Blog number 1077. ತೀಥ೯ಹಳ್ಳಿಯ ರೈತ ಸಂಘದ ಕೂಡ್ಲು ವೆಂಕಟೇಶರು ಜನರ ಕೆಲಸ ಮಾಡದೆ ಸರ್ಕಾರಿ ಕಛೇರಿಯಲ್ಲಿ ಅಧಿಕಾರಿಗಳು ಕ್ರಿಕೆಟ್ ಕಾಮಂಟರಿ ಕೇಳುತ್ತಾ ಕಾಲಾಹರಣಕ್ಕೆ ಬಿಸಿ ಮುಟ್ಟಿಸಿದ ಸರ್ಕಾರಿ ಕಛೇರಿ ಟ್ರಾನ್ಸಿಸ್ಟರ್ ಮಟ್ಟಗೋಲು ಕಾಯ೯ಕ್ರಮ ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ಹೋರಾಟ
ರೈತ ಸಂಘದ ಚಳವಳಿಗಳಲ್ಲಿ ನಮ್ಮ ತಂದೆ ಜೈಲಿಗೆ ಹೋದವರು, ಆ ದಿನದಲ್ಲಿ ಕೊಡ್ಲು ವೆಂಕಟೇಶ್ರ ಹೋರಾಟ ನಿತ್ಯ ತೀಥ೯ಹಳ್ಳಿಯಿಂದ ನಮ್ಮ ಊರಿಗೆ ಬರುತ್ತಿದ್ದ ಛಲಗಾರ ಪತ್ರಿಕೆ(ನಮ್ಮ ಅಣ್ಣ ಗಣಪತಿಯವರ ಮಿತ್ರ ಆ ಪತ್ರಿಕೆಯ ಆನಂದಪುರಂ ನ ವರದಿಗಾರರು) ಯಿಂದ ಗೋತ್ತಾಗುತ್ತಿತ್ತು.
ಸಕಾ೯ರಿ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳೋದು ಈಗ FB ಅಥವ ವಾಟ್ಸ್ ಪ್ ನೋಡೋ ಅಷ್ಟೆ ಚಟ ಆಗಿತ್ತು, ಇವರ ಹೋರಾಟದಿಂದ ಇಡೀ ರಾಜ್ಯದಲ್ಲೇ ಇದೊಂದು ಸಂಚಲನೆ ಆಯಿತು ಮತ್ತು ಕಚೇರಿಗೆ ಟ್ರಾನ್ಸಿಸ್ಟರ್ ತರೋದು ಕಡಿಮೆ ಆಯಿತು.
ನಾನು ಇವರನ್ನ ಆ ದಿನದಲ್ಲಿ ಭೇಟಿ ಮಾಡಬೇಕ೦ತ ಮಾಡಿದ್ದೆ ಆದರೆ ಈ ವರೆಗೆ ಆಗಿಲ್ಲ, ಇವತ್ತು ನೆ೦ಪೆ ದೇವರಾಜರು ಪೇಸ್ ಬುಕ್ ಲೇಖನ ಇದೆಲ್ಲ ನೆನಪಿಸಿತು.
http://arunprasadhombuja.blogspot.com/2018/11/blog-post_21.html
Comments
Post a Comment