳ್ಳಲ್ಲ ಅಂತೆನಿಸುವುದು ಸಹಜ.
  ನಮ್ಮ ಗೂರಪ್ಪಣ್ಣ ಆಲಿಯಾಸ್ ದೊಡ್ಡ ಗೂರಪ್ಪಣ್ಣ ನಿನ್ನೆ ಬಂದಿದ್ದರು ಇವರ ಬಗ್ಗೆ ಈ ಹಿಂದೆ ಒಂದು ಲೇಖನ ಪ್ರಕಟಿಸಿದ್ದೆ ಇವರು ಕನ್ನಡದ ಬಹುತೇಕ ಎಲ್ಲಾ ಪ್ರಸಿದ್ದ ಸಾಹಿತಿಗಳ ಸಾಹಿತ್ಯ ಓದಿದ್ದಾರೆ ಅಷ್ಟೆ ಅಲ್ಲ ಅವುಗಳನ್ನು ತಮ್ಮ ವಿಶೇಷ ನೆನಪಿನ ಶಕ್ತಿಯಿಂದ ವಿಮರ್ಷೆ ಕೂಡ ಮಾಡುತ್ತಾರೆ ಇವರ ಮಾತೃ ಬಾಷೆ ತೆಲಗು .
   ಅಲೆಮಾರಿ ಸುಡುಗಾಡು ಸಿದ್ದ ಜನಾಂಗದ ಇವರ ಕುಲಕಸಬು ಹಸ್ತ ಸಾಮೂದ್ರಿಕ, ಗಿಳಿ ಶಾಸ್ತ್ರ ಮುಂತಾದದ್ದೆ.
  75 ರ ಇಳಿ ವಯಸ್ಸಿನಲ್ಲೂ ತೀರ್ಥಹಳ್ಳಿಯಲ್ಲಿ ತಮ್ಮ ಹಸ್ತ ಸಾಮೂದ್ರಿಕ ಜೋತಿಷ್ಯ ಪ್ರಾರಂಭಿಸಿದ್ದಾರಂತೆ ಇದನ್ನು ಹೇಳುತ್ತಾ ನನ್ನ ಕೈಗಳನ್ನು ಎಳೆದು ಕೊಂಡು ಅಂಗೈ ರೇಖೆಗಳನ್ನು ನೋಡುತ್ತಾ ಅವರು ಹೇಳಿದ ಜ್ಯೋತಿಷ್ಯ.

    "ನಿಮಗೆ ನೆಂಟರಿಷ್ಟರಿಂದ ಸಹಾಯ ಇಲ್ಲ... 40 ವರ್ಷದ ತನಕ ತುಂಬಾ ಕಳೆದುಕೊಂಡಿದೀರಿ.... 60ನೇ ವಯಸ್ಸಿಗೆ ನಿಧಿ ಸಿಗುತ್ತದೆ .... ನಿಮ್ಮ ಆಯಸ್ಸು 95 ವರ್ಷ .... ಜೀವನದ ಮೂರು ಕಂಟಕ ಕಳೆದು ಹೋಯಿತು...." ಹೀಗೆ ಹೇಳಿದಂತೆ ನನ್ನ ಜಡ ಹಿಡಿದ ಮನಸ್ಸು ಹುರುಪಾಯಿತು ಬೇಡ ಅಂದರೂ ಭಕ್ಷಿಸು ಕೊಟ್ಟೆ, ಅವರು ನನ್ನ ನೋಡಲು ಬರಲಿಕ್ಕಾಗಿ ರಿಕ್ಷಾಕ್ಕೆ ನೂರು ರೂಪಾಯಿ ಕೊಟ್ಟು ಬಂದಿದ್ದಾರೆ ಬೇರೆ.
   ಈ ರೀತಿ ಹಸ್ತ ಸಾಮೂದ್ರಿಕ, ಗಿಳಿ ಶಾಸ್ತ್ರ ಹೀಗೆ ಭವಿಷ್ಯ ಹೇಳುವುದೂ ಒಂದು ಕಲೆ ಅದರಲ್ಲಿ ಭವಿಷ್ಯ ಕೇಳುವವನ ಮನಸ್ಸ೦ತೋಷ ಮಾಡುವ ವಾಕ್ ಚಾತುಯ೯ ಇವರಿಗೆಲ್ಲ ತಲತಲಾಂತರದಿಂದ ಬಂದ ಹೊಟ್ಟೆಪಾಡಿನ ವಿದ್ಯೆ ಹೀಗೆ ಹೇಳುವುದರಿಂದ ಎಂತಹ ಜಿಪುಣನೂ ಕೈ ಎತ್ತಿ ಭಕ್ಷೀಸು ನೀಡುತ್ತಾನೆ.
   ನಮ್ಮ ಗೂರಪ್ಪಣ್ಣ ತೀರ್ಥಹಳ್ಳಿಯಲ್ಲಿ ಗುರುವಪ್ಪ ಶಾಸ್ತ್ರಿಗಳಾಗಿ ತಮ್ಮ ವಂಶಪಾರ್ಯ೦ಪರ ಹಸ್ತ ಸಾಮೂದ್ರಿಕ ಜೋತಿಷ್ಯದ ಮಂದಿರ ತೆರೆದಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...