Blog number 1086.10 ಮೇ 1893 ರಲ್ಲಿ ಅಮೇರಿಕಾ ನ್ಯಾಯಾಲಯ ಟೋಮೋಟೋ ತರಕಾರಿ ಎಂದು ತೀರ್ಪು ನೀಡುವ ತನಕ ವಿಶ್ವದಾದ್ಯಂತ ಟೋಮೋಟೋ ಹಣ್ಣು ಅಂತನೇ ಭಾವಿಸಲಾಗಿತ್ತು, ಆಗ ಅಮೇರಿಕಾದಲ್ಲಿ ಹಣ್ಣುಗಳಿಗೆ ತೆರಿಗೆ ಇತ್ತು ಮತ್ತು ತರಕಾರಿಗೆ ತೆರಿಗೆ ಇರಲಿಲ್ಲ.
#ನೂರು_ರೂಪಾಯಿ_ದಾರಣೆಯಾದರೂ_ಬೇಡಿಕೆ_ಕಡಿಮೆ_ಇಲ್ಲ
#ಟೋಮೋಟೋ_ತರಕಾರಿನೋ_ಹಣ್ಣೋ?
#ಹದಿನಾರನೆ_ಶತಮಾನದಲ್ಲಿ_ಪೋರ್ಚುಗೀಸರಿಂದ_ಭಾರತಕ್ಕೆ
ಕೆಲವು ಬಾರಿ ಅಕಾಲಿಕ ಮಳೆಯಿಂದ ಟೋಮೋಟೋ ದಾರಣೆ ಕಿಲೋಗೆ ನೂರು ದಾಟಿದೆ, 25 ಕೆ.ಜಿಯ ಟೋಮೋಟೋ ಬಾಕ್ಸ್ 2000 ಕ್ಕೆ ರೈತರಿಂದ ಖರೀದಿ ಆಗುತ್ತದೆ ಮತ್ತೆ ಕೆಲ ಬಾರಿ ಟೋಮೋಟೋ ದಾರಣೆ ಕುಸಿದು ರೈತರು ಹೆದ್ದಾರಿಗೆ ಟೋಮೋಟೋ ಸುರಿದು ಪ್ರತಿಭಟಿಸುತ್ತಾರೆ.
50 ವರ್ಷದ ಹಿಂದೆ ನಮ್ಮ ತರಕಾರಿ ಪಟ್ಟಿಯಲ್ಲಿ ಟೋಮೋಟೋ ಇರಲಿಲ್ಲ, ಸ್ಥಳಿಯ ತರಕಾರಿ ಮಾರಾಟಗಾರರ ಬುಟ್ಟಿಯಲ್ಲೂ ಟೋಮೋಟೋ ಇರಲಿಲ್ಲ.
ದಕ್ಷಿಣ ಅಮೇರಿಕಾದ ಆಗ್ನೇಯ ಭಾಗ ಟೋಮೋಟೋ ಮೂಲವಂತೆ, 18ನೇ ಶತಮಾನದ (1835ರ ವರೆಗೆ)
ತನಕ ಟೋಮೋಟೋ ಅಮೇರಿಕಾದಲ್ಲಿ ವಿಷ ಪೂರಿತ ಎಂಬ ಬಾವನೆ ಇತ್ತು, ಸ್ಪಾನಿಷ್ ರಿಂದ ಯುರೋಪಿಗೆ ಪರಿಚಯ ಆಗುತ್ತದೆ.
ಕ್ರಿಶ 700 ರಲ್ಲಿ ಟೋಮೋಟೋ ಮೂಲ ಹೆಸರು ಟೋಮಾಟಿ (Tomati) ಆಗಿತ್ತು.
1887 ರಲ್ಲಿ ಅಮೇರಿಕಾದಲ್ಲಿ ಟೋಮೋಟೋ ಬಗ್ಗೆ ನಡೆದ ಒಂದು ವಿಶೇಷ ವ್ಯಾಜ್ಯ ಮತ್ತು ತೀಪು೯ ಈಗ ವಿಶ್ವದಾದ್ಯಂತ ಆಚರಣೆಗೆ ಕಾರಣ ಆಯಿತು ಅದೇನೆಂದರೆ ಟೋಮೋಟೋ ತರಕಾರಿನಾ? ಅಥವ ಹಣ್ಣೋ? ಎಂಬ ಜಿಜ್ಞಾಸೆಗೆ ಕಾರಣ ಆಗಿತ್ತು.
ಆಗ ಅಮೇರಿಕಾದಲ್ಲಿ ತರಕಾರಿಗೆ ತೆರಿಗೆ ಇರಲಿಲ್ಲ ಆದರೆ ಹಣ್ಣಿಗೆ ತೆರಿಗೆ ಇತ್ತು.
10 ಮೇ 1893 ರಲ್ಲಿ ಅಮೇರಿಕಾ ನ್ಯಾಯಾಲಯ ನೀಡಿದ ತೀರ್ಪು ಟೋಮೋಟೋ ತರಕಾರಿ ಅಂತ ಈಗ ವಿಶ್ವದಾದ್ಯಂತ ಎಲ್ಲಾ ದೇಶಗಳು ಟೋಮೋಟೋ ಹಣ್ಣನ್ನು ತರಕಾರಿ ಅಂತಲೇ ಪರಿಗಣಿಸಿದೆ.
ಟೋಮೋಟೋ ಬಳಸದೆ ಅಡುಗೆಯೇ ಸಾಧ್ಯವಿಲ್ಲ ಎಂಬ ಭಾವನೆ ಅಡುಗೆಯ ಸಿಬ್ಬಂದಿಗಳಲ್ಲಿ ಬಂದು ಬಿಟ್ಟಿದೆ.
ಭಾರತ ದೊಡ್ಡ ಪ್ರಮಾಣದಲ್ಲಿ ಟೋಮೋಟೋ ಬೆಳೆಯುತ್ತದೆ ಮತ್ತು ಬಳಸುತ್ತದೆ.
Comments
Post a Comment