Blog number 1080. ನನ್ನ ಸಂಕಷ್ಟ ಪರಿಹಾರಕ್ಕಾಗಿ ಜ್ಯೋತಿಷಿಗಳ ಸಲಹೆಯಂತೆ ಧರಿಸಿದ ಹವಳದ ಬಂಗಾರದ ಉಂಗುರ ಗೆಳೆಯರ ಸಂಕಷ್ಟ ಪರಿಹರಿಸಿದ್ದು ವಿಸ್ಮಯವಲ್ಲವೇ?
#ಹವಳ_ದರಿಸಿದರೆ_ದೆಶೆ_ಎಂಬ_ಜೋತಿಷ್ಯರ_ಉವಾಚ
#ಗೆಳೆಯರ_ಸಂಕಷ್ಟ_ಪರಿಹರಿಸಿದ_ಹವಳದ_ಮಹಾತ್ಮೆ
#ಗೆಳೆಯರಿಗೆ_ಕೈಕೊಟ್ಟ_ಬಡ್ಡಿ_ವ್ಯಾಪಾರಿ
#ಹಳೇ_ಸಾಲ_ಹತ್ತು_ಸಾವಿರ_ನೀಡಿದರೆ_ಇಪ್ಪತ್ತು_ಸಾವಿರ_ನೀಡುವ_ಸುಳ್ಳು_ಭರವಸೆ
#ಮ೦ಗಳೂರು_ಆಸ್ಪತ್ರೆಯಲ್ಲಿ_ಹೆಂಡತಿಯ_ಆಪರೇಷನ್
ಸಂಪನ್ನ ಸಜ್ಜನ ಮತ್ತು ರೈತ ಹೋರಾಟದ ಗೆಳೆಯರು ಆ ದಿನ ತಮ್ಮ 4 - 5 ವರ್ಷ ಪ್ರಾಯದ ತಮ್ಮ ಎರಡನೇ ಮಗನ ಜೊತೆ ಮನೆಗೆ ಬಂದು ಹೇಳಿದ ಕಥೆ ಕೇಳಿ ನಾನು ಕಣ್ಣೀರಾದೆ ನೀವೂ ಕೇಳಿ ಇದು 22 ವರ್ಷದ ಹಿಂದಿನ ಕಥೆ....
ಅವರ ಪತ್ನಿಗೆ ಥ್ಯರಾಯಿಡ್ ಆಪರೇಷನ್ ಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದ್ದರು ಮತ್ತು ಆಪರೇಷನ್ ಗೆ 20 ಸಾವಿರ ಹಣ ಪಾವತಿ ಮಾಡಬೇಕಾಗಿತ್ತು.
ಗೆಳೆಯರ ಆರ್ಥಿಕ ಪರಿಸ್ಥಿತಿ ಆ ದಿನಗಳಲ್ಲಿ ತುಂಬಾ ಸ೦ಕಷ್ಟದಲ್ಲಿತ್ತು ಸಾಗರದ ಮಾರಿಗುಡಿ ಹಿಂಬಾಗದ ಒಂದು ಅವರ ಕುಲಭಾಂದವ ತ್ಯಾಗರ್ತಿ ಸಮೀಪದ ವೀರಾಪುರದ ಪೈನಾನ್ಷಿಯರ್ ಹತ್ತಿರ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ ಆತ ನಿಮ್ಮ ಹತ್ತಿರ ಈಗ ಎಷ್ಟು ಹಣ ಇದೆ ಅಂದಿದ್ದಾನೆ ಹತ್ತು ಸಾವಿರ ಹೇಗೋ ಹೊಂದಿಸಿದ್ದೇನೆ ಇನ್ನೂ ಹತ್ತು ಸಾವಿರ ಬೇಕಾಗಿದೆ ಅಂದಾಗ ಆ ಪೈನಾನ್ಷಿಯರ್ ಒಂದು ಉಪಾಯ ಹೇಳಿದ್ದಾನೆ ಏನೆಂದರೆ ಆ ಹತ್ತು ಸಾವಿರ ಪೈನಾನ್ಷಿಯರ್ ಗೆ ಪಾವತಿ ಮಾಡುವುದರಿಂದ ಅದು ರೈತ ಹೋರಾಟಗಾರರ ಹಿಂದಿನ ಸಾಲ ಚುಕ್ತಾ ಮಾಡುವುದು ಮತ್ತು ತಕ್ಷಣ 20 ಸಾವಿರ ಮಂಜೂರು ಮಾಡುವುದು.
ಅವತ್ತೇ ಸಂಜೆಯ 8 ಗಂಟೆಯ ಜೋಗ್ ಮಂಗಳೂರು ಗಜಾನನ ಬಸ್ಸಿನಲ್ಲಿ ಮಂಗಳೂರು ತಲುಪಿ ಬೆಳಿಗ್ಗೆ ಅವರ ಪತ್ನಿಯ ಆಪರೇಷನ್ ಗೆ 20 ಸಾವಿರ ಪಾವತಿಸಬೇಕಾದ್ದರಿಂದ ಕೈಯಲ್ಲಿದ್ದ ಹತ್ತು ಸಾವಿರ ಪೈನಾನ್ಷಿಯರ್ ಗೆ ನೀಡಿದರು.
ಅವತ್ತು ಮದ್ಯಾಹ್ನ 3 ಗಂಟೆಗೆ 20 ಸಾವಿರ ನೀಡುವ ಭರವಸೆಯಂತೆ ಸಾಗರದ ಮಾರಿಗುಡಿ ಹಿಂಬಾಗದ ಪೈನಾನ್ಷಿಯರ್ ಆಫೀಸಿಗೆ ಹೋದರೆ ಅವರು ನಾಪತ್ತೆ ರಾತ್ರಿ 8 ಗಂಟೆ ತನಕ ಪ್ರಯತ್ನಿಸಿದರೂ ಆತ ಸಿಗಲೇ ಇಲ್ಲ.
ಅನಿವಾರ್ಯವಾಗಿ ಹಣ ಇಲ್ಲದೇ ಜೋಗ್ ಮಂಗಳೂರು ಬಸ್ಸಿಗೆ ಚಿಕ್ಕ ಮಗನೊಂದಿಗೆ ಹತ್ತಿದ್ದಾರೆ, ಬೆಳಿಗ್ಗೆ ಬರಿಗೈಯಲ್ಲಿ ಬಂದ ಪತಿಯನ್ನು ನೋಡಿ ಆಪರೇಷನ್ ಆಗಬೇಕಾಗಿದ್ದ ಪತ್ನಿ ಗಾಭರಿ ಆಗಿದ್ದಾರೆ ಮತ್ತು ಅಸಹಾಯಕರಾಗಿ ನಿಮ್ಮ ಹಣೆಬರನೇ ಹೀಗೆ ಅಂದಾಗ ಇವರೂ ಅವಮಾನಿತರಾಗಿದ್ದಾರೆ ಪತ್ನಿಯ ಸಹೋದರ ಹೇಗೋ ವ್ಯವಸ್ಥೆ ಮಾಡುವ ದೈರ್ಯದ ಮಾತಾಡಿದ್ದರಿಂದ ಸಂಜೆ 5 ರ ಅದೇ ಮಂಗಳೂರಿ೦ದ ಜೋಗಕ್ಕೆ ವಾಪಾಸು ಬರುವ ಬಸ್ಸಿಗೆ ಮಗನ ಜೊತೆ ಮರು ಪ್ರಯಾಣಕ್ಕಾಗಿ ಮ೦ಗಳೂರು ಬಸ್ ನಿಲ್ದಾಣಕ್ಕೆ ಬಂದರೆ ಅಲ್ಲಿ ಗಾಡಿಗಳಲ್ಲಿ ಮಾರಾಟ ಮಾಡುವ ಮಾವಿನ ಹಣ್ಣು ನೋಡಿ ಮಗ ವರಾತ ಶುರು ಮಾಡಿದ್ದಾನೆ.
ಅವನಿಗೆ ಮಾವಿನ ಹಣ್ಣು ಕೊಡಿಸಿದರೆ ಇವರಿಗೆ ಸಾಗರಕ್ಕೆ ಬರುವ ಬಸ್ ಚಾರ್ಜ್ ಕೋತಾವಾಗುವದರಿಂದ ಮಗನ ಆಸೆಗೆ ತಣ್ಣೀರೆರಚಿ ಅವನ ಅಳು ರಂಪಾಟವನ್ನು ಹೇಗೋ ಸಹಿಸಿ ಊರು ಮುಟ್ಟಿದ್ದಾರೆ.
ಆದರೆ ಅವರ ಮನಸ್ಸು ಅಗ್ನಿ ಪರ್ವತವಾಗಿತ್ತು, ಬಡ್ಡಿ ವ್ಯಾಪಾರಿಯ ವಂಚನೆ, ಪತ್ನಿ ಹತಾಷೆಯಿಂದ ವ್ಯಕ್ತಪಡಿಸಿದ ಮಾತಿನ ಘಾಸಿ, ಮಗನಿಗೆ ಅವನಿಷ್ಟ ಪಟ್ಟ ಮಾವಿನ ಹಣ್ಣು ಕೊಡಿಸದ ಅಸಹಾಯಕತೆ ಅವರಿಗೆ ಜೀವನದ ಮೇಲಿನ ನಿರಾಶೆಗೆ ಕಾರಣವಾಗಿತ್ತು.
ಅಂತಿಮವಾಗಿ ನನ್ನಲ್ಲಿ ತಿಳಿಸಬೇಕೆಂಬ ಗೆಳೆತನದ ಸಲಿಗೆಯಿಂದ ನನ್ನ ಹತ್ತಿರ ಹೇಳಿಕೊಳ್ಳಲು ಬಂದಿದ್ದರು ಇದೆಲ್ಲ ಕೇಳಿ ನನಗೂ ದುಃಖವಾಯಿತು ಆ ಕಾಲದಲ್ಲಿ ನಾನೂ ಸಂಕಷ್ಟದ ದಿನಗಳಲ್ಲಿದ್ದೆ ಆದರೆ ಆ ಕ್ಷಣದಲ್ಲಿ ನಾನೊಂದು ನಿರ್ಧಾರಕ್ಕೆ ಬಂದೆ ನನ್ನ ಸಂಕಷ್ಟ ಪರಿಹಾರಕ್ಕಾಗಿ ಜ್ಯೋತಿಷಿಗಳ ಸಲಹೆಯಂತೆ ನನ್ನ ಕೈ ಬೆರಳಿನಲ್ಲಿದ್ದ ಹವಳದ ಬಂಗಾರದ ಉಂಗುರ ತೆಗೆದು ಅವರ ಕೈಯಲ್ಲಿ ಇಟ್ಟೆ ಆದರೆ ಅದನ್ನು ಗೆಳೆಯರು ಸ್ವೀಕರಿಸಲು ನಿರಾಕರಿಸಿದರು ಅವರ ನಿರ್ದಾರ ಬೇರೆಯಾಗಿತ್ತು.
ಅವರಿಗೆ ಆಪ್ತ ಸಮಾಲೋಚನೆ ನೀಡಿ ಅಪ್ಪ ಮಗನಿಗೆ ಊಟ ಮಾಡಿಸಿ ಆ ನನ್ನ ಉಂಗುರ ಮಾರಾಟ ಮಾಡಿ ಈ ಸಂದಿಗ್ಧ ಪರಿಸ್ಥಿತಿ ತಪ್ಪಿಸುಕೊಳ್ಳಲು ಒಪ್ಪಿಸಿದೆ.
ಎರೆಡು ದಶಕದಲ್ಲಿ ಅವರು ಅವರ ಎಲ್ಲಾ ಸಂಕಷ್ಟದಾಟಿದ್ದಾರೆ, ಮನೆ ಅಡಿಕೆ ತೋಟ ಮಾಡಿದ್ದಾರೆ, ಸಾಲಗಳಿಂದ ಹೊರಬಂದಿದ್ದಾರೆ, ಸಾಗರ ಪಟ್ಟಣದಲ್ಲಿ 4-5 ಎಕರೆ ಭೂ ಪರಿವರ್ತನೆ ಮಾಡಿ ನಿವೇಶನಗಳನ್ನು ಮಾರಾಟ ಮಾಡುವ ಹಂತದಲ್ಲೇ ಮತ್ತೆ ಸಂಸಾರದಲ್ಲಿ ಬಿರುಗಾಳಿಯಿಂದ ಮನೆ ತೊರೆದು ಕಾರ್ ಶೆಡ್ ನಲ್ಲಿದ್ದೇನೆ ತನ್ನ ಜೀವ ಅಪಾಯದಲ್ಲಿದೆ ಎಂದು ಪೋನಾಯಿಸಿ ಇದೆಲ್ಲ ಹೇಳಿಕೊಂಡರು ಅವರೇ ನಾನು ಮರೆತಿದ್ದ ಹವಳದ ಉಂಗುರದ ಕಥೆ ನೆನಪಿಸಿದರು.
Comments
Post a Comment