Blog number 1087. ಹೊಯ್ಸಳ ಸಾಮ್ರಾಜ್ಯದ ಉಗಮ ಸ್ಥಾನ ಚಿಕ್ಕಮಗಳೂರು ಜಿಲ್ಲೆಯ ಮುಡುಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ವಾಸಂತಿಕ ಪರಮೇಶ್ವರಿ ದೇವಸ್ಥಾನದ ಪ್ರದಾನ ಅರ್ಚಕರು ಸಾಗರ ತಾಲೂಕಿನ ಕರೂರು ಹೋಬಳಿಯ ಕಮಕೋಡಿನ ದತ್ತಾತ್ರೇಯ ಭಟ್ಟರು ನನ್ನ ಕಾದಂಬರಿ ಚ೦ಪಕ ಸರಸ್ಸು ಓದಿ ಅಭಿಪ್ರಾಯ ತಿಳಿಸಿದ್ದಾರೆ.
#ಸಾಗರ_ತಾಲ್ಲೂಕಿನ_ಕರೂರು_ಮೂಲದ_ಕಮಕೋಡು_ದತ್ತಾತ್ರೇಯ ಭಟ್ಟರು.
#ಈ_ದೇವಾಲಯದ_ಎದುರಿನ_ಎರೆಡು_ಸಂಪಿಗೆ_ಮರ_ಸಾವಿರ_ವಷ೯ದ್ದು
#ಸಾಗರ_ತಾಲ್ಲೂಕಿನ_ಕರೂರು_ಹೋಬಳಿಯ_ಕಮಕೋಡು_ಕೆಳದಿ_ಅರಸರ_ಸೈನಿಕ_ತರಬೇತಿ_ಕೇಂದ್ರ
ಚಿಕ್ಕಮಗಳೂರು ಜಿಲ್ಲೆಯ ಮುಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ಪುರಾಣ ಪ್ರಸಿದ್ದ ವಾಸಂತಿಕ ಪರಮೇಶ್ವರಿ ದೇವಸ್ಥಾನ ಐತಿಹಾಸಿಕವಾಗಿಯೂ ಪ್ರಮುಖ ಸ್ಥಳ ಹೊಯ್ಸಳ ವಂಶ ಸ್ಥಾಪಕ ಸಳ ತನ್ನ ವಿದ್ಯಾಬ್ಯಾಸದ ಕಾಲದಲ್ಲಿ ಗುರುಗಳ ಆದೇಶ "ಹೊಯ್ - ಸಳ " ಎಂದಿದ್ದರಿಂದ ಎದುರಿಗೆ ಬಂದಿದ್ದ ಹುಲಿ ಸಂಹಾರ ಮಾಡಿದ್ದ ಸ್ಥಳವೂ ಇದೇ.
ಈ ದೇವಾಲಯದ ಎದುರು ಬೃಹದಾಕಾರದ ಎರೆಡು ಸಂಪಿಗೆ ಮರವೂ ಇದೆ, ಇದನ್ನ ಕಾಬ೯ನ್ ಟೆಸ್ಟಿಂಗ್ ನಲ್ಲಿ ಒಂದು ಸಾವಿರ ವರ್ಷ ಪುರಾತನವಾಗಿದ್ದೆಂದು ಸಾಬೀತಾಗಿದೆ.
ವಾಸಂತಿಕ ದೇವಿ ವಿಗ್ರಹ ಮಣ್ಣಿನದ್ದು (ಕಡು ಶಾಕ೯ರ ಪಾಕ), ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯವರಿಗೆ ಇದೆಲ್ಲ ಗೊತ್ತಿದೆ ಆದರೆ ರಾಜ್ಯದ ಇತರ ಜಿಲ್ಲೆಯವರಿಗೆ ಇದರ ಮಾಹಿತಿ ಕಡಿಮೆ, ನಾನು ಈ ದೇವಾಲಯ ನೋಡಿದ್ದೇನೆ.
ಈ ದೇವಾಲಯದ ಪ್ರದಾನ ಅಚ೯ಕರು #ಕಮಕೋಡು_ದತ್ತಾತ್ರೇಯ ಭಟ್ಟರು ಇವರು ಸಾಗರ ತಾಲ್ಲೂಕಿನ ಕರೂರು ಹೋಬಳಿ ಮೂಲದವರು, ಇವರು ನಿಟ್ಟೂರು ಸಮೀಪದ ಮುಳುಗಡೆ ಆದ ಕಮಕೋಡಿನವರು ಈ ಊರು ಕೆಳದಿ ಸಂಸ್ಥಾನದ ಸೈನಿಕ ತರಬೇತಿ ಪ್ರದೇಶ ಇದನ್ನೆಲ್ಲ ಇಲ್ಲಿ ಉಲ್ಲೇಖಿಸಲು ಕಾರಣ ನನ್ನ ಬೆಸ್ತರ ರಾಣಿ ಚಂಪಕಾ ಇವರು ಓದಿದ್ದಾರೆ ಮತ್ತು ಈ ಪುಸ್ತಕದ ವಿಮಷೆ೯ #ನಿಟ್ಟೂರು_ರವೀಶ್ ಮಾಡುವಾಗ ಈ ಕಮಕೋಡು ಕೆಳದಿ ಅರಸರ ಸೇನಾ ಶಿಬಿರ, ತರಬೇತಿ ಮತ್ತು ಶಸ್ತ್ರಾಗಾರ ತಯಾರಿ ಕೇಂದ್ರವೂ ಆಗಿತ್ತು ಅಂತ ಬರೆದಿದ್ದು ಇವರ ಪೂವಿ೯ಕರ ಊರು ನೆನಪಿಸಿದೆ ಒಮ್ಮೆ ಅಲ್ಲಿಗೆ ಬೇಟಿ ನೀಡುವ ಬಯಕೆ ಬಂದಿದೆ.
ಮುಳುಗಡೆ ಆದಾಗ ಅಲ್ಲಿಂದ ಅವರ ಪೂವಿ೯ಕರು ಪೂಜಿಸುತ್ತಿದ್ದ ಶಿಲಾ ಗಣಪತಿ ತಂದು ಆವಿನಳ್ಳಿಯ ಯಾವುದೋ ದೇವಸ್ಥಾನಲ್ಲಿ ಇಟ್ಟಿದ್ದಾರಂತೆ.
ಒಂದು ಪುಸ್ತಕ ಹೇಗೆ ಪುರಾತನ ನೆನಪು, ಇತಿಹಾಸಗಳ ಸರಪಳಿಯ ಕೊಂಡಿಯನ್ನು ಜೊಡಿಸುತ್ತದೆ ಅನ್ನುವುದು ನನಗಾದ ಅನುಭವ, ಕಮಗೋಡು ದತ್ತಾತ್ರೇಯ ಭಟ್ಟರು ನನ್ನ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ.
" ನಿಮ್ಮ ಪುಸ್ತಕಕ್ಕೆ ಬಂದ ವಿಮರ್ಶೆಗಳು ಹಾಗೂ ಅಭಿಪ್ರಾಯಗಳು ಒಂದು ಹೊಸ ಸಂಚಲನವನ್ನೇ ಸೃಷ್ಟಿಸಿದೆ, ಗೌರವಾನ್ವಿತ ಡಾ. ಗುಂಡಾಜೋಯಿಸರ ಸಾಧನೆ ಹಾಗೂ ತಮ್ಮ ಪುಸ್ತಕದ ಬಗ್ಗೆ ಬರೆದ ಅಭಿಪ್ರಾಯಗಳು ಪ್ರಶಂಸನೀಯ, ಕೆಳದಿ ಇತಿಹಾಸದ ಬಗೆಗಿನ ಅವರ ಆಸಕ್ತಿಯ ಪ್ರಯತ್ನಗಳಿಗೆ ಅಭಿನಂದನೆಗಳು. ಚಂಪಕರಾಣಿ ಪುಸ್ತಕ ಇತಿಹಾಸ ತಜ್ಞರಿಂದ ಹಿಡಿದು ಸಾಮಾನ್ಯರ ಗಮನವನ್ನೂ ಸೆಳೆದಿರುವುದು ತಮ್ಮ ಪ್ರಯತ್ನಕ್ಕೆ ಸಂದ ಜಯ ಮತ್ತು ಉತ್ತಮ ಬೆಳವಣಿಗೆ ". - ಕಮಕೋಡು ದತ್ತಾತ್ರೇಯ ಭಟ್ಟರು 9483527839.
Comments
Post a Comment