Skip to main content

Blog number 1093. ಆನಂದಪುರಂ ಇತಿಹಾಸ ಸಂಖ್ಯೆ - 86.ಆನಂದಪುರಂನ ಸಮೀಪದ ಬ್ಯಾಡರ ಕೊಪ್ಪದ 1960 ರ ವಿಚಿತ್ರ ಘಟನೆಗೆ ಕಾರಣವಾಗಿದ್ದ ದತ್ತೂರದ ಬೀಜ,1583 ರಲ್ಲಿ ಗೋವಾ ಸಂದರ್ಶಿಸಿದ್ದ ವಿದೇಶಿ ಪ್ರವಾಸಿ ಡೈರಿಯಲ್ಲಿ, ಶಿಶುನಾಳ ಷರೀಪರ ಚರಿತ್ರೆಯಲ್ಲಿ೦ದ ಇತ್ತೀಚಿನ ಸಾಗರ ತಾಲ್ಲುಕಿನ ಪತ್ರಕರ್ತ ತಲವಾಟ ರಾಘವೇಂದ್ರ ಶರ್ಮಾರವರೆಗೆ.

  1960ರ ಆನಂದಪುರO ಸಮೀಪದ ಬ್ಯಾಡರ ಕೊಪ್ಪದ ಘಟನೆಗೆ 58 ವಷ೯ದ ನಂತರ ಉತ್ತರ ಸಿಕ್ಕಿತು
 ಉಮ್ಮತ್ತದ ಬೀಜ ಪುಡಿ ಮಾಡಿ ಬಂಗಿ ಸೋಪ್ಪಿನಲ್ಲಿ ಮಿಶ್ರ ಮಾಡಿ ಬೆಲ್ಲ ಸೇರಿಸಿ ಪಾನಕ ಮಾಡಿ ಕುಡಿದ ಬುಟ್ಟಿ ಮಾಡುವ ಇಡೀ ಕೇರಿಯ ಜನ ವಿಚಿತ್ರ ವತ೯ನೆ ಮಾಡಲು ಪ್ರಾರಂಬಿಸಿದ್ದರಂತೆ 1960ರಲ್ಲಿ ಆನoದಪುರಂ ಸಮೀಪದ ಬ್ಯಾಡರ ಕೊಪ್ಪದಲ್ಲಿ, ಅವರನ್ನೆಲ್ಲ ಎತ್ತಿನಗಾಡಿಯಲ್ಲಿ ಆನOದಪುರಂನ ಆಸ್ಪತ್ರೆಗೆ ಕರೆ ತಂದಿದ್ದರಂತೆ ಎಲ್ಲರೂ ಸ್ತ್ರಿ ಪುರುಷರು ಮೈಮೇಲೆ ಬಟ್ಟೆ ಇಟ್ಟು ಕೊಳ್ಳುತ್ತಿರಲಿಲ್ಲ೦ತೆ, ಹುಚ್ಚು ಹಿಡಿದವರಂತೆ ಅವರೆಲ್ಲರ ವತ೯ನೆ.
      ಆಗ ಊರಿನ ಹಿರಿಯರಾದ ಶ್ರೀ ವೆಂಕಟಾಚಲಯ್ಯOಗಾರ್ (ಮಂತ್ರಿಗಳಾಗಿದ್ದ ಬದರಿನಾರಾಯಣರ ಸಹೋದರರು) ಈ ಬಗ್ಗೆ ಮುಂದೆ ನಿಂತು ಚಿಕಿತ್ಸೆ ನೀಡಿಸಿ, ಇದಕ್ಕೆ ಕಾರಣನಾದನನ್ನ ಶಿಕ್ಷಿಸಿದರಂತೆ, ಬುಟ್ಟಿ ಮಾಡುವವರ ನೆಂಟನೋವ೯ ಯಾವುದೊ ಬಿನ್ನಾಭಿಪ್ರಾಯದಿಂದ ಇಡೀ ಕೇರಿಯವರ ಬಟ್ಟೆ ಬಿಚ್ಚಿಸುತ್ತೇನೆ ಅಂತ ಶಪತ ಮಾಡಿದ್ದನಂತೆ.
  ಪತ್ರಕತ೯ ತಲವಾಟದ ರಾಘವೇ೦ದ್ರ ಶಮಾ೯ರ ಅನುಭವ ನೋಡಿದರೆ ಅವರೆಲ್ಲರಿಗೆ ಮೈ ತುಂಬ ಕಂಬಳಿ ಹುಳ ಹತ್ತಿದ ಅನುಭವ ಆಗಿಯೇ ಬಟ್ಟೆ ಕಿತ್ತಿ ಎಸೆಯುತ್ತಿದ್ದರಿರಬೇಕು.
 ಈ ವಿಚಾರ ಸುಮಾರು 40 ವಷ೯ ಚಾಲ್ತಿಯಲ್ಲಿತ್ತು, ಮೊಬೈಲ್ ಬಂದ ಮೇಲೆ ಮರೆತೆ ಹೋಗಿತ್ತು ಶಮಾ೯ರ FB ಲೇಖನದಿಂದ ಇದೆಲ್ಲ ನೆನಪಾಯಿತು.
    ಇದರ ಬೀಜದ ಎಣ್ಣಿ ತಲೆಗೆ ಹಾಕಿದರೆ ಹುಚ್ಚು ಹಿಡಿಯುತ್ತೆ ಅಂತೆ.
     ಶಿಶು ನಾಳ ಷರೀಪರಿಗೆ ಭಂಗಿ ಜೊತೆ ಇದರ ಬೀಜದ ಪುಡಿ ಹೊಟ್ಟೆಕಿಚ್ಚಿನಿಂದ ಒಬ್ಬ ಮಠದ ಸ್ವಾಮಿ ಹಾಕಿ ಕೊಡುತ್ತಾರೆ, ಶಿಶುನಾಳರು ಅದನ್ನ ಸೇವಿಸುತ್ತಾರೆ ಆಗ ಇವರಿಗೆ ಕಣ್ಣು ಕೆಂಪಾಗಿ ಸಂಕಟ ಆಗುತ್ತದೆ, ಅವರ ಯೋಗ ಶಕ್ತಿಯಿ೦ದ ಸರಿ ಆಗುತ್ತೆ,ಇವರ ತಪಃ ಶಕ್ತಿಯಿಂದ ತೊಂದರೆ ಕೊಟ್ಟವನೆ ತೊ೦ದರೆ ಅನುಭವಿಸುತ್ತಾರೆ ಅಂತ ಶಿಶುನಾಳರ ಪುಸ್ತಕದಲ್ಲಿದೆ.
  ಗೋವಾ ಪಟ್ಟಣಕ್ಕೆ ಬೇಟಿ ನೀಡಿದ್ದ ಪ್ರವಾಸಿ ಜಾನನ್ ಹ್ಯೂಘನ್ ಫನ್ ಲಿನ್ ಷಾಟಿನ್ ತನ್ನ ದಿನಚರಿಯಲ್ಲಿ ಈ ರೀತಿ ಬರೆದಿದ್ದಾನೆ.. ಗೋವಾದಲ್ಲಿ ತನ್ನ ಗಂಡಂದಿರ ಕಣ್ಣು ತಪ್ಪಿಸಲು ಸ್ತ್ರಿಯರು ದತ್ತೂರದ ಬೀಜದ ರಸ ಊಟ-ಪಾನಿಯದಲ್ಲಿ ಬೆರೆಸಿ ಕೊಡುತ್ತಿದ್ದರಂತೆ (1583 - 1588 ರಲ್ಲಿ) 
   ಉಮ್ಮತ್ತದ ಮೂಲ ಸ್ಥಾನ ಮೆಕ್ಸಿಕೊ, ಪ್ರಾಚೀನ ಕಾಲದಲ್ಲಿ ಮಾದಕ ದ್ರವ್ಯವಾಗಿ ಇದನ್ನು ಬಳಸುತ್ತಿದ್ದರಂತೆ.
  ಈಗಲೂ ಗ್ರಾಮೀಣ ಪ್ರದೇಶದಲ್ಲಿ ದತ್ತೂರದ ಮೆಣಸಿನ ಕಾಯಿಯಂತ ಬೀಜ ವೀಳ್ಯದಲ್ಲಿ ಬೆರೆಸಿ ಅರಿವು ತಪ್ಪಿಸುವ ಮೋಸ ಮಾಡುತ್ತಾರೆ.
  ಇಷ್ಟೆಲ್ಲಾ ಮಾದಕ ಅಂಶಕ್ಕೆ ಕಾರಣ ಇದರಲ್ಲಿರುವ ದತ್ತುರಿನ್ ಎಂಬ ಮದ್ದು ಇದನ್ನು ಅನೇಕ ಕಾಯಿಲೆಗೆ ಔಷದಿ ಆಗಿಯೂ ಬಳಸಬಹುದು.
 
 FB ಲೇಖನ ಕೃಪೆ: ಶ್ರೀ ರಾಘವೇಂದ್ರ ಶಮಾ೯ ತಲವಾಟ.
 ಅವರ ಸ್ವ೦ತ ಅನುಭವ

    ನಿನ್ನ ಕಣ್ಣು ಸ್ವಲ್ಪ ಅರಿಶಿನ ಬಣ್ಣಕ್ಕೆ ಕಾಣಿಸ್ತಲಾ..! ಕಾಮಾಲೆಯಾ ಗೀಮಾಲಾಯೆ ಆಯಿಕ್ಕು ಮಾರಾಯಾ, ಔಷಧಿ ತಗ " ಅಂದರು ಮೂವತ್ವರ್ಷದ ಹಿಂದೆ ಒಬ್ಬರು.‌ಅವರು ಹೇಳಿದಮೇಲೆ ಸುಸ್ತು ಊಟ ಸೇರುವುದಿಲ್ಲ ಮುಂತಾದ ಸಮಸ್ಯೆ ಶುರುವಾಯಿತು. ನಿಜವಾಗಿಯೂ ಕಾಮಾಲೆಯೋ ಅಥವಾ ಅವರು ಹೇಳಿದ್ದಕ್ಕೆ ಹಾಗೆ ಆಯಿತೋ ಗೊತ್ತಿಲ್ಲ. ಯಾವುದಕ್ಕೂ ಇರಲಿ ಅಂತ ನಮ್ಮ ದೊಡ್ಡಪ್ಪ ಕಾಮಾಲೆಗೆ ಔಷಧಿ‌ಕೊಡುತ್ತಿದ್ದರು ಅವರ ಬಳಿ ಹೋದೆ.    ದೊಡ್ಡಪ್ಪನ ಮಗ ಮೋಹನಣ್ಣ "ಔಷಧಿ ಆನು ಬೇಕಾದ್ರೂ ಕೊಡ್ತಿ, ಆದರೆ ನಿನಗೆ ಕಾಮಾಲೆ‌ ಅಲ್ಲ, ಕಾಮಾಲೆ ಅಲ್ದಿದ್ರೂ ಈ ಔಷಧಿ ತಗಳ್ಳಕ್ಕು, ಆದರೆ ನಾಲ್ಕ್ ತಾಸು ಮಳ್ ಹಿಡಿತು, ಬಟ್ ಲಿವರ್ರಿಗೆ ಒಳ್ಳೆದು" ಅಂದ.‌ "ಮಳ್ ಹಿಡಿತು ಅಂದ್ರೆ ಎಂತಾಕ್ತು?". ಅಂತ ಕೇಳಿದೆ'
" ಔಷಧಿ ತಗಂಡು ಸ್ವಲ್ಪ‌ಹೊತ್ತಿನ ನಂತರ ಕಂಬಳಿ ಹುಳ, ಬೆಕ್ಕು ಕಾಣ್ತು, ಗೋಟಾಗಾರಿನ ಮಧುರ ಹೋದ ತಿಂಗಳು ಔಷಧಿ ತಗಂಡವ " ನೋಡು ನೋಡು ಸಾಲು ಸಾಲು ಬೆಕ್ಕು ಅಂತ ಕೂಗ್ತಿದ್ದ" ಆದ್ರೆ ಅಲ್ನೋಡಿರೆ ಎಂತದೂ ಇರ್ಲೆ" ಹಂಗೆ ಭ್ರಮೆ ಹುಟ್ಟಿಸ್ತು, ಆವಾಗ ಪದೇ ಪದೇ ಮಜ್ಜಿಗೆ ಕುಡಿಯಕು, ಮಧ್ಯಾಹ್ನ ಫುಲ್  ಕಡಿಮೆ ಆಕ್ತು" ಎಂದು ಅನುಭವದ ಸುದೀರ್ಘ ಭಾಷಣ ಕೊಟ್ಟ. 
"ಅಯ್ಯೋ ಭ್ರಮೆ ಸೈಯಲ, ಮಾನಸಿಕವಾಗಿ ಆನು ಗಟ್ಟಿ, ಇದೆಲ್ಲ ಡೋಂಟ್ ಕೇರ್" ವಯಸ್ಸಿಗನುಗುಣವಾದ ವಾದ ಹರಿಬಿಟ್ಟೆ.
"ಸರಿ ನಿನಗೆ ಧೈರ್ಯ ಇದ್ರೆ ಖುಷಿ, ಲಿವರ್ ಆರೋಗ್ಯ ಜಾಸ್ತಿಯಾಗ್ತು, ತಗ, ವಾರಮಕ ಕೊಡ ಔಷಧಿ‌ ಭಾನುವಾರ ಬೆಳಗ್ಗೆ ಬಾ" ಅಂದ.
ಭಾನುವಾರ ಬೆಳಗ್ಗೆ ಹೋಗಿ ಹಸಿರು ಬಣ್ಣದ ಎರಡು ಚಮಚದಷ್ಟು ಔಷಧಿ ತಂದು ,ಮನೆಯಲ್ಲಿ ಅಮ್ಮನ ಹತ್ತಿರ " ಹಿಂಗೆ ಹಿಂಗೀಂಗೆ ಅಂಥ ಆರಿಶಿನ ಕಾಮಾಲೆಯ ಔಷಧಿ ತೆಗೆದುಕೊಳ್ಳುವ ವಿಷಯ ಹೇಳಿ, ಕುಡಿದು ಅಪ್ಪಯ್ಯನ ಮಂಚ ಹತ್ತಿ ಮಲಗಿದೆ.
ಮಲಗಿ ಅರ್ಧಗಂಟೆಯಾದರೂ ಅರಾಂ.ಓಹ್  ನಾನು ಗಟ್ಟಿ ಅಂತ ಖುಷಿಯಾಯಿತು. ಹಾಗೆ ಸುಮ್ಮನೆ ಮಲಗುವುದು ಯಾಕೆ ಎಂದು ಒಂದು ರೌಂಡ್ ಕೊಟ್ಟಿಗೆವರೆಗೆ ಹೋದೆ.‌ಮತ್ತೆ ಮಲಗುವ ಮನಸ್ಸಾಯಿತು. ಮಲಗಿದೆ, ಕಣ್ಮುಚ್ಚಿದರೆ ಎತ್ತಿ ಎತ್ತಿ ಒಗೆದಂತಾಯಿತು. ಕಣ್ಬಿಟ್ಟೆ, ಹೊದ್ದ ಕಂಬಳಿಯ ಮೇಲೊಂದು ದಪ್ಪನೆಯ ಕಂಬಳಿಹುಳ ನಿಧಾನ ಹರೆದು ಹೋಗುತ್ತಾ ಇತ್ತು. ಥೋ ದರಿದ್ರ‌ಅಂದು ತೋರ್ಬೆರಳು ಮಡಚಿ ಪಟಕ್ಕನೆ ಹೊಡೆದೆ ,ನೊ ಕಂಬಳಿ ಹುಳ ಇಲ್ಲ. ತಕ್ಷಣ ನೆನಪಾಯಿತು ಓಹೋ ಔಷಧಿಯ ಪ್ರಭಾವ ಹೀಗೆಲ್ಲ ಅಂತ. ಮತ್ತೆ ಕಣ್ಮುಚ್ಚಿದೆ, ಊಹ್ಞೂ ನಿದ್ರೆ ಮಾಡಲಾಗದು ಎತ್ತಿ‌ಬೀಸಿ‌ ಒಗೆದ ಅನುಭವ. ಕಣ್ಮಿಟ್ಟೆ ಈ ಬಾರಿ ಹತ್ತಾರು ಕಂಬಳಿ ಹುಳ ಹರೆದು ಹೋಗುತ್ತಿತ್ತು.‌ಭ್ರಮೆ ಖಂಡಿತಾ ಅಲ್ಲ ಅಂತನಿಸಿ ಕೊಡವಿದೆ ಕಂಬಳಿಯ ,ಒಂದೇ ಒಂದು ಹುಳವೂ ಇಲ್ಲ. ಮತ್ತೆ ಕಣ್ಮುಚ್ಚಿದೆ. ಈ ಬಾರಿ ಕ್ಷಣವೂ ಕಣ್ಮುಚ್ಚಲಾಗಲಿಲ್ಲ, ಗುಡ್ಡ ಹತ್ತಿ ಜೋರಾಗಿ ಓಡಿಹೋಗೋಣ ಅನಿಸಲು ಶುರುವಾಯಿತು. ಪಟಕ್ಕನೆ ಎದ್ದೆ ಜಗಲಿಯ ಬಾಗಿಲವರೆಗೆ ಬಂದೆ, ಉಫ್ ಔಷಧಿಯ ಪ್ರಭಾವ ಅಂತ ನೆನಪಾಗಿ ಮತ್ತೆ ಮಂಚ ಹತ್ತಿದೆ. ಮಲಗಿದೆ ಆದರೆ ನಿದ್ರೆಯಿರಲಿ ಮಲಗಲೂ ಆಗದ ಚಡಪಡಿಕೆ, ಈ ಬಾರಿ ಕಂಬಳಿ ಹುಳ ಗೋಡೆಯ ತುಂಬೆಲ್ಲಾ ಕಾಣಿಸತೊಡಗಿತು.‌ಅಷ್ಟರಲ್ಲಿ ಮಜ್ಹಿಗೆ ಕುಡಿಯಬೇಕೆಂಬುದು ನೆನಪಾಯಿತು, ಅಮ್ಮನ ಹತ್ತಿರ ಮಜ್ಜಿಗೆ ಕೊಡು ಎಂದೆ. ಆವಾಗ ಮೋಹನಣ್ಣ ಅನುಭವ ಇಲ್ಲದೆ ಜಾಸ್ತಿ ಡೋಸ್ ಕೊಟ್ಟುಬಿಟ್ಟನಾ ಎಂಬ ಅನುಮಾನ ಕಾಡಿ ಸಾಯುವ ಭಯ ಕಾಡತೊಡಗಿತು.‌ಅಮ್ಮನ ಹತ್ತಿರ. ಇದೇಕೋ ಯಡವಟ್ಟಾಯಿತು ಒಂಚೂರು ಮೋಹನಣ್ಣನ ಬರಹೇಳು ಪೋನ್ ಮಾಡಿ ಅಂತ ಹೇಳಿ ಮಜ್ಜಿಗೆ ಕುಡಿದು ಮಲಗಲು ಮಂಚದ ಬಳಿ ಹೋದರೆ ಮಂಚದ ತುಂಬೆಲ್ಲಾ ಕಂಬಳಿ ಹುಳದ ರಾಶಿ. ಅವುಗಳಲ್ಲಿ ಕೆಲವು ನನ್ನತ್ತ ನೋಡಿ ಹಲ್ಕಿಸಿಯುತ್ತಿತ್ತು, ಕೆಲವು ಮುಸಿಡಿ ಉದ್ದ ಮಾಡುತ್ತಿತ್ತು. ಧೈರ್ಯ ಮಾಡಿ ಪಟಾರನೆ ಹೊಡೆದೆ ಎಲ್ಲಾ ಮಾಯವಾಯಿತು. ಏನಾದರಾಗಲಿ ಅಂತ ಮಲಗಿದೆ ಕೊಂಚ ಒರಕು ಬಂದಂತಾಯಿತು. ಸ್ವಲ್ಪ ಸಮಯದ ನಂತರ ಕಣ್ಬಿಟ್ಟರೆ ಮೋಹನಣ್ಣ "ಏನಾ..... :) ? " ಎನ್ನುತ್ತಾ ಎದುರು ನಿಂತಿದ್ದ. ಮಜ್ಜಿಗೆಯ ಪ್ರಭಾವದಿಂದ ಕೊಂಚ ನಿಯಂತ್ರಣಕ್ಕೆ ಬಂದಿತ್ತು ಔಷಧಿಯ ಪ್ರಭಾವ. " ಎಂತ ಡೋಸು ಜಾಸ್ತಿಯಾಗಲ್ಲೆ ಎಂತೂ ಇಲ್ಲೆ ಸುಮ್ನೆ ಮಲಗು ಸರಿಯಾಕ್ತು" ಅಂತ ಹೇಳಿ ಹೋದ ಮೋಹನಣ್ಣ.
ಮತ್ತೆ ಮತ್ತೆ ಮಜ್ಜಿಗೆ ಕುಡಿದು ಮಲಗಿದೆ ನಿಧಾನ ನಿದ್ರೆ ಆವರಿಸಿತು. ಕನಸು ಕನಸು ಒಂದಕ್ಕೊಂದು ಸಂಬಂಧವಿಲ್ಲದ್ದು. ಗಟ್ಟಿ ಎಚ್ಚರವಾಗಿದ್ದು ಮತ್ತೆ ಒಂದು ಗಂಟೆಗೆ. ಆಗ ನಿರಾಳವಾಗಿತ್ತು. ಮಜ್ಜಿಗೆ ಅನ್ನ ಊಟ ಮಾಡಿ ಮಲಗಿದೆ, ಸೊಂಪು ನಿದ್ರೆ ಎಚ್ಚರವಾದಾಗ ಐದು ಗಂಟೆ. ಎಲ್ಲ ಸ್ವಚ್ಛ ನಿರಾಳವಾಗಿತ್ತು. ಸರಿ ಎಂದು ಕಾಫಿ‌ಕುಡಿದು ಪೇಪರ್ ಓದೋಣ ಅಂತ ಕುಂತರೆ ಒಂದಕ್ಷರವೂ ಕಾಣದು ಎಲ್ಲಾ ಮಬ್ಬು ಮಬ್ಬು. ಅಯ್ಯ ಒಂದು ಮಾಡಲು ಹೋಗಿ ಮತ್ತೊಂದಾಯಿತಾ ಎಂಬ ಭಯ ಕಾಡತೊಡಗಿತು. ನನ್ನ ಅವತಾರ ಬೆಳಗ್ಗೆಯಿಂದ ನೋಡಿದ್ದ ಅಪ್ಪಯ್ಯ " ಎಂತೂ ಆಗಲ್ಲೆ ಮಾರಾಯ, ಕಣ್ಣು ಸರಿ ಇದ್ದು ಎಲ್ಲಾ ಸರಿ ಇದ್ದು, ಔಷಧಿ ತಗಂಡಿದ್ದಕ್ಕೆ ಕಣ್ ಕಲ್ಡಿರ್ತು ಅದು, ಬೇಕಾರೆ ಎನ್ಮನೆ ಚಾಳಿಸ್ ಕನ್ನಡಕ ಹಾಕ್ಯಂಡು ನೋಡು" ಎಂದು ಅರ್ದ ಗದರಿದ ದನಿಯಲ್ಲಿ ಬಂತು. ಸರಿ ಅಂತ ಅಪ್ಪಯ್ಯನ ಕನ್ನಡಕ ಹಾಕಿಕೊಂಡು ಓದಿದೆ. ಎಲ್ಲವೂ ಸ್ಪಷ್ಟ. ಅಬ್ಬ ಗಿಡದ ಔಷಧಿಯೇ ಅಂದೆನಿಸಿತು. ಮಾರನೇ ದಿವಸ ಲಕಲಕ ವಾವ್.
ಇಷ್ಟೆಲ್ಲಾ ಘಟನೆಗೆ ಕಾರಣವಾದ ಆ ಔಷಧಿಯ ಗಿಡವೇ ಈ ಪಟದಲ್ಲಿದ್ದುದು. ಅದರ ಹೆಸರು ಉಮ್ಮಾತ. ಈಗ ನಿಮಗೆ ಅರ್ಥವಾಗಿರಬಹುದು ಪ್ರಕೃತಿಯಲ್ಲಿ ಏನೇಲ್ಲಾ ಇದೆ ಅಂತ.
#ಕೊನೆಯದಾಗಿ: ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನೋಡಿಕೊಳ್ಳಲು ಮಾತ್ರಾ ಬೇರೆಯವರ ಕಣ್ಣೇ ಬೇಕು.
ತಲವಾಟ ರಾಘವೇಂದ್ರ ಶರ್ಮಾ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ಸೀನಿಯರ್ ಗಳು ಹೇಳುತ್ತಿದ್ದರು, ಬಹುಶಃ ಆಗಿನ ಸಿನಿಮಾದಲ್ಲಿ ವಿಲನ