ಇನ್ಸುಲಿನ್ ಬಳಸಲು ಡಯಾಬಿಟಿಸ್ ರೋಗಿಗಳಲ್ಲಿ ಹಿಂಜರಿತ ಸರಿ ಅಲ್ಲ.( ಟ್ಟೆಪ್-2)
ಭಾರತದಲ್ಲಿ ಡಯಾಬಿಟಿಸ್ ರೋಗಿಗಳ ಸಂಖ್ಯೆ ಅತಿ ಹೆಚ್ಚು, ಸಣ್ಣ ವಯಸ್ಸಿನವರೂ ಹೆಚ್ಚಿದ್ದಾರೆ ಮತ್ತು 40 ವರ್ಷ ದಾಟುತ್ತಿದ್ದಂತೆ ಈ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತದೆ.
ವಿಪರೀತ ಬಾಯಾರಿಕೆ, ತೊಡೆಗಳಲ್ಲಿ ವಿಪರೀತ ನೋವು ಮತ್ತು ಪದೇ ಪದೇ ಮೂತ್ರ ವಿಸಜ೯ನೆಯಿಂದ ಈ ಕಾಯಿಲೆ ಪ್ರಾರಂಬಿಕವಾಗಿ ಗೋಚರಿಸಿ ವಿಪರೀತ ತೂಕ ಇಳಿತವೂ ಆದಾಗಲೇ ವೈದ್ಯರ ಹತ್ತಿರ ಹೋಗುತ್ತೇವೆ.
ಸಕ್ಕರೆ ಕಾಯಿಲೆ ಬಂತು ಅಂತ ಬಿಕ್ಕಿ ಬಿಕ್ಕಿ ಅತ್ತವರನ್ನೂ ನೋಡಿದ್ದೇನೆ ಅದಕ್ಕೆ ಕಾರಣ ಕೆಲ ತಪ್ಪು ತಿಳುವಳಿಕೆಗಳು.
ವೈದ್ಯರು ಪ್ರಾರಂಭದಲ್ಲಿ ಗುಳಿಗೆಗಳಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರುತ್ತಾರೆ, ರೋಗಿಗಳು ಆಹಾರ ಕ್ರಮ ನಿಯಂತ್ರಣ ಮತ್ತು ನಿರಂತರ ನಡಿಗೆಗಳಿಂದ ಅದನ್ನು ಮುಂದುವರಿಸಬಹುದಾದರೂ ಅನೇಕರಿಗೆ ಈ ಕಾಯಿಲೆಯ 10 ನೇ ವರ್ಷದ ನಂತರ ನಿಯಂತ್ರಣ ತಪ್ಪುವುದು ಹೆಚ್ಚು.
ಆದರೆ ಇನ್ಸುಲಿನ್ ಸಕ್ಕರೆ ರೋಗದ ಪ್ರಾರಂಭದಲ್ಲೇ ಬಾರತ ಹೊರತು ಪಡಿಸಿ ಹೆಚ್ಚಿನ ದೇಶಗಳಲ್ಲಿ ಬಳಸಲು ವೈದ್ಯರು ಹೇಳುತ್ತಾರೆ ಇದಕ್ಕೆ ಕಾರಣ ಮಾತ್ರೆ ಮಾತ್ರದಿಂದ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ನಿಯಂತ್ರಣಕ್ಕೆ ಬರುವುದಿಲ್ಲ ಹಾಗಾದಾಗಲೆಲ್ಲ ದೇಹದಲ್ಲಿನ ಕಿಡ್ನಿ ಹೃದಯ ಮುಂತಾದ ಅವಯುವಗಳು ಹೆಚ್ಚಿನ ಡ್ಯಾಮೇಜ್ ಆಗುವ ಪ್ರಮೆಯವೇ ಹೆಚ್ಚು ಹಾಗಾಗದಂತೆ ತಡೆಯಲು ದೇಹಕ್ಕೆ ಬೇಕಾದ ಇನ್ಸುಲಿನ್ ನಾವೇ ಹೊರಗಿನಿಂದ ದೇಹಕ್ಕೆ ಚುಚ್ಚುಮದ್ದಿನ ಮೂಲಕ ತೆಗೆದುಕೊಳ್ಳುವುದು ಸರಿಯಾದ ಸುರಕ್ಷಿತ ಮಾಗ೯ ಆದರೆ ಭಾರತದ ವೈದ್ಯರೇ "ಇನ್ಸುಲಿನ್ ತೆಗೆದುಕೊಳ್ಳುವ ಹಂತಕ್ಕೆ ನೀವು ಇನ್ನು ಹೋಗಿಲ್ಲ" ಎಂಬ ವಾಕ್ಯವೇ ಭಾರತೀಯರಿಗೆ ಇನ್ಸುಲಿನ್ ಬಳಕೆಯಿಂದ ದೂರ ಮಾಡಿದೆ ಆದರೆ ಇದು ಅನೇಕ ರೀತಿಯ ಅನಾಹುತಕ್ಕೆ ಕಾರಣ ಆಗಿದೆ.
ಈಗಿನ ಅದುನಿಕ ಇನ್ಸುಲಿನ್ ಪೆನ್ ಇಂಜೆಕ್ಷನ್ ಮತ್ತು ಅದರಲ್ಲಿನ ಮೈಕ್ರೋ ನೀಡಲ್ ನೋವಿನ ಅನುಭವವೇ ಆಗದೇ ಇನ್ಸುಲಿನ್ ತೆಗೆದುಕೊಳ್ಳುವ ಸುಲಭ ಸರಳ ವ್ಯವಸ್ಥೆ ಆಗಿರುವುದರಿಂದ ಟೈಪ್ - 2 ಡಯಾಬಿಟೀಸ್ ರೋಗಿಗಳು ವೈದ್ಯರನ್ನು ತಮಗೆ ಇನ್ಸುಲಿನ್ ಕೊಡಲು ಒತ್ತಾಯಿಸ ಬೇಕು ಇದರಿಂದ ದೇಹದ ಅವಯವ ರಕ್ಷಣೆ ಸಾಧ್ಯವಿದೆ.
Comments
Post a Comment