ಬೇಲದ ಹಣ್ಣು, ಬೆಳವಲ ಹಣ್ಣು ಇಂಗ್ಲೀಷ್ ನಲ್ಲಿ ವುಡ್ ಆಪಲ್ ಎಂದು ಕರೆಯುವ ನಿಂಬೆ ಹಣ್ಣಿನ ಜಾತಿಯ ಬಿಲ್ಪ ಪತ್ರೆ ಹಣ್ಣಿನಂತೆ ಕಾಣುವ ವಿಟಮಿನ್ ಸಿ ಶ್ರೀಮಂತವಾದ ಬ್ಯಾಲದ ಹಣ್ಣು ಇವತ್ತು ಸವಿಯುವ ಅವಕಾಶ ಆಯಿತು.
ಮಾರುಕಟ್ಟೆಯಲ್ಲಿ ಇದನ್ನು ಇಷ್ಟು ವರ್ಷ ನೋಡಿದರು ಖರೀದಿಸಲು ಮನಸ್ಸೇ ಬಾರದಂತ ಇದರ ಬಾಹ್ಯ ರಚನೆ ಒಂದು ಕಾರಣ ಆದರೆ ಇನ್ನೊಂದು ಇದು ನಮ್ಮ ಬಾಗದಲ್ಲಿ ಬೆಳೆ ಮತ್ತು ಬಳಕೆ ಇಲ್ಲದ್ದು ಕಾರಣ.
ಗೆಳೆಯರೋವ೯ರು ನಿನ್ನೆ ಶಿವಮೊಗ್ಗದಿಂದ ತಂದು ಇದನ್ನು ಬಳಸಿ ನೋಡುವಂತೆ ಹೇಳಿದ್ದರಿಂದ ಇದರ ಸವಿರುಚಿ ಗೊತ್ತಾಯಿತು.
ಇದರಿಂದ ಬಪಿ೯,ತೊಕ್ಕು ಸಾರು ಮುಂತಾದದ್ದು ಕೂಡ ಸಾಧ್ಯವಂತೆ ಮುಂದಿನ ದಿನದಲ್ಲಿ ನೋಡಬೇಕು.
ದಕ್ಷಿಣ ಏಷ್ಯಾದಲ್ಲಿ ಮಾತ್ರ ಇರುವ ಈ ಹಣ್ಣು ರಾಜ್ಯದ ತುಮಕೂರಿನಲ್ಲಿ ಹೆಚ್ಚು ಬೆಳೆಯುತ್ತಾರಂತ ಮಾರಾಟಗಾರರು ಹೇಳುತ್ತಾರೆ.
ಒಂದು ಹಣ್ಣು ಒಡೆದರೆ ಮನೆ ತುಂಬಾ ಇದರ ವಿಶಿಷ್ಟ ಪರಿಮಳ ಕೂಡ ಉಂಟಾಗುತ್ತದೆ, ಆಯುರ್ವೇದದಲ್ಲಿ ಬಹು ಉಪಯೋಗಿ ಆಗಿರುವ ಇದರ ಔಷದ ಗುಣ ತಿಳಿದ ಮೇಲೆ ಬ್ಯಾಲದ ಹಣ್ಣಿನ ಮೇಲೆ ಆಸಕ್ತಿ ಉಂಟಾಗಿದೆ.
Comments
Post a Comment