Blog number 1055. ಈಳಿ ಎಸ್.ವಿ.ನಾರಾಯಣಪ್ಪ ಸಾಗರದ ಏಕೈಕ ಹವ್ಯಕ ಬ್ರಾಹ್ಮಣ ಕಾಂಗ್ರೇಸ್ ನಿಷ್ಠಾವಂತ ನಾಯಕರ 94 ವಷ೯ಗಳ ಸಾರ್ಥಕ ಬದುಕಿನ ನೆನಪುಗಳ ಸಂಪುಟ ಶ್ವೇತಚಿತ್ತ.
#ತೊಂಬತ್ನಾಲ್ಕು_ವಷ೯ದ_ಸಾರ್ಥಕ_ಜೀವನ
#ರೀತಿ_ನೀತಿ_ಮಾತು_ಕೃತಿ_ವೇಷದಲ್ಲಿ_ಶಿಸ್ತಿನ_ಸಿಪಾಯಿ
#ಈಳಿ_ನಾರಾಯಣಪ್ಪನವರು_1957ರಿಂದ_ಕಾಂಗ್ರೇಸ್_ನಿಷ್ಟಾವಂತರು.
#ಶ್ವೇತಚಿತ್ತ_ಹೆಸರಿನ_ಅವರ_ಸಾರ್ಥಕ_ಬದುಕಿನ_ನೆನಪುಗಳ_ಸಂಪುಟ.
#ಶೈಲೇಂದ್ರಬ೦ದಗದ್ದೆ_ಬೇದೂರುವೆಂಕಟಗಿರಿ_ಸಂಪಾದಕತ್ವದಲ್ಲಿ.
ಕೃಷಿ ತಜ್ಞರಾದ ಡಾ.ವಿಷ್ನೇಷ್ ಮಂಚಾಲೆಯವರು ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಈಳಿ S. V. ನಾರಾಯಣಪ್ಪರ ಬದುಕಿನ ನೆನಪುಗಳ ಸಂಪುಟ ಬಿಡುಗಡೆಯ ಕಾರ್ಯಕ್ರಮದ ವಿವರ ನೋಡಿ ಈ ಪುಸ್ತಕ ಖರೀದಿಸಲು ಪ್ರಯತ್ನಿಸಿದ್ದೆ ಆದರೆ ಇದು ಮಾರಾಟಕ್ಕೆ ಇಲ್ಲದ ಅವರ ಕುಟುಂಬ ಮತ್ತು ಆಪ್ತರಿಗೆ ಮಾತ್ರ ಪ್ರಕಟವಾಗಿದೆ ಮತ್ತು ಅವರ ಕುಟುಂಬದವರೇ ಪ್ರಕಟಿಸಿದ್ದಾರೆ ಅನ್ನುವ ಸುದ್ದಿ ಮತ್ತು ಇದನ್ನು ಸಂಪಾದಿಸಿದ ಸಂಪಾದಕರು ಶೈಲೇಂದ್ರ ಬಂದಗದ್ದೆ ಮತ್ತು ಮಲೆನಾಡು ಮಲ್ಲಿಗೆ ಪತ್ರಿಕೆ ಸಂಪಾದಕರಾದ ಕೆ.ಎನ್.ವೆಂಕಟಗಿರಿ ಬೇದೂರು ಅಂತ ಗೊತ್ತಾಯಿತು.
ಬೇದೂರು ವೆಂಕಟಗಿರಿಯವರಿಗೆ ಸತತ ಪೋನ್ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ, ಈ ಪುಸ್ತಕ ಬಿಡುಗಡೆ ಮಾಡಿದ ಕೆಲವೇ ದಿನದಲ್ಲಿ 94 ವರ್ಷ ಸಾರ್ಥಕ ಬದುಕು ನಡೆಸಿದ ಈಳಿ ನಾರಾಯಣಪ್ಪನವರು ಇಹಲೋಕ ತ್ಯಜಿಸಿದ ಸುದ್ದಿಯೂ ಬಂದಿತು.
ಶೈಲೇಂದ್ರ ಬಂದಗದ್ದೆಗೆ ಪೋನಾಯಿಸಿದರೆ ಅವರು ಅವರ ತೋಟದಲ್ಲಿದ್ದಾರೆಂದು ಅವರ ಶ್ರೀಮತಿ ತಿಳಿಸಿದರು ಅವತ್ತೆ ಸಂಜೆ ಶೈಲೇಂದ್ರ ವಾಪಾಸು ಪೋನು ಮಾಡಿದಾಗ ಅವರೂ ಈ ಪುಸ್ತಕ ಮಾರಾಟಕ್ಕೆ ಸಿಗುವುದಿಲ್ಲ ಎಂದಿದ್ದರು.
ನಿನ್ನೆ ಅಂಚೆಯಲ್ಲಿ ಅವರೇ ಈಳಿ ನಾರಾಯಣಪ್ಪರ ನೆನಪುಗಳ ಸಂಪುಟ #ಶ್ವೇತಚಿತ್ತ ಕಳಿಸಿದ್ದಾರೆ ಓದಿದೆ ಅನೇಕ ಅವರ ಒಡನಾಟದ ಅವರ ಬಂದುಗಳು, ಗೆಳೆಯರು ಬರೆದ ಲೇಖನಗಳು ಓದಿದೆ.
ಈ ಪುಸ್ತಕದಲ್ಲಿ ಕಾಂಗ್ರೇಸ್ ನಿಂದ ಸಾಗರ ವಿದಾನಸಭಾ ಕ್ಷೇತ್ರದಿಂದ ಶಾಸಕರಾಗಿ ಹಾಲಿ ಜೀವಂತ ಇರುವ ಕೆ.ಹೆಚ್.ಶ್ರೀನಿವಾಸ್ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ ಮತ್ತು ಕಾಗೋಡು ತಿಮ್ಮಪ್ಪರ ಲೇಖನ ಇಲ್ಲದಿರುವುದು ಕೊರತೆ ಅನ್ನಿಸಿತು.
1989 ರಿಂದ 2000 ಇಸವಿ ತನಕ 11 ವರ್ಷ ನನ್ನ ಕಾಂಗ್ರೇಸ್ ಪಕ್ಷದ ಒಡನಾಟದ ಸಂದರ್ಭದಲ್ಲಿ ಈಳಿ ನಾರಾಯಣಪ್ಪರ ಒಡನಾಟ ನನ್ನದು.
ನಾನು ಕಂಡಂತೆ ಮತ್ತು ನಾನು ಅರ್ಥ ಮಾಡಿಕೊಂಡ೦ತೆ ಈಳಿ ನಾರಾಯಣಪ್ಪನವರು ಮಿತ ಬಾಷಿಗಳು, ಯಾರೊಡನೆಯೂ ಸಂಬಂದ ಕಳೆದುಕೊಳ್ಳದೆ ಸ್ಥಿತಪ್ರಜ್ಞರಾಗಿರುತ್ತಿದ್ದವರು.
ಈಳಿ ನಾರಾಯಣಪ್ಪನವರು ತಮ್ಮ 60 ರಿಂದ 70 ನೆ ವಯಸ್ಸಿನಲ್ಲೂ ಸುಂದರ ವದನದವರು, ಅವರು ಉಡುತ್ತಿದ್ದ ಕಚ್ಚೆ ಪಂಜೆ ಶೈಲಿಯೇ ವಿಬಿನ್ನ ಅದಕ್ಕೊಪ್ಪುವ ನೀಳ ಜುಬ್ಬ,ಕ್ಲೀನ್ ಶೇವ್ ನಲ್ಲಿ ಕಾಂಗ್ರೇಸ್ ಪಕ್ಷದ ಕಛೇರಿ ಗಾಂಧಿ ಮಂದಿರದಲ್ಲಿ ಈಳಿ ನಾರಾಯಣಪ್ಪನವರು ಆಕಷ೯ಕರಾಗಿರುತ್ತಿದ್ದರು.
ಇಡೀ ವಿಧಾನ ಸಭಾ ಕ್ಷೇತ್ರದ ಕಾಯ೯ ಕರ್ತರು, ಜನಪ್ರತಿನಿಧಿಗಳು, ನಾಯಕರು ಇವರಿಗೆ ಗೌರವ ನೀಡುತ್ತಿದ್ದರು. ಆಹ್ಮದ್ ಆಲೀಖಾನ್ ಸಾಹೇಬರು, ಪುತ್ತುರಾಯರೂ, ಕುರಿ ಲಿಂಗಪ್ಪನವರು ಮತ್ತು ಕಾಗೋಡು ತಿಮ್ಮಪ್ಪನವರು ನಡೆಸುತ್ತಿದ್ದ ರಹಸ್ಯ ಸಭೆಯಲ್ಲಿ ಈಳಿ ನಾರಾಯಣಪ್ಪರು ಇರಲೇಬೇಕು ಆದರೆ ಆ ಯಾವುದೇ ತೀರ್ಮಾನ ಬಹಿರಂಗ ಮಾಡದೇ ಕೃತಿಗಿಳಿಸುವ ಮ್ಯಾನ್ ಆಫ್ ಆಕ್ಷನ್ ಈಳಿ ನಾರಾಯಣಪ್ಪನವರು.
ಕಾಗೋಡು ತಿಮ್ಮಪ್ಪನವವರು ಈಳಿ ನಾರಾಯಣಪ್ಪರ ಸಮೀಕ್ಷೆ ಮತ್ತು ವರದಿಗಳನ್ನು ಪಕ್ಷದ ಸಂಘಟನೆಗಳಲ್ಲಿ ನಂಬುತ್ತಿದ್ದರು.
ಇದಕ್ಕೆ ಉಧಾಹರಣೆ 1995ರಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕ್ ಪಂಚಾಯತ್ ಚುನಾವಣೆಯಲ್ಲಿ ನಾನು ಕಾಂಗ್ರೇಸ್ ಪಕ್ಷದಿಂದ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಆಗಲು ಬಯಸಿದ್ದೆ ಆದರೆ ಕಾಂಗ್ರೇಸ್ ಪಕ್ಷದ ಅನೇಕ ಮುಖಂಡರು ನನ್ನ ವಿರೋದಿಸಲು ಪ್ರಾರಂಬಿಸಿದ್ದರಿಂದ ಆಗ ಬಂಗಾರಪ್ಪರ ಪಕ್ಷದಿಂದ ಸ್ಪರ್ದಿಸಲು ಗುಟ್ಟಾಗಿ ತೀರ್ಮಾನಿಸಿದ್ದೆ ಜೊತೆಗೆ ಈ ವ್ಯಾಪ್ತಿಯ ನಾಲ್ಕು ತಾಲ್ಲೂಕ್ ಪಂಚಾಯಿತಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಎಲ್ಲಾ ತಯಾರಿ ಮಾಡಿಕೊಂಡಿದ್ದೆ ಬಂಗಾರಪ್ಪನವರೂ ಕೊನೆ ಕ್ಷಣದಲ್ಲಿ ಬಂದರೂ ಬಿಪಾರ೦ ನೀಡಲು ಅವರ ಪಕ್ಷದವರಿಗೆ ಆದೇಶಿಸಿದ್ದರು.
ಆಗಲೇ ಕಾಗೋಡು ತಿಮ್ಮಪ್ಪನವರು ಈಳಿ ನಾರಾಯಣಪ್ಪರಿಗೆ ರಹಸ್ಯವಾಗಿ ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರದ ಸಮೀಕ್ಷೆ ಮಾಡಲು ನೇಮಿಸಿದ್ದರಂತೆ ಅವರ ವರದಿ ನನಗೆ ಮತ್ತು ನನ್ನ ಒಪ್ಪಿಗೆಯ ತಾಲ್ಲೂಕ್ ಪಂಚಾಯತ್ ಅಭ್ಯರ್ಥಿಗಳಿಗೆ ಟಿಕೇಟ್ ನೀಡಿದರೆ ಎಲ್ಲರೂ ಗೆಲ್ಲುವ ಹವಾ ಇದೆ ಅಂದಿದ್ದರಿಂದ ಕಾಗೋಡು ಒಪ್ಪಿದರ೦ತೆ ಆದರೆ ಈಳಿ ನಾರಾಯಣಪ್ಪನವರು ಕೊನೆಯವರೆಗೂ ನನಗೆ ಇದನ್ನು ತಿಳಿಸಲಿಲ್ಲ.
ಈಳಿ ನಾರಾಯಣಪ್ಪನವರು ಕಾಂಗ್ರೇಸ್ ಸಿದ್ದಾಂತಕ್ಕೆ ಬದ್ದರಾಗಿ ಕಾಂಗ್ರೇಸ್ ಪಕ್ಷಕ್ಕೆ ನಿಷ್ಟಾವಂತರಾಗಿದ್ದರು ಯಾವುದೇ ಕಾರಣಕ್ಕೂ ವ್ಯಕ್ತಿ ನಿಷ್ಟೆ, ಬಹು ಪರಾಕ್ ಸಂಸ್ಕೃತಿಗೆ ಬಲು ದೂರವಾಗಿದ್ದರು.
ಇವರಿಗೆ ಪದೇ ಪದೇ ದ್ವನಿ ಬಿದ್ದು ಹೋಗುವ ಸಮಸ್ಯೆ ಉಂಟಾಗುತ್ತಿತ್ತು ಆದ್ದರಿಂದ ಅನೇಕ ದೊಡ್ಡ ಸಭೆಯಲ್ಲಿ ವೇದಿಕೆಯಲ್ಲಿ ಇದ್ದರೂ ಭಾಷಣದಿಂದ ದೂರವಿರುತ್ತಿದ್ದರು.
1928ರಿಂದ 2022 ರವರೆಗಿನ 94 ವರ್ಷದ ಅವರ ಜೀವನ ರಾಜಕೀಯ -ಸಾಮಾಜಿಕ- ಮತ್ತು ಕೌಟುಂಬಿಕವಾಗಿ ಸಾರ್ಥಕ ಬದುಕಾಗಿದೆ ಅದರ ನೆನಪಿನ ಈ ಸಂಪುಟ ತಡವಾದರೂ ಪ್ರಕಟವಾಗಿದ್ದು ಸಂತೋಷ ತರಿಸಿದೆ.
Comments
Post a Comment