Blog number 1052. ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ನಷ್ಟದ ಮಾರ್ಗ ಎಂದು ರದ್ದು ಮಾಡುವ ಸಂದರ್ಭದಲ್ಲಿ ಈ ರೈಲು ಮಾರ್ಗ ಉಳಿಸಿಕೊಳ್ಳುವ ತಂತ್ರವಾಗಿ ಸಾಗರ ರೈಲು ನಿಲ್ದಾಣಕ್ಕೆ ಡಾ.ರಾಮಮನೋಹರ ಲೋಹಿಯಾ ಎಂದು ನಾಮಕರಣ ಮಾಡಿಸಲು ಶಿವಮೊಗ್ಗದಿಂದ ದೆಹಲಿ ಚಲೋ 22 ವರ್ಷದ ಹಿಂದಿನ ನೆನಪು.
#ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಒತ್ತಾಯಿಸಿ_35_ಜನರ_ನಿಯೋಗದ_ದೆಹಲಿ_ಚಲೋ
#ನಿಯೋಗ_ನೇತೃತ್ವದ_ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪನವರು.
#ದೆಹಲಿಯಲ್ಲಿ_ಜಾರ್ಜ್_ಪರ್ನಾಂಡೀಸ್_ಶ್ರೀನಿವಾಸಪ್ರಸಾದ್_ರಾಜ್ಯಸಭಾ_ಸದಸ್ಯರಾದ_ಜವರೇಗೌಡರು
#ಎರೆಡು_ಸಾವಿರ_ಇಸವಿಯ_ದೆಹಲಿ_ಚಲೋ_ನೆನಪು
ಷರೀಪರು ರೈಲ್ವೇ ಮಂತ್ರಿಗಳಾಗಿದ್ದಾಗ ಆನಂದಪುರಂನ ಮಾಜಿ ಸಂಸದರು, ವಿದ್ಯಾ ಮಂತ್ರಿಗಳೂ ಆಗಿದ್ದ ವಯೋವೃದ್ದ ಬದರೀನಾರಾಯಣ ಅಯ್ಯಂಗಾರ್ ರನ್ನು ಹೆಲಿಕಾಪ್ಟರ್ ನಲ್ಲಿ ಕರೆತಂದು ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಮೀಟರ್ ಗೇಜ್ ಪರಿವರ್ತನೆ ಭೂಮಿ ಪೂಜೆ ನೆರವೇರಿಸಿದ್ದರು ಇದೇ ಬದರೀನಾರಾಯಣ ಅಯ್ಯಂಗಾರರ ಶಿವಮೊಗ್ಗ ಜಿಲ್ಲೆಯ ಕೊನೆಯ ಬೇಟಿ.
ಬ್ರಾಡ್ ಗೇಜ್ ಪರಿವರ್ತನೆ ಮಾಡಲು ಆಗಿನ ಮೀಟರ್ ಗೇಜ್ ರೈಲು ನಿಲ್ಲಿಸಿದರು ನಂತರ ಬೀರೂರು ಶಿವಮೊಗ್ಗ ಬ್ರಾಡ್ ಗೇಜ್ ಆದರೂ ಶಿವಮೊಗ ತಾಳಗುಪ್ಪ ಬ್ರಾಡ್ ಗೇಜ್ ಪರಿವರ್ತನೆ ಪ್ರಾರಂಭವಾಗಲೇ ಇಲ್ಲ.
ಇದರ ಮಧ್ಯದಲ್ಲೆ ದೆಹಲಿ ರೈಲ್ವೇ ಅಧಿಕಾರಿಗಳು ಶಿವಮೊಗ್ಗ - ತಾಳಗುಪ್ಪ ರೈಲು ಮಾರ್ಗ ನಷ್ಟದ ಮಾರ್ಗ ಎಂದು ಘೋಷಿಸಿ ಬಿಟ್ಟರು ಆದ್ದರಿಂದ ಈ ಮಾರ್ಗ ಬ್ರಾಡ್ ಗೇಜ್ ಮಾಡುವ ಅವಶ್ಯಕತೆಯೇ ಇಲ್ಲ ಎಂದು ನಿರ್ದರಿಸಿ ಬಿಟ್ಟರು.
ಈ ವೇಳೆಯಲ್ಲಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಶಿವಮೊಗ್ಗದ ಮಾಜಿ ವಿದಾನ ಪರಿಷತ್ ಸದಸ್ಯರಾದ ಜಿ.ಮಾದಪ್ಪ, ಸಮಾಜವಾದಿ ಲೇಖಕ ಕೋಣಂದೂರು ವೆಂಕಪ್ಪ ಗೌಡರು, ಹೋರಾಟಗಾರ ಕಲ್ಲೂರು ಮೇಘರಾಜ್ ಮತ್ತು ನಾನು ಸೇರಿ ಈ ಬಗ್ಗೆ ಸಮಾಲೋಚನೆ ಮಾಡಿದೆವು.
ಡಾ.ರಾಮಮನೋಹರ ಲೋಹಿಯಾರು ಕಾಗೋಡು ರೈತ ಹೋರಾಟಕ್ಕೆ ಬಂದು ಭಾಗವಹಿಸಿದಾಗ ಸಾಗರ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತಂಗಿದ್ದಾಗ ಅವರ ಬಂದನವಾಗಿದ್ದು ಆ ಕಾಲದಲ್ಲಿ ಬಹು ದೊಡ್ಡ ಸುದ್ದಿ, ಬಿಬಿಸಿ ವಾರ್ತೆ, ರಷ್ಯಾದ ಆಗಿನ ಪ್ರಸಿದ್ದ ಪತ್ರಿಕೆ ಪ್ರಾವ್ಡಾದಲ್ಲಿ ಮುಖ ಪುಟದ ಸುದ್ಧಿ ಆಗಿತ್ತು ಆ ಐತಿಹಾಸಿಕ ಘಟನೆ ಆದರಿಸಿ ಡಾ.ರಾಮಮನೋಹರರ ಒಡನಾಡಿ ಜಾರ್ಜ್ ಪನಾ೯ಂಡೀಸರ ಮೂಲಕ ಸಾಗರ ರೈಲು ನಿಲ್ದಾಣಕ್ಕೆ ಡಾ.ರಾಮಮನೋಹರ ಲೋಹಿಯಾ ರೈಲು ನಿಲ್ದಾಣ ನಾಮಕರಣದ ಹೋರಾಟ ಪ್ರಾರಂಬಿಸಿದರೆ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ನಷ್ಟದ ಕಾರಣದಿಂದ ಮುಚ್ಚುವ ಅಧಿಕಾರಿಗಳ ಉದ್ದೇಶ ಕೈ ಬಿಡುತ್ತಾರೆಂಬ ಆಶಾಭಾವನೆ ಮತ್ತು ತಂತ್ರವಾಗಿತ್ತು.
ಜೊತೆಗೆ ಹಂದಿಗೋಡು ಕಾಯಿಲೆ ಪೀಡಿತರ ಪುನರ್ವಸತಿಗಾಗಿ ಮನವಿ ನೀಡಲು ಸ್ವತಃ ಹಂದಿಗೋಡು ಕಾಯಿಲೆ ಪೀಡಿತರಾದ ರಿಪ್ಪನ್ ಪೇಟೆ ಸಮೀಪದ ಬರುವೆ ಶ್ರೀದರ್ ಕೂಡ ಜೊತೆಯಾಗಿದ್ದರು.
ಆಗಿನ ರಾಜ್ಯಸಭಾ ಸದಸ್ಯರಾದ ಜವರೇಗೌಡರು ದೆಹಲಿಯ ಪೂಸಾ ಅಗ್ರಿಕಲ್ಚರಲ್ ಯುನಿವರ್ಸಿಟಿಯ ಗೆಸ್ಟ್ ಹೌಸ್ ನಲ್ಲಿ ಕರ್ನಾಟಕದ ನಮ್ಮ ನಿಯೋಗ ತಂಗಲು ವ್ಯವಸ್ಥೆ ಮಾಡಿದ್ದರು.
ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿ ಬಗ್ಗೆ ಆಸಕ್ತಿ ಹೊಂದಿದ್ದ ಈಗ 22 ವರ್ಷದ ಹಿಂದೆ ನಮ್ಮ ದೆಹಲಿ ಚಲೋ ಯಾತ್ರೆಯ ಸಂಗಾತಿಗಳಾಗಿದ್ದವರು ತೀರ್ಥಹಳ್ಳಿಯ ಬಸವಾನಿಯ ಕೆ.ಶ್ವೇತ ಕುಮಾರ್, ಪತ್ರಕರ್ತ ಕಬಸೆ ಅಶೋಕ್ ಮೂರ್ತಿ, ಮೇಗರವಳ್ಳಿ ಪ್ರೀತಿ ಶರತ್, ಹೊಸನಗರ ತಾಲೂಕಿನ ಉಮಾಕಾಂತ್, ಪರಮೇಶ್ವರಪ್ಪ, ಗರ್ತಿಕೆರೆ ಬಿಳಿ ನಾಯಕ್, ಪಾ. ನಾ. ಜಗದೀಶ್, ಸಾಗರ ತಾಲ್ಲೂಕಿನ ಅಬ್ಬಾಸ್ ಕಾಕಾ, ಯಡೇಹಳ್ಳಿ ಕೆರಿಯಪ್ಪ, ಆನಂದಪುರಂ ಮಂಜುನಾಥ್ ಶೇಟ್, ತಾಳಗುಪ್ಪದ ಲಿಂಗರಾಜ ಯಾದವ್, ಹೋಟೆಲ್ ಅಣ್ಣಪ್ಪ ಪೂಜಾರ್, ರಿಪ್ಪನ್ ಪೇಟೆಯ ರೈತ ಸಂಘದ ಟೈಲರ್ ಮಂಜಪ್ಪ, ಕುಕ್ಕಳ್ಳಿಯ ರೈತ ಮುಖಂಡರುಗಳು, ಆರ್.ಎ.ಅಬ್ದುಲ್ ಖಾದರ್, ಕೆರೆಹಳ್ಳಿ ಕೀರ್ತಿರಾಜ್, ಮಾದಾಪುರ ಲೋಕಪ್ಪ, ಆರ್.ಎನ್.ಮಂಜಪ್ಪ, ಕೆರೆಹಳ್ಳಿ ದೇವರಾಜ್, ಯೋಗೇಶ್ವರ್ ಗೌಡರು, ಮಂಜುನಾಥ ಆಚಾರ್, ಶ್ರೀಮತಿ ನಾಗರತ್ನಮ್ಮ, ಶ್ರೀಮತಿ ಭಾನುಮತಿ ಶೆಟ್ಟಿ, ಚಿದಾನಂದ, ಅಯನೂರು ವಾಸು ನಾಯ್ಕ, ಉಳ್ಳೂರು ರಾಜೇಂದ್ರ, ಅಬ್ಬಾಸ್ ಕಾಕ, ಹಿರೇಮನೆ ಅನಂತ್ ವಕೀಲರು,ಭದ್ರಾವತಿ ಹೆಚ್.ಎಂ.ಮಂಜುನಾಥ ಮುಂತಾದ 35 ಜನ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಪರಿವರ್ತನೆಗೆ ಒತ್ತಾಯಿಸಿ ದೆಹಲಿ ಚಲೋ ಮಾಡಿದ್ದರು.
ಆಗಿನ ಉಪ ಪ್ರದಾನಿ ಎಲ್.ಕೆ.ಅಡ್ವಾನಿಯವರು ಈ ನಿಯೋಗದ ಮನವಿ ಪುರಸ್ಕರಿಸಿ ಕರ್ನಾಟಕ ಸರ್ಕಾರಕ್ಕೆ ಡಾ.ರಾಮಮನೋಹರ ಲೋಹಿಯಾ ಎಂದು ಸಾಗರದ ರೈಲು ನಿಲ್ದಾಣಕ್ಕೆ ಪುನರ್ ನಾಮಕರಣಕ್ಕೆ ಪರಿಶೀಲನೆಗಾಗಿ ಕಳಿಸಿದ್ದರು, ಸದರಿ ಮನವಿ ಕರ್ನಾಟಕ ಸಕಾ೯ರ ಶಿವಮೊಗ್ಗ ಜಿಲ್ಲಾಡಳಿತ ವರದಿ ಮತ್ತು ಸಾಗರದ ಆಗಿನ ಪುರಸಭೆಯ ಒಪ್ಪಿಗೆಯೊಂದಿಗೆ ಉಪ ಪ್ರಧಾನಿ ಕಛೇರಿಗೆ ರಾಜ್ಯ ಸರ್ಕಾರ ತನ್ನ ನಿರಾಕ್ಷೇಪಣಿ ನೀಡಿದ ಆದಾರದಿಂದ ಉಪ ಪ್ರಧಾನಿಗಳು ರೈಲ್ವೆ ಇಲಾಖೆಗೆ ಸಾಗರ ಜಂಬಗಾರು ಎಂಬ ಹೆಸರು ಡಾ.ರಾಮಮನೋಹರ ಲೋಹಿಯಾ ಎಂದು ಮರು ನಾಮಕರಣ ಮಾಡಲು ಅದೇಶಿಸಿದ್ದು 22 ವಷ೯ದಿಂದ ರೈಲ್ವೆ ಇಲಾಖೆ ಕಾಯ೯ರೂಪಕ್ಕೆ ತರದೆ ತಡೆ ಹಿಡಿದಿದೆ.
ನಿನ್ನೆ ನನ್ನ ಡಿಸ್ಪ್ಲೇ ಪೋಟೋ (DP) ಮತ್ತು ಪ್ರೊಪೈಲ್ ಪೋಟೋ (PP) ದೆಹಲಿ ಚಲೋ ಯಾತ್ರೆಯಲ್ಲಿ ರಕ್ಷಣಾ ಮಂತ್ರಿ ಜಾರ್ಜ್ ಪನಾ೯೦ಡೀಸ್ ಬೇಟಿ ಪೋಟೋ ಹಾಕಿದ್ದು 22 ವರ್ಷದ ಹಿಂದಿನ ನೆನಪು ತಂದಿತು.
Comments
Post a Comment