#ಪ್ರಾಚೀನ_ಭಾರತದಲ್ಲಿ_ತಂಬಾಕು_ಇರಲಿಲ್ಲ
#ಭಂಗಿ_ಸೊಪ್ಪು_ಮಾತ್ರ_ಬಳಕೆಯಲ್ಲಿತ್ತು.
#ಚಿಲುಮೆ_ಸೇದುವ_ರಾಮರಸ_ಕುಡಿಯುವ_ಪದ್ಧತಿ_ಇತ್ತು.
#ಮಲೆನಾಡಿನಲ್ಲಿ_ಆಲೆಮನೆಯಲ್ಲಿ_ಭಂಗಿ_ಸೊಪ್ಪಿನ_ಬೆಲ್ಲ_ಮಾಡುವ_ಪದ್ದತಿಯೂ_ಇತ್ತು.
#ಹಿಸ್ಸಪಂಚಾಯಿತಿಯಲ್ಲಿ_ಭಂಗಿ_ಬೆಲ್ಲ_ತಿಂದ_ನನ್ನ_ಪಜೀತಿ_ಪ್ರಸಂಗ.
ಮುಸ್ಲಿಂ ಸಹೋದರರ ಆಸ್ತಿ ಹಿಸ್ಸೆಯ ಪಂಚಾಯ್ತಿಗೆ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯನಾದ ನಾನು ಮುಖ್ಯ ಪ೦ಚಾಯಿತಿದಾರನಾಗಿ ಸಹೃದಯದ ಆ ಕುಟುಂಬದವರು ಆಹ್ವಾನಿಸಿದ್ದರು.
ಇವರಿಗೂ ಇವರ ತಾಯಿಗೂ ನನ್ನ ಮೇಲೆ ಆ ಕಾಲದಲ್ಲಿ ನಂಬಿಕೆ ಇತ್ತು.
ಈ ಕುಟುಂಬದ ಇವರ ತಂದೆ ಮತ್ತು ಸಹೋದರರ ಹಿಸ್ಸೆ ಪಂಚಾಯತಿ ನಾನೇ ಮಾಡಿದ್ದೆ ಆ ನಂತರ ಈ ಪಂಚಾಯಿತಿ ಆದ್ದರಿಂದ ಇವರ ಆಸ್ತಿ ಮತ್ತು ಈ ಸಹೋದರರ ಮನಸ್ಥಿತಿ ನನಗೆ ಚೆನ್ನಾಗಿ ಗೊತ್ತಿದ್ದರಿಂದ ನನಗೆ ಈ ಹಿಸ್ಸೆ ಪ೦ಚಾಯತನಲ್ಲಿ ಪ್ರಮುಖ ಸ್ಥಾನವಾಗಿತ್ತು.
ಬಿದನೂರು ನಗರದ ಬುಡನ್ ಸಾಹೇಬರ ಕುಟುಂಬ ಆನಂದಪುರಂಗೆ ಬಂದಿದ್ದು ಟಿಪ್ಪು ಸುಲ್ತಾನ್ ಕೆಳದಿ ಸಾಮ್ರಾಜ್ಯ ವಶ ಪಡಿಸಿಕೊಂಡಾಗ ಆನಂದಪುರಂ ಕೋಟೆಯ ನಿರ್ವಹಣೆಗೆ ಬಂದ ಯೋದರ ಕುಟುಂಬ ಇವರದ್ದು ಬಿದನೂರು ನಗರದ ದುಬಾರಪೇಟೆ ಇವರ ಮೂಲ.
ನಗರದ ಬುಡನ್ ಸಾಬರು ಆ ಕಾಲದಲ್ಲಿ ದೊಡ್ಡ ಜಮೀನ್ದಾರರು ಅವರಿಗೆ ಶೇಖ್ ಹಸನ್ ಸಾಬ್, ಶೇಖ್ ಮೈದೀನ್ ಸಾಬ್ ಮತ್ತು ಶೇಖ್ ಮಹಮದ್ ಗೌಸ್ ಮತ್ತು ಇಬ್ಬರು ಹೆಣ್ಣು ಮಕ್ಕಳು.
ದೊಡ್ಡ ಮಗ ಶೇಖ್ ಹಸನ್ ಸಾಹೇಬರ ಆರು ಗಂಡು ಮಕ್ಕಳ ಆಸ್ತಿ ಹಿಸ್ಸೆ ಪಂಚಾಯಿತಿ ಅವರ ಮೂರನೆ ಮಗ ಅಮೀರ್ ಸಾಹೇಬರ ಮನೆಯಲ್ಲಿ ಅಲ್ಲಿ ಎಲ್ಲರೂ ಸೇರಿದ್ದೆವು.
ಇವರ ಕುಟುಂಬದ ಒಟ್ಟು ಆಸ್ತಿ ಮತ್ತು ಈಗಾಗಲೇ ಹಿಸ್ಸೆಗಿ೦ತ ಮೊದಲೇ ಅಲ್ಲಲ್ಲಿ ಅವರವರ ಮೌಕಿಕ ಒಪ್ಪಿಗೆಯಲ್ಲಿ ಅನುಭವದಲ್ಲಿರುವ ಮನೆ ಜಮೀನು ಸೇರಿ ಹಿಸ್ಸೆ ಮಾಡಿಸುವ ಕ್ಲಿಷ್ಟವಾದ ಕೆಲಸ ನನ್ನದಾಗಿತ್ತು.
ವಾದ ವಿವಾದಗಳು ತರ್ಕಗಳ ಮದ್ಯದಲ್ಲಿ ಎಲ್ಲರೂ ಇರುವಾಗಲೇ ನನ್ನ ಶಿಷ್ಯ ಹೆಬ್ಬೋಡಿ ರಾಮಸ್ವಾಮಿ ತನ್ನ ಆಲೆಮನೆ ಮುಗಿಸಿ ತಂದ ಅಚ್ಚು ಬೆಲ್ಲ ತಂದು ಕೊಟ್ಟ.
ಅದನ್ನು ತಟ್ಟೆಯಲ್ಲಿ ಹಾಕಿ ಪಂಚಾಯಿತಿದಾರರ ಮದ್ಯ ಇಟ್ಟರು, ಮಲೆನಾಡಿನ ದೇಸಿ ಕಬ್ಬಿನ ಆಲೆಮನೆ ಬೆಲ್ಲ ಅಪರೂಪವಾದ್ದರಿಂದ ಎಲ್ಲರೂ ಜಾಸ್ತಿ ಜಾಸ್ತಿಯೇ ತಿಂದಿದ್ದರು.
ಪಂಚಾಯಿತಿ ಅಂತಿಮ ಘಟ್ಟ ತಲುಪಿತ್ತು, ಆಸ್ತಿ ವಿಬಾಗದ ತಕ್ಕಡಿಯಲ್ಲಿ ತೂಗುವ ಸಂದರ್ಭದಲ್ಲಿ ನನಗೆ ಯಾಕೋ ಕಸಿವಿಸಿ ಮತ್ತು ಭಯ ಪ್ರಾರಂಭವಾಯಿತು !!?.
ಪಂಚಾಯಿತಿ ಪ್ರಾರಂಭದಲ್ಲಿದ್ದ ನನ್ನ ನೆನಪಿನ ಶಕ್ತಿ ಪಂಚಾಯಿತಿ ಅಂತಿಮ ಘಟ್ಟದಲ್ಲಿ ಯಾಕೋ ದುರ್ಬಲ ಅನ್ನಿಸಲು ಪ್ರಾರಂಭ ಆಯಿತು.
ಸಾಧ್ಯವೇ ಇಲ್ಲ... ಪಂಚಾಯಿತಿ ಬೇಡವೇ ಬೇಡ ಅನ್ನಿಸಿತು, ಮಲಗಬೇಕು ಅನ್ನಿಸಿತು, ವಿಪರೀತ ಭಯ ಆವರಿಸಿತು ಆಗಲೆ ನನಗೆ ಇದು ಹಾರ್ಟ್ ಅಟ್ಯಾಕ್ ಲಕ್ಷಣ ಅನ್ನಿಸಲು ಪ್ರಾರಂಭ ಆಯಿತು.
ನನ್ನನ್ನು ತಕ್ಷಣ ವ್ಯೆದ್ಯರ ಬಳಿ ಕರೆದುಕೊಂಡು ಹೋಗಿ ಅಂತ ಹೇಳಿ ಅಲ್ಲೇ ಮಲಗಿದೆ... ಆಗಲೇ ಶಿಷ್ಯ ತಣ್ಣಗೆ ಉಸುರಿದ ಎಂತದೂ ಆಗಲ್ಲ ಇದು ಭಂಗಿ ಸೊಪ್ಪಿನ ಬೆಲ್ಲ ಹಿಂಗೆ ರಾಶಿ ತಿಂದರೆ ಹಿಂಗೆ ಆಗೋದು ಅಂತಿದ್ದ !! ಅವನಿಗೆ ಎರೆಡು ತಪರಾಕಿ ಬಿಡಬೇಕೆನ್ನಿಸಿದರೂ ನನ್ನ ಕೈ ಕಾಲು ಒಪ್ಪಿಗೆ ಕೊಡಲೇ ಇಲ್ಲ, ಹಿಸ್ಸೆ ಪಂಚಾಯಿತಿ ಅದ೯ಕ್ಕೆ ಬರಖಾಸ್ತು ಆಯಿತು.
ಮಲೆನಾಡಿನಲ್ಲಿ ಆಲೆಮನೆ ಹಾಕಿ ಬೆಲ್ಲ ತಯಾರಿಸುವ ಪದ್ದತಿ ಈಗಿಲ್ಲ ಆಗೆಲ್ಲ ಭಂಗಿ ಬೆಲ್ಲ, ಗುಡ್ಡೆ ಗೇರು ಬೆಲ್ಲದ ಸರ, ಬಾಳೆ ದಿಂಡಿನ ಸರದ ಬೆಲ್ಲ, ಅ೦ಟು ಬೆಲ್ಲ ಸುತ್ತಿದಎಳೆ ಕಬ್ಬಿನ ಕೋಲಿನ ತುದಿ, ಆಲೆಮನೆಯ ಬೆಲ್ಲದ ಜೊಂಡಿನ ಭಟ್ಟಿ ಸರಾಯಿ ಈಗೆಲ್ಲ ನೆನಪು ಮಾತ್ರ.
Comments
Post a Comment