Blog number 1078. ಆನಂದಪುರಂ ಇತಿಹಾಸ ಸಂಖ್ಯೆ - 85. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆನಂದಪುರಂನ ಬೆಸ್ತರ ಗಂಗಾ ಮಠವಿತ್ತು ಈ ಮಠದಲ್ಲಿ ಸಭಾ ಭವನ ನಿಮಿ೯ಸಲು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಶಂಕುಸ್ಥಾಪನೆ ಮಾಡಿದರೂ ನಿಮಾ೯ಣವಾಗಲಿಲ್ಲ ಬೆಸ್ತರ ಸಮೂದಾಯದ ಇಚ್ಚಾಶಕ್ತಿ ಕೊರತೆ ಮತ್ತು ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾಳ ದುರ೦ತ ಪ್ರೇಮ ಕಥೆಯ ಜಾತಿ ಕಾರಣದ ಮುಂದಿನ ಭಾಗವಾಗಿದೆ
#ಆನಂದಪುರಂಗೂ_ಬಂಗಾರಪ್ಪರಿಗೂ_ಇದ್ದ_ನಂಟು
#ಮದ್ಯಕಣ್ಣೂರಿಂದ_ಸೈಕಲ್_ಮೇಲೆ_ಯಡೇಹಳ್ಳಿ_ಪ್ರವಾಸಿಮಂದಿರದಲ್ಲಿ_ನಡೆಯುತ್ತಿದ್ದ
#ಶರಾವತಿ_ಮುಳುಗಡೆ_ವಿಶೇಷ_ಕೋರ್ಟಗೆ_ಬರುತ್ತಿದ್ದರು
#ಬೆಸ್ತರ_ಸಮುದಾಯದ_ಅಭಿವೃದ್ಧಿಗಾಗಿ_ಶ್ರಮಿಸುತ್ತಿದ್ದ_ಕೋರ್ಟ್_ಹಾಲಪ್ಪನವರು.
#ಐತಿಹಾಸಿಕ_ಗಂಗಾಮಠದ_ಅಭಿವೃದ್ದಿಗೆ_ಅಡೆ_ತಡೆ
#ಬಂಗಾರಪ್ಪರ_ಬಾಷಣ_ಅಜಿ೯_ಹಾಕಿ_ಯಾರೂ_ಇಂತಹ_ಜಾತಿಯಲ್ಲಿ_ಹುಟ್ಟಲು_ಸಾಧ್ಯವಿಲ್ಲ.
ಸಾರೇಕೊಪ್ಪದ ಬಂಗಾರಪ್ಪನವರೆಂದರೆ ಕಲರ್ ಪುಲ್ ರಾಜಕಾರಣಿ ಎಂದೇ ಅಘೋಷಿತ ಬಿರುದು ಅದಕ್ಕೆ ಕಾರಣ ಅವರ ಆಕರ್ಷಕ ದಿರಿಸು,ಕೂಲಿಂಗ್ ಗ್ಲಾಸ್, ಲಗ್ಜುರಿ ಕಾರ್, ಅವರ ಭಾಷಣ, ರಾಜಕಾರಣದ ತಂತ್ರಗಾರಿಕೆಗಳು.
ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆನಂದಪುರಂನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳದ ಉದ್ಘಾಟನೆಗೆ ಅವರನ್ನು ಆಹ್ವಾನಿಸಿದ್ದೆ ಕಾಯ೯ಕ್ರಮ ಉದ್ಘಾಟಿಸಿದ ನಂತರ ರಾತ್ರಿ ಊಟ ನಮ್ಮ ಮನೆ ಸಮೀಪದ ಪ್ರವಾಸಿ ಮಂದಿರದಲ್ಲಿ (ಒಂದು ಕಾಲದ ಬ್ರಿಟೀಷ್ ಬಂಗ್ಲೆ ).
ಜಿಲ್ಲಾ ಮಟ್ಟದ ಯುವಜನ ಮೇಳದ ಸ್ಪರ್ದಾಳುಗಳ ಜೊತೆ ಸ್ಥಳಿಯರೂ ಸೇರಿ ಸುಮಾರು 10 ಸಾವಿರ ಜನ ಸೇರಿದ ಯಶಸ್ವಿ ಸಭೆ ಬಂಗಾರಪ್ಪರಿಗೆ ಹುರುಪು ನೀಡಿತ್ತು.
ಪ್ರವಾಸಿ ಮಂದಿರದಲ್ಲಿ ಊಟ ಮಾಡುವಾಗ ಅವರಿಗೆ ಈ ಬ್ರಿಟೀಶ್ ಬಂಗಲೆಯಲ್ಲಿ ಅವರ ವಕೀಲಿ ವೃತ್ತಿಯ ಪ್ರಾರಂಭದಲ್ಲಿ ಕೋರ್ಟ್ ಕಲಾಪದಲ್ಲಿ ಭಾಗವಹಿಸಿದ ನೆನಪಾಯಿತು ....
ಶರಾವತಿ ಮುಳುಗಡೆಯ ವಿಶೇಷ ನ್ಯಾಯಾಲಯ ನಮ್ಮ ಊರಿನ ಈಗಿನ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿರುವಾಗ ಯುವ ವಕೀಲರಾದ ಬಂಗಾರಪ್ಪನವರು ಅವರ ಕಕ್ಷಿದಾರರ ಪರವಾಗಿ ಇಲ್ಲಿ ಭಾಗವಹಿಸುತ್ತಿದ್ದರೆಂದು,ಆಗ ಅವರ ವಾಸ್ತವ್ಯ ಮಧ್ಯಕಣ್ಣೂರಿನ ಅಡುಗೆ ಮನೆಯವರಲ್ಲಿ, ಶಿವಮೊಗ್ಗ ಜಿಲ್ಲೆಯ ದೀವರ ಜನಾಂಗದ ಮೊದಲ ವೈದ್ಯರು ಈ ಕುಟುಂಬದ ಡಾಕ್ಟರ್ ಬೋರಪ್ಪನವರು.
ಆ ಕುಟುಂಬದ ಹೊಸ ರ್ಯಾಲಿ ಸೈಕಲ್ ನಲ್ಲಿ ಬಂಗಾರಪ್ಪನವರು ವಕೀಲರ ಕೋಟ್ ಧರಿಸಿ ಮದ್ಯಕಣ್ಣೂರುನಿಂದ ಈ ಕೋರ್ಟ್ ನಡೆಯುವ ಪ್ರವಾಸಿ ಮಂದಿರಕ್ಕೆ ವಾರಗಟ್ಟಲೇ ಬರುತ್ತಿದ್ದರಂತೆ.
ಹೀಗೆ ಬಂಗಾರಪ್ಪನವರಿಗೆ ಆನಂದಪುರಂನ ನಂಟು ಇತ್ತು, ನಂತರ ಬಂಗಾರಪ್ಪನವರು ಪಾರ್ಲಿಮೆಂಟ್ ಚುನಾವಣೆಗೆ ಅವರದೇ ಪಕ್ಷದಿಂದ ಸ್ಪರ್ಧಿಸಿದಾಗ ನಾವೆಲ್ಲ ಪಕ್ಷಾತೀತವಾಗಿ ಅವರನ್ನು ಬೆಂಬಲಿಸಿ ಆನಂದಪುರಂನ ಬಸ್ ಸ್ಟಾಂಡ್ ನಲ್ಲಿ ದೊಡ್ಡ ಸಾರ್ವಜನಿಕ ಸಭೆ ನಡೆಸಿದ್ದೆವು ಚುನಾವಣೆಯಲ್ಲಿ ವಿಜಯರಾದ ನಂತರ ಆನಂದಪುರಂ ಮತ್ತು ಮುರುಘಾ ಮಠದಲ್ಲಿ ಸಭೆ ನಡೆಸಿದ್ದೆವು.
ಆನಂದಪುರಂನ ಗಂಗಾ ಮಠಕ್ಕೆ ಸಮುದಾಯ ಭವನ ಪಾರ್ಲಿಮೆಂಟ್ ಸದಸ್ಯರ ನಿಧಿಯಲ್ಲಿ ಮಂಜೂರು ಮಾಡಿ ಅದರ ಶಂಕುಸ್ಥಾಪನೆಗೆ ಬಂದಾಗ ಗುತ್ಯಮ್ಮ ದೇವಸ್ಥಾನದಿಂದ ಗಂಗಾಮಠದ ತನಕ ತೆರೆದ ಜೀಪಲ್ಲಿ ಮೆರವಣಿಗೆಯನ್ನು ಗಂಗಾ ಮತ ಸಮೂದಾಯದ ಮುಖಂಡರು, ವಿದ್ಯಾವಂತ ಮತ್ತು ಸರ್ಕಾರಿ ಅಧಿಕಾರಿಗಳಾಗಿದ್ದ ಕೋರ್ಟ್ ಹಾಲಪ್ಪನವರು ವ್ಯವಸ್ಥೆ ಮಾಡಿದ್ದರು.
ಕೋಟ್೯ ಹಾಲಪ್ಪನವರು ಒಬ್ಬ ಪ್ರಾಮಾಣಿಕ ಸಂಪನ್ನ ವ್ಯಕ್ತಿಯಾಗಿ ಅವರ ಸಮುದಾಯದ ಅಭಿವೃದ್ದಿಗಾಗಿ ತಮ್ಮ ಜೀವನ ಪಯ೯೦ತ ಶ್ರಮಿಸಿದವರು, ಗುತ್ತಮ್ಮ ದೇವಸ್ಥಾನದ ಅಭಿವೃದ್ಧಿಗೆ ಮತ್ತು ಪುರಾತನ ಗಂಗಾಮಠದ ಜಾಗ ಉಳಿಸುಕೊಳ್ಳಲು ತುಂಬಾ ಕಷ್ಟ ಪಟ್ಟಿದ್ದರು ಹಾಗಾಗಿ ಬಂಗಾರಪ್ಪರ ಜೊತೆ ಅವರನ್ನು ತೆರೆದ ಜೀಪಲ್ಲಿ ಮೆರವಣಿಗೆ ಮಾಡುವ ಉದ್ದೇಶವಾಗಿತ್ತು, ಬಂಗಾರಪ್ಪನವರು ನನ್ನನ್ನು ಒತ್ತಾಯದಿಂದ ಅವರ ಜೊತೆ ಜೀಪಲ್ಲಿ ಮೆರವಣಿಗೆಗೆ ಕರೆದುಕೊಂಡರು.
ಬಂಗಾರಪ್ಪನವರು ಈ ಕಾರ್ಯಕ್ರಮಕ್ಕೆ ಬರದಂತೆ ತಡೆಯಲು ಹೋಗಿದ್ದರು ಆಗ ಬಂಗಾರಪ್ಪನವರು ಅವರ ಎದುರೇ ನನಗೆ ಪೋನಾಯಿಸಿ ಕೇಳಿದ್ದರು ನಾನು ಈ ಗಂಗಾ ಮಠದ ಪ್ರಾಚೀನತೆ ಬಗ್ಗೆ ಪ್ರಸ್ತುತ ಸಂದರ್ಭದಲ್ಲಿ ಅಡೆತಡೆ ಮಾಡುವವರು ಕೆಳದಿ ರಾಜ ವೆಂಕಟಪ್ಪ ನಾಯಕರ ಅಂತರ್ಜಾತಿ ವಿವಾಹ ಚಂಪಕಳ ಜೊತೆ ಆದನಂತರ ಜಾತಿ ಕಾರಣದಿಂದ ಆ ಕಾಲದಿಂದ ಈವರೆಗೆ ಕಾಡುತ್ತಾರೆ ಅಂದಾಗ ಅವರು ಯಾವ ಕಾರಣಕ್ಕೂ ಕಾರ್ಯಕ್ರಮ ನಿಲ್ಲುವುದಿಲ್ಲ ಎಂದು ತಡೆಯಲು ಬಂದವರಿಗೆ ಜಾಡಿಸಿದ್ದರು.
ಅವರಿಗೆ ನಾನು ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಳ ದುರಂತ ಪ್ರೇಮ ಕಥೆ, ರಂಗೋಲಿಯಿಂದ ಆದ ಪ್ರೇಮಾಂಕುರ ಜಾತಿ ಕಾರಣದಿಂದ ಚಂಪಕ ಜೀವ ತ್ಯಾಗದಿಂದ ಚಂಪಕ ಸರಸ್ಸು ಸ್ಮಾರಕ ನಿಮಾ೯ಣವಾದ ಬಗ್ಗೆ ತಿಳಿಸಿದ್ದೆ ಆದ್ದರಿಂದ ಅವತ್ತು ಆ ಕಾರ್ಯಕ್ರಮದಲ್ಲಿ ಅವರು ವಿಶೇಷವಾಗಿ ಜಾತಿ ಆಚರಣೆಯ ಬಗ್ಗೆ ಹೆಚ್ಚು ಮಾತಾಡಿದರು.
ಜಾತಿ ಹೇಗೆ ಬಂತು? ಅಸ್ಪಷ್ಯ ಆಚರಣೆ ಯಾಕೆ? ಮಡಿ ಮೈಲಿಗೆ ಹೆಸರಲ್ಲಿ ಸಾರ್ವಜನಿಕವಾಗಿ ಅವಮಾನ ಮಾಡುವುದು ಸರಿಯೆ?ಎಂಬ ವಿಚಾರಕ್ಕೆ ಒತ್ತುಕೊಟ್ಟು ಮಾತಾಡಿದರು,ಮೇಲ್ಜಾತಿಯಲ್ಲಿ ಹುಟ್ಟುವವರು ಜಾತಿ ಶ್ರೇಷ್ಟತೆಯ ಗೀಳು, ಕೆಳಜಾತಿಗಳಲ್ಲಿ ಹುಟ್ಟುವವರ ಅಸಹಾಯಕತೆಗ ಅವರದ್ದೇ ಶೈಲಿಯಲ್ಲಿ ಬಾಗವಹಿಸಿದವರ ಹೃದಯಕ್ಕೆ ತಟ್ಟುವಂತೆ ಮಾಡಿದ ಭಾಷಣದ ಕೊನೆಯಲ್ಲಿ ಯಾರೂ ಅರ್ಜಿ ಹಾಕಿ ಇಂತಹದ್ದೇ ಜಾತಿಯಲ್ಲಿ ಹುಟ್ಟುವುದಿಲ್ಲ ಆದರೆ ಹುಟ್ಟಿದ ನಂತರ ಈ ಜಾತಿಶ್ರೇಷ್ಟತೆ ಗೀಳಿಗೆ ಒಳಗಾಗಿ ಅಸ್ಪೃಶ್ಯತೆ ಆಚರಿಸುವುದು, ಮಡಿ ಮೈಲಿಗೆ ಹೆಸರಲ್ಲಿ ಪಂಕ್ತಿಬೇದ ಇತ್ಯಾದಿ ಅವಮಾನಕರವಾಗಿ ನಡೆಸುವುದು ಸಲ್ಲದೆಂದು ಪ್ರತಿಪಾದಿಸಿದ್ದರು.
ಈ ಸಭಾಭವನ ನಿರ್ಮಾಣಕ್ಕೆ ಬಂಗಾರಪ್ಪರನ್ನು ಒಪ್ಪಿಸಿದ್ದ ಬಂಗಾರಪ್ಪರ ಸಂಬಂದಿ ಸಾಗರದ ಈಶ್ವರಪ್ಪ ಇಂಜಿನಿಯರ್ ಈ ಕಾರ್ಯಕ್ರಮ ನಡೆಸಲು ಪ್ರಮುಖ ಕಾರಣಕರ್ತರಾಗಿದ್ದರು ಆದರೆ ಸಭಾ ಭವನ ನಿಮಾ೯ಣವಾಗಲೇ ಇಲ್ಲ.
ರಾಜ ವೆಂಕಟಪ್ಪ ನಾಯಕರ ಅಂತರ್ಜಾತಿ ವಿವಾಹ ಸಹಿಸದ ಆ ಕಾಲದ ಜಾತಿವಾದಿಗಳ ಪಳಯುಳಿಕೆಗಳು ಗಂಗಾಮಠದ ಅಭಿವೃದ್ದಿಗೆ ತಡೆಯಾದದ್ದು ವಿಪರ್ಯಾಸವೇ ಆಗಿದೆ.
Comments
Post a Comment