Blog number 1079. ರಿಪ್ಪನ್ ಪೇಟೆಯ ಅಶ್ವಲ್ ಮತ್ತು ಇನ್ನಿಬ್ಬರು ವಿದ್ಯಾರ್ಥಿಗಳು ಹಿಮಾಲಯನ್ ಬೈಕ್ ನಲ್ಲಿ ಗೋವಾದಲ್ಲಿ ನಡೆದ ರಾಯಲ್ ಎನ್ಫೀಲ್ಡ್ ಬೈಕ್ ನ ರೈಡರ್ಸ್ ಮ್ಯಾನಿಯಾ 2022 ರಲ್ಲಿ ಭಾಗವಹಿಸಿದ ಇದಕ್ಕಾಗಿ 900 ಕಿ ಮಿ ಸುರಕ್ಷಿತ ಬೈಕ್ ರೈಡಿಂಗ್ ಮಾಡಿದ ಅನುಭವ ವಾಪಾಸಾಗುವಾಗ ಈ ಯುವಕರ ಸಾಹಸ ಪ್ರೋತ್ಸಾಹಿಸಲು ಮಲ್ಲಿಕಾ ವೆಜ್ ನಲ್ಲಿ ಸಂಜೆ ಉಪಹಾರಕ್ಕೆ ಆಹ್ವಾನಿಸಿದ್ದೆ.
#ವಿದೇಶಿ_ಸಾಹಸಿಗಳ_ಈ_ಹವ್ಯಾಸ_ನಮ್ಮ_ಹಳ್ಳಿ_ಹುಡುಗರಿಗೂ_ಆಕರ್ಷಿಸುತ್ತಿದೆ.
#ಇದರಿಂದ_ಯುವಜನತೆ_ಉತ್ತಮ_ಹವ್ಯಾಸದ_ಕಡೆ_ಸಾಗುವ_ಸಾಧ್ಯತೆ
#ರೈಡರ್ಸ್_ಸಾಹಸ_ಯಾತ್ರೆಯನ್ನು_youtubeನಲ್ಲಿ_ಪ್ರಕಟಿಸಿ_ಹಣಗಳಿಸುವ_ಲಾಭದ_ದಾರಿಯೂ_ಇದೆ.
#ರಿಪ್ಪನಪೇಟೆ_ಅಶ್ವಲ್_900_ಕಿಮಿ_ಹಿಮಾಲಯನ್_ಬೈಕಲ್ಲಿ_ಚೊಚ್ಚಲ_ರೈಡಿಂಗ್_ಅನುಭವ.
ಈಗೆಲ್ಲ ಹಳ್ಳಿಗಳಲ್ಲಿ ಯುವಕ ಯುವತಿಯರು ಪ್ರತ್ಯೇಕವಾಗಿ ಬೈಕ್ - ಸ್ಕೂಟಿ ಖರೀದಿಸದೇ ಇರುವುದಿಲ್ಲ ಆದ್ದರಿಂದ ಪ್ರತಿ ಹೋಬಳಿಯಲ್ಲಿ ಬೈಕ್ ಮಾರಾಟದ ಶೋರೂಂಗಳಿದೆ, ಸರ್ವಿಸ್ ಸ್ಟೇಷನ್ ಮತ್ತು ಪೆಟ್ರೋಲ್ ಬಂಕ್ ಗಳಾಗಿದೆ.
ಬೈಕ್ ಸಂಖ್ಯೆ ಹೆಚ್ಚಿದಂತೆ ಅಪಘಾತವೂ ಹೆಚ್ಚಾಗಿದೆ, ಅಮಲು ಪದಾರ್ಥ ಸೇವಿಸಿ ಆಗುವ ಅನಾಹುತ, ವಿಪರೀತ ವೇಗದಿಂದ ಜಡ್ಜಮೆಂಟ್ ಇಲ್ಲದೆ ಅಪಘಾತಗಳು ಸಾಮಾನ್ಯವಾಗಿದೆ, ಸಾವಿನ ಸಂಖ್ಯೆ ಕೂಡ ಹೆಚ್ಚು.
ಇದರಿಂದ ಪೋಷಕರು ಮಕ್ಕಳಿಗೆ ಬೈಕ್ ಕೊಡಿಸಲು ಹೆದರುತ್ತಾರೆ ಆದರೆ ಈಗಿನ ಮಕ್ಕಳ ಬೇಡಿಕೆ ತಿರಸ್ಕರಿಸಲಾಗದೇ ಸಾಲ ಮಾಡಿ ಬೈಕ್ ಕೊಡಿಸುತ್ತಾರೆ.
ಈ ರೀತಿ ಬೈಕ್ ಖರೀದಿಸುವ ಯುವ ಜನಾಂಗಕ್ಕೆ ತದ್ವಿರುದ್ಧವಾದ ಹೊಸ ಖಯಾಲಿಯ ಯುವ ಜನತೆ ತಮ್ಮ ಬೈಕ್ ನಲ್ಲಿ ದೇಶ ಮತ್ತು ಅಂತರ್ ರಾಷ್ಟ್ರೀಯ ಪ್ರವಾಸ ಮಾಡುವ ವಿದೇಶಿ ಸಾಹಸಿ ಪ್ರವಾಸಿಗಳಂತೆ ನಮ್ಮ ಹಳ್ಳಿ ಹುಡುಗರು ಈ ರೀತಿ ಬೈಕ್ ನಲ್ಲಿ ಪ್ರವಾಸ ಮಾಡಲು ಮುಂದಾಗುತ್ತಿರುವುದು ಸ್ವಾಗತಾರ್ಹವಾಗಿದೆ.
ಅವರವರ ಆಯ್ಕೆಯ ಬೈಕ್ ಖರೀದಿಸಿ ಅದಕ್ಕೆ ಸೂಕ್ತವಾದ ರೈಡಿಂಗ್ ಗಿಯರ್ಸ್ಗಳಾದ ಹೆಲ್ಮೆಟ್ , ಜರ್ಕಿನ್, ಶೂ, ನೀಗಾರ್ಡ್ ಮುಂತಾದ ಸ್ವಯಂ ರಕ್ಷಣಾ ಕವಚ ಧರಿಸಿ, ಬೈಕ್ ಲ್ಲಿ ತಮ್ಮೆಲ್ಲ ದಾಖಲೆ, ಉಡುಗೆ ತೊಡುಗೆ, ವಾಸ್ತವ್ಯ ಹೂಡಿದರೆ , ಅಲ್ಲಿ ಆಹಾರ ಅಡುಗೆಗಾಗಿ ಪಾತ್ರೆ, ರೇಷನ್, ಕಾಪಿ, ಸ್ಟವ್ ಹೀಗೆ ಇದನ್ನೆಲ್ಲ ಜೊತೆಯಲ್ಲೇ ಒಯ್ಯುತ್ತಾರೆ.
ಸಂಪೂಣ೯ ಸಂಚಾರ ನಿಯಮ ಕಡ್ಡಾಯ ಪಾಲನೆ, ಸುರಕ್ಷಿತವಾದ ವೇಗದಲ್ಲಿ ಸಂಚಾರ, ನಿಗದಿ ಪಡಿಸಿದ ಜಾಗದಲ್ಲೇ ಪಾರ್ಕಿಂಗ್ ಈ ರೀತಿ ಬೈಕ್ ರೈಡರ್ ಗಳು ಸಂಚರಿಸುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ.
ಆದ್ದರಿಂದ ಪ್ರತಿ ವರ್ಷ ನವೆಂಬರ್ ನಲ್ಲಿ ನಡೆಯುವ ರಾಯಲ್ ಎನ್ಫೀಲ್ಡ್ ಬೈಕ್ ಪೆಸ್ಟಿವಲ್ #ರೈಡರ್ಸ_ಮೇನಿಯಾ_2022 ಈ ಬಾರಿ ಗೋವಾದಲ್ಲಿ ಯಶಸ್ವಿ ಆಗಿ ನಡೆದಿದೆ ಇದರಲ್ಲಿ ದೇಶ ವಿದೇಶದಿಂದ ಬಂದು ಭಾಗವಹಿಸಿದ ಬೈಕ್ ಗಳ ಸಂಖ್ಯೆ 15 ಸಾವಿರ! ಮತ್ತು ಈ ಸಂದರ್ಭದಲ್ಲೇ ಹೊಸ ರಾಯಲ್ ಎನ್ಫೀಲ್ಡ್ ಸೂಪರ್ ಮೆಟಾರ್ 650 ಬೈಕ್ ಲೋಕಾರ್ಪಣೆ ಕೂಡ ಕಂಪನಿ ಮಾಡಿದೆ.
ನಮ್ಮ ರಿಪ್ಪನ್ ಪೇಟೆಯಿಂದ ಮೂವರು ಯುವ ವಿದ್ಯಾರ್ಥಿಗಳು ಈ ಗೋವಾದ ರಾಯಲ್ ಎನ್ಫೀಲ್ಡ್ ಬೈಕ್ ನ ರೈಡರ್ಸ್ ಮೇನಿಯಾ 2022 ರಲ್ಲಿ ಯಶಸ್ವಿ ಆಗಿ ಭಾಗವಹಿಸಿ ವಾಪಾಸ್ ಬಂದಿದ್ದಾರೆ, ಬರುವಾಗ ಇವರಿಗೆ ನಮ್ಮ ಮಲ್ಲಿಕಾ ವೆಜ್ ನಲ್ಲಿ ಸಂಜೆಯ ಉಪಹಾರಕ್ಕೆ ಆಮಂತ್ರಣ ನೀಡಿದ್ದೆ.
ಉಪಹಾರದ ನಂತರ ಪರಿಚಿತ ಯುವಕ ರಿಪ್ಪನ್ ಪೇಟೆಯ ಅಶ್ವಲ್ ನನ್ನ ಕಛೇರಿಗೆ ಬಂದು ಧನ್ಯವಾದ ಹೇಳಿದಾಗ ಅವರ ಅನುಭವದ ಬಗ್ಗೆ ಮಾತಾಡಿದೆವು, ಮುಂದಿನ ದಿನಗಳಲ್ಲಿ ಇಡೀ ದೇಶ ಸುತ್ತುವ ಅಭಿಲಾಷೆ ಈ ಯುವಕ ಹೊಂದಿರುವುದಾಗಿ ತಿಳಿಸಿದರು.
ಇವರ ಇನ್ನಿಬ್ಬರು ಜೊತೆಗಾರರು ಮನೆ ಸೇರುವ ಅವಸರದಲ್ಲಿ ಉಪಹಾರ ಸೇವಿಸಿ ಮೊದಲೇ ಹೋಗಿದ್ದರಿಂದ ನನಗೆ ಅವರ ಬೇಟಿ ಸಾಧ್ಯವಾಗಲಿಲ್ಲ.
Comments
Post a Comment